ನಿಮ್ಮ JAO ತಿಳಿದುಕೊಳ್ಳಿ ಕುರಿತು ಬಳಕೆದಾರರ ಕೈಪಿಡಿ

 

1. ಅವಲೋಕನ

ನಿಮ್ಮ 'ನಿಮ್ಮ JAO ತಿಳಿದುಕೊಳ್ಳಿ' ಸೇವೆ ಮಾನ್ಯವಾದ PAN ಹೊಂದಿರುವ ತೆರಿಗೆದಾರರಿಗೆ (ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿತ ಅಥವಾ ನೋಂದಾಯಿಸದವರಿಗೂ) ಲಭ್ಯವಿದೆ. ಈ ಸೇವೆಯ ಮೂಲಕ ನೀವು ನಿರ್ದಿಷ್ಟ PAN ಗೆ ಸಂಬಂಧಿಸಿದ ನ್ಯಾಯವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿ (JAO) ಅವರ ವಿವರಗಳನ್ನು ನೋಡಬಹುದು. ಈ ಸೇವೆಯನ್ನು ಬಳಸಲು ನೀವು ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡುವ ಅಗತ್ಯವಿಲ್ಲ.

2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು
 

  • ಮಾನ್ಯ PAN
  • ಮಾನ್ಯ ಮೊಬೈಲ್ ಸಂಖ್ಯೆ

3. ಹಂತ-ಹಂತವಾದ ಮಾರ್ಗದರ್ಶಿ


ಹಂತ 1:ಇ-ಸಲ್ಲಿಕೆ ಪೋರ್ಟಲ್‌ನ ಮುಖಪುಟಕ್ಕೆ ಹೋಗಿ'ನಿಮ್ಮ JAO ಅನ್ನು ತಿಳಿದುಕೊಳ್ಳಿ'ಮೇಲೆ ಕ್ಲಿಕ್ ಮಾಡಿ.

Data responsive


ಹಂತ 2:'ನಿಮ್ಮ JAO ಅನ್ನು ತಿಳಿದುಕೊಳ್ಳಿ'ಪುಟದಲ್ಲಿ ನಿಮ್ಮ PAN ಮತ್ತು ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.

Data responsive


ಹಂತ 3:ಹಂತ 2ರಲ್ಲಿ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ 6 ಅಂಕಿಯ OTP ಬರುತ್ತದೆ. ಆ OTP ಅನ್ನು ನಮೂದಿಸಿ ಮತ್ತು 'ದೃಢೀಕರಿಸಿ' ಮೇಲೆ ಕ್ಲಿಕ್ ಮಾಡಿ.

Data responsive

ಗಮನಿಸಿ:

  • OTP 15 ನಿಮಿಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.
  • ಸರಿಯಾದ OTP ಅನ್ನು ನಮೂದಿಸಲು ನೀವು 3 ಪ್ರಯತ್ನಗಳನ್ನು ಮಾಡಬಹುದು.
  • ಪರದೆ ಮೇಲಿನ ಉಳಿದ ಸಮಯವನ್ನು ಎಣಿಸುವ ಗಡಿಯಾರವು(Countdown timer), OTP ಯಾವಾಗ ಮುಕ್ತಾಯಗೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ.
  • 'OTP ಮರುಕಳುಹಿಸಿ' ಮೇಲೆ ಕ್ಲಿಕ್ ಮಾಡಿದಾಗ, ಹೊಸ OTP ಯನ್ನು ರಚಿಸಿ ಕಳುಹಿಸಲಾಗುತ್ತದೆ.

OTP ಯಶಸ್ವಿಯಾಗಿ ಪರಿಶೀಲನೆಯಾದ ನಂತರ, ನೀವು ನಿಮ್ಮ 'ನಿಮ್ಮ JAO ಅನ್ನು ತಿಳಿದುಕೊಳ್ಳಿ' ಗಳನ್ನು (ಉದಾಹರಣೆಗೆ ಪ್ರದೇಶದ ಕೋಡ್, ಮೌಲ್ಯಮಾಪನ ಅಧಿಕಾರಿಯ (AO) ಪ್ರಕಾರ, ವ್ಯಾಪ್ತಿ ಕೋಡ್, AO ಸಂಖ್ಯೆ, ನ್ಯಾಯವ್ಯಾಪ್ತಿ, ವಿಳಾಸ ಮತ್ತು JAO ಅವರ ಮಿಂಚೋಲೆಯ ವಿಳಾಸ) ಜೊತೆಗೆ ನಿಮ್ಮ PAN ಸ್ಥಿತಿಯನ್ನು ನೋಡಬಹುದು.

Data responsive

4. ಸಂಬಂಧಿತ ವಿಷಯಗಳು