Do not have an account?
Already have an account?

1. ಇ-ಫೈಲಿಂಗ್ ವಾಲ್ಟ್ ಎಂದರೇನು?
ಇ-ಫೈಲಿಂಗ್ ವಾಲ್ಟ್ ವೈಶಿಷ್ಟ್ಯವು ನೋಂದಾಯಿತ ಬಳಕೆದಾರರಿಗೆ ಇ-ಫೈಲಿಂಗ್ ಖಾತೆಗಳಿಗೆ ಹೆಚ್ಚಿನ ಭದ್ರತೆಯನ್ನು ಸಕ್ರಿಯಗೊಳಿಸಲು ದ್ವಿತೀಯ-ಅಂಶದ ದೃಢೀಕರಣ ಲಭ್ಯಗೊಳಿಸುತ್ತದೆ. ಇ-ಫೈಲಿಂಗ್ ವಾಲ್ಟ್ ಅನ್ನು ನಿಮ್ಮ ಇ-ಫೈಲಿಂಗ್ ಖಾತೆಗೆ ಲಾಗಿನ್ ಮಾಡಲು ಮತ್ತು/ ಅಥವಾ ಪಾಸ್‌ವರ್ಡ್ ಮರುಹೊಂದಿಸಲು ಬಳಸಬಹುದು. ಇ-ಫೈಲಿಂಗ್ ವಾಲ್ಟ್ ಸೇವೆಯನ್ನು ಬಳಸುವುದು ಕಡ್ಡಾಯವಲ್ಲದಿದ್ದರೂ, ನಿಮ್ಮ ಇ-ಫೈಲಿಂಗ್ ಖಾತೆಯನ್ನು ಸುರಕ್ಷಿತಗೊಳಿಸಲು ಇದನ್ನು ಬಳಕೆ ಮಾಡಲು ಶಿಫಾರಸು ಮಾಡಲಾಗಿದೆ.

2. ದ್ವಿತೀಯ-ಅಂಶದ ದೃಢೀಕರಣ ಎಂದರೇನು?
ದ್ವಿತೀಯ-ಅಂಶದ ದೃಢೀಕರಣವು ನಿಮ್ಮ ಇ-ಫೈಲಿಂಗ್ ಖಾತೆಗೆ ಹೆಚ್ಚಿನ ಮಟ್ಟದ ಭದ್ರತೆಯನ್ನು ಸಕ್ರಿಯಗೊಳಿಸುವ ಕ್ರಿಯಾತ್ಮಕತೆಯಾಗಿದೆ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಬಳಕೆದಾರ ID ಮತ್ತು ಪಾಸ್ವರ್ಡ್ ಅನ್ನು ಮೌಲ್ಯೀಕರಿಸುವುದನ್ನು ಹೊರತುಪಡಿಸಿ ಇದು ಮತ್ತೊಂದು ಹಂತದ ಭದ್ರತೆಯನ್ನು ಖಾತ್ರಿಗೊಳಿಸುತ್ತದೆ. ಇ-ಫೈಲಿಂಗ್ ವಾಲ್ಟ್ ಸೇವೆಯನ್ನು ಬಳಸುವುದರಿಂದ, ನೀವು ಲಾಗಿನ್ ಮಾಡಲು ಪ್ರಯತ್ನಿಸಿದಾಗಲೆಲ್ಲಾ ಡೀಫಾಲ್ಟ್ ಆಗಿ ಕಾಣಿಸಿಕೊಳ್ಳುವ ಲಾಗಿನ್ ಆಯ್ಕೆಯನ್ನು ನೀವು ಆಯ್ಕೆ ಮಾಡಬಹುದು.

3. ನನ್ನ ಇ-ಫೈಲಿಂಗ್ ಖಾತೆಗೆ ನಾನು ಉನ್ನತ ಭದ್ರತೆಯನ್ನು ಹೇಗೆ ಸಕ್ರಿಯಗೊಳಿಸಬಹುದು?
ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದು ವಿಧಾನದ ಮೂಲಕ ನೀವು ದ್ವಿತೀಯ-ಅಂಶದ ದೃಢೀಕರಣದ ರೂಪದಲ್ಲಿ ಹೆಚ್ಚಿನ ಭದ್ರತೆಯನ್ನು ಸಕ್ರಿಯಗೊಳಿಸಬಹುದು:

  • ನೆಟ್ ಬ್ಯಾಂಕಿಂಗ್
  • ಡಿಜಿಟಲ್ ಭದ್ರತಾ ಪ್ರಮಾಣಪತ್ರ (DSC)
  • ಆಧಾರ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯ OTP
  • ಬ್ಯಾಂಕ್ ಖಾತೆ EVC
  • ಡೀಮ್ಯಾಟ್ ಖಾತೆ EVC

4. ನನ್ನ ಇ-ಫೈಲಿಂಗ್ ಖಾತೆಯಲ್ಲಿ ಹೆಚ್ಚಿನ ಭದ್ರತೆಯನ್ನು ಸಕ್ರಿಯಗೊಳಿಸಬಹುದೇ?
ನೀವು ಇ-ಫೈಲಿಂಗ್ ಪೋರ್ಟಲ್‌ನ ನೋಂದಾಯಿತ ಬಳಕೆದಾರರಾಗಿದ್ದರೆ, ಇ- ಫೈಲಿಂಗ್ ವಾಲ್ಟ್ ವೈಶಿಷ್ಟ್ಯವನ್ನು ಬಳಸಿಕೊಂಡು ನಿಮ್ಮ ಇ-ಫೈಲಿಂಗ್ ಖಾತೆಗೆ ಹೆಚ್ಚಿನ ಭದ್ರತೆಯನ್ನು ಸಕ್ರಿಯಗೊಳಿಸಬಹುದು.

5. ನಾನು ಯಾವುದೇ ಉನ್ನತ ಭದ್ರತೆ ಆಯ್ಕೆಗಳನ್ನು ಆಯ್ಕೆ ಮಾಡದಿದ್ದರೆ ನಾನು ಹೇಗೆ ಲಾಗಿನ್ ಮಾಡಬಹುದು?
ಉನ್ನತ ಭದ್ರತೆಗಾಗಿ ನೀವು ಯಾವುದೇ ಆಯ್ಕೆಗಳನ್ನು ಆರಿಸದಿದ್ದರೆ, ನೀವು ಡೀಫಾಲ್ಟ್ ಬಳಕೆದಾರ ID ಮತ್ತು ಪಾಸ್ವರ್ಡ್ ಮತ್ತು ವಿವಿಧ ಲಾಗಿನ್ ವಿಧಾನಗಳಲ್ಲಿ ಒಂದನ್ನು ಬಳಸಿಕೊಂಡು ಲಾಗ್ ಇನ್ ಮಾಡಬಹುದು. ಇನ್ನಷ್ಟು ತಿಳಿದುಕೊಳ್ಳಲು ಲಾಗಿನ್ ಮಾಡಿ ಬಳಕೆದಾರ ಕೈಪಿಡಿಯನ್ನು ನೋಡಿ.

6. ಒಂದುವೇಳೆ ನಾನು ಇ-ಫೈಲಿಂಗ್ ವಾಲ್ಟ್ ಪಾಸ್‌ವರ್ಡ್ ಮರುಹೊಂದಿಸಿ ಎಂಬ ಆಯ್ಕೆಗಳಲ್ಲಿ ಯಾವುದೇ ಆಯ್ಕೆಗಳನ್ನು ಆರಿಸದಿದ್ದರೆ, ಆಗ ನನ್ನ ಪಾಸ್‌ವರ್ಡ್ ಅನ್ನು ನಾನು ಹೇಗೆ ಮರುಹೊಂದಿಸಬಹುದು?
ನೀವು ಇ-ಫೈಲಿಂಗ್ ವಾಲ್ಟ್ ಪಾಸ್ವರ್ಡ್ ಮರುಹೊಂದಿಸುವ ಆಯ್ಕೆಯನ್ನು ಆರಿಸಿಕೊಳ್ಳದಿದ್ದರೆ, ನೀವು ಇ-ಫೈಲಿಂಗ್ OTP ಬಳಸಿಕೊಂಡು ಡೀಫಾಲ್ಟ್ ಆಯ್ಕೆಯನ್ನು ಬಳಸಿಕೊಂಡು ಪಾಸ್ವರ್ಡ್ ಅನ್ನು ಮರುಹೊಂದಿಸಬಹುದು.ಇನ್ನಷ್ಟು ತಿಳಿದುಕೊಳ್ಳಲು ಪಾಸ್ವರ್ಡ್ ಮರೆತಿರುವಿರಾ ಬಳಕೆದಾರರ ಕೈಪಿಡಿಯನ್ನು ನೋಡಿ.

7. ಇ-ಫೈಲಿಂಗ್ ವಾಲ್ಟ್‌ಗಾಗಿ ನಾನು ಒಂದಕ್ಕಿಂತ ಹೆಚ್ಚು ಸೆಕ್ಯುರಿಟಿ ವಿಧಾನಗಳನ್ನು ಬಳಸಬಹುದೇ?
ಲಾಗಿನ್ ಮತ್ತು ಪಾಸ್‌ವರ್ಡ್ ಮರುಹೊಂದಿಸಲು ನೀವು ಹಲವಾರು ಉನ್ನತ ಭದ್ರತೆ ವಿಧಾನಗಳನ್ನು ಆರಿಸಿಕೊಳ್ಳಬಹುದಾದರೂ, ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡುವಾಗ ಅಥವಾ ನಿಮ್ಮ ಪಾಸ್ವರ್ಡ್ ಅನ್ನು ಮರುಹೊಂದಿಸುವಾಗ ನೀವು ಆಯ್ಕೆ ಮಾಡಿದ ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗುತ್ತದೆ.

8. ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ, ನಾನು ನನ್ನ ಉನ್ನತ ಭದ್ರತೆ ಆಯ್ಕೆಗಳನ್ನು ಮತ್ತೊಮ್ಮೆ ಆರಿಸಬೇಕೇ ಅಥವಾ ಹಳೆಯ ಪೋರ್ಟಲ್‌ನಲ್ಲಿ ಇದ್ದಂತೆಯೇ ಇದೆಯೇ?
ತಾಂತ್ರಿಕ ಕಾರಣಗಳಿಂದ ಅದೇ ಮಾಹಿತಿಯು ವರ್ಗಾವಣೆಯಾಗದ ಕಾರಣ ನೀವು ಹೊಸ ಪೋರ್ಟಲ್‌ನಲ್ಲಿ ಉನ್ನತ ಭದ್ರತೆ ಆಯ್ಕೆಗಳನ್ನು ಮತ್ತೆ ಆರಿಸಬೇಕಾಗುತ್ತದೆ. ನೀವು DSC ಅನ್ನು ಉನ್ನತ ಭದ್ರತೆ ಆಯ್ಕೆಯಾಗಿ ಆಯ್ಕೆ ಮಾಡಲು ಬಯಸಿದರೆ, ನೀವು ಮೊದಲು DSC ಅನ್ನು ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.