TAN ವಿವರಗಳನ್ನು ತಿಳಿಯಿರಿ ಬಳಕೆದಾರ ಕೈಪಿಡಿ
1. ಅವಲೋಕನ
TAN ವಿವರಗಳನ್ನು ತಿಳಿಯಿರಿ ಸೇವೆಯನ್ನು ಇ-ಫೈಲಿಂಗ್ ಬಳಕೆದಾರರು ಬಳಸಬಹುದು (ನೋಂದಾಯಿಸಿದವರು ಮತ್ತು ನೋಂದಾಯಿಸದವರು ಇಬ್ಬರೂ). ಈ ಸೇವೆಯನ್ನು ಬಳಸಲು ನೀವು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಬೇಕಾಗಿಲ್ಲ. ಈ ಸೇವೆಯು TAN ಗಾಗಿ ತೆರಿಗೆ ಕಡಿತದಾರ ಮತ್ತು ಸಂಗ್ರಾಹಕಾರರ TAN ವಿವರಗಳನ್ನು (ಮೂಲ ವಿವರಗಳು ಮತ್ತು AO ವಿವರಗಳು) ವೀಕ್ಷಿಸಲು ನಿಮಗೆ ಅನುಮತಿಸುತ್ತದೆ. ಕಡಿತದಾರರ ಹೆಸರು ಅಥವಾ ಕಡಿತದಾರರ TAN ಅನ್ನು ನಮೂದಿಸುವ ಮೂಲಕ ನೀವು ವಿವರಗಳನ್ನು ವೀಕ್ಷಿಸಬಹುದು.
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
- ಮಾನ್ಯ ಮೊಬೈಲ್ ಸಂಖ್ಯೆ
- ಕಡಿತದಾರರ TAN ಅಥವಾ ಕಡಿತದಾರರ ಹೆಸರು
- ಕಡಿತದಾರರ ಸ್ಥಿತಿ
3. ಹಂತ ಹಂತದ ಮಾರ್ಗದರ್ಶಿ
ಹಂತ 1: ಇ-ಫೈಲಿಂಗ್ ಪೋರ್ಟಲ್ ಹೋಮ್ ಪೇಜ್‌ಗೆ ಹೋಗಿ ಮತ್ತು TAN ವಿವರಗಳನ್ನು ತಿಳಿಯಿರಿ ಕ್ಲಿಕ್ ಮಾಡಿ.
ಹಂತ 2: TAN ವಿವರಗಳನ್ನು ತಿಳಿಯಿರಿ ಪುಟದಲ್ಲಿ, ನಿಮಗೆ ಕಡಿತದಾರರ TAN ತಿಳಿದಿಲ್ಲದಿದ್ದರೆ, ಹೆಸರಿನ ಆಯ್ಕೆಯನ್ನು ಹುಡುಕಾಟ ಮಾನದಂಡವಾಗಿ ಆಯ್ಕೆ ಮಾಡಿ. ಕಡಿತದಾರರ ವರ್ಗ ಮತ್ತು ರಾಜ್ಯವನ್ನು ಆಯ್ಕೆಮಾಡಿ; ಕಡಿತದಾರರ ಹೆಸರನ್ನು ನಮೂದಿಸಿ, ಮತ್ತು ನಿಮಗೆ ಲಭ್ಯವಿರುವ ಮಾನ್ಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಪರ್ಯಾಯವಾಗಿ, ಕಡಿತದಾರರ TAN ನಿಮಗೆ ತಿಳಿದಿದ್ದರೆ, TAN ಆಯ್ಕೆಯನ್ನು ಹುಡುಕಾಟ ಮಾನದಂಡವಾಗಿ ಆಯ್ಕೆ ಮಾಡಿ.ಕಡಿತದಾರರ ವರ್ಗ ಮತ್ತು ರಾಜ್ಯವನ್ನು ಆಯ್ಕೆ ಮಾಡಿ; ಕಡಿತದಾರರ TAN ಮತ್ತು ನಿಮಗೆ ಲಭ್ಯವಾದ ಮಾನ್ಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಹಂತ 3: ಮುಂದುವರಿಸಿ ಕ್ಲಿಕ್ ಮಾಡಿ. ಹಂತ 2 ರಲ್ಲಿ ನೀವು ನಮೂದಿಸಿದ ಮೊಬೈಲ್ ಸಂಖ್ಯೆಯಲ್ಲಿ ನೀವು 6-ಅಂಕಿಯ OTP ಅನ್ನು ಸ್ವೀಕರಿಸುತ್ತೀರಿ.
ಹಂತ 4: ಪರಿಶೀಲನೆ ಪುಟದಲ್ಲಿ, 6-ಅಂಕಿಯ OTP ನಮೂದಿಸಿ ಮತ್ತು ದೃಢೀಕರಿಸಿ ಕ್ಲಿಕ್ ಮಾಡಿ.
ಸೂಚನೆ:
- OTP 15 ನಿಮಿಷಗಳ ಕಾಲ ಮಾತ್ರ ಮಾನ್ಯವಾಗಿರುತ್ತದೆ.
- ಸರಿಯಾದ OTP ನಮೂದಿಸಲು ನೀವು 3 ಅವಕಾಶಗಳನ್ನು ಹೊಂದಿದ್ದೀರಿ.
- ಸ್ಕ್ರೀನ್ ಮೇಲಿನ OTP ಮುಕ್ತಾಯದ ಕೌಂಟ್‌ಡೌನ್ ಟೈಮರ್, OTP ಯಾವಾಗ ಮುಕ್ತಾಯಗೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ.
- OTP ಪುನಃ ಕಳುಹಿಸಿ ಅನ್ನು ಕ್ಲಿಕ್ ಮಾಡಿದ ನಂತರ, ಹೊಸ OTPಯನ್ನು ರಚಿಸಲಾಗುತ್ತದೆ ಮತ್ತು ಕಳುಹಿಸಲಾಗುತ್ತದೆ.
ಹಂತ 5: ನೀವು ಹಂತ 2 ರಲ್ಲಿ ಕಡಿತದಾರರ ಹೆಸರನ್ನು ನಮೂದಿಸಿದ್ದರೆ, ಹೆಸರಿಗೆ ಹೊಂದಿಕೆಯಾಗುವ ಎಲ್ಲಾ ದಾಖಲೆಗಳ ಪಟ್ಟಿಯನ್ನು ನೀವು ನೋಡುತ್ತೀರಿ. TAN ವಿವರಗಳ ಕೋಷ್ಟಕ ದಿಂದ ಕಡಿತದಾರರ ಬೇಕಾದ ಹೆಸರನ್ನು ಕ್ಲಿಕ್ ಮಾಡಿ, ಮತ್ತು ಕಡಿತದಾರರ ವೈಯಕ್ತಿಕ TAN ವಿವರಗಳನ್ನು (ಮೂಲ ವಿವರಗಳು ಮತ್ತು AO ವಿವರಗಳು) ವೀಕ್ಷಿಸಲು ನಿಮಗೆ ಸಾಧ್ಯವಾಗುತ್ತದೆ.
ಪರ್ಯಾಯವಾಗಿ, ನೀವು ಹಂತ 2 ರಲ್ಲಿ ಕಡಿತದಾರರ TAN ಅನ್ನು ನಮೂದಿಸಿದ್ದರೆ, ಸರಿಹೊಂದುವ ದಾಖಲೆಯನ್ನು ನೀವು ನೋಡುತ್ತೀರಿ (ಮೂಲ ವಿವರಗಳು ಮತ್ತು AO ವಿವರಗಳು).
4. ಸಂಬಂಧಿತ ವಿಷಯಗಳು