ಫಾರ್ಮ್ 41 ಕುರಿತು ಬಳಕೆದಾರರ ಕೈಪಿಡಿ
1. ಸಾಮಾನ್ಯ ತಿಳುವಳಿಕೆೆ
ತೆರಿಗೆ ಒಪ್ಪಂದವೊಂದರ ಅಡಿಯಲ್ಲಿ ಭಾರತ ಮತ್ತು ಇನ್ನೊಂದು ದೇಶದಲ್ಲಿ ತೆರಿಗೆ ವಿಧಿಸಲಾಗುವ ತೆರಿಗೆದಾರರಿಗೆ ದ್ವಿ ತೆರಿಗೆ ಪರಿಹಾರ ಲಭ್ಯವಿದೆ. ಆದಾಯ ತೆರಿಗೆ ಇಲಾಖೆಯು ಅಂತಹ ಹಕ್ಕುಗಳನ್ನು ಪರಿಶೀಲಿಸಲು ಅನುವು ಮಾಡಿಕೊಡಲು, ಅನಿವಾಸಿ ತೆರಿಗೆದಾರರು ಕೆಲವು ಹೆಚ್ಚುವರಿ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.
ಈ ವಿವರಗಳನ್ನು ಒದಗಿಸಲು 'ಫಾರ್ಮ್ 41'ಅನ್ನು ಸೂಚಿಸಲಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 159ರ ಅಡಿಯಲ್ಲಿ ಒದಗಿಸಲಾದ ದ್ವಿ-ತೆರಿಗೆ ತಪ್ಪಿಸುವಿಕೆ ಒಪ್ಪಂದದ (DTAA) ಅಡಿಯಲ್ಲಿ ಅನಿವಾಸಿಗಳು ತೆರಿಗೆ ವಿನಾಯಿತಿಯನ್ನು ಪಡೆಯಲು ಬಯಸಿದಾಗ, ಈ ಫಾರ್ಮ್ ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ನಿಯಮ 75ರ ಅಡಿಯಲ್ಲಿ ಅಗತ್ಯವಿರುವ ಪೂರಕ ಮಾಹಿತಿಯನ್ನು ಸರಿಯಾಗಿ ಒದಗಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು 'ಫಾರ್ಮ್ 41' ಅನ್ನು ಸಲ್ಲಿಸುವುದು ಅವಶ್ಯಕವಾಗಿದೆ, ಇದರಿಂದಾಗಿ ತೆರಿಗೆ ವಿನಾಯಿತಿಯ ಹಕ್ಕನ್ನು ಸರಿಯಾಗಿ ಪಡೆಯಬಹುದು.
ಫಾರ್ಮ್ 41 ಇ-ಫೈಲಿಂಗ್ ಪೋರ್ಟಲ್ನಲ್ಲಿ ಲಭ್ಯವಿದೆ ಮತ್ತು ಅದನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬಹುದು.
2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು
- ನೀವು ಇ-ಸಲ್ಲಿಕೆ ಪೋರ್ಟಲ್ನಲ್ಲಿ ಮಾನ್ಯವಾದ ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ಹೊಂದಿರುವ ನೋಂದಾಯಿತ ಬಳಕೆದಾರರಾಗಿರಬೇಕು.
- PAN ಹೊಂದಿರದ ಮತ್ತು PAN ಹೊಂದಿರಬೇಕಾದ ಅವಶ್ಯಕತೆ ಇಲ್ಲದ ಅನಿವಾಸಿಗಳು("ಅನಿವಾಸಿ ತೆರಿಗೆದಾರರು") ಈ ವರ್ಗದ ತೆರಿಗೆದಾರರಿಗಾಗಿ ವಿಶೇಷವಾಗಿ ಸೃಷ್ಟಿಸಲಾದ ಪ್ರತ್ಯೇಕ ಲಾಗಿನ್ ಮೂಲಕ ಈ ಫಾರ್ಮ್ ಅನ್ನು ಸಲ್ಲಿಸಬೇಕು.
- ಅರ್ಜಿದಾರರು ವಾಸವಿರುವ ದೇಶ ಅಥವಾ ಪ್ರದೇಶದಲ್ಲಿನ ಅವರ ತೆರಿಗೆ ಗುರುತಿನ ಸಂಖ್ಯೆ
- ಸೆಕ್ಷನ್ 159(8) ರಲ್ಲಿ ಉಲ್ಲೇಖಿಸಲಾದ ಪ್ರಮಾಣಪತ್ರದ ಪ್ರತಿ
- ಒಂದುವೇಳೆ ನೀವು ಫಾರ್ಮ್ ಅನ್ನು DSC ಮೂಲಕ ಪರಿಶೀಲಿಸಲು ಆಯ್ಕೆ ಮಾಡಬಯಸಿದರೆ, ಪರಿಶೀಲನೆಗಾಗಿ ಮಾನ್ಯವಾದ DSC ಹೊಂದಿರಬೇಕು ಹಾಗೂ ಅದು ಇ-ಫೈಲಿಂಗ್ ಪೋರ್ಟಲ್ನಲ್ಲಿ ನೋಂದಾಯಿತವಾಗಿರಬೇಕು ಮತ್ತುಅವಧಿ ಮುಗಿದಿರಬಾರದು (PAN ಲಾಗಿನ್ನ ಸಂದರ್ಭದಲ್ಲಿ)
3. ಫಾರ್ಮ್ ಬಗ್ಗೆ
3.1 ಉದ್ದೇಶ
ಆದಾಯ ತೆರಿಗೆ ಕಾಯ್ದೆ, 2025ರ ಪ್ರಕಾರ, ಒಂದೇ ಆದಾಯವು ಭಾರತ ಮತ್ತು ಮತ್ತೊಂದು ದೇಶದಲ್ಲಿ ತೆರಿಗೆ ಒಪ್ಪಂದದ ಅಡಿಯಲ್ಲಿ ತೆರಿಗೆಗೆ ಒಳಪಟ್ಟಾಗ, ಅನಿವಾಸಿ ತೆರಿಗೆದಾರರು ತೆರಿಗೆ ವಿನಾಯಿತಿಯನ್ನು ಪಡೆಯಲು ಅವಕಾಶವಿದೆ. ಇಂತಹ ಹಕ್ಕನ್ನು ಸಮರ್ಥಿಸಿಕೊಳ್ಳಲು, ತೆರಿಗೆ ಪಾವತಿದಾರರು ನಿರ್ದಿಷ್ಟ ಮಾಹಿತಿ ಮತ್ತು ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವುದು ಕಡ್ಡಾಯವಾಗಿದೆ.
ಈ ವಿವರಗಳನ್ನು ಒದಗಿಸಲು 'ಫಾರ್ಮ್ 41' ಅನ್ನು ಸೂಚಿಸಲಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 159ರ ಅಡಿಯಲ್ಲಿ ಒದಗಿಸಲಾದ ದ್ವಿ-ತೆರಿಗೆ ತಪ್ಪಿಸುವಿಕೆ ಒಪ್ಪಂದದ (DTAA) ಅಡಿಯಲ್ಲಿ ಅನಿವಾಸಿಗಳು ತೆರಿಗೆ ವಿನಾಯಿತಿಯನ್ನು ಪಡೆಯಲು ಬಯಸಿದಾಗ, ಈ ಫಾರ್ಮ್ ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ನಿಯಮ 75ರ ಅಡಿಯಲ್ಲಿ ಅಗತ್ಯವಿರುವ ಪೂರಕ ಮಾಹಿತಿಯನ್ನು ಸರಿಯಾಗಿ ಒದಗಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು 'ಫಾರ್ಮ್ 41' ಅನ್ನು ಸಲ್ಲಿಸುವುದು ಅವಶ್ಯಕವಾಗಿದೆ, ಇದರಿಂದಾಗಿ ತೆರಿಗೆ ವಿನಾಯಿತಿಯ ಹಕ್ಕನ್ನು ಸರಿಯಾಗಿ ಪಡೆಯಬಹುದು.
3.2 ಇದನ್ನು ಯಾರು ಬಳಸಬಹುದು?
ಇ-ಫೈಲಿಂಗ್ ಪೋರ್ಟಲ್ನಲ್ಲಿ ನೋಂದಾಯಿತವಾಗಿರುವ ಎಲ್ಲಾ ಅನಿವಾಸಿ ಬಳಕೆದಾರರು,ಆದಾಯ ತೆರಿಗೆ ಕಾಯ್ದೆ, 2025ರ ಸೆಕ್ಷನ್ ೧59 (8) ಅಡಿಯಲ್ಲಿ ಕಡ್ಡಾಯಗೊಳಿಸಲಾದ ಮಾಹಿತಿಯನ್ನು ಒದಗಿಸಲು ಅಗತ್ಯವಿರುವ ವಿವರಗಳನ್ನು ಫಾರ್ಮ್ 41 ರಲ್ಲಿ ಸಲ್ಲಿಸಬಹುದು.
3.3 ಫಾರ್ಮ್ನ ಒಂದು ಅವಲೋಕನ
ಫಾರ್ಮ್ 41 ಮೂರು ಫಲಕಗಳನ್ನು ಹೊಂದಿದೆ:
1. ಭಾಗ A: ಅರ್ಜಿದಾರರ ವಿವರಗಳು
2. ಭಾಗ B: ವಸತಿ ಮಾಹಿತಿಗಳು
3. ಘೋಷಣೆ ಮತ್ತು ಪರಿಶೀಲನೆ
4. ಹಂತ ಹಂತದ ಮಾರ್ಗದರ್ಶಿ
ಹಂತ 1: ನಿಮ್ಮ ಬಳಕೆದಾರರ ಗುರುತಿನ ಸಂಖ್ಯೆ ಮತ್ತು ಪಾಸ್ವರ್ಡ್ ಬಳಸಿ ಇ-ಫೈಲಿಂಗ್ ಪೋರ್ಟಲ್ಗೆ ಲಾಗಿನ್ ಆಗಿ.
ಹಂತ 2: ಬಳಕೆದಾರರ ಗುರುತಿನ ಸಂಖ್ಯೆಯನ್ನು ನಮೂದಿಸಿ (PAN ಹೊಂದಿರುವ ಅನಿವಾಸಿಗಳ ಸಂದರ್ಭದಲ್ಲಿ - PAN ಮತ್ತು PAN ಹೊಂದಿರದ ಅನಿವಾಸಿ ವರ್ಗವಾಗಿ ನೋಂದಾಯಿಸಿದ ಬಳಕೆದಾರರ ಸಂದರ್ಭದಲ್ಲಿ - NR ID) ಹಾಗೂ ಪಾಸ್ವರ್ಡ್ಅನ್ನು ನಮೂದಿಸಿ.
ಹಂತ 3: ಇ-ಫೈಲ್ ಗಳಿಗೆ ಹೋಗಿ& gt;ಆದಾಯ ತೆರಿಗೆ ಫಾರ್ಮ್ ಗಳು > ಆದಾಯ ತೆರಿಗೆ ಫಾರ್ಮ್ ಫೈಲ್ ಮಾಡಿ
ಹಂತ 4: ಆದಾಯ ತೆರಿಗೆ ಕಾಯ್ದೆ 2025 ರ ಪ್ರಕಾರ ಫಾರ್ಮ್ಗಳನ್ನು ಆಯ್ಕೆ ಮಾಡಿ, ಫಾರ್ಮ್ 41 ಅನ್ನು ಹುಡುಕಿ, ಮತ್ತು ಫೈಲ್ ನೌ ಬಟನ್ ಅನ್ನು ಒತ್ತಿ.
ಹಂತ 5: ಅನ್ವಯವಾಗುವ ತೆರಿಗೆ ವರ್ಷವನ್ನು (T.Y.) ಆಯ್ಕೆ ಮಾಡಿ ಮತ್ತು ಮುಂದುವರಿಸಿ ಬಟನ್ ಅನ್ನು ಒತ್ತಿ.
ಹಂತ 6: 'ಗೆಟ್ ಸ್ಟಾರ್ಟೆಡ್ ಮೇಲೆ ಕ್ಲಿಕ್ ಮಾಡಿ.
ಹಂತ 7: ಗೆಟ್ ಸ್ಟಾರ್ಟೆಡ್ ' ಬಟನ್ ಅನ್ನು ಕ್ಲಿಕ್ ಮಾಡಿದ ನಂತರ, ಬಳಕೆದಾರರನ್ನು ಫಲಕದ ಸ್ಕ್ರೀನ್ಗೆ ನ್ಯಾವಿಗೇಟ್ ಮಾಡಲಾಗುತ್ತದೆ ಮತ್ತು 1 ನೇ ಫಲಕವನ್ನು ಆಯ್ಕೆ ಮಾಡಿಃ "ಭಾಗ A: ಅರ್ಜಿದಾರರ ವಿವರಗಳು".
ಹಂತ 8: ವಿವರಗಳನ್ನು ದೃಢೀಕರಿಸಿ ಮತ್ತು 'ಸೇವ್ 'ಅನ್ನು ಕ್ಲಿಕ್ ಮಾಡಿ.
ಗಮನಿಸಿ : ವಿಳಾಸ ಸೇರಿದಂತೆ "ನನ್ನ ಪ್ರೊಫೈಲ್" ವಿಭಾಗದ ಅಡಿಯಲ್ಲಿ ಎಲ್ಲಾ ಕಡ್ಡಾಯ ವಿವರಗಳು ಪೂರ್ಣಗೊಂಡಿವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. "ಮೈ ಪ್ರೊಫೈಲ್" ಎಂಬ ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಸಂಪರ್ಕ ಮತ್ತು ವಿಳಾಸದ ವಿವರಗಳನ್ನು ನವೀಕರಿಸಬಹುದು.
ಹಂತ 9: 1ನೇ ಫಲಕವನ್ನು ಉಳಿಸಿದ ನಂತರ, ಫಲಕದ ಸ್ಥಿತಿಯು 'ಪೂರ್ಣಗೊಂಡಿದೆ' ಎಂದು ಪ್ರದರ್ಶಿಸಲ್ಪಡುತ್ತದೆ. ನಂತರ 2ನೇ ಫಲಕ: "ಭಾಗ B: ವಸತಿ ಮಾಹಿತಿ" ಅನ್ನು ಆಯ್ಕೆಮಾಡಿ.
ಹಂತ 10: ಎರಡನೇ ಫಲಕದಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ, ನಂತರ 'ಸೇವ್' ಮೇಲೆ ಕ್ಲಿಕ್ ಮಾಡಿ.
ಹಂತ 11: 2ನೇ ಫಲಕವನ್ನು ಉಳಿಸಿದ ನಂತರ, ಫಲಕದ ಸ್ಥಿತಿಯನ್ನು ಪೂರ್ಣಗೊಂಡಂತೆ ಪ್ರದರ್ಶಿಸಲಾಗುತ್ತದೆ, ನಂತರ 3ನೇ ಫಲಕವನ್ನು ಆಯ್ಕೆ ಮಾಡಿ:"ಘೋಷಣೆ ಮತ್ತು ಪರಿಶೀಲನೆ".
ಹಂತ 12: ಮೂರನೇ ಫಲಕದಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ, ನಂತರ 'ಉಳಿಸಿ' ಮೇಲೆ ಕ್ಲಿಕ್ ಮಾಡಿ.
ಹಂತ 13: ಮೂರನೇ ಫಲಕವನ್ನು ಉಳಿಸಿದ ನಂತರ, ಫಲಕದ ಸ್ಥಿತಿಯು ಪೂರ್ಣಗೊಂಡಿದೆ ಎಂದು ಪ್ರದರ್ಶಿಸಲಾಗುತ್ತದೆ, ನಂತರ ಪೂರ್ವವೀಕ್ಷಣೆಯ ಮೇಲೆ ಕ್ಲಿಕ್ ಮಾಡಿ.
ಹಂತ 14: ಪೂರ್ವವೀಕ್ಷಣಾ ಪುಟದಲ್ಲಿ, ವಿವರಗಳನ್ನು ಪರಿಶೀಲಿಸಿ ಮತ್ತು ಮುಂದುವರಿಯಿರಿ ಇ-ಪರಿಶೀಲನೆ ಕ್ಲಿಕ್ ಮಾಡಿ.
ಹಂತ 15: ಮುಂದುವರಿಯಿರಿ ಇ-ವೆರಿಫೈ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ, ನೀವು ಇ-ವೆರಿಫೈಗೆ ಮುಂದುವರಿಯಲು ಬಯಸುತ್ತೀರಿ ಎಂದು ತೋರಿಸುವ ಒಂದು ಪಾಪ್ಅಪ್ ದೃಢೀಕರಣವನ್ನು ಪ್ರದರ್ಶಿಸುತ್ತದೆ. ಹೌದು ಎಂದು ಕ್ಲಿಕ್ ಮಾಡಿ.
ಹಂತ 16: ಹೌದು ಎಂದು ಕ್ಲಿಕ್ ಮಾಡಿದರೆ, ನಿಮ್ಮನ್ನು ಇ-ಪರಿಶೀಲನೆ ಪುಟಕ್ಕೆ ಕರೆದೊಯ್ಯಲಾಗುತ್ತದೆ, ಅಲ್ಲಿ ನಿಮ್ಮ ಲಾಗಿನ್ ಪ್ರಕಾರವನ್ನು ಆಧರಿಸಿ ನೀವು ಫಾರ್ಮ್ 41 ಅನ್ನು ಪರಿಶೀಲಿಸಬಹುದು.
1. PAN ಲಾಗಿನ್: EVC. ಅಥವಾ DSC ಬಳಸಿ ಪರಿಶೀಲಿಸಿ (ಅನ್ವಯಿಸುವಂತೆ)
2. NR ID ಲಾಗಿನ್: ನಿಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಬಳಸಿ ಪರಿಶೀಲಿಸಿ.
ಗಮನಿಸಿ: ಹೆಚ್ಚಿನ ಮಾಹಿತಿಗಾಗಿ ಇ-ಪರಿಶೀಲನೆ ಮಾಡುವುದು ಹೇಗೆ ಬಳಕೆದಾರ ಮಾರ್ಗಸೂಚಿಯನ್ನು ನೋಡಿ.
ಯಶಸ್ವಿ ಇ-ಪರಿಶೀಲನೆಯ ನಂತರ, ವಹಿವಾಟು ಐಡಿ ಮತ್ತು ಸ್ವೀಕೃತಿ ರಸೀದಿ ಸಂಖ್ಯೆಯೊಂದಿಗೆ ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ದಯವಿಟ್ಟು ವಹಿವಾಟು ಐಡಿ ಮತ್ತು ಸ್ವೀಕೃತಿ ರಸೀದಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ. ಇ-ಫೈಲಿಂಗ್ ಪೋರ್ಟಲ್ನಲ್ಲಿ ನೋಂದಾಯಿಸಲಾದ ಇಮೇಲ್ ಐಡಿ (ಗಳು) ಮತ್ತು ಮೊಬೈಲ್ ಸಂಖ್ಯೆ (ಗಳು) ಯಲ್ಲಿ ನೀವು ದೃಢೀಕರಣ ಸಂದೇಶವನ್ನು ಸಹ ಸ್ವೀಕರಿಸುತ್ತೀರಿ.
5. ಸಂಬಂಧಿತ ವಿಷಯಗಳು
- ಲಾಗಿನ್
- ಡ್ಯಾಶ್ಬೋರ್ಡ್ ಮತ್ತು ಕಾರ್ಯಪಟ್ಟಿ (ತೆರಿಗೆದಾರರು)
- EVC ರಚಿಸಿ
- ಪ್ರತಿನಿಧಿಯಾಗಿ ಪ್ರಮಾಣೀಕರಿಸಿ / ನೋಂದಾಯಿಸಿ
6.ಪದಕೋಶ
| ಸಂಕ್ಷಿಪ್ತ ರೂಪ / ಸಂಕ್ಷೇಪಣ | ವಿವರಣೆ / ವಿಸ್ತೃತ ರೂಪ |
| DSC | ಡಿಜಿಟಲ್ ಸಹಿ ಪ್ರಮಾಣಪತ್ರ |
| EVC | ಎಲೆಕ್ಟ್ರಾನಿಕ್ ಪರಿಶೀಲನಾ ಪ್ರಮಾಣಪತ್ರ. |
| ARN | ಸ್ವೀಕೃತಿ ರಶೀದಿ ಸಂಖ್ಯೆ |
| FY | ಹಣಕಾಸಿನ ವರ್ಷ |