Do not have an account?
Already have an account?

ಪ್ರಥಮ ಬಾರಿಯ ನೋಂದಾಯಿತ ಬಳಕೆದಾರರಿಗೆ ತ್ವರಿತ ನೋಟ

(ನಿಮಗಾಗಿ ತೆರಿಗೆ ಕಾರ್ಯಗಳನ್ನು ಸರಳಗೊಳಿಸಲಾಗುವುದು)

(ನಿಮಗಾಗಿ ತೆರಿಗೆ ಕಾರ್ಯಗಳನ್ನು ಸರಳಗೊಳಿಸಲಾಗುವುದು)

Frequently Asked Questions

ಮೊದಲ ಬಾರಿಗೆ ನೋಂದಣಿ ಮಾಡಿಕೊಳ್ಳುವ ಬಳಕೆದಾರರಿಗಾಗಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)

1. ನಾನು ಇ-ಸಲ್ಲಿಕೆಯಲ್ಲಿ ನೋಂದಾಯಿತ ವೇತನಭತ್ಯೆ ಪಡೆಯುವ ಉದ್ಯೋಗಿಯಾಗಿದ್ದೇನೆ. ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನನ್ನ ತೆರಿಗೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನಾನು ಎಲ್ಲಿ ನೋಡಬಹುದು?

ನಿಮ್ಮ ಇ-ಸಲ್ಲಿಕೆ ಡ್ಯಾಶ್‌ಬೋರ್ಡ್‌ನಲ್ಲಿ ನಿಮ್ಮ ತೆರಿಗೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಮತ್ತು ಪೂರ್ಣಗೊಳಿಸಬೇಕಾದ ಕಾರ್ಯಗಳನ್ನು ನೋಡಬಹುದು. ಡ್ಯಾಶ್‌ಬೋರ್ಡ್‌ನಲ್ಲಿ ನಿಮ್ಮ ಆದಾಯ ತೆರಿಗೆಗೆ ಸಂಬಂಧಿಸಿದ ಅಗತ್ಯ ಸೇವೆಗಳ ಕೊಂಡಿಗಳು ಲಭ್ಯವಿರುತ್ತವೆ. ಒಂದು ನೋಟದಲ್ಲೇ ನೀವು ಈ ಕೆಳಗಿನವುಗಳನ್ನು ಮಾಡಬಹುದು:

  • ನಿಮ್ಮ ಮಾನ್ಯ PAN, ಆಧಾರ್ ಮತ್ತು ಭಾವಚಿತ್ರದೊಂದಿಗೆ ನಿಮ್ಮ ಪ್ರೊಫೈಲ್ ಅನ್ನು ಪರಿಷ್ಕರಿಸಿ ಇರಿಸಿ.
  • ನಿಮ್ಮ ಆಧಾರ್ ಮತ್ತು PAN ಲಿಂಕ್ ಮಾಡಿ.
  • ನಿಮ್ಮ ಸಂಪರ್ಕ ವಿವರಗಳನ್ನು ವೀಕ್ಷಿಸಿ ಮತ್ತು ಪರಿಷ್ಕರಿಸಿ.
  • ಇ-ಸಲ್ಲಿಕೆ ಭಂಡಾರ ಉನ್ನತ ಭದ್ರತೆ ಸೇವೆಯೊಂದಿಗೆ ನಿಮ್ಮ ಖಾತೆಯನ್ನು ಸುರಕ್ಷಿತಗೊಳಿಸಿ.
  • ಬಾಕಿಯಿರುವ ತೆರಿಗೆ ಬಾಬ್ತು ಬೇಡಿಕೆ ವೀಕ್ಷಿಸಿ ಮತ್ತು ಪ್ರತಿಕ್ರಿಯಿಸಿ.
  • ಬಹು  FYs ಗಳಿಗಾಗಿ / AYs ಗಳಿಗಾಗಿ ನಿಮ್ಮ ಆದಾಯ ತೆರಿಗೆ ಲೆಕ್ಕಪತ್ರ ಪುಸ್ತಕವನ್ನು ವೀಕ್ಷಿಸಿ.
  • ನಿಮ್ಮ ITR ಸಲ್ಲಿಕೆಗೆ ಸಂಬಂಧಿಸಿದ ಪೂರ್ಣಗೊಳಿಸಬೇಕಾದ ಕಾರ್ಯಗಳನ್ನು ವೀಕ್ಷಿಸಿ ಮತ್ತು ಅವಕ್ಕೆ ಪ್ರತಿಕ್ರಿಯೆ ನೀಡಿ.
  • ನಿಮ್ಮ ಸಲ್ಲಿಕೆಯ ಸ್ಥಿತಿಯನ್ನು, ಮರುಪಾವತಿ ಬಾಕಿ ಮತ್ತು ಅಂದಾಜು ಬೇಡಿಕೆ ಸೇರಿದಂತೆ, ವೀಕ್ಷಿಸಿ.
  • ಪರಿಷ್ಕೃತ ರಿಟರ್ನ್ ಅನ್ನು ಸಲ್ಲಿಸಿ ಮತ್ತು ಸಲ್ಲಿಸಿದ ರಿಟರ್ನ್‌ಗಳನ್ನು ಡೌನ್‌ಲೋಡ್ ಮಾಡಿ.
  • ನಿಮ್ಮ ತೆರಿಗೆ ಪಾವತಿ ವಿವರಗಳಾದ TDS, ಮುಂಗಡ ತೆರಿಗೆ ಮತ್ತು ಸ್ವಯಂ ಮೌಲ್ಯಮಾಪನ ತೆರಿಗೆಯ ವಿವರಗಳನ್ನು ವೀಕ್ಷಿಸಿ.
  • ನಿಮ್ಮ ಕಾರ್ಯಪಟ್ಟಿಯಲ್ಲಿ ಬಾಕಿ ಇರುವ ಕ್ರಿಯೆಗಳಿಗೆ ಪ್ರತಿಕ್ರಿಯಿಸಿ.
  • ಕಳೆದ 3 ವರ್ಷಗಳ ಆದಾಯಗಳು ಮತ್ತು ಇತ್ತೀಚೆಗೆ ಫೈಲ್ ಮಾಡಿದ ಫಾರ್ಮ್‌ಗಳನ್ನು ವೀಕ್ಷಿಸಿ.
  • ನಿಮ್ಮ ಕುಂದುಕೊರತೆ ವಿವರಗಳನ್ನು ವೀಕ್ಷಿಸಿ.

2. ನಾನು ತೆರಿಗೆದಾರನು. ನನ್ನ ಇ-ಸಲ್ಲಿಕೆ ಕಾರ್ಯಪಟ್ಟಿಯಲ್ಲಿ ನನಗೆ ಲಭ್ಯವಿರುವ ಸೇವೆಗಳು ಯಾವುವು?

ವೈಯಕ್ತಿಕ ತೆರಿಗೆದಾರರು, HUF, ಕಂಪನಿ, ಸಂಸ್ಥೆ, ಟ್ರಸ್ಟ್, AJP, AOP, BOI, ಸ್ಥಳೀಯ ಪ್ರಾಧಿಕಾರ ಹಾಗೂ ಸರ್ಕಾರಕ್ಕೆ ಅವರ ಇ-ಸಲ್ಲಿಕೆ ಕಾರ್ಯಪಟ್ಟಿಯಲ್ಲಿ ಈ ಕೆಳಗಿನ ಸೇವೆಗಳು ಲಭ್ಯವಿರುತ್ತವೆ:

  • ನಿಮ್ಮ ‌ಕ್ರಿಯೆಗಾಗಿ
    • ಸ್ವೀಕಾರಕ್ಕಾಗಿ ಫಾರ್ಮ್‌ಗಳು ಬಾಕಿ ಉಳಿದಿದೆ
    • ರೀಫಂಡ್‌ಗಳು ಪಾವತಿಸದೇ ಉಳಿದಿವೆ
    • ITDREIN ವಿನಂತಿ
    • ಇ-ಪರಿಶೀಲನೆಗಾಗಿ ಬಾಕಿ ಉಳಿದಿದೆ / ITR-V ಸ್ವೀಕರಿಸಿಲ್ಲ / ತಿರಸ್ಕರಿಸಿದೆ
    • ಅಧಿಕೃತ ಸಹಿದಾರನ ಹಾಗೆ ನಿಮ್ಮನ್ನು ಸೇರಿಸಲು ಬಾಕಿ ಇರುವ ವಿನಂತಿಗಳು (ವೈಯಕ್ತಿಕ ತೆರಿಗೆದಾರರಿಗಾಗಿ ಮಾತ್ರ)
    • ಅಧಿಕೃತ ಪ್ರತಿನಿಧಿ ಅಗಿ ನಿಮ್ಮನ್ನು ಸೇರಿಸಲು ಬಾಕಿ ಇರುವ ವಿನಂತಿಗಳು (ವೈಯಕ್ತಿಕ ತೆರಿಗೆದಾರರಿಗೆ ಮಾತ್ರ)
    • ITR-V ನಿಗದಿತ ದಿನಾಂಕದ ನಂತರ ಸ್ವೀಕರಿಸಲಾಗಿದೆ
    • ಫೈಲ್ ಸಲ್ಲಿಸುವುದಕ್ಕೆ ಬಾಕಿ ಉಳಿದಿದೆ
    • ತೆರಿಗೆ ಕಡಿತಕಾರ ಮತ್ತು ಸಂಗ್ರಹಣಾಕಾರ ನೋಂದಣಿಯ ಅನುಮೋದನೆ ಮತ್ತು ಪರಿಷ್ಕರಣೆ/ಮಾರ್ಪಾಡು (ಸಂಸ್ಥೆ PAN ಗಾಗಿ )
  • ನಿಮ್ಮ ಮಾಹಿತಿಗಾಗಿ:
    • ಅಪ್‌ಲೋಡ್ ಮಾಡಲಾದ ಫಾರ್ಮ್ ವಿವರಗಳನ್ನು ವೀಕ್ಷಿಸಿ
    • ತೆರಿಗೆದಾರನ ಪ್ರತಿನಿಧಿ ಮೌಲ್ಯಮಾಪಕನ ಹಾಗೆ ಸೇರಿಸಲು ವಿನಂತಿಗಳನ್ನು ಸಲ್ಲಿಸಲಾಗಿದೆ
    • ಅಧಿಕೃತ ಸಹಿದಾರರಾಗಿ ಸೇರಿಸಲು ವಿನಂತಿಗಳನ್ನು ಸಲ್ಲಿಸಲಾಗಿದೆ
    • ಅಧಿಕೃತ ಪ್ರತಿನಿಧಿ ಹಾಗೆ ಸೇರಿಸಲು ವಿನಂತಿಗಳನ್ನು ಸಲ್ಲಿಸಲಾಗಿದೆ
    • ಅಧಿಕೃತ ಸಹಿದಾರ ಮಾಡಿದ ವಿನಂತಿಗಳನ್ನು ಸ್ವೀಕರಿಸಲಾಗಿದೆ (ವೈಯಕ್ತಿಕ ತೆರಿಗೆದಾರರಿಗೆ ಮಾತ್ರ)
    • ಅಧಿಕೃತ ಪ್ರತಿನಿಧಿ ವಿನಂತಿಗಳನ್ನು ಸ್ವೀಕರಿಸಲಾಗಿದೆ (ವೈಯಕ್ತಿಕ ತೆರಿಗೆದಾರರಿಗೆ ಮಾತ್ರ)
    • ITDREIN ವಿನಂತಿ ವಿವರಗಳು ವೀಕ್ಷಿಸಿ (ವರದಿ ನೀಡುವ ಅಸ್ತಿತ್ವ ಘಟಕದಿಂದ ಅಧಿಕೃತ PAN ಹಾಗೆ ಸೇರಿಸಲಾದ ವ್ಯಕ್ತಿಗಳಿಗಾಗಿ)
    • ಅನುಮೋದಿತ / ತಿರಸ್ಕರಿಸಿದ TAN ನೋಂದಣಿ ವಿವರಗಳನ್ನು ವೀಕ್ಷಿಸಿ (ಸಂಸ್ಥೆ PANಗಾಗಿ)

3. ನನ್ನ ಡ್ಯಾಶ್‌ಬೋರ್ಡ್‌ ವೀಕ್ಷಿಸಲು ನಾನು ಲಾಗಿನ್ ಆಗಬೇಕೇ?

ಹೌದು. ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆದ ನಂತರ ಮಾತ್ರ ಡ್ಯಾಶ್‌ಬೋರ್ಡ್ ಅನ್ನು ವೀಕ್ಷಿಸಬಹುದು. ಇದರಲ್ಲಿ ಲಾಗಿನ್ ಆಗಿರುವ PANಗೆ ಸಂಬಂಧಿಸಿದ ಮಾಹಿತಿಯಷ್ಟೇ ಪ್ರದರ್ಶಿಸಲಾಗುತ್ತದೆ.

4. ಹೊಸ ಇ-ಸಲ್ಲಿಕೆ ಪೋರ್ಟಲ್‌ನಲ್ಲಿರುವ ಡ್ಯಾಶ್‌ಬೋರ್ಡ್‌ನಲ್ಲಿ ಯಾವ ಬದಲಾವಣೆಗಳಿವೆ?

 

ಹಿಂದಿನ ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ತೆರಿಗೆದಾರರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಮತ್ತು ಸಲ್ಲಿಸಲಾದ ಆದಾಯ ತೆರಿಗೆ ರಿಟರ್ನ್‌ಗಳು / ಫಾರ್ಮ್‌ಗಳನ್ನು ವೀಕ್ಷಿಸುವುದು ಎಂಬ ಎರಡು ಕಾರ್ಯಗಳು ಮಾತ್ರ ಲಭ್ಯವಿದ್ದವು. ಹೊಸ ಇ-ಸಲ್ಲಿಕೆ ಪೋರ್ಟಲ್‌ನಲ್ಲಿರುವ ಡ್ಯಾಶ್‌ಬೋರ್ಡ್‌ನಲ್ಲಿ ಇದಕ್ಕಿಂತ ಹೆಚ್ಚಿನ ಸೇವೆಗಳು ಲಭ್ಯವಿವೆ. ಜೊತೆಗೆ, ನಿಮ್ಮ ವಿವರಗಳು, ನೋಂದಾಯಿತ ಸಂಪರ್ಕ ವಿವರಗಳು, ರಿಟರ್ನ್ ಸ್ಥಿತಿ, ಆದಾಯ ತೆರಿಗೆ ಪಾವತಿ ವಿವರಗಳು, ಬಾಕಿ ಇರುವ ಕಾರ್ಯಗಳು, ಇತ್ತೀಚಿನ ಸಲ್ಲಿಕೆಗಳು ಹಾಗೂ ಕುಂದುಕೊರತೆಗಳ ವಿವರಗಳನ್ನು ಒಂದೇ ಸ್ಥಳದಲ್ಲಿ ತೋರಿಸುವುದರಿಂದ ಇದು ಬಳಕೆದಾರ ಸ್ನೇಹಿಯಾಗಿದೆ.

5. ನನ್ನ PAN ನಿಷ್ಕ್ರಿಯವಾಗಿದೆ ಅಥವಾ ಆಧಾರ್‌ನೊಂದಿಗೆ ಸಂಪರ್ಕ ಹೊಂದಿಲ್ಲ. ನಾನು ಡ್ಯಾಶ್‌ಬೋರ್ಡ್‌ನಲ್ಲಿ ಲಭ್ಯವಿರುವ ವಿವಿಧ ಸೇವೆಗಳನ್ನು ಬಳಸಬಹುದೇ?

PAN ನಿಷ್ಕ್ರಿಯವಾಗಿದ್ದರೆ, ಕೆಲವು ಸೇವೆಗಳ ಪ್ರವೇಶವು ಸೀಮಿತವಾಗಿರಬಹುದು. ನಿಷ್ಕ್ರಿಯ PAN ಬಳಸಿ ಲಾಗಿನ್ ಮಾಡಿದ ನಂತರ, ಡ್ಯಾಶ್‌ಬೋರ್ಡ್‌ನಲ್ಲಿ ಈ ಕೆಳಗಿನ ಎಚ್ಚರಿಕೆ ಸಂದೇಶವು ಪ್ರದರ್ಶಿಸಲಾಗುತ್ತದೆ: ನಿಮ್ಮ PAN ಅನ್ನು ಆಧಾರ್‌ನೊಂದಿಗೆ ಸಂಪರ್ಕಿಸದ ಕಾರಣ ಅದು ನಿಷ್ಕ್ರಿಯವಾಗಿದೆ. ಕೆಲವು ಸೇವೆಗಳ ಪ್ರವೇಶವು ಸೀಮಿತವಾಗಿರಬಹುದು. ಸೆಕ್ಷನ್ 234Hರ ಅಡಿಯಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿದ ನಂತರ, ನೀವು ನಿಮ್ಮ PAN ಅನ್ನು ಆಧಾರ್‌ನೊಂದಿಗೆ ಸಂಪರ್ಕಿಸಿ ಅದನ್ನು ಸಕ್ರಿಯಗೊಳಿಸಬಹುದು".

6. PAN ನಿಷ್ಕ್ರಿಯವಾಗಿದ್ದಾಗ ಬಳಕೆದಾರರಿಗೆ ಹೇಗೆ ಮಾಹಿತಿ ನೀಡಲಾಗುತ್ತದೆ?

ಬಳಕೆದಾರರು ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಿದಾಗ ಅಥವಾ ಡ್ಯಾಶ್‌ಬೋರ್ಡ್ ಪುಟಕ್ಕೆ ತೆರಳಿದಾಗ, "ನಿಮ್ಮ PAN ನಿಮ್ಮ ಆಧಾರ್‌ನೊಂದಿಗೆ ಸಂಪರ್ಕ ಹೊಂದಿಲ್ಲದ ಕಾರಣ ನಿಷ್ಕ್ರಿಯವಾಗಿದೆ." ಎಂಬ ಪಾಪ್-ಅಪ್ ಮತ್ತು ಟಿಕರ್ ಸಂದೇಶವು ಪ್ರದರ್ಶಿಸಲಾಗುತ್ತದೆ.

Detailed guides and documentation