Do not have an account?
Already have an account?

1. ಸ್ಥೂಲನೋಟ

ಹಿಂದಿನ ವರ್ಷದಲ್ಲಿ ಒಟ್ಟು ಮಾರಾಟ / ವಹಿವಾಟು / ಒಟ್ಟು ವರಮಾನಗಳು ₹ 50 ಕೋಟಿಗಳನ್ನು ಮೀರಿದ ವ್ಯಾಪಾರವನ್ನು ಹೊಂದಿರುವ (B2B/B2C/both) ಎಲ್ಲಾ ನೋಂದಾಯಿತ ಬಳಕೆದಾರರಿಗೆ ನಿಗದಿತ ಪಾವತಿ ವಿಧಾನಗಳನ್ನು ಸೇರಿಸಿ ಎಂಬ ಸೇವೆ ಲಭ್ಯವಿದೆ. ಈ ಸೇವೆಯೊಂದಿಗೆ, ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 269SU (2020 ರ ಜನವರಿ 1 ರಿಂದ ಅನ್ವಯಿಸುತ್ತದೆ) ಮತ್ತು ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 119AA ಅಡಿಯಲ್ಲಿ ಕಡ್ಡಾಯವಾಗಿ ನಿಗದಿತ ಪಾವತಿ ವಿಧಾನಗಳ ವಿವರಗಳನ್ನು ಒದಗಿಸುವ ಕಡ್ಡಾಯ ಅಗತ್ಯವನ್ನು ನೀವು ಪೂರೈಸಬಹುದು.

ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 119AA ಅಡಿಯಲ್ಲಿ ವ್ಯಾಖ್ಯಾನಿಸಲಾದ ನಿಗದಿತ ಪಾವತಿ ವಿಧಾನಗಳು ಎಂದರೆ:

  • RuPay ಚಾಲಿತ ಡೆಬಿಟ್ ಕಾರ್ಡ್
  • ಯುನಿಫೈಯ್ಡ್ ಪೇಮೆಂಟ್ ಇಂಟರ್ಫೇಸ್ (UPI) (BHIM-UPI)
  • ಯುನಿಫೈಯ್ಡ್ ಪೇಮೆಂಟ್ ಇಂಟರ್ಫೇಸ್ ತ್ವರಿತ ಪ್ರತಿಕ್ರಿಯೆ ಕೋಡ್ (UPI QR ಕೋಡ್) (BHIM-UPI QR ಕೋಡ್)

ಇಲ್ಲಿ ತಿಳಿಸಿದ ನಿಬಂಧನೆಯನ್ನು ಅನುಸರಿಸಲು ನೀವು ವಿಫಲವಾದರೆ, ಆದಾಯ ತೆರಿಗೆ ಕಾಯ್ದೆ 1961, 271DB ವಿಭಾಗದ ಅಡಿಯಲ್ಲಿ ದಿನಕ್ಕೆ ₹5000 /- ದಂಡವನ್ನು ಕಟ್ಟಬೇಕಾಗುತ್ತದೆ.

 

2. ಪೂರ್ವಾಪೇಕ್ಷಿತಗಳು

ಕೆಳಗಿನ ಎಲ್ಲಾ ಷರತ್ತುಗಳನ್ನು ಪೂರೈಸುವ ಬಳಕೆದಾರರಿಗೆ ಇದು ಒಂದು - ಬಾರಿಯ ಅನುಸರಣೆಯಾಗಿರುತ್ತದೆ:

  • ವ್ಯವಹಾರದ ಮಾಲೀಕರು (B2B / B2C / ಎರಡೂ)
  • ಕಳೆದ ವರ್ಷದ ಹಿಂದಿನ ವರ್ಷಕ್ಕೆ ಒಟ್ಟು ಮಾರಾಟ, ವಹಿವಾಟು ಅಥವಾ ಒಟ್ಟು ವರಮಾನಗಳು ₹50 ಕೋಟಿ ಮೀರಿದೆ
  • ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರ
  • ಮಾನ್ಯ ಮತ್ತು ಸಕ್ರಿಯ PAN
  • ಕಳೆದ ವರ್ಷದ ಹಿಂದಿನ ವರ್ಷಕ್ಕೆ ITR 3 / ITR 5 / ITR 6 ಫೈಲ್ ಮಾಡಲಾಗಿದೆ.

 

3. ಹಂತ-ಹಂತದ ಮಾರ್ಗದರ್ಶಿ

ಹಂತ 1: ನಿಮ್ಮ ಬಳಕೆದಾರರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.

Data responsive


ಹಂತ 2:ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 269SU ಪ್ರಕಾರ ಇತ್ತೀಚಿನ ಆದಾಯ ತೆರಿಗೆ ರಿಟರ್ನ್ (ITR) ಆಧಾರದ ಮೇಲೆ ವ್ಯವಹಾರದಿಂದ ನಿಮ್ಮ ಒಟ್ಟು ಮಾರಾಟ/ವಹಿವಾಟು / ಒಟ್ಟು ವರಮಾನಗಳು ಹಣಕಾಸು ವರ್ಷಕ್ಕೆ ₹50 ಕೋಟಿ ಮೀರಿದರೆ, ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 119AA ಪ್ರಕಾರ, ವಿಭಾಗ 269SU ಅನುಸರಣೆಯ ಸ್ಥಿತಿಯನ್ನು ನೀವು ಒದಗಿಸಬೇಕಾದ ಮತ್ತು ಗ್ರಾಹಕರಿಂದ ಪಾವತಿಯನ್ನು ಸ್ವೀಕರಿಸಲು ಒದಗಿಸಲಾದ ನಿಗದಿತ ಎಲೆಕ್ಟ್ರಾನಿಕ್ ವಿಧಾನಗಳನ್ನು ನವೀಕರಿಸಬೇಕಾದ ನಿಗದಿತ ಪಾವತಿ ವಿಧಾನಗಳ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ.
ನಿಗದಿತ ಪಾವತಿ ವಿಧಾನಗಳ ಪೇಜ್‌ನಲ್ಲಿ ಮುಂದುವರೆಯಲುಮುಂದುವರಿಸಿ ಕ್ಲಿಕ್ ಮಾಡಿ.

Data responsive


ಹಂತ 3 ಮುಂದುವರಿಸಿ ಕ್ಲಿಕ್‌ ಮಾಡಿದಾಗ, ವ್ಯವಹಾರದ ವಿವರಗಳು ನಮೂದಿಸಿ ಮತ್ತು ಉಳಿಸಿ ಕ್ಲಿಕ್ ಮಾಡಿ.

Data responsive


ಅನ್ವಯಿಸುವ ಇತರ ವ್ಯವಹಾರಗಳನ್ನು ಸೇರಿಸಲು ಮತ್ತೊಂದು ವ್ಯವಹಾರವನ್ನು ಸೇರಿಸಿ ಕ್ಲಿಕ್ ಮಾಡಿ.

ಪ್ರವರ್ಗ ವಿಭಾಗ
B2B ಮಾರಾಟ ಮಾದರಿಗಾಗಿ (ಹಿಂದಿನ ವರ್ಷದಲ್ಲಿ ಪಡೆದ ಎಲ್ಲಾ ಮೊತ್ತದ ಒಟ್ಟು 95% ಕ್ಕಿಂತಲೂ ಕಡಿಮೆ ನಗದು ಹೊರತುಪಡಿಸಿ ಬೇರೆ ವಿಧಾನಗಳಲ್ಲಿವೆ) / B2C ಮಾರಾಟ ಮಾದರಿ / B2B ಮತ್ತು B2C ಎರಡೂ ಬಗೆಯ ಮಾರಾಟ ಮಾದರಿ ವಿಭಾಗ 3.1 ಗೆ ಹೋಗಿ
B2B ಮಾರಾಟ ಮಾದರಿಗೆ (ಹಿಂದಿನ ವರ್ಷದಲ್ಲಿ ಪಡೆದ ಎಲ್ಲಾ ಮೊತ್ತದ ಕನಿಷ್ಠ 95% ನಗದು ಹೊರತುಪಡಿಸಿ ಇತರ ವಿಧಾನಗಳಲ್ಲಿವೆ) ವಿಭಾಗ 3.2 ಗೆ ಹೋಗಿ
ಒಂದು ವೇಳೆ ನಿಗದಿತ ಪಾವತಿ ವಿಧಾನಗಳು ಲಭ್ಯವಿಲ್ಲದಿದ್ದಲ್ಲಿ ಅನುಸರಣೆಗಾಗಿ ವಿಭಾಗ 3.3 ಗೆ ಹೋಗಿ

 

ವಿಭಾಗ 3.1 B2B ಮಾರಾಟ ಮಾದರಿ (ಹಿಂದಿನ ವರ್ಷದಲ್ಲಿ ಪಡೆದ ಎಲ್ಲಾ ಮೊತ್ತದ ಒಟ್ಟು 95% ಕ್ಕಿಂತಲೂ ಕಡಿಮೆ ನಗದು ಹೊರತುಪಡಿಸಿ ಬೇರೆ ವಿಧಾನಗಳಲ್ಲಿವೆ) / B2C ಮಾರಾಟ ಮಾದರಿ / B2B ಮತ್ತು B2C ಎರಡು ಬಗೆಯ ಮಾರಾಟ ಮಾದರಿ

ಹಂತ1: ವ್ಯವಹಾರ ವಿವರಗಳನ್ನು ಸೇರಿಸಿದ ನಂತರ, ನಿಮಗೆ ಅನ್ವಯವಾಗುವಂತೆ, ಮಾರಾಟ ಮಾದರಿಯನ್ನು ವ್ಯವಹಾರದಿಂದ ವ್ಯವಹಾರಕ್ಕೆ ಮಾತ್ರ (B2B) ಅಥವಾ ವ್ಯವಹಾರದಿಂದ ಗ್ರಾಹಕರಿಗೆ ಮಾತ್ರ (B2C) ಅಥವಾ ಎರಡೂ (B2B ಮತ್ತು B2C) ಆಯ್ಕೆ ಮಾಡಿ.

Data responsive


ಹಂತ 2:ಒಂದು ವೇಳೆ ನೀವು B2B ವ್ಯವಹಾರವನ್ನು ಹೊಂದಿದ್ದರೆ ಮತ್ತು ಹಿಂದಿನ ವರ್ಷದಲ್ಲಿ ಪಡೆದ ಎಲ್ಲಾ ಮೊತ್ತದ 95% ಕ್ಕಿಂತ ಕಡಿಮೆ ಹಣವನ್ನು ನಗದು ಹೊರತುಪಡಿಸಿ ಬೇರೆ ವಿಧಾನಗಳಲ್ಲಿದ್ದರೆ, ಇಲ್ಲ ಆಯ್ಕೆಮಾಡಿ, ಮುಂದುವರಿಸಿ ಕ್ಲಿಕ್ ಮಾಡಿ.

Data responsive


ಹಂತ 3: ನಿಗದಿತ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಪಾವತಿಗಳನ್ನು ಸ್ವೀಕರಿಸುವ ಸೌಲಭ್ಯವನ್ನು ನೀವು ಹೊಂದಿದ್ದರೆ ಹೌದು ಎಂದು ಆಯ್ಕೆ ಮಾಡಿ.

Data responsive


ಗಮನಿಸಿ:

  • ನೀವು ವ್ಯವಹಾರದಿಂದ ವ್ಯವಹಾರಕ್ಕೆ ಮಾತ್ರ (B2B)ಆಯ್ಕೆ ಮಾಡಿದರೆ ಮತ್ತು ಹಿಂದಿನ ವರ್ಷದಲ್ಲಿ ಪಡೆದ ಎಲ್ಲಾ ಮೊತ್ತದ ಕನಿಷ್ಠ 95% ನಗದು ಹೊರತುಪಡಿಸಿ ಇತರ ವಿಧಾನಗಳಲ್ಲಿದ್ದರೆ, ವಿಭಾಗ 3.2 ರಲ್ಲಿನ ಹಂತಗಳನ್ನು ಅನುಸರಿಸಿ. B2B ಮಾರಾಟ ಮಾದರಿ (ಹಿಂದಿನ ವರ್ಷದಲ್ಲಿ ಪಡೆದ ಎಲ್ಲಾ ಮೊತ್ತದ ಕನಿಷ್ಠ 95% ನಗದು ಹೊರತುಪಡಿಸಿ ಇತರ ವಿಧಾನಗಳಲ್ಲಿವೆ)
  • ನಿಗದಿತ ವಿಧಾನಗಳ ಮೂಲಕ ಪಾವತಿಗಳನ್ನು ಸ್ವೀಕರಿಸುವ ಸೌಲಭ್ಯವನ್ನು ನೀವು ಹೊಂದಿಲ್ಲದಿದ್ದರೆ, ವಿಭಾಗ 3.3 ರ ಪ್ರಕಾರ ಇರುವ ಹಂತಗಳನ್ನು ದಯವಿಟ್ಟು ಅನುಸರಿಸಿ. ಒಂದು ವೇಳೆ ನಿಗದಿತ ಪಾವತಿ ವಿಧಾನಗಳು ಲಭ್ಯವಿಲ್ಲದಿದ್ದರೆ ಅನುಸರಣೆ.

ಹಂತ 4: ವ್ಯಾಪಾರಿ ಐಡಿ ಸಂಖ್ಯೆ, ವ್ಯಾಪಾರಿ ಹೆಸರು ಮತ್ತು ಆಧಾರವಾಗಿರುವ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ.

Data responsive


ಗಮನಿಸಿ: ನೀವು ಆಯಾ ಆಯ್ಕೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಬಹು ವ್ಯಾಪಾರಿ ಐಡಿಗಳು, ವ್ಯಾಪಾರ ಸ್ಥಾಪನೆ ಹೆಸರುಗಳು ಮತ್ತು ಬ್ಯಾಂಕ್ ಖಾತೆಗಳನ್ನು ಸೇರಿಸಬಹುದು.

ಹಂತ 5: ಯುನಿಫೈಯ್ಡ್ ಪೇಮೆಂಟ್ ಇಂಟರ್ಫೇಸ್ (UPI) (BHIM-UPI) ವಿವರಗಳುಆಧಾರವಾಗಿರುವ ಬ್ಯಾಂಕ್ ಖಾತೆ ವಿವರಗಳು ಮತ್ತು BHIM UPI ಐಡಿ ನಮೂದಿಸಿ.

Data responsive


ಗಮನಿಸಿ: ನೀವು ಆಯಾ ಆಯ್ಕೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಬಹು ಬ್ಯಾಂಕ್ ಖಾತೆಗಳು ಮತ್ತು UPI ಐಡಿಗಳನ್ನು ಸೇರಿಸಬಹುದು.

ಹಂತ 6: ಅನುಷ್ಠಾನದ ದಿನಾಂಕವನ್ನು ಆಯ್ಕೆ ಮಾಡಿ, ಹಕ್ಕುತ್ಯಾಗ ಆಯ್ಕೆ ಮಾಡಿ ಮತ್ತು ಸಲ್ಲಿಕೆ ಕ್ಲಿಕ್ ಮಾಡಿ.

Data responsive


ಹಂತ 7: ನಿಮ್ಮ ಪ್ರತಿಕ್ರಿಯೆಯನ್ನು ದೃಢೀಕರಿಸಲು ಹೌದು ಕ್ಲಿಕ್ ಮಾಡಿ.

Data responsive


ಹಂತ 8: ಸಲ್ಲಿಕೆ ನಂತರದಲ್ಲಿ, ವಹಿವಾಟು ID ಜೊತೆಗೆ ಯಶಸ್ವಿ ಸಂದೇಶ ಬರುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ದಯವಿಟ್ಟು ವ್ಯವಹಾರ ID ಟಿಪ್ಪಣಿ ಇರಿಸಿಕೊಳ್ಳಿ.

Data responsive


ಗಮನಿಸಿ:

  • ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಯಲ್ಲೂ ನೀವು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ.
  • ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ, ನೀವು ಕ್ರಮವಾಗಿ ಪ್ರತಿಕ್ರಿಯೆ ವೀಕ್ಷಿಸಿ ಮತ್ತು ಪ್ರತಿಕ್ರಿಯೆ ಡೌನ್‌ಲೋಡ್ ಮಾಡಿ ಆಯ್ಕೆಗಳ ಮೂಲಕ ಪ್ರತಿಕ್ರಿಯೆಯನ್ನು ವೀಕ್ಷಿಸಬಹುದು ಅಥವಾ ಡೌನ್‌ಲೋಡ್ ಮಾಡಬಹುದು.

ವಿಭಾಗ 3.2 B2B ಮಾರಾಟ ಮಾದರಿ (ಹಿಂದಿನ ವರ್ಷದಲ್ಲಿ ಪಡೆದ ಎಲ್ಲಾ ಮೊತ್ತದ ಕನಿಷ್ಠ 95% ನಗದು ಹೊರತುಪಡಿಸಿ ಇತರ ವಿಧಾನಗಳಲ್ಲಿವೆ)

ಹಂತ 1: ವ್ಯವಹಾರದ ವಿವರಗಳನ್ನು ಸೇರಿಸಿದ ನಂತರ, ಮಾರಾಟದ ಮಾದರಿಯನ್ನು ವ್ಯವಹಾರದಿಂದ ವ್ಯವಹಾರಕ್ಕೆ ಮಾತ್ರ (B2B) ಆಯ್ಕೆ ಮಾಡಿ ಮತ್ತು ಹಿಂದಿನ ವರ್ಷದಲ್ಲಿ ಪಡೆದ ಎಲ್ಲಾ ಮೊತ್ತದ ಕನಿಷ್ಠ 95% ನಗದು ಹೊರತು ಪಡಿಸಿ ಬೇರೆ ವಿಧಾನಗಳಲ್ಲಿದ್ದರೆ ಹೌದು ಆಯ್ಕೆ ಮಾಡಿ, ಮುಂದುವರಿಸಿ ಕ್ಲಿಕ್ ಮಾಡಿ.

Data responsive


ಹಂತ 2: ಅವುಗಳನ್ನು ಆಯ್ಕೆ ಮಾಡುವ ಮೂಲಕ ಮತ್ತು ಸಲ್ಲಿಸಿ ಅನ್ನು ಕ್ಲಿಕ್ ಮಾಡುವ ಮೂಲಕ ಘೋಷಣೆಗಳನ್ನು ಸ್ವೀಕರಿಸಿ.

Data responsive


ಹಂತ 3: ನಿಮ್ಮ ಪ್ರತಿಕ್ರಿಯೆಯನ್ನು ದೃಢೀಕರಿಸಲು ಹೌದು ಕ್ಲಿಕ್ ಮಾಡಿ.

Data responsive


ಹಂತ 4: ಸಲ್ಲಿಕೆ ನಂತರದಲ್ಲಿ, ವಹಿವಾಟು ID ಜೊತೆಗೆ ಯಶಸ್ವಿ ಸಂದೇಶ ಬರುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ದಯವಿಟ್ಟು ವ್ಯವಹಾರ ID ಟಿಪ್ಪಣಿ ಇರಿಸಿಕೊಳ್ಳಿ.

Data responsive


ಗಮನಿಸಿ:

  • ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಯಲ್ಲೂ ನೀವು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ.
  • ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ, ನೀವು ಕ್ರಮವಾಗಿ ಪ್ರತಿಕ್ರಿಯೆ ವೀಕ್ಷಿಸಿ ಮತ್ತು ಪ್ರತಿಕ್ರಿಯೆ ಡೌನ್‌ಲೋಡ್ ಮಾಡಿ ಆಯ್ಕೆಗಳ ಮೂಲಕ ಪ್ರತಿಕ್ರಿಯೆಯನ್ನು ವೀಕ್ಷಿಸಬಹುದು ಅಥವಾ ಡೌನ್‌ಲೋಡ್ ಮಾಡಬಹುದು.

 

ವಿಭಾಗ 3.3 ಒಂದು ವೇಳೆ ನಿಗದಿತ ಪಾವತಿ ವಿಧಾನಗಳು ಲಭ್ಯವಿಲ್ಲದಿದ್ದರೆ ಅನುಸರಣೆ

ಹಂತ 4: ವ್ಯವಹಾರ ವಿವರಗಳನ್ನು ಸೇರಿಸಿದ ನಂತರ, ನಿಮಗೆ ಅನ್ವಯವಾಗುವಂತೆ ವ್ಯವಹಾರದಿಂದ ವ್ಯವಹಾರಕ್ಕೆ ಮಾತ್ರ (B2B) ಅಥವಾ ವ್ಯವಹಾರದಿಂದ ಗ್ರಾಹಕರಿಗೆ ಮಾತ್ರ (B2C) ಅಥವಾ (B2B ಮತ್ತು B2C) ಎರಡೂ ಮಾರಾಟ ಮಾದರಿಯನ್ನು ಆಯ್ಕೆ ಮಾಡಿ.

Data responsive


ಹಂತ 5: ನೀವು B2B ವ್ಯವಹಾರವನ್ನು ಹೊಂದಿದ್ದರೆ ಮತ್ತು ಹಿಂದಿನ ವರ್ಷದಲ್ಲಿ ಎಲ್ಲಾ ಮೊತ್ತದ 95% ಕ್ಕಿಂತ ಕಡಿಮೆ ಹಣವನ್ನು ನಗದು ಹೊರತುಪಡಿಸಿ ಬೇರೆ ವಿಧಾನಗಳಲ್ಲಿ ಪಡೆದಿದ್ದರೆ, ಇಲ್ಲಆಯ್ಕೆ ಮಾಡಿ, ಮುಂದುವರಿಸಿ ಕ್ಲಿಕ್ ಮಾಡಿ.

Data responsive


ಹಂತ 6: ನಿಗದಿತ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಪಾವತಿಗಳನ್ನು ಸ್ವೀಕರಿಸಲು ನಿಮಗೆ ಸೌಲಭ್ಯವಿಲ್ಲದಿದ್ದರೆ ಇಲ್ಲ ಆಯ್ಕೆಮಾಡಿ.

Data responsive


ಗಮನಿಸಿ:

  • ನೀವು ವ್ಯವಹಾರದಿಂದ ವ್ಯವಹಾರಕ್ಕೆ (B2B) ಮಾತ್ರ ಆಯ್ಕೆ ಮಾಡಿದರೆ ಮತ್ತು ಹಿಂದಿನ ವರ್ಷದಲ್ಲಿ ಪಡೆದ ಎಲ್ಲಾ ಮೊತ್ತದ ಕನಿಷ್ಠ 95% ನಗದು ಹೊರತುಪಡಿಸಿ ಇತರ ವಿಧಾನಗಳಲ್ಲಿದ್ಧರೆ, ವಿಭಾಗ 3.2 B2B ಮಾರಾಟ ಮಾದರಿಯ ಪ್ರಕಾರ ಹಂತಗಳನ್ನು ಅನುಸರಿಸಿ (ಹಿಂದಿನ ವರ್ಷದಲ್ಲಿ ಪಡೆದ ಎಲ್ಲಾ ಮೊತ್ತದ ಕನಿಷ್ಠ 95% ನಗದು ಹೊರತುಪಡಿಸಿ ಇತರ ವಿಧಾನಗಳಲ್ಲಿದೆ)

ಹಂತ 7: ಆದಾಯ ತೆರಿಗೆ ಕಾಯ್ದೆ, 1961ರಲ್ಲಿ ವ್ಯಾಖ್ಯಾನಿಸಿದಂತೆ, ನಿಗದಿತ ಪಾವತಿ ವಿಧಾನಗಳನ್ನು ಸ್ಥಾಪಿಸುವಲ್ಲಿ ನಿರೀಕ್ಷಿತ ಅನುಷ್ಠಾನ ದಿನಾಂಕ ಮತ್ತು ವೈಫಲ್ಯದ ಕಾರಣ ವನ್ನು ನಮೂದಿಸಿ ಹಕ್ಕು ನಿರಾಕರಣೆಯನ್ನು ಸ್ವೀಕರಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.

Data responsive


ಗಮನಿಸಿ: 1ಪಾವತಿಯನ್ನು ಸ್ವೀಕರಿಸುವ ಎಲೆಕ್ಟ್ರಾನಿಕ್2 ವಿಧಾನಗಳನ್ನು ಒದಗಿಸಲು ವಿಫಲವಾದರೆ ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 271DB ಅಡಿಯಲ್ಲಿ ಕರ್ತವ್ಯಲೋಪವಾಗಿ ಪ್ರತಿ ದಿನ ದಂಡವನ್ನು ವಿಧಿಸಲಾಗುತ್ತದೆ.

ಹಂತ 8: ಸಲ್ಲಿಕೆ ನ೦ತರ, ವಹಿವಾಟು ID ಜೊತೆಗೆ ಯಶಸ್ವಿ ಸಂದೇಶ ಬರುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ದಯವಿಟ್ಟು ವ್ಯವಹಾರ ID ಟಿಪ್ಪಣಿ ಇರಿಸಿಕೊಳ್ಳಿ.

Data responsive


ಗಮನಿಸಿ:

  • ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಯಲ್ಲೂ ನೀವು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ.
  • ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ, ನೀವು ಕ್ರಮವಾಗಿ ಪ್ರತಿಕ್ರಿಯೆ ವೀಕ್ಷಿಸಿ ಮತ್ತು ಪ್ರತಿಕ್ರಿಯೆ ಡೌನ್‌ಲೋಡ್ ಮಾಡಿ ಆಯ್ಕೆಗಳ ಮೂಲಕ ಪ್ರತಿಕ್ರಿಯೆಯನ್ನು ವೀಕ್ಷಿಸಬಹುದು ಅಥವಾ ಡೌನ್‌ಲೋಡ್ ಮಾಡಬಹುದು.

 

4. ಸಂಬಂಧಿತ ವಿಷಯಗಳು