ಫಾರ್ಮ್ 1 ಕುರಿತು ಬಳಕೆದಾರರ ಕೈಪಿಡಿ
1. ಅವಲೋಕನ ಮತ್ತು ಫಾರ್ಮಿನ ಉದ್ದೇಶ
ಡೆರಿವೇಟಿವ್ಸ್ ವಹಿವಾಟಿಗೆ ಸಂಬಂಧಿಸಿ, ಷೇರುಪೇಟೆಯು ಕಾಯ್ದೆಯ ಸೆಕ್ಷನ್ 2(92) ಅಡಿಯಲ್ಲಿ ಅರ್ಹತೆ ಪಡೆಯಲು ಕೆಲವು ಷರತ್ತುಗಳನ್ನು ಪೂರೈಸಿರಬೇಕು. ಅದಕ್ಕಾಗಿ, ಷೇರುಪೇಟೆಗೆ SEBI ಯ ಅನುಮೋದನೆ ಇರಬೇಕು ಹಾಗೂ SEBI ನ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಬೇಕು. ಜೊತೆಗೆ, ವಿಶೇಷ ಗ್ರಾಹಕ ಗುರುತು ಸಂಖ್ಯೆ (Unique Client ID) ಮತ್ತು PAN ಸಂಖ್ಯೆಯನ್ನು ಒಳಗೊಂಡಂತೆ ಪ್ರತಿ ಗ್ರಾಹಕರ ಸಂಪೂರ್ಣ ವಿವರಗಳನ್ನು ದಾಖಲಿಸಿ ಸಂಗ್ರಹಿಸಬೇಕು ಹಾಗೂ ನಗದು ಮತ್ತು ಡೆರಿವೇಟಿವ್ಸ್ ವ್ಯವಹಾರಗಳ ಸಂಪೂರ್ಣ ಲೆಕ್ಕಪರಿಶೋಧನೆಯ ಅನುಸರಣೆ(audit trail)ಯನ್ನು ನಿರ್ವಹಿಸಬೇಕು. ಒಮ್ಮೆ ವ್ಯವಹಾರವನ್ನು ವ್ಯವಸ್ಥೆಯಲ್ಲಿ ದಾಖಲಿಸಿದ ನಂತರ ಅದನ್ನು ಅಳಿಸುವುದಕ್ಕಾಗಲೀ ಅಥವಾ ತಿದ್ದುಪಡಿ ಮಾಡುವುದಕ್ಕಾಗಲೀ ಅವಕಾಶವಿರುವುದಿಲ್ಲ.
ಆದಾಗ್ಯೂ, ಯಾವುದೇ ಗ್ರಾಹಕ ಕೋಡ್ಗಳಲ್ಲಿ ಬದಲಾವಣೆ ಮಾಡಿದಲ್ಲಿ, ಪ್ರಥಮವಾಗಿ ವ್ಯವಸ್ಥೆಯಲ್ಲಿ ದಾಖಲಿಸಿದ ನಂತರ ಗ್ರಾಹಕ ಕೋಡ್ಗಳಲ್ಲಿ ತಿದ್ದುಪಡಿ ಮಾಡಲಾದ ಎಲ್ಲಾ ವ್ಯವಹಾರಗಳನ್ನು ಷೇರುಪೇಟೆಯು ಫಾರ್ಮ್ ನಂಬರ್ 1 ಸಲ್ಲಿಸುವ ಮೂಲಕ ವರದಿ ಮಾಡಬೇಕು. ಈ ಫಾರ್ಮ್ ಅನ್ನು ಆ ತಿದ್ದುಪಡಿ ನಡೆದ ತಿಂಗಳ ಅಂತ್ಯದಿಂದ 15 ದಿನಗಳ ಒಳಗಾಗಿ ಸಲ್ಲಿಸಬೇಕು.
2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು
• ಬಳಕೆದಾರರು ಇ-ಫ಼ೈಲಿಂಗ್ ಪೋರ್ಟಲ್ಲಿನಲ್ಲಿ ನೋಂದಾಯಿತರಾಗಿರಬೇಕು.
• ಬಳಕೆದಾರರ PAN ಸ್ಥಿತಿಯು "ಸಕ್ರಿಯ" ಆಗಿರಬೇಕು.
• DSC (ಡಿಜಿಟಲ್ ಸಹಿ ಪ್ರಮಾಣಪತ್ರ) ವಿಧಾನ ಮೂಲಕ ಫಾರ್ಮ್ ಅನ್ನು ಪರಿಶೀಲಿಸಲು ಬಯಸುವ ಬಳಕೆದಾರರು ಮಾನ್ಯವಾದ DSC ಹೊಂದಿರಬೇಕು. ಜೊತೆಗೆ, ಆ DSC ಅನ್ನು ಇ-ಫ಼ೈಲಿಂಗ್ ಪೋರ್ಟಲ್ನಲ್ಲಿ ನೋಂದಾಯಿಸಿರಬೇಕು ಹಾಗೂ ಅದರ ಅವಧಿ ಮುಗಿದಿರಬಾರದು.
3. ಯಾರು ಬಳಸಬಹುದು?
ಮಾನ್ಯವಾದ PAN ಹೊಂದಿದ್ದು ಇ-ಫ಼ೈಲಿಂಗ್ ಪೋರ್ಟಲ್ನಲ್ಲಿ ನೋಂದಾಯಿತವಾಗಿರುವ ಯಾವುದೇ ಕಂಪನಿಯು, ಕ್ಲೈಂಟ್ ಕೋಡ್ಗಳಲ್ಲಿ ಬದಲಾವಣೆ ಮಾಡಲು ಫ಼ಾರ್ಮ್ ನಂ. 1 ಅನ್ನು ಸಲ್ಲಿಸಬಹುದು.
4. ಹಂತ ಹಂತದ ಮಾರ್ಗದರ್ಶಿ
ಹಂತ 1: ಬಳಕೆದಾರರು ನೋಂದಾಯಿತ ಬಳೆಕೆದಾರ ID ಮತ್ತು ಪಾಸ್ವರ್ಡ್ ಬಳಸಿ ಇ-ಫ಼ೈಲಿಂಗ್ ಪೋರ್ಟಲ್ಗೆ ಲಾಗಿನ್ ಆಗಬೇಕು.
ಹಂತ 2: ಬಳಕೆದಾರ ID (PAN) ಮತ್ತು ಪಾಸ್ವರ್ಡ್ ನಮೂದಿಸಿ ‘ಮುಂದುವರೆಯಿರಿ’ ಮೇಲೆ ಕ್ಲಿಕ್ ಮಾಡಿ.
ಹಂತ 3: ನಂತರ, ‘ಇ-ಫ಼ೈಲ್’ > ‘ಆದಾಯ ತೆರಿಗೆ ಫ಼ಾರ್ಮ್ಗಳು’ > ‘ಆದಾಯ ತೆರಿಗೆ ಫ಼ಾರ್ಮ್ ಸಲ್ಲಿಸಿ’ ಗೆ ಹೋಗಿ.
ಹಂತ 4: ಆದಾಯ ತೆರಿಗೆ ಕಾಯ್ದೆ 2025 ಪ್ರಕಾರ ಫಾರ್ಮ್ನ ಟ್ಯಾಬ್ ಆಯ್ಕೆಮಾಡಿ.
ಆದಾಯ ತೆರಿಗೆ ಕಾಯ್ದೆ, 2025 ಪ್ರಕಾರ ಇರುವ ಫ಼ಾರ್ಮ್ಗಳು ಮೇಲೆ ಕ್ಲಿಕ್ ಮಾಡಿ, “ಫ಼ಾರ್ಮ್ ನಂ. 1” ಅನ್ನು ಆಯ್ಕೆ ಮಾಡಿ ಮತ್ತು “ಈಗ ಸಲ್ಲಿಸಿ” ಮೇಲೆ ಕ್ಲಿಕ್ ಮಾಡಿ.
ಹಂತ 5: ಬಳಕೆದಾರರು ಅನ್ವಯಿಸುವ ತೆರಿಗೆ ವರ್ಷ (T.Y) ಮತ್ತು ತಿಂಗಳನ್ನು ಆಯ್ಕೆ ಮಾಡಿ, ನಂತರ "ಮುಂದುವರೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ 6: "ಪ್ರಾರಂಭಿಸೋಣ" ಕ್ಲಿಕ್ ಮಾಡಿ
ಹಂತ 7: ‘ಪ್ರಾರಂಭಿಸೋಣ’ ಮೇಲೆ ಕ್ಲಿಕ್ ಮಾಡಿದ ನಂತರ, ಬಳಕೆದಾರರನ್ನು ಫ಼ಾರ್ಮ್ ಪರದೆಗೆ ಕರೆದೊಯ್ಯಲಾಗುತ್ತದೆ.
ಫ಼ಾರ್ಮ್ ಪರದೆಯಲ್ಲಿ, ಬಳಕೆದಾರರು ಫಾರ್ಮ್ನಲ್ಲಿ ಕೇಳಲಾದ ವಿವರಗಳನ್ನು ನಮೂದಿಸಬೇಕು. ಸಾಧ್ಯವಾದ ಮಟ್ಟಿಗೆ ಫಾರ್ಮ್ನ ಕ್ಷೇತ್ರಗಳನ್ನು ಮೊದಲೇ ತುಂಬಲಾಗಿರುತ್ತದೆ.
ಸೂಚನೆ: "ನನ್ನ ಪ್ರೊಫೈಲ್" ವಿಭಾಗದ ಅಡಿಯಲ್ಲಿ ವಿಳಾಸ ಸೇರಿದಂತೆ ಎಲ್ಲಾ ಕಡ್ಡಾಯ ವಿವರಗಳು ಪೂರ್ಣಗೊಂಡಿರುವುದನ್ನು ಖಚಿತಪಡಿಸಿಕೊಳ್ಳಿ. ಬಳಕೆದಾರರು “ನನ್ನ ಪ್ರೊಫೈಲ್” ವಿಭಾಗದಲ್ಲಿ ಯಾವುದೇ ವಿವರವನ್ನು ನವೀಕರಿಸಿದರೆ, ಬದಲಾವಣೆಗಳು ಸರಿಯಾಗಿ ಪ್ರತಿಫಲಿಸಲು ಈಗಿರುವ ಕರಡನ್ನು ಅಳಿಸಿ, ಫಾರ್ಮ್ ಅನ್ನು ಮರುಸಲ್ಲಿಸಿ.

ಫಾರ್ಮ್ನಲ್ಲಿ ಮೂರು CSV ಫೈಲ್ಗಳು ಇರುತ್ತವೆ. ಬಳಕೆದಾರರು ಚೆಕ್ಬಾಕ್ಸ್ ಟಿಕ್ ಮಾಡುವ ಮೂಲಕ ಅನ್ವಯಿಸುವ CSV ಅನ್ನು ಆಯ್ಕೆ ಮಾಡಬಹುದು. CSV ಆಯ್ಕೆ ಮಾಡಿದ ನಂತರ, ‘ಟೆಂಪ್ಲೇಟ್ ಡೌನ್ಲೋಡ್’ ಬಟನ್ ಮೇಲೆ ಕ್ಲಿಕ್ ಮಾಡಿ ಅದನ್ನು ಡೌನ್ಲೋಡ್ ಮಾಡಬೇಕು. CSV ಯಲ್ಲಿ ವಿವರಗಳನ್ನು ನಮೂದಿಸುವ ಸೂಚನೆಗಳು ಫಾರ್ಮ್ನಲ್ಲಿ ನೀಡಿರುವ ಸೂಚನೆಯ ಮೊದಲ ಅಂಶದಲ್ಲಿ ಲಭ್ಯವಿವೆ.
‘ಡೌನ್ಲೋಡ್ ಟೆಂಪ್ಲೆಟ್’ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ, ‘ಷೇರುಗಳ ಡೆರಿವೇಟಿವ್ ಮಾರುಕಟ್ಟೆ’ ಮತ್ತು/ಅಥವಾ ನಗದು ಮಾರುಕಟ್ಟೆಯ ಅಡಿಯಲ್ಲಿ ಕೆಳಗಿನ ಕ್ಷೇತ್ರಗಳನ್ನು ಹೊಂದಿರುವ ಎಕ್ಸೆಲ್ ಫೈಲ್ ಡೌನ್ಲೋಡ್ ಆಗುತ್ತದೆ.

ಬಳಕೆದಾರರು ‘ಸರಕುಗಳ ಡೆರಿವೇಟಿವ್ ಮಾರುಕಟ್ಟೆ’ ಅನ್ನು ಆಯ್ಕೆ ಮಾಡಿದರೆ, ಕೆಳಗಿನ Excel ಟೆಂಪ್ಲೇಟ್ ಡೌನ್ಲೋಡ್ ಆಗುತ್ತದೆ.

ಮೇಲಿನ CSV ಫೈಲ್ಗಳನ್ನು ತುಂಬಲು ಸೂಚನಾ ಅಂಶಗಳು ಕೆಳಗಿವೆ.
ಷೇರುಗಳ ಡೆರಿವೇಟಿವ್ ಮಾರುಕಟ್ಟೆ ಮತ್ತು ನಗದು ಮಾರುಕಟ್ಟೆ -
| ಕ್ರಮಸಂಖ್ಯೆ |
ಕ್ಷೇತ್ರದ ಹೆಸರು |
ಸೂಚನೆಗಳು |
ಕಡ್ಡಾಯ ಕ್ಷೇತ್ರ (ಹೌದು/ಇಲ್ಲ) |
ಕ್ಷೇತ್ರದ ಅಕ್ಷರ ಮಿತಿ |
|
1 |
ಕ್ರಮಸಂಖ್ಯೆ |
ಸರಣಿಯಲ್ಲಿ ಕ್ರಮಸಂಖ್ಯೆಯನ್ನು ನಮೂದಿಸಿ. |
ಹೌದು |
14 digits, Numeric, Non‑Negative |
|
2 |
ವಹಿವಾಟಿನ ID |
ನಿರ್ವಹಿಸಲಾದ ವಹಿವಾಟಿಗೆ (trade) ಉತ್ಪತ್ತಿಯಾದ ವಹಿವಾಟಿನ ID ನಮೂದಿಸಿ. |
ಹೌದು |
ಗರಿಷ್ಠ 100 ಅಕ್ಷರಗಳು |
|
3 |
ದಲ್ಲಾಳಿಯ ಹೆಸರು |
ಷೇರು ವಿನಿಮಯ ಕೇಂದ್ರದಲ್ಲಿ ನೋಂದಾಯಿತರಾದ ದಲ್ಲಾಳಿಯ ಹೆಸರು ನಮೂದಿಸಿ. |
ಹೌದು |
ಗರಿಷ್ಠ 250 ಅಕ್ಷರಗಳು |
|
4 |
ದಲ್ಲಾಳಿಯ ID |
ಷೇರು ವಿನಿಮಯ ಕೇಂದ್ರದಲ್ಲಿ ನೋಂದಾಯಿತ ಬ್ರೋಕರ್ಗೆ ನೀಡಲಾಗಿರುವ ವಿಶೇಷ ಕೋಡ್ ಅನ್ನು ನಮೂದಿಸಿ. |
ಹೌದು |
ಗರಿಷ್ಠ 100 ಅಕ್ಷರಗಳು |
|
5 |
ಮೂಲ ಗ್ರಾಹಕ ಕೋಡ್ |
ವಹಿವಾಟು ನಡೆಸಿದ ಮೂಲ ಗ್ರಾಹಕನ ಕ್ಲೈಯಂಟ್ ಕೋಡ್ ಅನ್ನು ನಮೂದಿಸಿ. |
ಹೌದು |
ಗರಿಷ್ಠ 100 ಅಕ್ಷರಗಳು |
|
6 |
ಮೂಲ ಗ್ರಾಹಕರ ಹೆಸರು |
ವಹಿವಾಟು ನಡೆಸಿದ ಗ್ರಾಹಕರ ಹೆಸರನ್ನು ನಮೂದಿಸಿ. |
ಹೌದು |
ಗರಿಷ್ಠ 250 ಅಕ್ಷರಗಳು |
|
7 |
ಮೂಲ ಗ್ರಾಹಕರ PAN |
ವಹಿವಾಟು ನಡೆಸಿದ ಗ್ರಾಹಕರ PAN ಅನ್ನು ನಮೂದಿಸಿ. |
ಹೌದು |
10 ಅಕ್ಷರ-ಅಂಕಿ (alphanumeric): ಮೊದಲ 5 ಅಕ್ಷರಗಳು, ನಂತರ 4 ಅಂಕೆಗಳು, ಕೊನೆಯಲ್ಲಿ 1 ಅಕ್ಷರ |
|
8 |
ತಿದ್ದುಪಡಿಯಾದ ಗ್ರಾಹಕ ಕೋಡ್ |
ತಿದ್ದುಪಡಿಯಾದ ಕೋಡ್ ನಮೂದಿಸಿ. |
ಹೌದು |
ಗರಿಷ್ಠ 100 ಅಕ್ಷರಗಳು |
|
9 |
ತಿದ್ದುಪಡಿಯಾದ ಗ್ರಾಹಕರ ಹೆಸರು |
ಗ್ರಾಹಕರ ತಿದ್ದುಪಡಿಯಾದ ಹೆಸರನ್ನು ನಮೂದಿಸಿ. ಯಾವುದೇ ಬದಲಾವಣೆ ಇಲ್ಲದಿದ್ದರೆ ಮೂಲ ಹೆಸರನ್ನೇ ನಮೂದಿಸಿ. |
ಹೌದು |
ಗರಿಷ್ಠ 250 ಅಕ್ಷರಗಳು |
|
10 |
ತಿದ್ದುಪಡಿಯಾದ ಗ್ರಾಹಕರ PAN ಅನ್ನು ನಮೂದಿಸಿ. |
ಗ್ರಾಹಕರ ತಿದ್ದುಪಡಿಯಾದ PAN ನಮೂದಿಸಿ. ಯಾವುದೇ ಬದಲಾವಣೆ ಇಲ್ಲದಿದ್ದರೆ ಮೂಲ PAN ನಮೂದಿಸಿ. |
ಹೌದು |
10 ಅಕ್ಷರ-ಅಂಕಿ (alphanumeric): ಮೊದಲ 5 ಅಕ್ಷರಗಳು, ನಂತರ 4 ಅಂಕೆಗಳು, ಕೊನೆಯಲ್ಲಿ 1 ಅಕ್ಷರ |
|
11 |
ಷೇರುಪತ್ರದ ಹೆಸರು |
ವಹಿವಾಟು ನಡೆದಿರುವ ಷೇರುಪತ್ರದ ಹೆಸರನ್ನು ನಮೂದಿಸಿ. |
ಹೌದು |
ಗರಿಷ್ಠ 100 ಅಕ್ಷರಗಳು |
|
12 |
ಷೇರುಪತ್ರದ ಕೋಡ್ |
ವಹಿವಾಟು ನಡೆದಿರುವ ಷೇರುಪತ್ರದ ಕೋಡ್ ನಮೂದಿಸಿ. |
ಹೌದು |
ಗರಿಷ್ಠ 100 ಅಕ್ಷರಗಳು |
|
13 |
ಪ್ರಮಾಣ |
ವಹಿವಾಟು ನಡೆದಿರುವ ಪ್ರಮಾಣವನ್ನು ನಮೂದಿಸಿ. |
ಹೌದು |
14 ಅಂಕೆಗಳು |
|
14 |
ದರ |
ವಹಿವಾಟು ನಡೆದಿರುವ ಪ್ರತಿ ಷೇರುಪತ್ರದ ದರವನ್ನು ರೂಪಾಯಿಗಳಲ್ಲಿ ನಮೂದಿಸಿ. |
ಹೌದು |
14 ಅಂಕೆಗಳು, |
|
15 |
ವಹಿವಾಟಿನ ಒಟ್ಟು ಮೌಲ್ಯ |
ವಹಿವಾಟಿನ ಒಟ್ಟು ಮೌಲ್ಯವನ್ನು ರೂಪಾಯಿಯಲ್ಲಿ ನಮೂದಿಸಿ. (ಪ್ರಮಾಣ × ದರ) |
ಹೌದು |
14 ಅಂಕೆಗಳು, |
|
16 |
ಖರೀದಿ ಅಥವಾ ಮಾರಾಟ |
ಡ್ರಾಪ್ಡೌನ್ನಲ್ಲಿ ನೀಡಿರುವಂತೆ, ವಹಿವಾಟು ಖರೀದಿಯೋ ಅಥವಾ ಮಾರಾಟವೋ ಎಂದು ಆಯ್ಕೆಮಾಡಿ. |
ಹೌದು |
- |
|
17 |
ವಹಿವಾಟಿನ ದಿನಾಂಕ |
ವಹಿವಾಟು ನಡೆದ ದಿನಾಂಕವನ್ನು ನಮೂದಿಸಿ. ವಹಿವಾಟಿನ ದಿನಾಂಕವು ತಿದ್ದುಪಡಿಯಾದ ದಿನಾಂಕ ಅಥವಾ ಅದಕ್ಕೆ ಮೊದಲಿನ ದಿನವಾಗಿರಬಹುದು. |
ಹೌದು |
ಕೆಳಗಿನ ಸ್ವರೂಪದಲ್ಲಿ ದಿನಾಂಕವನ್ನು ನಮೂದಿಸಿ: |
|
18 |
ತಿದ್ದುಪಡಿ ದಿನಾಂಕ |
ತಿದ್ದುಪಡಿ ಮಾಡಲಾದ ದಿನಾಂಕವನ್ನು ನಮೂದಿಸಿ. ಈ ದಿನಾಂಕವು ಫಾರ್ಮ್ ಸಲ್ಲಿಸಲಾಗುತ್ತಿರುವ ಆಯ್ಕೆಯಾದ ತಿಂಗಳ ಒಳಗೇ ಇರಬೇಕು. |
ಹೌದು |
ಕೆಳಗಿನ ಸ್ವರೂಪದಲ್ಲಿ ದಿನಾಂಕವನ್ನು ನಮೂದಿಸಿ: |
ಸೂಚನೆ: ಸರಣಿ ಸಂಖ್ಯೆ 9 ಮತ್ತು 10ರಲ್ಲಿ, ಗ್ರಾಹಕರ ಹೆಸರು ಅಥವಾ PAN ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ, ಸರಣಿ ಸಂಖ್ಯೆ 6 ಮತ್ತು 7ರಲ್ಲಿ ನಮೂದಿಸಿದ ಮೂಲ ಗ್ರಾಹಕರ ಹೆಸರು ಅಥವಾ PAN ಅನ್ನು ಅದೇ ರೀತಿಯಲ್ಲಿ ನಮೂದಿಸಬಹುದು.
ಸರಕುಗಳ ಡೆರಿವೇಟಿವ್ ಮಾರುಕಟ್ಟೆ
|
ಕ್ರಮಸಂಖ್ಯೆ |
ಕ್ಷೇತ್ರದ ಹೆಸರು |
ಸೂಚನೆ |
ಕಡ್ಡಾಯ ಕ್ಷೇತ್ರ (ಹೌದು/ಇಲ್ಲ) |
ಕ್ಷೇತ್ರದ ಅಕ್ಷರ ಮಿತಿ |
|
1 |
ಕ್ರಮಸಂಖ್ಯೆ |
ಸರಣಿಯಲ್ಲಿ ಕ್ರಮಸಂಖ್ಯೆಯನ್ನು ನಮೂದಿಸಿ. |
ಹೌದು |
14 digits, Numeric, Non‑Negative |
|
2 |
ವಹಿವಾಟಿನ ID |
ನಿರ್ವಹಿಸಲಾದ ವಹಿವಾಟಿಗೆ (trade) ಉತ್ಪತ್ತಿಯಾದ ವಹಿವಾಟಿನ ID ನಮೂದಿಸಿ. |
ಹೌದು |
ಗರಿಷ್ಠ 100 ಅಕ್ಷರಗಳು |
|
3 |
ದಲ್ಲಾಳಿಯ ಹೆಸರು |
ಷೇರು ವಿನಿಮಯ ಕೇಂದ್ರದಲ್ಲಿ ನೋಂದಾಯಿತರಾದ ದಲ್ಲಾಳಿಯ ಹೆಸರು ನಮೂದಿಸಿ. |
ಹೌದು |
ಗರಿಷ್ಠ 250 ಅಕ್ಷರಗಳು |
|
4 |
ದಲ್ಲಾಳಿಯ ID |
ಷೇರು ವಿನಿಮಯ ಕೇಂದ್ರದಲ್ಲಿ ನೋಂದಾಯಿತ ದಲ್ಲಾಳಿಗೆ ನೀಡಲಾಗಿರುವ ವಿಶೇಷ ಕೋಡ್ ಅನ್ನು ನಮೂದಿಸಿ. |
ಹೌದು |
ಗರಿಷ್ಠ 100 ಅಕ್ಷರಗಳು |
|
5 |
ಮೂಲ ಗ್ರಾಹಕ ಕೋಡ್ |
ವಹಿವಾಟು ನಡೆಸಿದ ಮೂಲ ಗ್ರಾಹಕನ ಕ್ಲೈಯಂಟ್ ಕೋಡ್ ಅನ್ನು ನಮೂದಿಸಿ. |
ಹೌದು |
ಗರಿಷ್ಠ 100 ಅಕ್ಷರಗಳು |
|
6 |
ಮೂಲ ಗ್ರಾಹಕರ ಹೆಸರು |
ವಹಿವಾಟು ನಡೆಸಿದ ಗ್ರಾಹಕರ ಹೆಸರನ್ನು ನಮೂದಿಸಿ. |
ಹೌದು |
ಗರಿಷ್ಠ 250 ಅಕ್ಷರಗಳು |
|
7 |
ಮೂಲ ಗ್ರಾಹಕರ PAN |
ವಹಿವಾಟು ನಡೆಸಿದ ಗ್ರಾಹಕರ PAN ಅನ್ನು ನಮೂದಿಸಿ. |
ಹೌದು |
10 ಅಕ್ಷರ-ಅಂಕಿ (alphanumeric): ಮೊದಲ 5 ಅಕ್ಷರಗಳು, ನಂತರ 4 ಅಂಕೆಗಳು, ಕೊನೆಯಲ್ಲಿ 1 ಅಕ್ಷರ |
|
8 |
ತಿದ್ದುಪಡಿಯಾದ ಗ್ರಾಹಕ ಕೋಡ್ |
ತಿದ್ದುಪಡಿಯಾದ ಕೋಡ್ ನಮೂದಿಸಿ. |
ಹೌದು |
ಗರಿಷ್ಠ 100 ಅಕ್ಷರಗಳು |
|
9 |
ತಿದ್ದುಪಡಿಯಾದ ಗ್ರಾಹಕರ ಹೆಸರು |
ಗ್ರಾಹಕರ ತಿದ್ದುಪಡಿಯಾದ ಹೆಸರನ್ನು ನಮೂದಿಸಿ. ಯಾವುದೇ ಬದಲಾವಣೆ ಇಲ್ಲದಿದ್ದರೆ ಮೂಲ ಹೆಸರನ್ನೇ ನಮೂದಿಸಿ. |
ಹೌದು |
ಗರಿಷ್ಠ 250 ಅಕ್ಷರಗಳು |
|
10 |
ತಿದ್ದುಪಡಿಯಾದ ಗ್ರಾಹಕರ PAN ಅನ್ನು ನಮೂದಿಸಿ. |
ಗ್ರಾಹಕರ ತಿದ್ದುಪಡಿಯಾದ PAN ನಮೂದಿಸಿ. ಯಾವುದೇ ಬದಲಾವಣೆ ಇಲ್ಲದಿದ್ದರೆ ಮೂಲ PAN ನಮೂದಿಸಿ. |
ಹೌದು |
10 ಅಕ್ಷರ-ಅಂಕಿ (alphanumeric): ಮೊದಲ 5 ಅಕ್ಷರಗಳು, ನಂತರ 4 ಅಂಕೆಗಳು, ಕೊನೆಯಲ್ಲಿ 1 ಅಕ್ಷರ |
|
11 |
ಸರಕು ಡೆರಿವೇಟಿವ್ ಹೆಸರು |
ವಹಿವಾಟು ನಡೆದಿರುವ ಸರಕು ಡೆರಿವೇಟಿವ್ ಹೆಸರನ್ನು ನಮೂದಿಸಿ. |
ಹೌದು |
ಗರಿಷ್ಠ 100 ಅಕ್ಷರಗಳು |
|
12 |
ಸರಕು ಡೆರಿವೇಟಿವ್ ಕೋಡ್ |
ವಹಿವಾಟು ನಡೆದಿರುವ ಸರಕು ಡೆರಿವೇಟಿವ್ ಕೋಡ್ ನಮೂದಿಸಿ. |
ಹೌದು |
ಗರಿಷ್ಠ 100 ಅಕ್ಷರಗಳು |
|
13 |
ಪ್ರಮಾಣ |
ವಹಿವಾಟು ನಡೆದಿರುವ ಪ್ರಮಾಣವನ್ನು ನಮೂದಿಸಿ. |
ಹೌದು |
14 ಅಂಕೆಗಳು |
|
14 |
ದರ |
ವಹಿವಾಟು ನಡೆದಿರುವ ಪ್ರತಿ ಸರಕಿನ ದರವನ್ನು ರೂಪಾಯಿಗಳಲ್ಲಿ ನಮೂದಿಸಿ. |
ಹೌದು |
14 ಅಂಕೆಗಳು, |
|
15 |
ವಹಿವಾಟಿನ ಒಟ್ಟು ಮೌಲ್ಯ |
ವಹಿವಾಟಿನ ಒಟ್ಟು ಮೌಲ್ಯವನ್ನು ರೂಪಾಯಿಯಲ್ಲಿ ನಮೂದಿಸಿ. (ಪ್ರಮಾಣ × ದರ) |
ಹೌದು |
14 ಅಂಕೆಗಳು, |
|
16 |
ಖರೀದಿ ಅಥವಾ ಮಾರಾಟ |
ಡ್ರಾಪ್ಡೌನ್ನಲ್ಲಿ ನೀಡಿರುವಂತೆ, ವಹಿವಾಟು ಖರೀದಿಯೋ ಅಥವಾ ಮಾರಾಟವೋ ಎಂದು ಆಯ್ಕೆಮಾಡಿ. |
ಹೌದು |
- |
|
17 |
ವಹಿವಾಟಿನ ದಿನಾಂಕ |
ವಹಿವಾಟು ನಡೆದ ದಿನಾಂಕವನ್ನು ನಮೂದಿಸಿ. ವಹಿವಾಟಿನ ದಿನಾಂಕವು ತಿದ್ದುಪಡಿಯಾದ ದಿನಾಂಕ ಅಥವಾ ಅದಕ್ಕೆ ಮೊದಲಿನ ದಿನವಾಗಿರಬಹುದು. |
ಹೌದು |
ಕೆಳಗಿನ ಸ್ವರೂಪದಲ್ಲಿ ದಿನಾಂಕವನ್ನು ನಮೂದಿಸಿ: |
|
18 |
ತಿದ್ದುಪಡಿ ದಿನಾಂಕ |
ತಿದ್ದುಪಡಿ ಮಾಡಲಾದ ದಿನಾಂಕವನ್ನು ನಮೂದಿಸಿ. ಈ ದಿನಾಂಕವು ಫಾರ್ಮ್ ಸಲ್ಲಿಸಲಾಗುತ್ತಿರುವ ಆಯ್ಕೆಯಾದ ತಿಂಗಳ ಒಳಗೇ ಇರಬೇಕು. |
ಹೌದು |
ಕೆಳಗಿನ ಸ್ವರೂಪದಲ್ಲಿ ದಿನಾಂಕವನ್ನು ನಮೂದಿಸಿ: |
ಸೂಚನೆ: ಸರಣಿ ಸಂಖ್ಯೆ 9 ಮತ್ತು 10ರಲ್ಲಿ, ಗ್ರಾಹಕರ ಹೆಸರು ಅಥವಾ PAN ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ, ಸರಣಿ ಸಂಖ್ಯೆ 6 ಮತ್ತು 7ರಲ್ಲಿ ನಮೂದಿಸಿದ ಮೂಲ ಗ್ರಾಹಕರ ಹೆಸರು ಅಥವಾ PAN ಅನ್ನು ಅದೇ ರೀತಿಯಲ್ಲಿ ನಮೂದಿಸಬಹುದು.
ಬಳಕೆದಾರರು ಅದನ್ನು ಎಕ್ಸೆಲ್ ಫೈಲ್ನಲ್ಲಿ ಸೇವ್ ಮಾಡಬೇಕು. ನಂತರ ‘ಫ಼ೈಲ್’ > ‘ಸೇವ್ ಆಸ್’ ಅಥವಾ ‘Alt+F+A’ ಕ್ಲಿಕ್ ಮಾಡಿ. ‘ಸೇವ್ ಆಸ್ ಟೈಪ್’ ಡ್ರಾಪ್ಡೌನ್ನಿಂದ ‘CSV (Comma delimited)’ ಆಯ್ಕೆಮಾಡಿ ಮತ್ತು ನಂತರ ‘ಸೇವ್’ ಕ್ಲಿಕ್ ಮಾಡಿ. ತುಂಬಿದ ಎಕ್ಸೆಲ್ ಫೈಲ್ CSV ಫಾರ್ಮ್ಯಾಟ್ನಲ್ಲಿ ಉಳಿಸಲಾಗುತ್ತದೆ. ಈ CSV ಫೈಲ್ ಅನ್ನು ನಂತರ ಪೋರ್ಟಲ್ನಲ್ಲಿ “Upload Template” ಬಟನ್ ಕ್ಲಿಕ್ ಮಾಡುವ ಮೂಲಕ ಅಪ್ಲೋಡ್ ಮಾಡಬೇಕು.
ಫಾರ್ಮ್ನಲ್ಲಿನ ಎಲ್ಲವನ್ನು ನಮೂದಿಸಿದ ನಂತರ, ಬಳಕೆದಾರರು ಫಾರ್ಮ್ ಅನ್ನು ‘ಸೇವ್’ ಮಾಡಬಹುದು ಅಥವಾ ಸಲ್ಲಿಕೆಗೆ ಮೊದಲು ‘ಮುನ್ನೋಟ’ ಪುಟಕ್ಕೆ ಮುಂದುವರಿಯಬಹುದು.
ಎಲ್ಲಾ ಕಡ್ಡಾಯ ಕ್ಷೇತ್ರಗಳನ್ನು ಭರ್ತಿ ಮಾಡಿದ ನಂತರ ಮಾತ್ರ ಮುನ್ನೋಟ ಬಟನ್ ಸಕ್ರಿಯವಾಗುತ್ತದೆ. ಮುಂದುವರಿಯಲು ಬಳಕೆದಾರರು ಮುನ್ನೋಟ ಮೇಲೆ ಕ್ಲಿಕ್ ಮಾಡಬೇಕು.
ಹಂತ 8: “ಮುನ್ನೋಟ” ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ, ಬಳಕೆದಾರರನ್ನು ಮುನ್ನೋಟ ಪರದೆಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಅವರು ನೀಡಿದ ವಿವರಗಳನ್ನು ಪರಿಶೀಲಿಸಬಹುದು ಮತ್ತು ನಂತರ “ಇ-ಪರಿಶೀಲನೆಗೆ ಮುಂದುವರೆಯಿರಿ” ಮೇಲೆ ಕ್ಲಿಕ್ ಮಾಡಬೇಕು.
ಡೌನ್ಲೋಡ್ ಮಾಡಿದ ಎಕ್ಸೆಲ್ ಟೆಂಪ್ಲೇಟ್ ಅನ್ನು ತುಂಬಿದ ನಂತರ, ಬಳಕೆದಾರರು ಫಾರ್ಮ್ನಲ್ಲಿ ನಮೂದಿಸಿದ ಎಲ್ಲಾ ಕ್ಷೇತ್ರಗಳು ಮತ್ತು ಇನ್ಪುಟ್ ಡೇಟಾವನ್ನು ಮುನ್ನೋಟದ ಪರದೆಯಲ್ಲಿ ಪ್ರದರ್ಶಿಸಲಾಗುತ್ತವೆ. ಮುಂದುವರಿಯುವ ಮೊದಲು ಬಳಕೆದಾರರು ಈ ವಿವರಗಳನ್ನು ಪರಿಶೀಲಿಸಬೇಕು. ಯಾವುದೇ ಬದಲಾವಣೆಗಳ ಅಗತ್ಯವಿದ್ದರೆ, ಬಳಕೆದಾರರು ಮಾಹಿತಿಯನ್ನು ತಿದ್ದುಪಡಿ ಮಾಡಲು “ತಿದ್ದುಪಡಿ” ಬಟನ್ ಮೇಲೆ ಕ್ಲಿಕ್ ಮಾಡಬಹುದು. ಬಳಕೆದಾರರು ಮುನ್ನೋಟದ ಪರದೆಯನ್ನು PDF ಆಗಿ ಡೌನ್ಲೋಡ್ ಮಾಡುವ ಆಯ್ಕೆಯನ್ನೂ ಹೊಂದಿರುತ್ತಾರೆ, ಆದರೆ ಈ PDF ಕೇವಲ ಸಲ್ಲಿಕೆಯ ಮುನ್ನೋಟ ದ ಪ್ರತಿಯಾಗಿದ್ದು, ಇದು ಅಂತಿಮವಾಗಿ ಸಲ್ಲಿಸಲಾದ ಫಾರ್ಮ್ ಅಲ್ಲ.
ಫೈಲಿಂಗ್ ಪ್ರಕ್ರಿಯೆಯನ್ನು ಮುಂದುವರಿಸಲು, ಬಳಕೆದಾರರು “ಇ-ಪರಿಶೀಲನೆಗೆ ಮುಂದುವರೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಹಂತ 9: ‘ಇ-ಪರಿಶೀಲನೆಗೆ ಮುಂದುವರೆಯಿರಿ’ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ, ಬಳಕೆದಾರರನ್ನು ‘ಇ-ಪರಿಶೀಲನೆ’ ಪುಟಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಅವರು DSC ಬಳಸಿ ಫ಼ಾರ್ಮ್ ನಂ.1 ಅನ್ನು ಪರಿಶೀಲಿಸಬಹುದು. ಫಾರ್ಮ್ ಅನ್ನು ಸಲ್ಲಿಸಲು ಬಳಕೆದಾರರು ‘ಮುಂದುವರಿಯಿರಿ’ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ 10: ಫಾರ್ಮ್ ಯಶಸ್ವಿಯಾಗಿ ಸಲ್ಲಿಸಿದ ನಂತರ, ಪರದೆಯಲ್ಲಿ ದೃಢೀಕರಣ ಸಂದೇಶ ಪ್ರದರ್ಶಿಸಲಾಗುತ್ತದೆ.
ಯಶಸ್ವಿ ‘ಇ-ಪರಿಶೀಲನೆ’ ನಂತರ, ‘ವಹಿವಾಟಿನ ID’ ಮತ್ತು ‘ಸ್ವೀಕೃತಿ ರಶೀದಿ ಸಂಖ್ಯೆ’ಯೊಂದಿಗೆ ಜೊತೆಗೆ ಪ್ರಕ್ರಿಯೆ ಯಶಸ್ವಿಯಾದ ಬಗ್ಗೆ ಸಂದೇಶವೂ ಪ್ರದರ್ಶಿಸಲಾಗುತ್ತದೆ. ದಯವಿಟ್ಟು ಭವಿಷ್ಯದಲ್ಲಿ ಉಲ್ಲೇಖಕ್ಕಾಗಿ ‘ವಹಿವಾಟಿನ ID’ ಮತ್ತು ‘ಸ್ವೀಕೃತಿ ರಶೀದಿ ಸಂಖ್ಯೆ’ ಅನ್ನು ಬರೆದಿಟ್ಟುಕೊಳ್ಳಿ. ನೀವು ‘ಇ-ಫ಼ೈಲಿಂಗ್’ ಪೋರ್ಟಲ್ನಲ್ಲಿ ನೋಂದಾಯಿತ ಇಮೇಲ್ ID(ಗಳು) ಮತ್ತು ಮೊಬೈಲ್ ಸಂಖ್ಯೆ(ಗಳು)ಗೆ ಸಹ ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ.
‘ಸ್ವೀಕೃತಿ ರಶೀದಿ’ಯನ್ನು ಡೌನ್ಲೋಡ್ ಮಾಡಲು ‘ಡೌನ್ಲೋಡ್’ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 11: ಫ಼ಾರ್ಮ್ ನಂ. 1 ಯಶಸ್ವಿಯಾಗಿ ಸಲ್ಲಿಸಿದ ನಂತರ, ಬಳಕೆದಾರರು ತುಂಬಿದ ಫಾರ್ಮ್ ಅನ್ನು ಡ್ಯಾಶ್ಬೋರ್ಡ್ನಲ್ಲಿ ‘e-File’ > ‘ಆದಾಯ ತೆರಿಗೆ ಫ಼ಾರ್ಮ್ ಸಲ್ಲಿಕೆ’ > ‘ಸಲ್ಲಿಕೆಯಾದ ಫ಼ಾರ್ಮ್ ನೋಡಿ’ > ‘ಆದಾಯ ತೆರಿಗೆ ಕಾಯ್ದೆ 2025ರ ಅಡಿಯಲ್ಲಿ ಸಲ್ಲಿಕೆಯಾದ ಫ಼ಾರ್ಮ್ಗಳ ಟ್ಯಾಬ್’ ಕ್ಲಿಕ್ ಮಾಡಿ ನೋಡಬಹುದು
ಸೂಚನೆ: ಹೆಚ್ಚಿನ ಮಾಹಿತಿಗಾಗಿ “ಸಲ್ಲಿಕೆಯಾದ ಫ಼ಾರ್ಮ್ ನೋಡಿ” ಬಳಕೆದಾರ ಕೈಪಿಡಿಯನ್ನು ನೋಡಿ.
ಸೂಚನೆ: ಹೆಚ್ಚಿನ ಮಾಹಿತಿಗಾಗಿ “ಇ-ಪರಿಶೀಲನೆ ಮಾಡುವುದು ಹೇಗೆ” ಬಳಕೆದಾರ ಕೈಪಿಡಿಯನ್ನು ನೋಡಿ.
5. ಸಂಬಂಧಿತ ವಿಷಯಗಳು
6. ಪದಕೋಶ
| ಸಂಕ್ಷೇಪಣ/ಸಂಕ್ಷಿಪ್ತರೂಪ | ವಿವರಣೆ/ಪೂರ್ಣ ರೂಪ |
| DSC | ಡಿಜಿಟಲ್ ಸಹಿ ಪ್ರಮಾಣಪತ್ರ |
| EVC | ಎಲೆಕ್ಟ್ರಾನಿಕ್ ಪರಿಶೀಲನಾ ಪ್ರಮಾಣಪತ್ರ. |
| ARN | ಸ್ವೀಕೃತಿ ರಶೀದಿ ಸಂಖ್ಯೆ |
| PY | ಕಳೆದ ವರ್ಷ |
| FY | ಆರ್ಥಿಕ ವರ್ಷ |
| TY | ತೆರಿಗೆ ವರ್ಷ |