1. ಅವಲೋಕನ
ನನ್ನ ಡಿಮ್ಯಾಟ್ ಖಾತೆ ಸೇವೆಯು ಮಾನ್ಯ PAN ಮತ್ತು ಮಾನ್ಯ ಡಿಮ್ಯಾಟ್ ಖಾತೆಯನ್ನು ಹೊಂದಿರುವ ನೋಂದಾಯಿತ ಇ-ಫೈಲಿಂಗ್ ಬಳಕೆದಾರರಿಗೆ ಲಭ್ಯವಿದೆ. ಈ ಸೇವೆಯು ಇವುಗಳನ್ನು ನಿಮಗೆ ಅನುಮತಿಸುತ್ತದೆ:
- ಡಿಮ್ಯಾಟ್ ಖಾತೆಯನ್ನು ಸೇರಿಸಿ
- ಅಸ್ತಿತ್ವದಲ್ಲಿರುವ ಡಿಮ್ಯಾಟ್ ಖಾತೆಯನ್ನು ತೆಗೆದುಹಾಕಿ
- EVC ಅನ್ನು ಸಕ್ರಿಯಗೊಳಿಸಿ ಅಥವಾ ನಿಷ್ಕ್ರಿಯಗೊಳಿಸಿ
- ಡಿಮ್ಯಾಟ್ ಖಾತೆಯೊಂದಿಗೆ ಸಂಯೋಜಿತ ಸಂಪರ್ಕ ವಿವರಗಳ ಅನುಸಾರ ಪ್ರಾಥಮಿಕ ಸಂಪರ್ಕ ವಿವರಗಳನ್ನು ನವೀಕರಿಸಿ
- ವಿಫಲವಾದ ಡಿಮ್ಯಾಟ್ ಖಾತೆಯನ್ನು ಮರು-ಮೌಲ್ಯೀಕರಿಸಿ
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
- ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಮಾನ್ಯತೆ ಹೊಂದಿದ ಬಳಕೆದಾರರ ID ಮತ್ತು ಪಾಸ್‌ವರ್ಡ್‌ನೊಂದಿಗೆ ನೋಂದಾಯಿತ ಬಳಕೆದಾರರಿಗೆ
- NSDL ಹೊಂದಿರುವ ಮಾನ್ಯ ಡಿಮ್ಯಾಟ್ ಖಾತೆ ಅಥವಾ PAN ಜೊತೆಗೆ ಲಿಂಕ್ ಮಾಡಲಾದ CDSL
- NSDL ಡಿಪಾಸಿಟರಿ ವಿಧಕ್ಕೆ, ನೀವು DP ID ಮತ್ತು ಗ್ರಾಹಕರ ID ಯನ್ನು ಹೊಂದಿರಲೇಬೇಕು
- CSDL ಡಿಪಾಸಿಟರಿ ವಿಧಕ್ಕೆ, ನೀವು ಡಿಮ್ಯಾಟ್ ಖಾತೆ ಸಂಖ್ಯೆಯನ್ನು ಹೊಂದಿರಲೇಬೇಕು
- ಡಿಮ್ಯಾಟ್ ಖಾತೆಯೊಂದಿಗೆ ಲಿಂಕ್ ಮಾಡಲಾದ ಮೌಲ್ಯೀಕರಿಸಿದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ID
3. ಹಂತ-ಹಂತದ ಮಾರ್ಗದರ್ಶಿ
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
ಹಂತ 2: ನಿಮ್ಮ ಡ್ಯಾಶ್ ಬೋರ್ಡ್‌ನ ಮೇಲಿನ ಬಲ ಮೂಲೆಯಲ್ಲಿ, ನನ್ನ ಪ್ರೊಫೈಲ್ ಕ್ಲಿಕ್ ಮಾಡಿ.
ಹಂತ 3: ನನ್ನ ಪ್ರೊಫೈಲ್ ಪುಟದಲ್ಲಿ, ಡಿಮ್ಯಾಟ್ ಖಾತೆ ಕ್ಲಿಕ್ ಮಾಡಿ.
ಡಿಮ್ಯಾಟ್ ಖಾತೆಯನ್ನು ಸೇರಿಸುವ ಆಯ್ಕೆಯೊಂದಿಗೆ ಸೇರಿಸಲಾದ, ವಿಫಲವಾದ ಮತ್ತು ತೆಗೆಯಲಾದ ಡಿಮ್ಯಾಟ್ ಖಾತೆ ಪಟ್ಟಿಯನ್ನು ನೀವು ವೀಕ್ಷಿಸಲು ಸಾಧ್ಯವಾಗುತ್ತದೆ.
ಹಂತ 4: ನೀವು ಇವನ್ನು ಬಯಸಿದ ಸಂದರ್ಭದಲ್ಲಿ -
| ಡಿಮ್ಯಾಟ್ ಖಾತೆಯನ್ನು ಸೇರಿಸಿ | ಸೆಕ್ಷನ್ 4.1 ಅನ್ನು ನೋಡಿ |
| ಡಿಮ್ಯಾಟ್ ಖಾತೆಯನ್ನು ತೆಗೆದುಹಾಕಿ | ಸೆಕ್ಷನ್ 4.2 ಅನ್ನು ನೋಡಿ |
| EVC ಅನ್ನು ಸಕ್ರಿಯಗೊಳಿಸಿ ಅಥವಾ ನಿಷ್ಕ್ರಿಯಗೊಳಿಸಿ | ಸೆಕ್ಷನ್ 4.3 ಅನ್ನು ನೋಡಿ |
| ಡಿಮ್ಯಾಟ್ ಖಾತೆ ವಿವರಗಳಿಗೆ ಸರಿಹೊಂದಿಸಲು ಪ್ರಾಥಮಿಕ ಸಂಪರ್ಕ ವಿವರಗಳನ್ನು ನವೀಕರಿಸಿ | ಸೆಕ್ಷನ್ 4.4 ಅನ್ನು ನೋಡಿ |
| ವಿಫಲವಾದ ಡಿಮ್ಯಾಟ್ ಖಾತೆಯನ್ನು ಮರು-ಮೌಲ್ಯೀಕರಿಸಿ | ಸೆಕ್ಷನ್ 4.5 ಅನ್ನು ನೋಡಿ |
4.1 ಡಿಮ್ಯಾಟ್ ಖಾತೆಯನ್ನು ಸೇರಿಸಿ
ಹಂತ 1: + ಡಿಮ್ಯಾಟ್ ಖಾತೆಯನ್ನು ಸೇರಿಸಿ ಕ್ಲಿಕ್ ಮಾಡಿ.
ಹಂತ 2: ಠೇವಣಿ ಪ್ರಕಾರವನ್ನು ಆಯ್ಕೆಮಾಡಿ ಮತ್ತು ಸಂಬಂಧಿತ ವಿವರಗಳನ್ನು ನಮೂದಿಸಿ.
ಹಂತ 2a: ನೀವು ಠೇವಣಿ ಪ್ರಕಾರವನ್ನು NSDL ಎಂದು ಆರಿಸಿದರೆ - ಸಂಬಂಧಿತ ವಿವರಗಳನ್ನು ([DP ID, ಗ್ರಾಹಕರ ID ಮತ್ತು ಸಂಪರ್ಕ ವಿವರಗಳು - ಮೊಬೈಲ್ ಸಂಖ್ಯೆ ಮತ್ತು ಇಮೇಲ್ ID) ನಮೂದಿಸಿ.
ಹಂತ 2b: ನೀವು ಠೇವಣಿ ಪ್ರಕಾರವನ್ನು CDSL ಎಂದು ಆರಿಸಿದರೆ - ಸಂಬಂಧಿತ ವಿವರಗಳನ್ನು ನಮೂದಿಸಿ (ಡಿಮ್ಯಾಟ್ ಖಾತೆ ಸಂಖ್ಯೆ ಮತ್ತು ಸಂಪರ್ಕ ವಿವರಗಳು - ಮೊಬೈಲ್ ಸಂಖ್ಯೆ ಮತ್ತು ಇಮೇಲ್ ID).
ಹಂತ 3: ಮೌಲ್ಯಿಕರಿಸಿ ಕ್ಲಿಕ್ ಮಾಡಿ
ಡಿಮ್ಯಾಟ್ ಖಾತೆಯನ್ನು ಸೇರಿಸಲು ವಿನಂತಿಯನ್ನು ಒಮ್ಮೆ ಯಶಸ್ವಿಯಾಗಿ ಸಲ್ಲಿಸಿದ ನಂತರ ಒಂದು ಪಾಪ್ಅಪ್ ಸಂದೇಶ ಕಾಣಿಸಿಕೊಳ್ಳುತ್ತದೆ.
ಹಂತ 4: ಮುಚ್ಚಿರಿ ಕ್ಲಿಕ್ ಮಾಡಿ. ಡಿಮ್ಯಾಟ್ ಖಾತೆಯ ವಿವರಗಳನ್ನು ಸೇರಿಸಿದ ಡಿಮ್ಯಾಟ್ ಖಾತೆಗಳ ಟ್ಯಾಬ್ ಅಡಿಯಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಹೊಸದಾಗಿ ಸೇರಿಸಿದ ಡಿಮ್ಯಾಟ್ ಖಾತೆಯ ಸ್ಥಿತಿಯನ್ನು ದೃಢೀಕರಣ ಪ್ರಗತಿಯಲ್ಲಿದೆ ಎಂದು ನೀವು ವೀಕ್ಷಿಸಲು ಸಾಧ್ಯವಾಗುತ್ತದೆ.
ದೃಢೀಕರಣ ಯಶಸ್ವಿಯಾದ ನಂತರ, ಡಿಮ್ಯಾಟ್ ಖಾತೆಯ ವಿವರಗಳನ್ನು ಸೇರಿಸಿದ ಡಿಮ್ಯಾಟ್ ಖಾತೆ ಟ್ಯಾಬ್ ಅಡಿಯಲ್ಲಿ ದೃಢೀಕರಿಸಿದೆ ಮತ್ತು EVC ಸಕ್ರಿಯಗೊಳಿಸಿದೆ ಎಂಬ ಸ್ಥಿತಿಯೊಂದಿಗೆ ಪ್ರದರ್ಶಿಸಲಾಗುತ್ತದೆ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ID ಗಳಲ್ಲಿ ದೃಢೀಕರಣದ ಸ್ಥಿತಿಯನ್ನು ನೀವು ಪಡೆಯುತ್ತೀರಿ.
ಸೂಚನೆ:
- ಒಂದು ಸಮಯದಲ್ಲಿ ಒಂದೇ ಡಿಮ್ಯಾಟ್ ಖಾತೆಗೆ EVC ಅನ್ನು ಸಕ್ರಿಯಗೊಳಿಸಬಹುದು. ಈಗಾಗಲೇ ಯಾವುದೇ ಡಿಮ್ಯಾಟ್ ಖಾತೆಗಳನ್ನು ಸೇರಿಸಿದ್ದರೆ, ಹೊಸದಾಗಿ ಸೇರಿಸಿದ ಡಿಮ್ಯಾಟ್ ಖಾತೆಯ ಸ್ಥಿತಿಯನ್ನು ದೃಢೀಕರಿಸಲಾಗಿದೆ ಎಂಬ ಸ್ಥಿತಿಯೊಂದಿಗೆ ನವೀಕರಿಸಲಾಗುತ್ತದೆ.
- ನಿಮ್ಮ ಡಿಮ್ಯಾಟ್ ಖಾತೆಯನ್ನು ನೀವು ದೃಢೀಕರಿಸಲು ಸಾಧ್ಯವಾಗದಿದ್ದರೆ, ವೈಫಲ್ಯದ ಕಾರಣದೊಂದಿಗೆ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಪುನಃ ದೃಢೀಕರಿಸಿ ಬಟನ್ ಕ್ಲಿಕ್ ಮಾಡಿ ಮತ್ತು ಡಿಮ್ಯಾಟ್ ಖಾತೆಗಳನ್ನು ಸೇರಿಸುವ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ ಮತ್ತು ಅಲ್ಲಿ ನೀವು ಡಿಮ್ಯಾಟ್ ಖಾತೆಯನ್ನು ಮತ್ತೆ ದೃಢೀಕರಿಸಲು ಅಗತ್ಯವಿರುವ ವಿವರಗಳನ್ನು ತಿದ್ದಬೇಕಾಗುತ್ತದೆ.
4.2 ಡಿಮ್ಯಾಟ್ ಖಾತೆಗಳನ್ನು ತೆಗೆದುಹಾಕುವುದು
ಹಂತ 1: ಸೇರಿಸಿದ ಡಿಮ್ಯಾಟ್ ಖಾತೆಗಳು ಟ್ಯಾಬ್ ಅಡಿಯಲ್ಲಿ, ನೀವು ತೆಗೆದುಹಾಕಲು ಬಯಸುವ ಖಾತೆಗೆ ಡಿಮ್ಯಾಟ್ ಖಾತೆಯನ್ನು ತೆಗೆದುಹಾಕಿಎಂದು ಕ್ಲಿಕ್ ಮಾಡಿ.
ಹಂತ 2 : ಖಾತೆಯನ್ನು ತೆಗೆದುಹಾಕಲು ಕಾರಣವನ್ನು ಆಯ್ಕೆಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಸೂಚನೆ: ನೀವು ಕಾರಣವನ್ನು ಇತರೆ ಎಂದು ಆರಿಸಿದರೆ, ಪಠ್ಯ ಬಾಕ್ಸ್‌ನಲ್ಲಿ ಕಾರಣವನ್ನು ನಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಡಿಮ್ಯಾಟ್ ಖಾತೆಯನ್ನು ಯಶಸ್ವಿಯಾಗಿ ತೆಗೆದುಹಾಕಿದ ನಂತರ ಪಾಪ್ಅಪ್ ಸಂದೇಶ ಕಾಣಿಸಿಕೊಳ್ಳುತ್ತದೆ ಮತ್ತು ಡಿಮ್ಯಾಟ್ ಖಾತೆಯನ್ನು ತೆಗೆದುಹಾಕಲಾದ ಡಿಮ್ಯಾಟ್ ಖಾತೆಗಳು ಟ್ಯಾಬ್‌ಗೆ ವರ್ಗಾಯಿಸಲಾಗುತ್ತದೆ.
4.3. EVC ಅನ್ನು ಸಕ್ರಿಯಗೊಳಿಸಿ ಹಾಗು ನಿಷ್ಕ್ರಿಯಗೊಳಿಸಿ
ಹಂತ 1: ನೀವು EVC ಅನ್ನು ಸಕ್ರಿಯಗೊಳಿಸಲು ಬಯಸುವ ಖಾತೆಗೆ EVC ಸಕ್ರಿಯಗೊಳಿಸಿ ಅನ್ನು ಕ್ಲಿಕ್ ಮಾಡಿ.
ಹಂತ 2: ಒಂದು ದೃಢೀಕರಣ ಪಾಪ್‌ಅಪ್ ಕಾಣಿಸುತ್ತದೆ. ಮುಂದುವರಿಸಿ ಕ್ಲಿಕ್ ಮಾಡಿ. ಈ ಕೆಳಗಿನ ಎರಡು ಷರತ್ತುಗಳನ್ನು ಪೂರೈಸಿದರೆ ಆಯ್ಕೆ ಮಾಡಿದ ಡಿಮ್ಯಾಟ್ ಖಾತೆಗೆ EVC ಸಕ್ರಿಯವಾಗುವುದು:
- ಆಯ್ಕೆ ಮಾಡಿದ ಖಾತೆಗೆ ಮೊಬೈಲ್ ಸಂಖ್ಯೆಯನ್ನು ಡಿಪಾಸಿಟರಿ ಮೂಲಕ ಪರಿಶೀಲಿಸಲಾಗುತ್ತದೆ
- ಬೇರೆ ಯಾವುದೇ ಡಿಮ್ಯಾಟ್ ಖಾತೆಗೆ EVC ಅನ್ನು ಸಕ್ರಿಯಗೊಳಿಸಲಾಗಿಲ್ಲ
ಸೂಚನೆ: ನಿಮ್ಮ ಮೊಬೈಲ್ ಸಂಖ್ಯೆಯನ್ನು ದೃಢೀಕರಿಸಿಲ್ಲವಾಗಿದ್ದರೆ, ನೀವು ಡಿಮ್ಯಾಟ್ ಖಾತೆಯೊಂದಿಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಬೇಕಾಗುತ್ತದೆ.
ಹಂತ 3 : EVC ಅನ್ನು ಈಗಾಗಲೇ ಒಂದು ಡಿಮ್ಯಾಟ್ ಖಾತೆಗೆ ಸಕ್ರಿಯಗೊಳಿಸಿದ್ದರೆ (ಮತ್ತು ನೀವು ಮತ್ತೊಂದು ಡಿಮ್ಯಾಟ್ ಖಾತೆಯನ್ನು ಸಕ್ರಿಯಗೊಳಿಸಲು ಪ್ರಯತ್ನಿಸಿದರೆ), ಅದನ್ನು ನಿಮಗೆ ತಿಳಿಸುವ ಪಾಪ್ ಅಪ್ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. EVC ಯನ್ನು ಸಕ್ರಿಯಗೊಳಿಸಲುಮುಂದುವರಿಯಿರಿ ಕ್ಲಿಕ್ ಮಾಡಿ.
ಹಂತ 4: ನೀವು EVC ನಿಷ್ಕ್ರಿಯಗೊಳಿಸಲು ಬಯಸುವ ಖಾತೆಗೆ EVC ನಿಷ್ಕ್ರಿಯಗೊಳಿಸಿ ಕ್ಲಿಕ್ ಮಾಡಿ.
ಹಂತ 5: ಒಂದು ದೃಢೀಕರಣ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಮುಂದುವರಿಸಿ ಕ್ಲಿಕ್ ಮಾಡಿ.
ಆಯ್ಕೆ ಮಾಡಿದ ಖಾತೆಯಿಂದ EVC ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಮತ್ತು ಸ್ಥಿತಿಯನ್ನು ದೃಢೀಕರಿಸಲಾಗಿದೆ ಗೆ ನವೀಕರಿಸಲಾಗುತ್ತದೆ.
4.4. ಡಿಮ್ಯಾಟ್ ಖಾತೆ ಸಂಪರ್ಕ ವಿವರಗಳಿಗೆ ಸರಿಹೊಂದಿಸಲು ಪ್ರಾಥಮಿಕ ಸಂಪರ್ಕ ವಿವರಗಳನ್ನು ನವೀಕರಿಸಿ
ಹಂತ 1: ನಿಮ್ಮ ಡಿಮ್ಯಾಟ್ ಖಾತೆಯೊಂದಿಗೆ ದೃಢೀಕರಿಸಲಾದ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ID ಮತ್ತು ಪ್ರಾಥಮಿಕ ಸಂಪರ್ಕ ವಿವರಗಳು ವಿಭಿನ್ನವಾಗಿದ್ದರೆ, !(ಎಚ್ಚರಿಕೆ ಚಿಹ್ನೆ) ಸಂದೇಶದೊಂದಿಗೆ ದೃಢೀಕೃತ ಮೊಬೈಲ್ ಸಂಖ್ಯೆ / ಇಮೇಲ್ IDಯ ಪಕ್ಕದಲ್ಲಿ ಪ್ರದರ್ಶಿಸಲಾಗುತ್ತದೆ. ಮೊಬೈಲ್ ಸಂಖ್ಯೆ / ಇಮೇಲ್ IDಯನ್ನು ನವೀಕರಿಸಲು ಪ್ರದರ್ಶಿಸಲಾದ ಸಂದೇಶದಲ್ಲಿನ ಹೈಪರ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 2: ಸಂಯೋಜಿತ ಡಿಮ್ಯಾಟ್ ಸಂಪರ್ಕ ವಿವರಗಳು ಪುಟದಲ್ಲಿ, ಮೊಬೈಲ್ ಸಂಖ್ಯೆ ಅಥವಾ ಡಿಮ್ಯಾಟ್ ಖಾತೆಯೊಂದಿಗೆ ನೋಂದಾಯಿಸಲಾದ ಇಮೇಲ್ IDಯಲ್ಲಿ ಸ್ವೀಕರಿಸಿದ 6-ಅಂಕಿಯ OTP ಅನ್ನು ನಮೂದಿಸಿ ಮತ್ತು ಸಲ್ಲಿಸಿ ಕ್ಲಿಕ್ ಮಾಡಿ.
ಸೂಚನೆ:
- OTP 15 ನಿಮಿಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.
- ಸರಿಯಾದ OTP ಅನ್ನು ನಮೂದಿಸಲು ನೀವು 3 ಪ್ರಯತ್ನಗಳನ್ನು ಹೊಂದಿರುವಿರಿ.
- ಸ್ಕ್ರೀನ್ ಮೇಲೆ OTP ಮುಕ್ತಾಯ ಕೌಂಟ್‌ಡೌನ್ ಟೈಮರ್ OTP ಯಾವಾಗ ಮುಕ್ತಾಯಗೊಳ್ಳುತ್ತದೆ ಎಂದು ನಿಮಗೆ ತಿಳಿಸುತ್ತದೆ.
- OTP ಪುನಃ ಕಳುಹಿಸಿ ಎಂದು ಕ್ಲಿಕ್ ಮಾಡಿದಾಗ, ಒಂದು ಹೊಸ OTP ಯನ್ನು ರಚಿಸಲಾಗುತ್ತದೆ ಮತ್ತು ಕಳುಹಿಸಲಾಗುತ್ತದೆ.
- ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸುತ್ತಿದ್ದರೆ, ಡಿಮ್ಯಾಟ್ ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಲ್ಲಿ ನೀವು OTP ಸ್ವೀಕರಿಸುತ್ತೀರಿ.
- ನೀವು ನಿಮ್ಮ ಇಮೇಲ್ ID ಅನ್ನು ನವೀಕರಿಸುತ್ತಿದ್ದರೆ, ಡಿಮ್ಯಾಟ್ ಖಾತೆಯೊಂದಿಗೆ ನೋಂದಾಯಿಸಲಾದ ಇಮೇಲ್ IDಯಲ್ಲಿ ನೀವು OTP ಸ್ವೀಕರಿಸುತ್ತೀರಿ.
ಇ-ಫೈಲಿಂಗ್ ಪೋರ್ಟಲ್ ನಲ್ಲಿ ಡಿಮ್ಯಾಟ್ ವಿವರಗಳ ಪ್ರಕಾರ ಸಂಪರ್ಕ ವಿವರಗಳನ್ನು ಯಶಸ್ವಿಯಾಗಿ ನವೀಕರಿಸಿ ಯಶಸ್ವೀ ದೃಢೀಕರಣದ ನಂತರ, ಒಂದು ಪಾಪ್ ಅಪ್ ಸಂದೇಶ ಕಾಣಿಸಿಕೊಳ್ಳುತ್ತದೆ.
4.5. ವಿಫಲವಾದ ಡಿಮ್ಯಾಟ್ ಖಾತೆಯನ್ನು ಮರು-ಮೌಲ್ಯೀಕರಿಸಿ
ಹಂತ 1: ವಿಫಲವಾದ ಡಿಮ್ಯಾಟ್ ಖಾತೆಗಳು ಟ್ಯಾಬ್ ಅಡಿಯಲ್ಲಿ, ನೀವು ದೃಢೀಕರಿಸಲು ಬಯಸುವ ಡಿಮ್ಯಾಟ್ ಖಾತೆ ಆಯ್ಕೆಮಾಡಿ.
ಹಂತ 2: ಮರು-ಮೌಲ್ಯೀಕರಿಸಿ ಅನ್ನು ಕ್ಲಿಕ್ ಮಾಡಿ.
ಹಂತ 3: ಮುಂಚಿತವಾಗಿಯೇ ಭರ್ತಿ ಮಾಡಿದ ವಿವರಗಳನ್ನು ಎಡಿಟ್ ಮಾಡಿ ಮತ್ತು ಮೌಲ್ಯೀಕರಿಸಿ ಯನ್ನು ಕ್ಲಿಕ್ ಮಾಡಿ.
ವಿನಂತಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ ಒಂದು ಪಾಪ್ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ ಮತ್ತು ಮರು-ದೃಢೀಕರಿಸಿದ ಡಿಮ್ಯಾಟ್ ಖಾತೆಯನ್ನು ಸೇರಿಸಿದ ಡಿಮ್ಯಾಟ್ ಖಾತೆಗಳ ಟ್ಯಾಬ್‌ಗೆ ಮೌಲ್ಯೀಕರಣ ಪ್ರಗತಿಯಲ್ಲಿದೆ ಎಂಬ ಸ್ಥಿತಿಯೊಂದಿಗೆ ವರ್ಗಾಯಿಸಲಾಗುತ್ತದೆ.