Do not have an account?
Already have an account?

1. ಅವಲೋಕನ

ಬಾಹ್ಯ ಏಜೆನ್ಸಿಗಳಿಗೆ ಮಾತ್ರ ಬೃಹತ್ ಪ್ರಮಾಣದ PAN / TAN ಪರಿಶೀಲನೆ ಸೇವೆ ಉಪಲಬ್ಧವಿದೆ. ಬಾಹ್ಯ ಏಜೆನ್ಸಿಗಳಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಇಲಾಖೆಗಳು ಅಥವಾ ಉದ್ಯಮಗಳು ಮತ್ತು ಮಾನ್ಯತೆ ಪಡೆದ ಸ್ವಾಯತ್ತ ಸಂಸ್ಥೆಗಳು ಸೇರಿವೆ. ಪೋರ್ಟಲ್‌ನಲ್ಲಿ ನೋಂದಾಯಿಸಲು, ವಿನಂತಿ ಪತ್ರದ ಈ ಮಾದರಿ ಫಾರ್ಮ್ಯಾಟ್ ಅನ್ನು ಬಳಸಿ:

ಒಮ್ಮೆ ಬಾಹ್ಯ ಏಜೆನ್ಸಿಯಾಗಿ ಇ-ಫೈಲಿಂಗ್ ಪೋರ್ಟಲ್ ಅಲ್ಲಿ ನೋಂದಾಯಿತರಾದ ನಂತರ, ಅನುಮೋದನೆ ಆದ ನಂತರ ಅವರು ಕೆಲವು ಸೇವೆಗಳನ್ನು ಪಡೆಯಬಹುದು (ಉದಾಹರಣೆಗೆ ಬೃಹತ್ PAN / TAN ಪರಿಶೀಲನೆ ಸೇವೆಗಳು). ಈ ಸೇವೆಯು ಬಾಹ್ಯ ಏಜೆನ್ಸಿಗಳನ್ನು (ಲಾಗಿನ್ ಮಾಡಿದ ನಂತರ) ಈ ಕೆಳಗಿನವುಗಳಿಗಾಗಿ ಸಕ್ರಿಯಗೊಳಿಸುತ್ತದೆ:

  • ಇ-ಫೈಲಿಂಗ್ ಪೋರ್ಟಲ್‌ನಲ್ಲಿ PAN / TAN ಅನ್ನು ಪರಿಶೀಲಿಸಲು ಬೃಹತ್ PAN /TAN ಪ್ರಶ್ನೆ ಟೆಂಪ್ಲೇಟ್ಗಳನ್ನು ಅಪ್ಲೋಡ್ ಮಾಡಿ
  • ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಹಿಂದಿನ ಟೋಕನ್ ವಿವರಗಳನ್ನು ವೀಕ್ಷಿಸಿ

2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು

ಈ ಸೇವೆ ಈ ಕೆಳಗಿನ ಬಾಹ್ಯ ಏಜೆನ್ಸಿಗಳಿಗೆ ಮಾತ್ರ ಲಭ್ಯವಿದೆ, ಅವರು:

  • ಮಾನ್ಯ ಬಳಕೆದಾರರ ID ಮತ್ತು ಪಾಸ್ವರ್ಡ್ ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಒಬ್ಬ ನೋಂದಾಯಿತ ಬಳಕೆದಾರರಾಗಿ
  • ಇ-ಫೈಲಿಂಗ್ ಪೋರ್ಟಲ್‌ನಿಂದ (ಈ ಸೇವೆಯನ್ನು ಬಳಸಿ) ಬೃಹತ್ PAN / TAN ಪ್ರಶ್ನೆಗೆ ಇತ್ತೀಚಿನ ಟೆಂಪ್ಲೇಟ್ ಅನ್ನು ಡೌನ್‌ಲೋಡ್ ಮಾಡಿ

3. ಹಂತ-ಹಂತದ ಮಾರ್ಗದರ್ಶಿ

ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್ವರ್ಡ್ ಅನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.

Data responsive


ಹಂತ 2: ಬೃಹತ್ PAN / TAN ಅನ್ನು ಪರಿಶೀಲಿಸಿ >ಬೃಹತ್ PAN /TAN ಅನ್ನು ಪರಿಶೀಲನೆ ಮಾಡಿ ಅನ್ನು ಕ್ಲಿಕ್ ಮಾಡಿ

Data responsive


ನೀವು ಬೃಹತ್ PAN /TAN ಪ್ರಶ್ನೆಯಲ್ಲಿ ಯಾವುದಾದರೊಂದನ್ನು ಅಪ್ಲೋಡ್ ಮಾಡಬಹುದು, ಅಥವಾ ಇದಕ್ಕೂ ಮುಂಚೆ ರಚಿಸಿದ ಟೋಕನ್ಗಳ ಸ್ಥಿತಿಯನ್ನು ವೀಕ್ಷಿಸಬಹುದು. ಒಂದು ವೇಳೆ ನೀವು ಬಯಸಿದರೆ:

ಬೃಹತ್ PAN /TAN ಪ್ರಶ್ನೆಯನ್ನು ಅಪ್ಲೋಡ್ ಮಾಡಿ ಸೆಕ್ಷನ್ 3.1 ಅನ್ನು ನೋಡಿ
ಹಿಂದಿನ ಟೋಕನ್ ವಿವರಗಳನ್ನು ವೀಕ್ಷಿಸಿ ಸೆಕ್ಷನ್ 3.2 ಅನ್ನು ನೋಡಿ

3.1 ಬೃಹತ್ PAN /TAN ಪ್ರಶ್ನೆಯನ್ನು ಅಪ್ಲೋಡ್ ಮಾಡಿ


ಹಂತ 1: ನೀವು ಆಯ್ಕೆ ಮಾಡಿದ ಪ್ರಶ್ನೆಗೆ (PAN / TAN) ಸಂಬಂಧಿಸಿದ ಡೌನ್‌ಲೋಡ್ ಟೆಂಪ್ಲೇಟ್ ಅನ್ನು ಕ್ಲಿಕ್ ಮಾಡಿ.

Data responsive

ಸೂಚನೆ: ಬೃಹತ್ PAN ಮತ್ತು ಬೃಹತ್ TAN ಪ್ರಶ್ನೆಯನ್ನು ಪರಿಶೀಲಿಸಲು ಪ್ರತ್ಯೇಕ JSON ಟೆಂಪ್ಲೇಟ್‌ಗಳನ್ನು ಒದಗಿಸಲಾಗುತ್ತದೆ.

ಬೃಹತ್ PAN ಪ್ರಶ್ನೆ ಟೆಂಪ್ಲೇಟ್‌ಗಾಗಿ (CSV ಫಾರ್ಮ್ಯಾಟ್): ಅಗತ್ಯವಿರುವ – PAN, ಮೊದಲ ಹೆಸರು, ಮಧ್ಯದ ಹೆಸರು, ಕೊನೆಯ ಹೆಸರು, ಜನ್ಮ ದಿನಾಂಕ / ಸಂಯೋಜನೆ / ರಚನೆ (DD-MM-YYYY), ಲಿಂಗ ಮತ್ತು ಸಂಸ್ಥೆಯ ಹೆಸರು, ವಿವರಗಳ ಜೊತೆಗೆ 100 ನಮೂದುಗಳವರೆಗೆ ಎಂಟರ್ ಮಾಡಿ. ಯಶಸ್ವಿಯಾಗಿ ದೃಢೀಕರಣ ಆದ ನಂತರ, ಒಂದು JSON ಅನ್ನು ರಚಿಸಿ.

Data responsive

ಸೂಚನೆ

  • ವೈಯಕ್ತಿಕ PAN ಗಾಗಿ, ಕೊನೆಯ ಹೆಸರು ಕಡ್ಡಾಯ.
  • ವೈಯಕ್ತಿಕ-ಅಲ್ಲದ PAN ಗಾಗಿ, ಸಂಸ್ಥೆಯ ಹೆಸರು ಕಡ್ಡಾಯ.


ಬೃಹತ್ TAN ಪ್ರಶ್ನೆ ಟೆಂಪ್ಲೇಟ್‌ಗಾಗಿ (CSV ಫಾರ್ಮ್ಯಾಟ್): ಅಗತ್ಯವಿರುವ – TAN, ಮೊದಲ ಹೆಸರು, ಮಧ್ಯದ ಹೆಸರು, ಕೊನೆಯ ಹೆಸರು, ಸಂಸ್ಥೆಯ ಹೆಸರು, ಮತ್ತು ಸಂಸ್ಥೆಯ PAN ವಿವರಗಳ ಜೊತೆಗೆ 100 ನಮೂದುಗಳವರೆಗೆ ಎಂಟರ್ ಮಾಡಿ. ಯಶಸ್ವಿಯಾಗಿ ದೃಢೀಕರಣ ಆದ ನಂತರ, ಒಂದು JSON ಅನ್ನು ರಚಿಸಿ.

Data responsive

ಸೂಚನೆ

  • TAN ಗಾಗಿ, ಸಂಸ್ಥೆಯ ಹೆಸರು ಕಡ್ಡಾಯ.
  • ವಿವರಗಳನ್ನು ನಮೂದಿಸುವಾಗ ನೀವು PAN ಅಥವಾ TAN ಅನ್ನು ಪುನರಾವರ್ತಿಸಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿ.


ಹಂತ 2: ಒಮ್ಮೆ ನೀವು ಟೆಂಪ್ಲೇಟ್ ಅನ್ನು ಭರ್ತಿ ಮಾಡಿ ಮತ್ತು ಅಪ್‌ಲೋಡ್ ಮಾಡಲು JSON ಫೈಲ್ ಅನ್ನು ರಚಿಸಿದ ನಂತರ, ನೀವು ಅಪ್‌ಲೋಡ್ ಮಾಡಲು ಬಯಸುವ ಪ್ರಶ್ನೆಯ ಪ್ರಕಾರವನ್ನು ಆಯ್ಕೆಮಾಡಿ: ಬೃಹತ್ PAN ಪ್ರಶ್ನೆ ಅಥವಾ ಬೃಹತ್ TAN ಪ್ರಶ್ನೆ, ಲಗತ್ತು ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಕಂಪ್ಯೂಟರ್‌ನಿಂದ ಸಂಬಂಧಿತ ಫೈಲ್ ಅನ್ನು ಆಯ್ಕೆಮಾಡಿ.

Data responsive


ಹಂತ 3: ಒಮ್ಮೆ ನಿಮ್ಮ ಫೈಲ್ ಲಗತ್ತಿಸಿದ ನಂತರ, ಅಪ್‌ಲೋಡ್ ಅನ್ನು ಕ್ಲಿಕ್ ಮಾಡಿ.

Data responsive

ಸೂಚನೆ: ಒಂದೇ JSON ಫೈಲ್‌ನಲ್ಲಿ, ಕೇವಲ 100 PAN /TAN ದಾಖಲೆಗಳನ್ನು ಮಾತ್ರ ಅಪ್ಲೋಡ್ ಮಾಡಬಹುದು.

ಯಶಸ್ವಿಯಾಗಿ ಅಪ್ಲೋಡ್ ಮಾಡಿದ ನಂತರ, ಒಂದು ಟೋಕನ್ ನಂಬರ್ ರಚನೆಯಾಗುತ್ತದೆ. ವಹಿವಾಟಿನ ID ಮತ್ತು ಟೋಕನ್ ನಂಬರ್ ಜೊತೆಗೆ ಒಂದು ಯಶಸ್ವಿ ಸಂದೇಶವು ಪ್ರದರ್ಶಿತವಾಗುತ್ತದೆ. ದಯವಿಟ್ಟು ಭವಿಷ್ಯದ ಉಲ್ಲೇಖಕ್ಕಾಗಿ ವಹಿವಾಟಿನ ID ಮತ್ತು ಟೋಕನ್ ನಂಬರ್ ಅನ್ನು ಗಮನದಲ್ಲಿಟ್ಟುಕೊಳ್ಳಿ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಇಮೇಲ್ ID ಯಲ್ಲಿ ನೀವು ದೃಢೀಕರಣ ಸಂದೇಶವನ್ನು ಸಹ ಸ್ವೀಕರಿಸುತ್ತೀರಿ.

Data responsive


3.2 ಹಿಂದಿನ ಟೋಕನ್ ವಿವರಗಳನ್ನು ವೀಕ್ಷಿಸಿ


ಹಂತ 1: ರಚಿಸಿದ ಟೋಕನ್ ವಿವರಗಳನ್ನು ಮತ್ತು ಸ್ಥಿತಿಯನ್ನು ವೀಕ್ಷಿಸಲು, ಹಿಂದಿನ ಟೋಕನ್ ವಿವರಗಳು ಅನ್ನು ಕ್ಲಿಕ್ ಮಾಡಿ.

Data responsive


ಪ್ರಸ್ತುತ ಸ್ಥಿತಿಯೊಂದಿಗೆ (ಪ್ರಕ್ರಿಯೆಗೊಳಿಸಿದ/ಬಾಕಿ ಉಳಿದಿರುವ) ಟೋಕನ್‌ಗಳ ಆವರ್ತನವನ್ನು (ಸಲ್ಲಿಸಲಾದ ಪ್ರಶ್ನೆಯನ್ನು / ಪ್ರಕ್ರಿಯೆಗೊಳಿಸಲಾದ ಪ್ರಶ್ನೆ) ವೀಕ್ಷಿಸಲು ನಿಮಗೆ ಸಾಧ್ಯವಾಗುತ್ತದೆ.

Data responsive


ಸೂಚನೆ:ಟೋಕನ್ ವಿವರಗಳ ಪಟ್ಟಿಯ ಬಲಭಾಗದ ಮೂಲೆಯ ಮೇಲಿರುವ ಕೊಳವೆಯ ಚಿಹ್ನೆಯಿರುವ ಬಟನ್ ಅನ್ನು ಕ್ಲಿಕ್ ಮಾಡಿ ನಿಮ್ಮ ಪ್ರಶ್ನೆಯನ್ನು ನೀವು ಫಿಲ್ಟರ್ ಮಾಡಬಹುದು.

Data responsive

 

Data responsive

ಹಂತ 2: ನೀವು ನಿರ್ದಿಷ್ಟ ಪ್ರಶ್ನೆಯ ಪರಿಶೀಲಿಸಿದ ವಿವರಗಳನ್ನು ಡೌನ್‌ಲೋಡ್ ಮಾಡಲು ಬಯಸಿದರೆ, ಟೋಕನ್‌ನಲ್ಲಿ ಫೈಲ್ ಅನ್ನು ಡೌನ್‌ಲೋಡ್ ಮಾಡಿ ಕ್ಲಿಕ್ ಮಾಡಿ. ನಿಮ್ಮ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡಲಾದ .csv ಸ್ವರೂಪದ ಫೈಲ್ ಅನ್ನು ನೀವು ಪಡೆಯುತ್ತೀರಿ.

Data responsive


ನೀವು ಅಪ್‌ಲೋಡ್ ಮಾಡಲಾದ ಬೃಹತ್ PAN / TAN ಪ್ರಶ್ನೆಯಿಂದ ವಿವರಗಳನ್ನು CBN ಡೇಟಾಬೇಸ್‌ನಲ್ಲಿರುವ ವಿವರಗಳೊಂದಿಗೆ ಪರಿಶೀಲಿಸಲಾಗುತ್ತದೆ ಮತ್ತು ಪ್ರತಿ ಟೋಕನ್‌ಗೆ .csv ಫೈಲ್‌ನಲ್ಲಿ ದಾಖಲಿಸಲಾಗುತ್ತದೆ. ನೀವು ಡೌನ್‌ಲೋಡ್ ಮಾಡಿದ .csv ಫೈಲ್‌ನಲ್ಲಿ, ಯಾವ ವಿವರಗಳು ಹೊಂದಿಕೆಯಾಗುತ್ತವೆ ಮತ್ತು ಡೇಟಾಬೇಸ್‌ನಲ್ಲಿ PAN/TAN ಅಸ್ತಿತ್ವದಲ್ಲಿದೆಯೇ ಎಂಬುದನ್ನು ನೋಡಲು ಸಾಧ್ಯವಾಗುತ್ತದೆ


4. ಸಂಬಂಧಿಸಿದ ವಿಷಯಗಳು