1. ಅವಲೋಕನ
ಟ್ಯಾಕ್ಸ್ ಕ್ರೆಡಿಟ್ ಮಿಸ್ ಮ್ಯಾಚ್ ಸೇವೆಯು ಇ-ಫೈಲಿಂಗ್ ಪೋರ್ಟಲ್ ನಲ್ಲಿ ಎಲ್ಲಾ ನೋಂದಾಯಿತ ಬಳಕೆದಾರರಿಗೆ (ERI ಗಳು ಸೇರಿದಂತೆ) ಲಭ್ಯವಿದೆ. ಈ ಸೇವೆಯೊಂದಿಗೆ ನೀವು ಯಾವುದೇ ಸಂಖ್ಯೆಯ ದಾಖಲೆಗಳಿಗಾಗಿ ಸಂಬಂಧಿತ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಅನ್ನು ಅಪ್ಲೋಡ್ ಮಾಡಿದ ತಕ್ಷಣ ನಿಮ್ಮ ಇ-ಫೈಲ್ ಮಾಡಿದ ಆದಾಯ ತೆರಿಗೆ ರಿಟರ್ನ್ಸ್‌ನ ಟ್ಯಾಕ್ಸ್ ಕ್ರೆಡಿಟ್ ಮಿಸ್‌ಮ್ಯಾಚ್ ಅನ್ನು ನೀವು ವೀಕ್ಷಿಸಬಹುದು.
ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ನೀವು ವರದಿ ಮಾಡಿದ ಮೂಲದಲ್ಲಿನ ತೆರಿಗೆ ಕಡಿತ, ಮೂಲದಲ್ಲಿ ಸಂಗ್ರಹಿಸಿದ ತೆರಿಗೆ, ಮುಂಗಡ ತೆರಿಗೆ ಅಥವಾ ನಿಯಮಿತ ಮೌಲ್ಯಮಾಪನ ತೆರಿಗೆ ಮೊತ್ತದಲ್ಲಿ ಇರುವ ಮಿಸ್‌ಮ್ಯಾಚ್ ಅನ್ನು ಈ ಸೇವೆಯು ಹೈಲೈಟ್ ಮಾಡಿ ತೋರಿಸುತ್ತದೆ. ಮಿಸ್‌ಮ್ಯಾಚ್‌ನ ಸಂದರ್ಭದಲ್ಲಿ, ನಿಮ್ಮ ಕಡೆಯಿಂದ ದೋಷಗಳನ್ನು ನೀವು ಸರಿಪಡಿಸಬಹುದು ಅಥವಾ ಟಿ.ಡಿ.ಎಸ್. ರಿಟರ್ನ್ಸ್/24Q, 26Q, 27Q, 27EQ ನಂತಹ ಫಾರ್ಮ್‌ಗಳ ಮೂಲಕ ತೆರಿಗೆ ಕಡಿತದಾರರ ಕಡೆಯಿಂದ ಅವುಗಳನ್ನು ಸರಿಪಡಿಸಬಹುದು (ತಿದ್ದುಪಡಿಯ ವಿನಂತಿಯನ್ನು ಸಲ್ಲಿಸುವ ಮೂಲಕ ಅಥವಾ ಪರಿಷ್ಕೃತ ರಿಟರ್ನ್ ಸಲ್ಲಿಸುವ ಮೂಲಕ).
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
- ಮಾನ್ಯ ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರಿಗೆ
- ಮಾನ್ಯವಾದ ಮತ್ತು ಸಕ್ರಿಯವಾದ PAN
- ಆ ವರ್ಷದ ಟ್ಯಾಕ್ಸ್ ಕ್ರೆಡಿಟ್ ಮಿಸ್‌ಮ್ಯಾಚ್ ಪರಿಶೀಲಿಸಲು ಸಂಬಂಧಿತ ತೆರಿಗೆ ಮೌಲ್ಯಮಾಪನ ವರ್ಷಕ್ಕೆ (AY) ಕನಿಷ್ಠ ಒಂದು ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಾಗುತ್ತದೆ.
- TDS ಮತ್ತು/ಅಥವಾ TCS ಮತ್ತು/ಅಥವಾ ಪಾವತಿಸಿದ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಫಾರ್ಮ್ 26AS ರಲ್ಲಿ ಪ್ರತಿಫಲಿಸುತ್ತದೆ
- ERI ಗಳಿಗಾಗಿ: ERI ಗಳು ಸೇರಿಸಬೇಕಾಗಿತ್ತು ಮತ್ತು ERI ತೆರಿಗೆದಾರರನ್ನು ಗ್ರಾಹಕರಾಗಿ ಸೇರಿಸಬೇಕಾಗಿತ್ತು
- ERI ಗಳಿಗಾಗಿ: ERI ಸ್ಥಿತಿಯು ಸಕ್ರಿಯವಾಗಿರಬೇಕು
3. ಹಂತ-ಹಂತದ ಮಾರ್ಗದರ್ಶಿ
3.1. ಟ್ಯಾಕ್ಸ್ ಕ್ರೆಡಿಟ್ ಮಿಸ್‌ಮ್ಯಾಚ್ ಅನ್ನು ವೀಕ್ಷಿಸಿ
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
ಹಂತ 2: ನಿಮ್ಮ ಡ್ಯಾಶ್ ಬೋರ್ಡ್ ನಲ್ಲಿ ಸೇವೆಗಳು > ಟ್ಯಾಕ್ಸ್ ಕ್ರೆಡಿಟ್ ಮಿಸ್‌ಮ್ಯಾಚ್ ಎಂಬುದನ್ನು ಕ್ಲಿಕ್ ಮಾಡಿ.
ಹಂತ 3: ಟ್ಯಾಕ್ಸ್ ಕ್ರೆಡಿಟ್ ಮಿಸ್‌ಮ್ಯಾಚ್ ಪುಟದಲ್ಲಿ ಮೌಲ್ಯಮಾಪನ ವರ್ಷವನ್ನು ಆಯ್ಕೆಮಾಡಿ (ಯಾವುದಕ್ಕಾಗಿ ನೀವು ಮಿಸ್‌ಮ್ಯಾಚ್ ವಿವರಗಳನ್ನು ವೀಕ್ಷಿಸಲು ಬಯಸುವಿರೋ ಅದು) ಮತ್ತು ಸಲ್ಲಿಸಿ ಕ್ಲಿಕ್ ಮಾಡಿ.
ಸೂಚನೆ: ನಿಮ್ಮ PAN ಅನ್ನು, PAN ಆಯ್ಕೆಯ ಅಡಿಯಲ್ಲಿ ಮೊದಲೇ ಭರ್ತಿ ಮಾಡಲಾಗುತ್ತದೆ.
ಹಂತ 4: ಆದಾಯ ತೆರಿಗೆ ರಿಟರ್ನ್ ನಲ್ಲಿ ನೀವು ಒದಗಿಸಿದ TDS ಮತ್ತು/ಅಥವಾ TCS ಆದಾಯ ತೆರಿಗೆ ಪಾವತಿಸಿದ ವಿವರಗಳ ನಡುವಿನ ಮಿಸ್‌ಮ್ಯಾಚ್ ಮತ್ತು ಫಾರ್ಮ್ 26AS ಗಳಲ್ಲಿ ಕಾಣಿಸಿದಂತೆ
ಸೂಚನೆ:
- ಮಿಸ್‌ಮ್ಯಾಚ್ ಆದ 10 ಕ್ಕೂ ಹೆಚ್ಚು ದಾಖಲೆಗಳಿದ್ದರೆ, ಅದನ್ನು ಡೌನ್ಲೋಡ್ ಮಾಡಲು ಡೌನ್ಲೋಡ್ ಮಾಡಿ ಕ್ಲಿಕ್ ಮಾಡಿ (PDF /XLS ಸ್ವರೂಪದಲ್ಲಿ).
- ಮಿಸ್‌ಮ್ಯಾಚ್ ಆದ 10 ಅಥವಾ ಕಡಿಮೆ ದಾಖಲೆಗಳಿದ್ದರೆ, ನೀವು ಅವುಗಳನ್ನು ಟ್ಯಾಕ್ಸ್ ಕ್ರೆಡಿಟ್ ಮಿಸ್‌ಮ್ಯಾಚ್ ಪುಟದಲ್ಲಿ ವೀಕ್ಷಿಸಬಹುದು. ಡೌನ್ಲೋಡ್ ಮಾಡಿ ಕ್ಲಿಕ್ ಮಾಡುವ ಮೂಲಕ ನೀವು ಅದನ್ನು (PDF / XLS ನಲ್ಲಿ) ಡೌನ್ಲೋಡ್ ಮಾಡಬಹುದು.
3.2. ಟ್ಯಾಕ್ಸ್ ಕ್ರೆಡಿಟ್ ಮಿಸ್‌ಮ್ಯಾಚ್ ಅನ್ನು ವೀಕ್ಷಿಸಿ (ERI ಗಳಿಗಾಗಿ)
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
ಹಂತ 2: ನಿಮ್ಮ ಡ್ಯಾಶ್ ಬೋರ್ಡ್ ನಲ್ಲಿ ಸೇವೆಗಳು > ಟ್ಯಾಕ್ಸ್ ಕ್ರೆಡಿಟ್ ಮಿಸ್‌ಮ್ಯಾಚ್ ಎಂಬುದನ್ನು ಕ್ಲಿಕ್ ಮಾಡಿ.
ಹಂತ 3: ತೆರಿಗೆ ಕ್ರೆಡಿಟ್ ಮಿಸ್ ಮ್ಯಾಚ್ ಪುಟದಲ್ಲಿ, PAN ನಮೂದಿಸಿ (ನೀವು ಪರಿಶೀಲಿಸಲು ಬಯಸುವವರ ವಿವರಗಳು), ತೆರಿಗೆ ಮೌಲ್ಯಮಾಪನ ವರ್ಷ ವನ್ನು ಆಯ್ಕೆಮಾಡಿ (ಯಾವುದಕ್ಕಾಗಿ ನೀವು ಮಿಸ್ ಮ್ಯಾಚ್ ವಿವರಗಳನ್ನು ವೀಕ್ಷಿಸಲು ಬಯಸುವಿರಿ ಅದು) ಮತ್ತು ಸಲ್ಲಿಸಿ ಕ್ಲಿಕ್ ಮಾಡಿ.
ಹಂತ 4: ಆಯ್ದ PAN ನಲ್ಲಿ ಒದಗಿಸಲಾದ TDS ಮತ್ತು/ಅಥವಾ TCS ಮತ್ತು/ಅಥವಾ ಆದಾಯ ತೆರಿಗೆ ಪಾವತಿಸಿದ (TDS / TCS ಹೊರತುಪಡಿಸಿ) ವಿವರಗಳ ನಡುವಿನ ಮಿಸ್‌ಮ್ಯಾಚ್ ಅನ್ನು ಪ್ರದರ್ಶಿಸಲಾಗುತ್ತದೆ ಮತ್ತು ಅದು ಫಾರ್ಮ್ 26AS ನಲ್ಲಿ ಪ್ರತಿಫಲಿಸುತ್ತದೆ.
ಸೂಚನೆ:
- ಮಿಸ್‌ಮ್ಯಾಚ್ ಆದ 10 ಕ್ಕೂ ಹೆಚ್ಚು ದಾಖಲೆಗಳಿದ್ದರೆ, ಅದನ್ನು ಡೌನ್ಲೋಡ್ ಮಾಡಲು ಡೌನ್ಲೋಡ್ ಮಾಡಿ ಕ್ಲಿಕ್ ಮಾಡಿ (PDF/ XLS ಫಾರ್ಮ್ಯಾಟ್‌ನಲ್ಲಿ).
- ಮಿಸ್‌ಮ್ಯಾಚ್ ಆದ 10 ಅಥವಾ ಅದಕ್ಕಿಂತ ಕಡಿಮೆ ದಾಖಲೆಗಳಿದ್ದರೆ, ನೀವು ಅವುಗಳನ್ನು ಟ್ಯಾಕ್ಸ್ ಕ್ರೆಡಿಟ್ ಮಿಸ್‌ಮ್ಯಾಚ್ ಪುಟದಲ್ಲಿ ವೀಕ್ಷಿಸಬಹುದು. ಡೌನ್ಲೋಡ್ ಮಾಡಿ ಕ್ಲಿಕ್ ಮಾಡುವ ಮೂಲಕ ನೀವು ಅದನ್ನು (PDF / XLS ಫಾರ್ಮ್ಯಾಟ್‌ನಲ್ಲಿ) ಡೌನ್ಲೋಡ್ ಮಾಡಬಹುದು.
4. ಸಂಬಂಧಿಸಿದ ವಿಷಯಗಳು
- ಲಾಗಿನ್
- ಆದಾಯ ತೆರಿಗೆ ರಿಟರ್ನ್ಗಳು (ಅಪ್ಲೋಡ್ ಮಾಡಿ)
- ಬಾಕಿ ಇರುವ ಬೇಡಿಕೆಗೆ ಪ್ರತಿಕ್ರಿಯಿಸಿ
- ತಿದ್ದುಪಡಿ ವಿನಂತಿ
- ಸೇವೆ ವಿನಂತಿ