Do not have an account?
Already have an account?

Know Your AO

1. ತೆರಿಗೆ ಮೌಲ್ಯಮಾಪನ ಅಧಿಕಾರಿ (AO) ಎಂದರೆ ಯಾರು?
ತೆರಿಗೆ ಮೌಲ್ಯಮಾಪನ ಅಧಿಕಾರಿಯು (AO) ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿದ್ದು, ತಮ್ಮ ನ್ಯಾಯವ್ಯಾಪ್ತಿಯ ತೆರಿಗೆದಾರರು ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಹೊಂದಿರುತ್ತಾರೆ.

2. ನಾನು ಯಾವಾಗ ನನ್ನ AO ಅನ್ನು ಸಂಪರ್ಕಿಸಬೇಕು?
ನಿಮ್ಮ ಫೈಲಿಂಗ್ ಕುರಿತು ನಿಮಗೆ ಯಾವುದೇ ಸಮಸ್ಯೆಗಳಿಲ್ಲದಿದ್ದರೆ, ನಿಮ್ಮ AO ಅನ್ನು ನೀವು ಸಂಪರ್ಕಿಸಬೇಕಾಗಿಲ್ಲ. ಸಾಮಾನ್ಯವಾಗಿ, ITD ಎಲ್ಲಾ ತೆರಿಗೆದಾರರ ಸೇವೆಗಳನ್ನು ಮುಖಾಮುಖಿಯಾಗದೆ ಆನ್‌ಲೈನ್‌ನಲ್ಲಿಯೇ ಒದಗಿಸಲು ಪ್ರಯತ್ನಿಸುತ್ತದೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ನಿಮ್ಮ ನ್ಯಾಯವ್ಯಾಪ್ತಿಯ AO ಅನ್ನು ಸಂಪರ್ಕಿಸಲು ITD ನಿಮ್ಮನ್ನು ವಿನಂತಿಸಬಹುದು.

3 ನಿಮ್ಮ AO ಕುರಿತು ತಿಳಿಯಿರಿ ಸೇವೆಯನ್ನು ಬಳಸಿಕೊಳ್ಳಲು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನನ್ನ ಮೊಬೈಲ್ ಸಂಖ್ಯೆಯನ್ನು ಬಳಸಿಕೊಳ್ಳಬೇಕೇ?
ಈ ಸೇವೆಯನ್ನು ಪಡೆಯಲು ನೀವು ಯಾವುದೇ ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ಬಳಸಬಹುದು.

4. ನಾನು ಬೇರೆ ನಗರ/ರಾಜ್ಯಕ್ಕೆ ಸ್ಥಳಾಂತರಗೊಂಡಿದ್ದೇನೆ, ನಾನು ನನ್ನ AO ಅನ್ನು ಬದಲಾಯಿಸಬೇಕೇ?
ಹೌದು. ನಿಮ್ಮ ಶಾಶ್ವತ ವಿಳಾಸ ಅಥವಾ ವಸತಿ ವಿಳಾಸವನ್ನು ನೀವು ಒಂದು ರಾಜ್ಯದಿಂದ ಇನ್ನೊಂದಕ್ಕೆ ಬದಲಾಯಿಸಿದಾಗ, ನಿಮ್ಮ PAN ಅನ್ನು ಹೊಸ AO ಗೆ ಸ್ಥಳಾಂತರಿಸುವುದು ಅವಶ್ಯಕ. ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಅಗತ್ಯವಿರುವ ಎಲ್ಲಾ ಸೇವೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲು ಪ್ರಯತ್ನಿಸುತ್ತಿದ್ದರೂ, ಅಪರೂಪದ ಸಂದರ್ಭಗಳಲ್ಲಿ ನೀವು ನಿಮ್ಮ AO ಅನ್ನು ಸಂಪರ್ಕಿಸಬೇಕಾಗಬಹುದು. ಹೀಗಾಗಿ, ಅಗತ್ಯವಿದ್ದಾಗ ನೀವು ಸುಲಭವಾಗಿ ಅವರನ್ನು ಸಂಪರ್ಕಿಸಲು ಸಾಧ್ಯವಾಗುವುದಕ್ಕಾಗಿ ನಿಮ್ಮ PAN ಅನ್ನು ಸರಿಯಾದ ನ್ಯಾಯವ್ಯಾಪ್ತಿಯ AO ಗೆ ಸ್ಥಳಾಂತರಿಸಬೇಕು.

5. ಆದಾಯ ತೆರಿಗೆ ವಾರ್ಡ್/ವಲಯ ಎಂದರೇನು?
ಆದಾಯ ತೆರಿಗೆ ಸಂಬಂಧಿತ ಸೇವೆಗಳು/ಕೆಲಸದ ಪರಿಣಾಮಕಾರಿ ಆಡಳಿತಕ್ಕಾಗಿ, ನಿರ್ಧಾರಿತ ನ್ಯಾಯವ್ಯಾಪ್ತಿಯ ಆಧಾರದ ಮೇಲೆ ದೇಶಾದ್ಯಂತ ಹಲವಾರು ವಾರ್ಡ್‌ಗಳು/ವಲಯಗಳನ್ನು ರಚಿಸಲಾಗಿದೆ. ಪ್ರತಿಯೊಂದು ವಾರ್ಡ್/ವಲಯವು DCIT/ACIT, ಅಥವಾ ITO ಆಗಿರುವ ನ್ಯಾಯವ್ಯಾಪ್ತಿಯ AO ಅನ್ನು ಹೊಂದಿರುತ್ತದೆ.

6. ನನ್ನ PAN ಅನ್ನು ಹೊಸ AO ಗೆ ವರ್ಗಾಯಿಸಲು ನಾನು ಏನು ಮಾಡಬೇಕು?
ನಿಮ್ಮ ಪ್ರಸ್ತುತ ನ್ಯಾಯವ್ಯಾಪ್ತಿಯ AO ಗೆ ನಿಮ್ಮ PAN ಅನ್ನು ಸ್ಥಳಾಂತರಿಸಲು ನೀವು ಅರ್ಜಿಯನ್ನು ಸಲ್ಲಿಸಬೇಕು. ಅದರ ಪ್ರಕ್ರಿಯೆಯು ಈ ರೀತಿಯಾಗಿದೆ:

  1. ವಿಳಾಸ ಬದಲಾವಣೆ ಎಂದು ಉಲ್ಲೇಖಿಸಿ, ಬದಲಾವಣೆಗೆ ಕಾರಣವನ್ನು ತಿಳಿಸಿ ನಿಮ್ಮ ಪ್ರಸ್ತುತ AO ಗೆ ಅರ್ಜಿಯನ್ನು ಬರೆಯಿರಿ.
  2. ಬದಲಾವಣೆಗಾಗಿ ಪ್ರಸ್ತುತ AOಗೆ ಅರ್ಜಿ ಸಲ್ಲಿಸುವಂತೆ ವಿನಂತಿಸಿ, ಹೊಸ AO ಗೆ ಅರ್ಜಿಯನ್ನು ಬರೆಯಿರಿ.
  3. ಪ್ರಸ್ತುತ AO ಈ ಅರ್ಜಿಯನ್ನು ಸ್ವೀಕರಿಸಬೇಕು.
  4. ಒಮ್ಮೆ ಅನುಮೋದಿಸಿದ ನಂತರ, ಅರ್ಜಿಯನ್ನು ಆದಾಯ ತೆರಿಗೆ ಆಯುಕ್ತರಿಗೆ ರವಾನಿಸಲಾಗುತ್ತದೆ.
  5. ಆಯುಕ್ತರಿಂದ ಅನುಮೋದನೆ ಪಡೆದ ನಂತರ, AO ಅನ್ನು ಬದಲಾಯಿಸಲಾಗುತ್ತದೆ.

ನಿಮ್ಮ ಹೊಸ ವಿಳಾಸದ ಆಧಾರದ ಮೇಲೆ ನಿಮ್ಮ PAN ಅನ್ನು ಹೊಸ AO ಗೆ ಸ್ಥಳಾಂತರಿಸಲು, ನಿಮ್ಮ ಪ್ರಸ್ತುತ AO ಗೆ ನೀವು ಲಿಖಿತ ವಿನಂತಿಯನ್ನು ನೀಡಬೇಕಾಗುತ್ತದೆ.

7. ನನ್ನ PAN ಅನ್ನು ಹೊಸ AO ಗೆ ವರ್ಗಾಯಿಸಲಾಗಿದೆ ಎಂದು ನನಗೆ ಹೇಗೆ ತಿಳಿಯುತ್ತದೆ?
ನಿಮ್ಮ PAN ನ ಪ್ರಸ್ತುತ ನ್ಯಾಯವ್ಯಾಪ್ತಿಯ AO ಸ್ಥಿತಿಯನ್ನು ಇ-ಫೈಲಿಂಗ್ ಪೋರ್ಟಲ್‌> ನಿಮ್ಮ AO ಅನ್ನು ತಿಳಿಯಿರಿ ಮೂಲಕ ಪರಿಶೀಲಿಸಬಹುದು. ಈ ಸೇವೆಯನ್ನು ಬಳಸಲು ನೀವು ನೋಂದಾಯಿಸುವ ಅಥವಾ ಲಾಗ್ ಇನ್ ಮಾಡುವ ಅಗತ್ಯವಿಲ್ಲ.

 

ಪುಟವನ್ನು ಕೊನೆಯದಾಗಿ ಪರಿಶೀಲಿಸಲಾಗಿದೆ ಅಥವಾ ನವೀಕರಿಸಲಾಗಿದೆ: