ಆದಾಯ-ತೆರಿಗೆ ಕಾಯಿದೆ, 1961 ರ ಸೆಕ್ಷನ್ 285B ಅಡಿಯಲ್ಲಿ ಸಿನೆಮಾಟೋಗ್ರಾಫ್ ಚಿತ್ರದ ನಿರ್ಮಾಣವನ್ನು ನಡೆಸುವ ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಯಲ್ಲಿ ಅಥವಾ ಎರಡರಲ್ಲೂ ತೊಡಗಿರುವ ವ್ಯಕ್ತಿಯಿಂದ ಒದಗಿಸಬೇಕಾದ ಹೇಳಿಕೆ.
ಪ್ರಶ್ನೆ 1:
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಫಾರ್ಮ್ 52A ಅನ್ನು ಯಾರು ಸಲ್ಲಿಸಬೇಕು?
ಉತ್ತರ:
ಸಿನಿಮಾಟೋಗ್ರಾಫ್ ಚಲನಚಿತ್ರದ ನಿರ್ಮಾಣವನ್ನು ನಿರ್ವಹಿಸುವ ಅಥವಾ ಯಾವುದೇ ನಿರ್ದಿಷ್ಟ ಚಟುವಟಿಕೆಯಲ್ಲಿ ತೊಡಗಿರುವ, ಅಥವಾ ಎರಡರಲ್ಲೂ ತೊಡಗಿರುವ, ಯಾವುದೇ ವ್ಯಕ್ತಿ ಯಾವುದೇ ಹಣಕಾಸು ವರ್ಷದ ಸಂಪೂರ್ಣ ಅಥವಾ ಯಾವುದೇ ಭಾಗದಲ್ಲಿ, ಅಂತಹ ಉತ್ಪಾದನೆ ಅಥವಾ ನಿರ್ದಿಷ್ಟ ಚಟುವಟಿಕೆಯಲ್ಲಿ ಅವರು ತೊಡಗಿಸಿಕೊಂಡಿರುವ ಪ್ರತಿಯೊಬ್ಬ ವ್ಯಕ್ತಿಗೆ ಅವರು ಮಾಡಿದ ಅಥವಾ ಅವರಿಂದ ಮಾಡಬೇಕಾದ ಒಟ್ಟು ಮೊತ್ತದಲ್ಲಿ ಐವತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಎಲ್ಲಾ ಪಾವತಿಗಳ ವಿವರಗಳನ್ನು ಸಲ್ಲಿಸಬೇಕು.
ಪ್ರಶ್ನೆ 2:
ನಿರ್ದಿಷ್ಟಪಡಿಸಿದ ಚಟುವಟಿಕೆಗಳು ಯಾವುವು?
ಉತ್ತರ:
ನಿರ್ದಿಷ್ಟಪಡಿಸಿದ ಚಟುವಟಿಕೆ ಎಂದರೆ ಯಾವುದೇ ಈವೆಂಟ್ ನಿರ್ವಹಣೆ, ಸಾಕ್ಷ್ಯಚಿತ್ರ ಉತ್ಪಾದನೆ, ದೂರದರ್ಶನದಲ್ಲಿ ಅಥವಾ ಓವರ್-ದಿ-ಟಾಪ್ ಅಥವಾ ಯಾವುದೇ ಅಂಥ ವೇದಿಕೆಗಳಲ್ಲಿ ಪ್ರಸಾರ ಮಾಡುವ ಕಾರ್ಯಕ್ರಮಗಳ ಉತ್ಪಾದನೆ, ಕ್ರೀಡಾಕೂಟ ನಿರ್ವಹಣೆ, ಇತರ ಪ್ರದರ್ಶನ ಕಲೆಗಳು ಅಥವಾ ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್ ಅಧಿಸೂಚನೆಯ ಮೂಲಕ ಈ ಬಗ್ಗೆ ನಿರ್ದಿಷ್ಟಪಡಿಸಬಹುದಾದ ಯಾವುದೇ ಇತರ ಚಟುವಟಿಕೆ.
ಪ್ರಶ್ನೆ 3:
ಫಾರ್ಮ್ 52A ಸಲ್ಲಿಸಲು ನಿಗದಿತ ದಿನಾಂಕ ಯಾವುದು?
ಉತ್ತರ:
ಫಾರ್ಮ್ 52A ಅನ್ನು ಹಿಂದಿನ ವರ್ಷದ ಅಂತ್ಯದಿಂದ 60 ದಿನಗಳಲ್ಲಿ ಒದಗಿಸಬೇಕಾಗುತ್ತದೆ.
ಪ್ರಶ್ನೆ 4:
ಫಾರ್ಮ್ 52A ಸಲ್ಲಿಸಲು ಪೂರ್ವಾಪೇಕ್ಷಿತಗಳು ಯಾವುವು?
ಉತ್ತರ:
ಫಾರ್ಮ್ 52A ಸಲ್ಲಿಸಲು ಪೂರ್ವಾಪೇಕ್ಷಿತಗಳು ಈ ಕೆಳಗಿನಂತಿವೆ:
- ತೆರಿಗೆದಾರರು PANಹೊಂದಿರಬೇಕು
- ತೆರಿಗೆದಾರರ PAN ಸಕ್ರಿಯವಾಗಿರಬೇಕು ಮತ್ತು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿರಬೇಕು
ಪ್ರಶ್ನೆ: 5:
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಫಾರ್ಮ್ 52A ಅನ್ನು ಫೈಲ್ ಮಾಡುವ ಪ್ರಕ್ರಿಯೆ ಏನು?
ಉತ್ತರ:
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಆನ್‌ಲೈನ್ ಫಾರ್ಮ್ 52A ಅನ್ನು ಸಲ್ಲಿಸುವ ಹಂತಗಳು ಈ ಕೆಳಗಿನಂತಿವೆ:
ಹಂತ 1: ತೆರಿಗೆದಾರರು, ಆದಾಯ ತೆರಿಗೆ ಪೋರ್ಟಲ್‌ನಲ್ಲಿ, ಅಂದರೆ www.incometax.gov.inನಲ್ಲಿ PAN ಅನ್ನುಬಳಕೆದಾರ ID ಆಗಿ ಬಳಸಿ ಲಾಗಿನ್ ಆಗಬೇಕು
ಹಂತ 2: ಇ-ಫೈಲ್ à ಆದಾಯ ತೆರಿಗೆ ಫಾರ್ಮ್‌ಗಳುàಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿರಿ àವ್ಯವಹಾರ /ವೃತ್ತಿಪರ ಆದಾಯ ಹೊಂದಿರುವ ವ್ಯಕ್ತಿಗಳು àಫಾರ್ಮ್ 52A ಗೆ ನ್ಯಾವಿಗೇಟ್ ಮಾಡಿ
ಹಂತ 3: 4 ಪ್ಯಾನೆಲ್‌ಗಳಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ, "ಮೂಲ ಮಾಹಿತಿ", "ಭಾಗ -A", "ಭಾಗ - B", "ಧೃಡೀಕರಣ" ಮತ್ತು ಅನ್ವಯವಾಗುವಲ್ಲೆಲ್ಲಾ CSV ಫೈಲ್‌ಗಳನ್ನು ಸೇರಿಸಿ
ಹಂತ 4: ಪೂರ್ವವೀಕ್ಷಣೆ ಪರದೆಯಲ್ಲಿ ವಿವರಗಳನ್ನು ಪರಿಶೀಲಿಸಿ ಮತ್ತು ಎಲ್ಲಾ ವಿವರಗಳನ್ನು ಸರಿಯಾಗಿ ಒದಗಿಸಿದ್ದರೆ ಫಾರ್ಮ್ ಇ-ಪರಿಶೀಲನೆಗೆ ಮುಂದುವರಿಯಿರಿ
ಪ್ರಶ್ನೆ 6:
ಫಾರ್ಮ್ 52A ಅನ್ನು ಪರಿಶೀಲಿಸುವುದು ಹೇಗೆ?
ಉತ್ತರ:
ನೀವು EVC ಅಥವಾ DSC ಬಳಸಿ ಫಾರ್ಮ್ 52A ಅನ್ನು ಇ-ಪರಿಶೀಲಿಸಬಹುದು.
ಇನ್ನಷ್ಟು ತಿಳಿದುಕೊಳ್ಳಲು (https://www.incometax.gov.in/iec/foportal//help/how-to-e-verify- ನಿಮ್ಮ-ಇ-ಫೈಲಿಂಗ್-ರಿಟರ್ನ್) ಇ-ಪರಿಶೀಲಿಸುವುದು ಹೇಗೆ ಬಳಕೆದಾರ ಕೈಪಿಡಿಯನ್ನು ನೀವು ಪರಿಶೀಲಿಸಬಹುದು.
ಪ್ರಶ್ನೆ 7:
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಫಾರ್ಮ್ 52A ಅನ್ನು ಫೈಲ್ ಮಾಡಲು ಯಾವ ಮಾಹಿತಿ/ವಿವರಗಳ ಅಗತ್ಯವಿದೆ?
ಉತ್ತರ:
ಫಾರ್ಮ್ 52A ಅನ್ನು ಸಲ್ಲಿಸಲು ಈ ಕೆಳಗಿನ ಮಾಹಿತಿ/ವಿವರಗಳ ಅಗತ್ಯವಿದೆ:
- ಹಿಂದಿನ ವರ್ಷದಲ್ಲಿ ನಿರ್ಮಿಸಲಾದ ಎಲ್ಲಾ ಸಿನಿಮಾಟೋಗ್ರಾಫ್ ಚಲನಚಿತ್ರಗಳ ವಿವರಗಳು ಅಥವಾ ಕೈಗೊಂಡ ನಿರ್ದಿಷ್ಟ ಚಟುವಟಿಕೆಗಳು ಅಥವಾ ಎರಡರ ವಿವರಗಳು, ಅಂದರೆ ಸಿನಿಮಾಟೋಗ್ರಾಫ್ ಚಲನಚಿತ್ರಗಳ ಅಥವಾ ಕೈಗೊಂಡ ನಿರ್ದಿಷ್ಟ ಚಟುವಟಿಕೆಯ ಹೆಸರು ಅಥವಾ ಎರಡೂ, ಪ್ರಾರಂಭದ ದಿನಾಂಕ ಮತ್ತು ಪೂರ್ಣಗೊಂಡಿದ್ದಲ್ಲಿ, ಪೂರ್ಣಗೊಂಡ ದಿನಾಂಕ
- ಸಿನೆಮಾಟೋಗ್ರಾಫ್ ಚಲನಚಿತ್ರಗಳ ನಿರ್ಮಾಣದಲ್ಲಿ ಅಥವಾ ಕೈಗೊಂಡ ನಿರ್ದಿಷ್ಟ ಚಟುವಟಿಕೆಗಳು ಅಥವಾ ಎರಡರಲ್ಲಿ ಯಾವ ವ್ಯಕ್ತಿಗಳನ್ನು ತೊಡಗಿಸಿಕೊಳ್ಳುವದಕ್ಕಾಗಿ ರೂ. 50,000 ಗಿಂತ ಹೆಚ್ಚು ಪಾವತಿ ಮಾಡಲಾಗಿದೆಯೋ/ ಮಾಡಬೇಕಾಗಿದೆಯೋ ಅಂಥ ವ್ಯಕ್ತಿಗಳ ಹೆಸರು, PAN, ಆಧಾರ್ (ಲಭ್ಯವಿದ್ದರೆ), ವಿಳಾಸ.
- ಅಂತಹ ಇತರ ವ್ಯಕ್ತಿಗಳಿಗೆಪಾವತಿಸಿದ ನಗದು/ನಗದೇತರ ಮೊತ್ತ/ಮತ್ತು ಕೊಡಬೇಕಾಗಿರುವ ಮೊತ್ತ
- ಅಂತಹ ವ್ಯಕ್ತಿಗಳಿಗೆ ಪಾವತಿಸಿದ/ಬಾಕಿ ಇರುವ ಮೊತ್ತಗಳಿಗೆ ಸಂಭಂದಿಸಿ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆಗಳ ಮೊತ್ತವನ್ನು ಮತ್ತು ಯಾವ ಸೆಕ್ಷನ್ ಅಡಿಯಲ್ಲಿ ಕಡಿತಗೊಳಿಸಲಾಗಿದೆ ಎಂಬ ವಿವರಗಳು
ಪ್ರಶ್ನೆ 8:
ಫಾರ್ಮ್ 52A ನ ಭಾಗ - A ನಲ್ಲಿ ನಾನು ವಿವರಗಳನ್ನು ಹೇಗೆ ಭರ್ತಿ ಮಾಡಬಹುದು?
ಉತ್ತರ:
ಸದರಿ ವರ್ಷದಲ್ಲಿ ನಿರ್ಮಿಸಲಾದ ಸಿನಿಮಾಟೋಗ್ರಾಫ್ ಚಲನಚಿತ್ರಗಳ ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ವಿವರಗಳನ್ನು ಒದಗಿಸಲು ತೆರಿಗೆದಾರರು 2 ಆಯ್ಕೆಗಳನ್ನು ಹೊಂದಿದ್ದಾರೆ:
- ವಿವರಗಳನ್ನು ಸೇರಿಸಿ:
- ತೆರಿಗೆದಾರರು ತಾವು ನಿರ್ಮಿಸಿದ ಪ್ರತಿ ಚಲನಚಿತ್ರ ಅಥವಾ ಕೈಗೊಂಡ ನಿರ್ದಿಷ್ಟ ಚಟುವಟಿಕೆಗೆಗಳ ವಿವರಗಳನ್ನು ಪ್ರತಿ ಚಿತ್ರ ಅಥವಾ ಚಟುವಟಿಕೆಗೆ ಕೋಷ್ಟಕದಲ್ಲಿ ಹೊಸ ಸಾಲನ್ನು ಸೇರಿಸಿ ನಮೂದಿಸಬಹುದು.
- ಮೂಲ ಮಾಹಿತಿ ಪ್ಯಾನೆಲ್‌ನಲ್ಲಿ ಉಲ್ಲೇಖಿಸಿದಂತೆ ಎಲ್ಲಾ ಸಿನಿಮಾಟೋಗ್ರಾಫ್ ಚಲನಚಿತ್ರಗಳು ಅಥವಾ ನಿರ್ದಿಷ್ಟ ಚಟುವಟಿಕೆಗಳ ವಿವರಗಳನ್ನು ಒದಗಿಸಿದ ನಂತರ ಮಾತ್ರ ಭಾಗ - A ಉಳಿಸಲು “ಉಳಿಸಿ” ಬಟನ್ ಸಕ್ರಿಯಗೊಳಿಸಲಾಗುತ್ತದೆ.
- ಭಾಗ – A ದಲ್ಲಿ ಒದಗಿಸಿದಂತೆ ಸಿನಿಮಾಟೋಗ್ರಾಫ್ ಚಲನಚಿತ್ರಗಳ ವಿವರಗಳು ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ವಿವರಗಳನ್ನು ಮೂಲ ಮಾಹಿತಿ ಫಲಕದಲ್ಲಿ ಉಲ್ಲೇಖಿಸಿದಂತೆ ನಿರ್ಮಿಸಿದ ಸಿನಿಮಾಟೋಗ್ರಾಫ್ ಚಲನಚಿತ್ರಗಳ ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ಎಣಿಕೆಯೊಂದಿಗೆ ಧೃಡೀಕರಿಸಲಾಗುತ್ತದೆ. ಎಲ್ಲಾ ಸಿನಿಮಾಟೋಗ್ರಾಫ್ ಚಲನಚಿತ್ರಗಳು ಅಥವಾ ನಿರ್ದಿಷ್ಟ ಚಟುವಟಿಕೆಗಳ ವಿವರಗಳನ್ನು ಒದಗಿಸಿದ ನಂತರ "ವಿವರವನ್ನು ಸೇರಿಸಿ" ಬಟನ್ ನಿಷ್ಕ್ರಿಯಗೊಳಿಸಲಾಗುತ್ತದೆ. ನೀವು ಹೆಚ್ಚಿನ ಸಿನೆಮಾಟೋಗ್ರಾಫ್ ಚಲನಚಿತ್ರಗಳನ್ನು ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳನ್ನು ಸೇರಿಸಲು ಸಾಧ್ಯವಾಗಿಸಬೇಕಾದರೆ, ಹೊಸ ವಿವರಗಳನ್ನು ಸೇರಿಸಲು ಮೊದಲು ಮೂಲಭೂತ ಮಾಹಿತಿಯಲ್ಲಿ ಎಣಿಕೆಯನ್ನು ಸರಿಪಡಿಸಿ.
- CSV ಸೇರಿಸಿ:
- ತೆರಿಗೆದಾರರು ನಿರ್ಮಿಸಲಾದ ಸಿನಿಮಾಟೋಗ್ರಾಫ್ ಚಲನಚಿತ್ರಗಳ ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ಹೆಸರುಗಳನ್ನು ಎಕ್ಸೆಲ್ ಟೆಂಪ್ಲೇಟ್‌ನಲ್ಲಿ ಉಲ್ಲೇಖಿಸುವುದನ್ನು ನಿರೀಕ್ಷಿಸಲಾಗುತ್ತದೆ
- ಎಕ್ಸೆಲ್ ಟೆಂಪ್ಲೇಟ್ನಲ್ಲಿ ಎಲ್ಲಾ ವಿವರಗಳನ್ನು ಪೂರ್ಣಗೊಳಿಸಿದ ನಂತರ, ಅದನ್ನು CSV ಗೆ ಪರಿವರ್ತನೆಗೊಳಿಸಿ ಮತ್ತು ನಂತರ CSV ಅನ್ನು ಅಪ್ಲೋಡ್ ಮಾಡಿ.
- ಯಾವುದೇ ದೋಷಗಳಿಲ್ಲದೆ ಅಪ್‌ಲೋಡ್ ಮಾಡಿದ CSV ಧೃಡೀಕರಿಸಿದ ನಂತರ "ಉಳಿಸಿ" ಬಟನ್ ಸಕ್ರಿಯಗೊಳಿಸಲಾಗುತ್ತದೆ.
ತೆರಿಗೆದಾರರು ವಿವರಗಳನ್ನು ಸೇರಿಸಿ ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ಸಿನಿಮಾಟೋಗ್ರಾಫ್ ಚಲನಚಿತ್ರಗಳು ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ವಿವರಗಳನ್ನು ಉಳಿಸಿ ನಂತರ CSV ಸೇರಿಸಿ ಆಯ್ಕೆ ಮಾಡಿಕೊಂಡರು ಅಥವಾ ಇದನ್ನು ಹಿಂದೆ ಮುಂದೆ ಮಾಡಿದರೂ, ಹಿಂದಿನ ಆಯ್ಕೆಗಾಗಿ ಉಳಿಸಿದ ಡೇಟಾವನ್ನು ಅಳಿಸಲಾಗುತ್ತದೆ. ತೆರಿಗೆದಾರರು ಮತ್ತೆ ವಿವರಗಳನ್ನು ಭರ್ತಿ ಮಾಡಿ ಮತ್ತು ಭಾಗ - A ಅನ್ನು ಉಳಿಸಬೇಕು.
ಪ್ರಶ್ನೆ 9:
ನಾನು ಭಾಗ - A ಗಾಗಿ CSV ಅನ್ನು ಅಪ್ ಲೋಡ್ ಮಾಡಲು ಪ್ರಯತ್ನಿಸಿದಾಗ ನಾನು ಈ ಕೆಳಗಿನ ದೋಷಗಳನ್ನು ಪಡೆಯುತ್ತಿದ್ದೇನೆ. ಇದರ ಅರ್ಥವೇನು ಮತ್ತು ನಾನು ಅದನ್ನು ಹೇಗೆ ಸರಿಪಡಿಸಬೇಕು?
ಉತ್ತರ:
|
ಕ್ರಮ ಸಂಖ್ಯೆ |
ದೋಷ ಸಂದೇಶ |
ಅಗತ್ಯವಿರುವ ಪರಿಹಾರ/ ಕ್ರಮ |
|
1. |
CSV ಯಲ್ಲಿ ನಮೂದಿಸಿದ ಸಿನಿಮಾಟೋಗ್ರಾಫ್ ಚಲನಚಿತ್ರಗಳ ಸಂಖ್ಯೆಯು ಮೂಲ ಮಾಹಿತಿ ಪ್ಯಾನೆಲ್ನಲ್ಲಿ ಉಲ್ಲೇಖಿಸಿದ ನಿರ್ಮಿಸಲಾದ ಸಿನಿಮಾಟೋಗ್ರಾಫ್ ಚಲನಚಿತ್ರಗಳ ಸಂಖ್ಯೆಗೆ ಸಮನಾಗಿಲ್ಲ |
ಸಿನೆಮಾಟೋಗ್ರಾಫ್ ಚಲನಚಿತ್ರಗಳವಿವರಗಳು ಮೂಲ ಮಾಹಿತಿ ಪ್ಯಾನೆಲ್‌ನಲ್ಲಿ ಒದಗಿಸಲಾದ ಸಿನೆಮಾಟೋಗ್ರಾಫ್ ಚಲನಚಿತ್ರಗಳ ಸಂಖ್ಯೆಗೆ ಸಮನಾಗಿಲ್ಲದಿದ್ದರೆ ಈ ದೋಷ ಸಂದೇಶವು ಕಾಣಿಸುತ್ತದೆ. ಫಾರ್ಮ್‌ನ ಮೂಲ ಮಾಹಿತಿ ಪ್ಯಾನೆಲ್‌ನಲ್ಲಿ ನೀವು ವರದಿ ಮಾಡಿದ ಸಿನಿಮಾಟೋಗ್ರಾಫ್ ಚಲನಚಿತ್ರಗಳ ಸಂಖ್ಯೆಗೆ ಸಂಭಂದಿಸಿ ನೀವು ಎಲ್ಲಾ ಸಿನಿಮಾಟೋಗ್ರಾಫ್ ಚಲನಚಿತ್ರಗಳ ವಿವರಗಳನ್ನು ಒದಗಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. |
|
2. |
CSV ಯಲ್ಲಿ ನಮೂದಿಸಿದಂತೆ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ಸಂಖ್ಯೆಯು ಮೂಲ ಮಾಹಿತಿ ಪ್ಯಾನೆಲ್‌ನಲ್ಲಿ ಉಲ್ಲೇಖಿಸಿದಂತೆ ಕೈಗೊಳ್ಳಲಾದ ನಿರ್ದಿಷ್ಟ ಚಟುವಟಿಕೆಗಳ ಸಂಖ್ಯೆಗೆ ಸಮನಾಗಿಲ್ಲ. |
ಸಿನೆಮಾಟೋಗ್ರಾಫ್ ಚಲನಚಿತ್ರಗಳವಿವರಗಳು ಮೂಲ ಮಾಹಿತಿ ಪ್ಯಾನೆಲ್‌ನಲ್ಲಿ ಒದಗಿಸಲಾದ ಸಿನೆಮಾಟೋಗ್ರಾಫ್ ಚಲನಚಿತ್ರಗಳ ಸಂಖ್ಯೆಗೆ ಸಮನಾಗಿಲ್ಲದಿದ್ದರೆ ಈ ದೋಷ ಸಂದೇಶವು ಕಾಣಿಸುತ್ತದೆ. ಫಾರ್ಮ್‌ನ ಮೂಲ ಮಾಹಿತಿ ಪ್ಯಾನೆಲ್‌ನಲ್ಲಿ ನೀವು ವರದಿ ಮಾಡಿದ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ಸಂಖ್ಯೆಗೆ ಸಂಭಂದಿಸಿ ನೀವು ಎಲ್ಲಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ವಿವರಗಳನ್ನು ಒದಗಿಸುತ್ತಿದ್ದೀರಿ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. |
CSV ನಲ್ಲಿ ಎಲ್ಲಾ ಅಗತ್ಯ ತಿದ್ದುಪಡಿಗಳನ್ನು ಮಾಡಿದ ನಂತರ, ನೀವು ಅದನ್ನೇ ಮರುಅಪ್ಲೋಡ್ ಮಾಡಲು ಪ್ರಯತ್ನಿಸಬಹುದು.
ಪ್ರಶ್ನೆ 10:
ನಾನು ಭಾಗ B ಗೆ csv ಅನ್ನು ಅಪ್ ಲೋಡ್ ಮಾಡಲು ಪ್ರಯತ್ನಿಸಿದಾಗ ಈ ಕೆಳಗಿನ ದೋಷವನ್ನು ಪಡೆಯುತ್ತಿದ್ದೇನೆ "ಪ್ರತಿ ಸಿನಿಮಾಟೋಗ್ರಾಫ್ ಚಲನಚಿತ್ರ/ ಕೈಗೊಂಡ ನಿರ್ದಿಷ್ಟ ಚಟುವಟಿಕೆಗೆ ಕ್ಕೆ ಕನಿಷ್ಠ ಒಂದು ನಮೂದು ಭಾಗ B CSV ನಲ್ಲಿ ಇರಬೇಕು" .ಇದರ ಅರ್ಥವೇನು ಮತ್ತು ನಾನು ಅದನ್ನು ಹೇಗೆ ಸರಿಪಡಿಸಬೇಕು?
ಉತ್ತರ:
ಈ ಕೆಳಗಿನ 2 ಸನ್ನಿವೇಶಗಳಲ್ಲಿ ನೀವು ಈ ದೋಷವನ್ನು ಪಡೆಯುತ್ತಿರಬಹುದು:
|
ಕ್ರಮ ಸಂಖ್ಯೆ |
ಸನ್ನಿವೇಶ |
ಅಗತ್ಯವಿರುವ ಪರಿಹಾರ/ ಕ್ರಮ |
|
1. |
ಸಿನಿಮಾಟೋಗ್ರಾಫ್ ಚಲನಚಿತ್ರ/ ನಿರ್ದಿಷ್ಟ ಚಟುವಟಿಕೆಯ ಹೆಸರನ್ನು ಭಾಗ - A ನಲ್ಲಿ ಉಲ್ಲೇಖಿಸಲಾಗಿದೆ ಆದರೆ ಭಾಗ - B CSV ನಲ್ಲಿ ಅದಕ್ಕಾಗಿ ಯಾವುದೇ ವಿವರಗಳನ್ನು ಒದಗಿಸಲಾಗಿಲ್ಲ |
ಸಿನಿಮಾಟೋಗ್ರಾಫ್ ಚಲನಚಿತ್ರ ಅಥವಾ ನಿರ್ದಿಷ್ಟ ಚಟುವಟಿಕೆಯ ನಿರ್ಮಾಣದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಮಾಡಿದ ಪಾವತಿಯ ವಿವರಗಳಿಗಾಗಿ ಕನಿಷ್ಠ ಒಂದು ರೂ. 50,000 ಗಿಂತ ಹೆಚ್ಚಿನ ಪಾವತಿಯ ನಮೂದು ಇರಬೇಕು ಎಂಬುದನ್ನು ದಯವಿಟ್ಟು ಗಮನಿಸಿ. ಭಾಗ - A ನಲ್ಲಿ ಉಲ್ಲೇಖಿಸಿದಂತೆ ಭಾಗ - B CSV ನಲ್ಲಿ ಎಲ್ಲಾ ಸಿನಿಮಾಟೋಗ್ರಾಫ್ ಚಲನಚಿತ್ರಗಳು ಅಥವಾ ನಿರ್ದಿಷ್ಟ ಚಟುವಟಿಕೆಗಳಿಗೆ ವಿವರಗಳನ್ನು ಒದಗಿಸುವುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. |
|
2. |
ಸಿನಿಮಾಟೋಗ್ರಾಫ್ ಚಲನಚಿತ್ರ ನಿರ್ಮಾಣದಲ್ಲಿ ಅಥವಾ ಕೈಗೊಂಡ ನಿರ್ದಿಷ್ಟ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ರೂ. 50,000 ಗಿಂತ ಹೆಚ್ಚಿನ ಪಾವತಿ ಮಾಡಿದ ವಿವರಗಳನ್ನು ಭಾಗ - B CSV ನಲ್ಲಿ ಒದಗಿಸಲಾಗಿದೆ ಆದರೆ ಸಿನಿಮಾಟೋಗ್ರಾಫ್ ಚಲನಚಿತ್ರ ಅಥವಾ ನಿರ್ದಿಷ್ಟ ಚಟುವಟಿಕೆಯ ಹೆಸರನ್ನು ಭಾಗ - A ನಲ್ಲಿ ಉಲ್ಲೇಖಿಸಲಾಗಿಲ್ಲ |
ಭಾಗ - A ನಲ್ಲಿ ಉಲ್ಲೇಖಿಸಲಾದ ಸಿನೆಮಾಟೋಗ್ರಾಫ್ ಚಲನಚಿತ್ರಗಳು ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ಹೆಸರುಗಳನ್ನು ಭಾಗ - B ನಲ್ಲಿ ಉಲ್ಲೇಖಿಸಲಾದ ಸಿನೆಮಾಟೋಗ್ರಾಫ್ ಚಲನಚಿತ್ರಗಳ ಅಥವಾ ನಿರ್ದಿಷ್ಟ ಚಟುವಟಿಕೆಗಳ ಹೆಸರುಗಳೊಂದಿಗೆ ಧೃಡೀಕರಿಸಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಭಾಗ - A ಮತ್ತು ಭಾಗ - B ಎರಡರಲ್ಲೂ ಕೂಡ ಎಲ್ಲಾ ಸಿನಿಮಾಟೋಗ್ರಾಫ್ ಚಲನಚಿತ್ರಗಳು ಅಥವಾ ನಿರ್ದಿಷ್ಟ ಚಟುವಟಿಕೆಗಳ ಹೆಸರುಗಳನ್ನು ಒದಗಿಸಲಾಗಿದೆಯೇ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. |
ಪ್ರಶ್ನೆ 11:
ನಾನು ಮೂಲ ಮಾಹಿತಿ ಪ್ಯಾನೆಲ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿದರೆ ಭಾಗ - A ಅಥವಾ ಭಾಗ - B ನಲ್ಲಿ ಲಗತ್ತಿಸಲಾದ CSV ಅನ್ನು ಏಕೆ ಅಳಿಸಿಹೋಗುತ್ತಿದೆ?
ಉತ್ತರ:
ಎಲ್ಲಾ ಮೂರು ಪ್ಯಾನಲ್‌ಗಳಲ್ಲಿ ಅಂದರೆ “ಮೂಲ ಮಾಹಿತಿ”, “ಭಾಗ - A” ಮತ್ತು “ ಭಾಗ - B” ನಲ್ಲಿ ನಿರ್ಮಿಸಲಾದ ಸಿನಿಮಾಟೋಗ್ರಾಫ್ ಚಲನಚಿತ್ರಗಳು ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ಸಂಖ್ಯೆ ಮತ್ತು ವಿವರಗಳನ್ನು ಧೃಡೀಕರಿಸಲಾಗುತ್ತಿದೆ ಎಂಬುದನ್ನು ದಯವಿಟ್ಟು ಗಮನಿಸಿ. ತೆರಿಗೆದಾರರು ಸಿನೆಮಾಟೋಗ್ರಾಫ್ ಚಲನಚಿತ್ರಗಳು ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ಎದುರು ಒದಗಿಸಲಾದ ವಿವರಗಳಿಗೆ ಮೂಲ ಮಾಹಿತಿ ಪ್ಯಾನೆಲ್ ಅಲ್ಲಿ ಅಥವಾ ಭಾಗ - A ನಲ್ಲಿ ಯಾವುದೇ ಬದಲಾವಣೆಗಳು / ಮಾರ್ಪಾಡುಗಳನ್ನು ಮಾಡಿದರೆ ಭಾಗ - A ಮತ್ತು ಭಾಗ - B ನಲ್ಲಿ ತೆರಿಗೆದಾರರು ಒದಗಿಸಿದ ವಿವರಗಳನ್ನು ಅಳಿಸಲಾಗುತ್ತದೆ. ತೆರಿಗೆದಾರರು ಭಾಗ - A ಮತ್ತು ಭಾಗ - B ನಲ್ಲಿ ಪುನಃ ವಿವರಗಳನ್ನು ಭರ್ತಿ ಮಾಡಬೇಕು ಅಥವಾ CSV ಅನ್ನು ಲಗತ್ತಿಸಬೇಕು.
ಪ್ರಶ್ನೆ 12:
ಹಿಂದಿನ ವರ್ಷದಲ್ಲಿ ನಿರ್ಮಿಸಲಾದ ಪ್ರತಿ ಸಿನಿಮಾಟೋಗ್ರಾಫ್ ಚಿತ್ರಕ್ಕಾಗಿ ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಾಗಿ ನಾನು ಪ್ರತ್ಯೇಕ ಫಾರ್ಮ್ 52A ಅನ್ನು ಸಲ್ಲಿಸಬೇಕೇ?
ಉತ್ತರ:
ಇಲ್ಲ, ಹಿಂದಿನ ವರ್ಷದಲ್ಲಿ ನಿರ್ಮಿಸಲಾದ ಪ್ರತಿ ಸಿನಿಮಾಟೋಗ್ರಾಫ್ ಚಿತ್ರಕ್ಕಾಗಿ ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಾಗಿ ನೀವು ಪ್ರತ್ಯೇಕ ಫಾರ್ಮ್ 52A ಅನ್ನು ಸಲ್ಲಿಸುವ ಅಗತ್ಯವಿಲ್ಲ. ಪ್ರತಿ TAN ಗಾಗಿ ಹಿಂದಿನ ವರ್ಷ ನಿರ್ಮಿಸಲಾದ ಎಲ್ಲಾ ಸಿನಿಮಾಟೋಗ್ರಾಫ್ ಚಿತ್ರ ಮತ್ತು/ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳಿಗೆ ವಿವರಗಳನ್ನು ಒಟ್ಟುಗೂಡಿಸಬೇಕು ಮತ್ತು ಪ್ರತಿ TAN ನೋಂದಣಿಗಾಗಿ ಪ್ರತ್ಯೇಕ ಫಾರ್ಮ್ 52A ಅನ್ನು ಸಲ್ಲಿಸಬೇಕು.
ಪ್ರಶ್ನೆ 13:
ಭಾಗ - A ಅಥವಾ ಭಾಗ - B ನಲ್ಲಿ CSV ಅನ್ನು ಅಪ್‌ಲೋಡ್ ಮಾಡಿದ ನಂತರ ನಾನು ದೋಷ ಫೈಲ್ ಪಡೆಯುತ್ತಿದ್ದೇನೆ?
ಉತ್ತರ:
ನೀವು CSV ಅನ್ನು ಭಾಗ - A ಅಥವಾ ಭಾಗ - B, ನಲ್ಲಿ ಅಪ್‌ಲೋಡ್ ಮಾಡಿದ ನಂತರ, ಒದಗಿಸಲಾದ ವಿವರಗಳನ್ನು ಧೃಡೀಕರಿಸಲಾಗುತ್ತದೆ ಮತ್ತು ಯಾವುದೇ ದೋಷಗಳು ಕಂಡುಬಂದಲ್ಲಿ, ಅಂತಹ ದೋಷಗಳ ವಿವರಗಳನ್ನು ನಿಮಗೆ ಎಕ್ಸೆಲ್ ಫೈಲ್‌ನಲ್ಲಿ ಒದಗಿಸಲಾಗುತ್ತದೆ. ದಯವಿಟ್ಟು ಉಲ್ಲೇಖಿಸಲಾದ ಸಾಲುಗಳಲ್ಲಿ ಮಾಡಿದ ದೋಷಗಳಿಗಾಗಿ ಎಕ್ಸೆಲ್ ಫೈಲ್ ನೋಡಿ ಮತ್ತು ಅದನ್ನು ಸರಿಪಡಿಸಿ. ಎಲ್ಲಾ ಅಗತ್ಯ ತಿದ್ದುಪಡಿಗಳನ್ನು ಮಾಡಿದ ನಂತರ, ನೀವು ಅದನ್ನು ಮರುಅಪ್ಲೋಡ್ ಮಾಡಲು ಪ್ರಯತ್ನಿಸಬಹುದು.
ಪ್ರತಿ ಕ್ಷೇತ್ರಕ್ಕೆ ಕಡ್ಡಾಯವಾಗಿ ಅಗತ್ಯವಿರುವ ಮತ್ತು ಸ್ವೀಕಾರಾರ್ಹ ಸ್ವರೂಪಗಳ ಮಾಹಿತಿಯ ವಿವರಗಳಿಗಾಗಿ ನೀವು ಭಾಗ - A ಮತ್ತು ಭಾಗ - B ನಲ್ಲಿ ಒದಗಿಸಲಾದ CSV ಸೂಚನಾ ಫೈಲ್‌ಗಳನ್ನು ಪರಿಶೀಲಿಸಬಹುದು.