ಫಾರ್ಮ್ 55 ಕುರಿತು ಬಳಕೆದಾರರ ಕೈಪಿಡಿ
1. ಅವಲೋಕನ
- ದ್ವಿತೀಯ ತೆರಿಗೆ ವಿಧಿಸಲಾಗಿರುವ ಪ್ರಕರಣಗಳನ್ನು ಪರಿಹರಿಸಲು ಸಮರ್ಥ ಭಾರತೀಯ ಪ್ರಾಧಿಕಾರದಿಂದ ಸಹಾಯ ಪಡೆಯಲು ಬಯಸುವ ತೆರಿಗೆದಾತರು ಫಾರ್ಮ್ 55ರಲ್ಲಿ ಅರ್ಜಿ ಸಲ್ಲಿಸಬೇಕು. ಈ ಫಾರ್ಮ್ ಆದಾಯ ತೆರಿಗೆ ಇಲಾಖೆಗೆ ಅನ್ವಯವಾಗುವ ತೆರಿಗೆ ವಿವಾದದ ವಿವರಗಳನ್ನು ಪರಿಶೀಲಿಸಲು, ನೀಡಲಾದ ಮಾಹಿತಿಯನ್ನು ಖಚಿತಪಡಿಸಲು ಮತ್ತು ಸಮರ್ಥ ವಿದೇಶಿ ಪ್ರಾಧಿಕಾರದೊಂದಿಗೆ ಮಾತುಕತೆ ಆರಂಭಿಸಲು ಸಹಾಯ ಮಾಡುತ್ತದೆ.
- ಫಾರ್ಮ್ 55 ಅನ್ನು ಇ-ಸಲ್ಲಿಕೆ ಪೋರ್ಟಲ್ನಲ್ಲಿ ಆನ್ಲೈನ್ನಲ್ಲಿ ಸಲ್ಲಿಸಬೇಕು. ಜೊತೆಗೆ, ಮೌಲ್ಯಮಾಪನ ಆದೇಶಗಳು, ಬೇಡಿಕೆ ಸೂಚನೆಗಳು ಅಥವಾ ವಿದೇಶಿ ತೆರಿಗೆ ಅಧಿಕಾರಿಗಳೊಂದಿಗೆ ನಡೆದ ಪತ್ರವ್ಯವಹಾರದಂತಹ ಸಂಬಂಧಿತ ಪೋಷಕ ದಾಖಲೆಗಳನ್ನು ಸಹ ಸಲ್ಲಿಸಬೇಕು. ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಸಕ್ಷಮ ಪ್ರಾಧಿಕಾರವು ಪ್ರಕರಣವನ್ನು ಪರಿಶೀಲಿಸುತ್ತದೆ ಮತ್ತು ಅಗತ್ಯವಿದ್ದರೆ ಹೆಚ್ಚುವರಿ ಮಾಹಿತಿಯನ್ನು ಕೋರಬಹುದು.
- ಈ ಪ್ರಕ್ರಿಯೆಯು ತೆರಿಗೆದಾರರು ಉದ್ದೇಶಿತವಲ್ಲದ ದ್ವಿಗುಣ ತೆರಿಗೆಯಿಂದ ರಕ್ಷಿಸಲ್ಪಡುತ್ತಾರೆ ಮತ್ತು ಗಡಿಯಾಚೆಗಿನ ತೆರಿಗೆ ಸಮಸ್ಯೆಗಳಿಂದ ಉಂಟಾಗುವ ವಿವಾದಗಳನ್ನು ಅಂತರರಾಷ್ಟ್ರೀಯ ತೆರಿಗೆ ಒಪ್ಪಂದಗಳ ಅಡಿಯಲ್ಲಿ ಒದಗಿಸಲಾದ ರಚನಾತ್ಮಕ ಮತ್ತು ಪಾರದರ್ಶಕ ಕಾರ್ಯವಿಧಾನದ ಮೂಲಕ ಪರಿಹರಿಸಲಾಗುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.
2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು
- ನೀವು ಇ-ಸಲ್ಲಿಕೆ ಪೋರ್ಟಲ್ಲಿನ ನೋಂದಾಯಿತ ಬಳಕೆದಾರರಾಗಿರಬೇಕು.
- ತೆರಿಗೆದಾರರ PAN ಸ್ಥಿತಿ "ಸಕ್ರಿಯ" ಆಗಿರಬೇಕು
- DSC ಮೂಲಕ ಫಾರ್ಮ್ ಅನ್ನು ಪರಿಶೀಲಿಸಲು ನಿಮ್ಮ ಬಳಿ ಮಾನ್ಯವಾದ DSC ಇರಬೇಕು, ಮತ್ತು ಅದು ಇ-ಸಲ್ಲಿಕೆ ಪೋರ್ಟಲ್ನಲ್ಲಿ ನೋಂದಾಯಿತವಾಗಿರತಕ್ಕದ್ದು ಹಾಗೂ ಅವಧಿ ಮೀರಿರಬಾರದು.
3. ಫಾರ್ಮ್ ಕುರಿತು
3.1 ಉದ್ದೇಶ
ಫಾರ್ಮ್ 55 ಎಂಬದು ಬೇರೆ ದೇಶಗಳು ಅಥವಾ ನಿಗದಿತ ಪ್ರದೇಶಗಳೊಂದಿಗೆ ನಡೆದ ಒಪ್ಪಂದಗಳಲ್ಲಿ ನಿಬಂಧಿತ ಪರಸ್ಪರ ಒಪ್ಪಂದ ವಿಧಾನವನ್ನು ಬಳಕೆಯಲ್ಲಿ ತರುವ ಅರ್ಜಿಯಾಗಿದೆ. (ನಿಯಮ 121 ಅನ್ನು ನೋಡಿ)
3.2 ಯಾರು ಇದನ್ನು ಬಳಸಬಹುದು?
ಭಾರತದಲ್ಲಿ ನಿವಾಸಿಯಾಗಿರುವ ಯಾವುದೇ ತೆರಿಗೆದಾರ, ಇತರ ದೇಶಗಳು ಅಥವಾ ನಿರ್ದಿಷ್ಟ ಪ್ರದೇಶಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳಲ್ಲಿ ನೀಡಿರುವ ನಿಬಂಧಿತ ಪರಸ್ಪರ ಒಪ್ಪಂದ ವಿಧಾನವನ್ನು ಅನುಷ್ಠಾನಗೊಳಿಸಲು ಬಯಸಿದರೆ, ಅವರು Form 55 ಅನ್ನು ಸಲ್ಲಿಸಬೇಕು.
3.3 ಫಾರ್ಮ್ನ ಸಂಕ್ಷಿಪ್ತ ನೋಟ
ಫಾರ್ಮ್ 55ರಲ್ಲಿ ನಾಲ್ಕು ವಿಭಾಗಗಳು ಇವೆ:
- ಭಾಗ A: ಅರ್ಜಿದಾರರ ವಿವರಗಳು
- ಭಾಗ B: ಇತರ ವಿವರಗಳು
- ಲಗತ್ತು
- ಪರಿಶೀಲನೆ
4. ಹಂತ-ಹಂತದ ಮಾರ್ಗದರ್ಶಿ
ಹಂತ 1: ನಿಮ್ಮ ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್ಗೆ ಲಾಗಿನ್ ಮಾಡಿರಿ.
ಹಂತ 2: ಬಳಕೆದಾರರ ಐಡಿ(PAN) ಮತ್ತು ಪಾಸ್ವರ್ಡ್
ನಮೂದಿಸಿರಿ.
ಹಂತ 3: ಇ- ಸಲ್ಲಿಕೆಗೆ ಹೋಗಿರಿ; ಆದಾಯ ತೆರಿಗೆ ಫಾರ್ಮ್ಗಳು; ಆದಾಯ ತೆರಿಗೆ ಫಾರ್ಮ್ಅನ್ನು ಫೈಲ್ ಮಾಡಿರಿ.
ಹಂತ 4: ಆದಾಯ ತೆರಿಗೆ ಕಾಯ್ದೆ 2025ರ ಟ್ಯಾಬ್ನಲ್ಲಿನ ಫಾರ್ಮ್ಗಳನ್ನು ಆಯ್ಕೆ ಮಾಡಿ, ಫಾರ್ಮ್ 55ನ್ನು ಆಯ್ಕೆ ಮಾಡಿ, ಮತ್ತು 'ಈಗಲೇ ಫೈಲ್ ಮಾಡಿʼ ಬಟನ್ ಕ್ಲಿಕ್ ಮಾಡಿ.
ಹಂತ 5: ಅನ್ವಯಿಸುವ ತೆರಿಗೆ ವರ್ಷ(T.Y)ವನ್ನು ಆಯ್ಕೆಮಾಡಿ ಮತ್ತು ʼಮುಂದುವರೆಯಿರಿʼ ಬಟನ್ ಅನ್ನು ಕ್ಲಿಕ್ ಮಾಡಿ.
ಹಂತ 6. ʼಈಗಲೇ ಆರಂಭಿಸಿʼಯನ್ನು ಕ್ಲಿಕ್ ಮಾಡಿರಿ.
ಹಂತ 7: ಈಗಲೇ ಆರಂಭಿಸಿಯನ್ನು ಕ್ಲಿಕ್ ಮಾಡಿದ ನಂತರ ಬಳಕೆದಾರರನ್ನು ಪ್ಯಾನೆಲ್ ಸ್ಕ್ರೀನ್ ಗೆ ಕರೆದೊಯ್ಯಲಾಗುವುದು ಮತ್ತು ಅಲ್ಲಿ ನೀವು ಮೊದಲನೆಯ ವಿಭಾಗವನ್ನು ಆಯ್ಕೆಮಾಡಿರಿ: ವಿಭಾಗ A:ಅರ್ಜಿದಾರರ ವಿವರಗಳು.
ಹಂತ 8: ವಿವರಗಳನ್ನು ಪರಿಶೀಲಿಸಿ ಹಾಗೂ ಉಳಿಸಿ(ಸೇವ್)ಅನ್ನು ಕ್ಲಿಕ್ ಮಾಡಿರಿ.
ಸೂಚನೆ: ದಯವಿಟ್ಟು ನಿಮ್ಮ 'ನನ್ನ ಪ್ರೊಫೈಲ್' ವಿಭಾಗದಲ್ಲಿ ವಿಳಾಸ ಸಹಿತ ಎಲ್ಲ ಅಗತ್ಯ ವಿವರಗಳು ಸೇರಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ನಿಮ್ಮ ಸಂಪರ್ಕ ಮತ್ತು ವಿಳಾಸ ವಿವರಗಳನ್ನು 'ನನ್ನ ಪ್ರೊಫೈಲ್' ಹೈಪರ್ಲಿಂಕ್ ಕ್ಲಿಕ್ ಮಾಡಿ ಅಪ್ಡೇಟ್ ಮಾಡಬಹುದು.
ಹಂತ 9: ಮೊದಲ ವಿಭಾಗವನ್ನು ಸೇವ್ ಮಾಡಿದ ನಂತರ, ಎರಡನೆಯ ವಿಭಾಗವನ್ನು ಆಯ್ಕೆ ಮಾಡಿರಿ: ವಿಭಾಗ B: ಮತ್ತಿತರ ವಿವರಗಳು.
ಹಂತ 10: "ವಿಭಾಗ B: ಮತ್ತಿತರ ವಿವರಗಳು" ವಿಭಾಗವನ್ನು ಭರ್ತಿ ಮಾಡಿ ಮತ್ತು ಪರಿಶೀಲಿಸಿ ಸೇವ್ ಮಾಡುವದಕ್ಕೆ ಕ್ಲಿಕ್ ಮಾಡಿರಿ.
ಸೂಚನೆ: ಅನುಕ್ರಮಣಿಕೆ ಸಂಖ್ಯೆ 7ರಲ್ಲಿ, “ತೆರಿಗೆ ವರ್ಷ(ಗಳು)”ಗೆ ಸಂಬಂಧಿಸಿದ ಸೂಚನೆ ಅಥವಾ ಆದೇಶಕ್ಕೆ ಅನುಗುಣವಾಗಿ ಬಳಕೆದಾರರು ಬಹುಸಂಖ್ಯೆಯಲ್ಲಿ ಚೆಕ್ಬಾಕ್ಸ್ಗಳನ್ನು ಫೀಲ್ಡ್ಗಾಗಿ ಆರಿಸಬಹುದು.

ಹಂತ 11: ಎರಡನೆಯ ವಿಭಾಗವನ್ನು ಉಳಿಸಿದ(ಸೇವ್)ನಂತರ, ಮೂರನೆಯ ವಿಭಾಗ ಆಯ್ಕೆಮಾಡಿರಿ:ಲಗತ್ತುಗಳು.
ಹಂತ 12: ಸಂಬಂಧಿತ ದಾಖಲೆಗಳನ್ನು ಲಗತ್ತಿಸಿ ಮತ್ತು ಉಳಿಸಿ(ಸೇವ್) ಅನ್ನು ಕ್ಲಿಕ್ ಮಾಡಿರಿ.
ಸೂಚನೆ: ಫೀಲ್ಡ್ ಸಂಖ್ಯೆ 11ರಲ್ಲಿ “ಹೌದು” ಎಂದು ಆಯ್ಕೆ ಮಾಡಿದ್ದರೆ A-3ನ್ನು ಲಗತ್ತಿಸುವುದು ಕಡ್ಡಾಯವಾಗಿರುತ್ತದೆ.
ಹಂತ 13: ಮೂರನೆ ವಿಭಾಗವನ್ನು ಉಳಿಸಿದ(ಸೇವ್) ನಂತರ, “ಪರಿಶೀಲನೆ” ವಿಭಾಗವನ್ನು ಆಯ್ಕೆ ಮಾಡಿರಿ.
ಹಂತ 14: ಘೋಷಣೆಯನ್ನು ದೃಢೀಕರಿಸಿರಿ ಮತ್ತು “ಉಳಿಸಿ” ಅನ್ನು ಕ್ಲಿಕ್ ಮಾಡಿರಿ.
ಹಂತ 15: ನಾಲ್ಕನೆಯ ವಿಭಾಗವನ್ನು ಉಳಿಸಿದ(ಸೇವ್) ನಂತರ ʼಪೂರ್ವ ವೀಕ್ಷಣೆʼಯನ್ನು ಕ್ಲಿಕ್ ಮಾಡಿರಿ.
ಹಂತ 16: ಪೂರ್ವವೀಕ್ಷಣೆ ಪುಟದಲ್ಲಿ PDF ಡೌನ್ಲೋಡ್ ಮಾಡಲು “ಡೌನ್ ಲೋಡ್”ಅನ್ನು ಕ್ಲಿಕ್ ಮಾಡಿ, ಮತ್ತು ವಿವರಗಳನ್ನು ಪರಿಶೀಲಿಸಿ, ನಂತರ ಇ-ಪರಿಶೀಲನೆಗೆ ಮುಂದುವರಿಯಿರಿ ಮೇಲೆ ಕ್ಲಿಕ್ ಮಾಡಿರಿ.

ಹಂತ 17: "ಇ-ಪರಿಶೀಲನೆಗೆ ಮುಂದುವರಿಯಿರಿ" ಬಟನ್ ಅನ್ನು ಕ್ಲಿಕ್ ಮಾಡಿದ ನಂತರ, ನೀವು ಇ-ಪರಿಶೀಲನೆಗೆ ಮುಂದುವರಿಯಲು ಬಯಸುವಿರಾ ಎಂಬುದನ್ನು ದೃಢೀಕರಿಸುವ ಪಾಪ್-ಅಪ್ ದೃಢೀಕರಣ ಸಂದೇಶ ಕಾಣಿಸುತ್ತದೆ. ಹೌದು ಅನ್ನು ಕ್ಲಿಕ್ ಮಾಡಿರಿ.
ಹಂತ 18: ʼಹೌದುʼ ಕ್ಲಿಕ್ ಮಾಡಿದನಂತರ, ನಿಮ್ಮನ್ನು ಇ-ಪರಿಶೀಲನೆ ಪುಟಕ್ಕೆ ಕರೆದೊಯ್ಯಲಾಗುವುದು, ಇಲ್ಲಿ ನೀವು DSC/EVC (ಅನ್ವಯಿಸುವ)ಬಳಸಿ ಫಾರ್ಮ 55ನ್ನು ಪರಿಶೀಲನೆ ಮಾಡಬಹುದು.
ಸೂಚನೆ: ಹೆಚ್ಚಿನ ಕಲಿಕೆಗಾಗಿ ಇ-ಪರಿಶೀಲನೆ ಹೇಗೆ ಮಾಡಬೇಕು ಎಂಬ ಬಳಕೆದಾರರ ಕೈಪಿಡಿಯನ್ನು ನೋಡಿರಿ.
ಹಂತ 19: ಯಶಸ್ವಿ ಇ-ಪರಿಶೀಲನೆ ನಂತರ, ವಹಿವಾಟು (ಟ್ರಾನ್ಸಾಕ್ಷನ್)ಐಡಿ ಮತ್ತು ಸ್ವೀಕೃತಿ ರಸೀದಿ ಸಂಖ್ಯೆಯೊಂದಿಗೆ ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ದಯವಿಟ್ಟು ವಹಿವಾಟು (ಟ್ರಾನ್ಸಾಕ್ಷನ್) ಐಡಿ ಮತ್ತು ಸ್ವೀಕೃತಿ ರಸೀದಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ. ಇ-ಪರಿಶೀಲನೆ ಪೋರ್ಟಲ್ನಲ್ಲಿ ನೋಂದಾಯಿಸಲಾದ ಇಮೇಲ್ ಐಡಿ(ಗಳು) ಮತ್ತು ಮೊಬೈಲ್ ಸಂಖ್ಯೆ(ಗಳು)ಲ್ಲಿ ನೀವು ದೃಢೀಕರಣ ಸಂದೇಶವನ್ನು ಸಹ ಸ್ವೀಕರಿಸುತ್ತೀರಿ.
ಸ್ವೀಕೃತಿ ರಸೀದಿಯನ್ನು ಡೌನ್ಲೋಡ್ ಮಾಡಲು 'ಡೌನ್ಲೋಡ್' ಬಟನ್ ಮೇಲೆ ಕ್ಲಿಕ್ ಮಾಡಿರಿ.
ಫಾರ್ಮ್ 55ನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ ಸಲ್ಲಿಸಿದ ಫಾರ್ಮ್ಅನ್ನು- ಡ್ಯಾಶ್ಬೋರ್ಡ್ನಲ್ಲಿ ಇ-ಫೈಲ್; ಆದಾಯ ತೆರಿಗೆ ಫಾರ್ಮ್ ಫೈಲ್ ಮಾಡಿ; ಸಲ್ಲಿಸಿದ ಫಾರ್ಮ್ ವೀಕ್ಷಿಸಿ: ಆದಾಯ ತೆರಿಗೆ ಕಾಯ್ದೆ 2025ರಡಿಯಲ್ಲಿ ಸಲ್ಲಿಸಿದ ಫಾರ್ಮ್ ವೀಕ್ಷಿಸಿ ಕ್ಲಿಕ್ ಮಾಡಿ.
ಸೂಚನೆ: ಹೆಚ್ಚಿನ ಕಲಿಕೆಗಾಗಿ "ಸಲ್ಲಿಸಿದ ಫಾರ್ಮ್ ವೀಕ್ಷಿಸಿ" ಬಳಕೆದಾರರ ಕೈಪಿಡಿಯನ್ನು ನೋಡಿ
5. ಸಂಬಂಧಿತ ವಿಷಯಗಳು
6.ಪದಕೋಶ
|
ಸಂಕ್ಷೇಪಣ/ಸಂಕ್ಷಿಪ್ತರೂಪ |
ವಿವರಣೆ/ವಿಸ್ತೃತ ರೂಪ |
|
DSC |
ಡಿಜಿಟಲ್ ಹಸ್ತಾಕ್ಷರ ಪ್ರಮಾಣಪತ್ರ |
|
EVC |
ಎಲೆಕ್ಟ್ರಾನಿಕ್ ಪರಿಶೀಲನಾ ಪ್ರಮಾಣಪತ್ರ. |
|
ARN |
ಸ್ವೀಕರಣಾ ರಸೀತಿ ಸಂಖ್ಯೆ |
|
PY |
ಹಿಂದಿನ ವರ್ಷ |
|
FY |
ಆರ್ಥಿಕ ವರ್ಷ |
|
TY |
ತೆರಿಗೆ ವರ್ಷ |