1. ಅವಲೋಕನ
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಇ- ರಿಟರ್ನ್ ಮಧ್ಯವರ್ತಿಗಳಾಗಿ (ERIs) ನೋಂದಾಯಿಸಲು ಬಯಸುವ ಎಲ್ಲಾ ಬಳಕೆದಾರರಿಗೆ ERI ನೋಂದಣಿ ಸೇವೆ ಲಭ್ಯವಿದೆ. ಇ-ಫೈಲಿಂಗ್ ಹೋಮ್‌ಪೇಜ್‌ನಲ್ಲಿ ಇದು ಲಾಗಿನ್ ಪೂರ್ವ ಸೌಲಭ್ಯವಾಗಿದೆ.ಈ ಕ್ರಿಯಾತ್ಮಕತೆಯು ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಲಾಗಿನ್ ನಂತರ ತೆರಿಗೆ ಸಂಬಂಧಿತ ಚಟುವಟಿಕೆಗಳನ್ನು ಪತ್ತೆಹಚ್ಚಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
- ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಬಳಕೆದಾರರು ERI ಎಂದು ನೋಂದಾಯಿಸಲು PAN/TAN ಹೊಂದಿರಬೇಕು
- ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಪ್ರವೇಶ
- PAN ಅನ್ನು ಇ-ಫೈಲಿಂಗ್‌ನಲ್ಲಿ ನೋಂದಾಯಿಸಬೇಕು
- ಮಾನ್ಯ ಮತ್ತು ನೋಂದಾಯಿತ DSC
3. ಹಂತ-ಹಂತದ ಮಾರ್ಗದರ್ಶಿ
3.1 ERI ನೋಂದಣಿ ವಿನಂತಿಯನ್ನು ಸಲ್ಲಿಸಿ
ಹಂತ 1: ಹೋಮ್‌ಪೇಜ್ ನೋಡಲು ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ ಮತ್ತು ನೋಂದಣಿ ಮಾಡಿ ಮೇಲೆ ಕ್ಲಿಕ್ ಮಾಡಿ.
ಹಂತ 2: ಇತರರು> ಇ- ರಿಟರ್ನ್ ಮಧ್ಯವರ್ತಿ ಮೇಲೆ ಕ್ಲಿಕ್ ಮಾಡಿ.
ಹಂತ 3: ಹೊಸ ಅರ್ಜಿದಾರರ ಹಾಗೆ ನೋಂದಣಿ ಮಾಡಿಕೊಳ್ಳಿ ಮತ್ತು ಅನ್ವಯಿಸುವ ERI ಪ್ರಕಾರವನ್ನು ಆಯ್ಕೆ ಮಾಡಿ. ಮುಂದುವರಿಯಿರಿ ಕ್ಲಿಕ್ ಮಾಡಿ.
ಹಂತ 4: ಇ-ರಿಟರ್ನ್ ಮಧ್ಯವರ್ತಿಯ ಹಾಗೆ ನೋಂದಣಿಮಾಡಿ ಪೇಜ್‍ನಲ್ಲಿ, ನೀವು ERI ಎಂದು ನೋಂದಾಯಿಸಲು ಬಯಸಿದವರ PAN/TAN ಅನ್ನು ನಮೂದಿಸಿ ಮತ್ತು ಮೌಲ್ಯೀಕರಿಸಿ ಎಂದು ಕ್ಲಿಕ್ ಮಾಡಿ.
ಹಂತ 5: ಯಶಸ್ವಿ ಊರ್ಜಿತಗೊಳಿಸುವಿಕೆಯ ನಂತರ, ನಮೂದಿಸಿದ PAN/TAN ನ ನೋಂದಾಯಿತ ಮೊಬೈಲ್ ಸಂಖ್ಯೆಗೆ 6 ಅಂಕಿಯ OTP ಯನ್ನು ಕಳುಹಿಸಲಾಗುತ್ತದೆ (PAN/TAN ಅನ್ನು ಈಗಾಗಲೇ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರಬೇಕಾಗುತ್ತದೆ). OTP ನಮೂದಿಸಿ ಮತ್ತು ಮುಂದುವರಿಯಿರಿ ಕ್ಲಿಕ್ ಮಾಡಿ.
ಸೂಚನೆ:
- 15 ನಿಮಿಷಗಳವರೆಗೆ ಮಾತ್ರ OTP ಮಾನ್ಯವಾಗಿರುತ್ತದೆ.
- ಸರಿಯಾದ OTP ನಮೂದಿಸಲು ನೀವು 3 ಪ್ರಯತ್ನಗಳನ್ನು ಹೊಂದಿದ್ದೀರಿ.
- OTP ಅವಧಿ ಮೀರಿದಾಗ ಸ್ಕ್ರೀನ್ ಮೇಲಿನ OTP ಅವಧಿ ಮೀರುವ ಲೆಕ್ಕದ ಟೈಮರ್ ನಿಮಗೆ ತಿಳಿಸುತ್ತದೆ.
- OTP ಟೈಮರ್ OTP ಅನ್ನು ಪುನರುತ್ಪಾದಿಸಲು ಉಳಿದಿರುವ ಸಮಯವನ್ನು ತೋರಿಸುತ್ತದೆ. OTP ಮರುಕಳುಹಿಸಿ ಮೇಲೆ ಕ್ಲಿಕ್ ಮಾಡಿದಾಗ, ಹೊಸ OTP ಯನ್ನು ರಚಿಸಲಾಗುವುದು.
ಹಂತ 6: ಅರ್ಜಿದಾರರ ವರ್ಗವನ್ನು ಆಯ್ಕೆ ಮಾಡಿ ಮತ್ತು ಮುಂದುವರಿಯಿರಿ ಕ್ಲಿಕ್ ಮಾಡಿ.
ಹಂತ 7: ಮೂಲ ವಿವರಗಳ ಸ್ಕ್ರೀನ್‌ನಲ್ಲಿ ಮೂಲ ವಿವರಗಳನ್ನು ನಮೂದಿಸಿ (ವೈಯಕ್ತಿಕ ಬಳಕೆದಾರರಿಗೆ ಹೆಸರು, DOB ಮತ್ತು PAN; ಸಂಸ್ಥೆಯ ಹೆಸರು ಮತ್ತು ಕಂಪನಿ / ಸಂಸ್ಥೆಗೆ DOI; ಸಂಸ್ಥೆಯ ಹೆಸರು ಮತ್ತು DDO ಗಾಗಿ TAN ಹಂಚಿಕೆಯ ದಿನಾಂಕ) ಮತ್ತು ಮುಂದುವರಿಯಿರಿ ಕ್ಲಿಕ್ ಮಾಡಿ.
ಹಂತ 8: ಯಶಸ್ವಿ ಮೌಲ್ಯೀಕರಣದ ನಂತರದಲ್ಲಿ, ನಿಮ್ಮನ್ನು ಪ್ರಮುಖ ಸಂಪರ್ಕ ವಿವರಗಳು ಪೇಜ್‍ಗೆ ಕರೆದೊಯ್ಯಲಾಗುವುದು (ಅಥವಾ ವ್ಯಕ್ತಿಗಳಾಗಿದ್ದ ಪಕ್ಷದಲ್ಲಿ ಸಂಪರ್ಕ ವಿವರಗಳ ಸ್ಕ್ರೀನ್‌ಗೆ ಕೊಂಡೊಯ್ಯಲಾಗುವುದು). ಸ್ಕ್ರೀನ್‌ನಲ್ಲಿ ಪ್ರಧಾನ ಸಂಪರ್ಕದ ವಿವರಗಳನ್ನು ನಮೂದಿಸಿ ಮತ್ತು ಮುಂದುವರಿಯಿರಿ ಕ್ಲಿಕ್ ಮಾಡಿ
ಹಂತ 9: ನೀವು ಮೊಬೈಲ್ ಸಂಖ್ಯೆ ಮತ್ತು ಹಿಂದಿನ ಸ್ಕ್ರೀನ್‌ನಲ್ಲಿ ನಮೂದಿಸಿದ ಇಮೇಲ್ ID ಯಲ್ಲಿ 6 ಅಂಕಿಯ OTP ಪಡೆಯುತ್ತೀರಿ. ಸ್ವೀಕರಿಸಿದ 6 ಅಂಕಿಯ ಮೊಬೈಲ್ ಮತ್ತು ಇಮೇಲ್ OTP ನಮೂದಿಸಿ ಮತ್ತು ಮುಂದುವರಿಯಿರಿ ಕ್ಲಿಕ್ ಮಾಡಿ.
ಹಂತ 10: ಲಗತ್ತುಗಳ ಸ್ಕ್ರೀನ್ ಮೇಲೆ, ಅರ್ಜಿದಾರರ ವರ್ಗದ ಆಧಾರದ ಮೇಲೆ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
1 ERI ವಿಧಕ್ಕಾಗಿ
- ಮುಚ್ಚಳಿಕೆ
- ಬ್ಯಾಂಕ್ ಗ್ಯಾರಂಟಿ.
2 ಮತ್ತು 3 ERI ವಿಧಗಳಿಗಾಗಿ
- ಮುಚ್ಚಳಿಕೆ
- ಬ್ಯಾಂಕ್ ಗ್ಯಾರಂಟಿ
- ಲೆಕ್ಕಪರಿಶೋಧನಾ ವರದಿ
ಸೂಚನೆ:
ಲಗತ್ತು PDF ಆಗಿರಬೇಕು ಮತ್ತು 5 MB ಗಿಂತ ಕಡಿಮೆ ಇರಬೇಕು.
ಹಂತ 11: ನಿಮ್ಮ ವಿವರಗಳು ಪರಿಶೀಲಿಸಿ ಎನ್ನುವ ಪೇಜ್‍ನಲ್ಲಿ ಅಗತ್ಯವಿರುವ ವಿವರಗಳನ್ನು ತಿದ್ದುಪಡಿಸಿ. ದೃಢೀಕರಿಸಿ ಕ್ಲಿಕ್ ಮಾಡಿ.
ಹಂತ 12: ಯಶಸ್ವಿ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ, ಮತ್ತು ನಿಮ್ಮ ನೋಂದಣಿ ವಿನಂತಿಯನ್ನು ಅನುಮೋದನೆಗಾಗಿ ಸಲ್ಲಿಸಲಾಗುತ್ತದೆ.
3.2 ಅಂಚೆ ವಿನಂತಿ ಸಲ್ಲಿಕೆ ಹಂತ:
ಹಂತ 1: ಹೋಮ್‌ಪೇಜ್ ನೋಡಲು ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ ಮತ್ತು ನೋಂದಾಯಿಸಿ ಕ್ಲಿಕ್ ಮಾಡಿ. .
ಹಂತ 2: ಇತರರು > ಇ-ರಿಟರ್ನ್ ಮಧ್ಯವರ್ತಿ ಕ್ಲಿಕ್ ಮಾಡಿ.
ಹಂತ 3: ನೋಂದಣಿ ಸ್ಥಿತಿಯನ್ನು ಪರಿಶೀಲಿಸಿ ಆಯ್ಕೆ ಮಾಡಿ.
ಹಂತ 4: ನಿಮ್ಮ PAN/ TAN ನಮೂದಿಸಿ ಮತ್ತು ಮೌಲ್ಯೀಕರಿಸಿ.
ಹಂತ 5: ನೋಂದಣಿ ವಿನಂತಿಯನ್ನು ಸಲ್ಲಿಸುವ ಸಮಯದಲ್ಲಿ ಒದಗಿಸಲಾದ ಮೊಬೈಲ್ ಸಂಖ್ಯೆಗೆ 6 ಅಂಕಿಯ OTP ಯನ್ನು ಕಳುಹಿಸಲಾಗಿದೆ.
ಸೂಚನೆ:
- 15 ನಿಮಿಷಗಳವರೆಗೆ ಮಾತ್ರ OTP ಮಾನ್ಯವಾಗಿರುತ್ತದೆ.
- ಸರಿಯಾದ OTP ನಮೂದಿಸಲು ನೀವು 3 ಪ್ರಯತ್ನಗಳನ್ನು ಹೊಂದಿದ್ದೀರಿ.
- ಸ್ಕ್ರೀನ್‌ನಲ್ಲಿ OTP ಅವಧಿ ಮೀರಿದೆ ಎಂದು ತಿಳಿಸುವ ಲೆಕ್ಕದ ಟೈಮರ್ OTP ಅವಧಿ ಮೀರಿದಾಗ ನಿಮಗೆ ಹೇಳುತ್ತದೆ.
- OTP ಟೈಮರ್ OTP ಅನ್ನು ಪುನರುತ್ಪಾದಿಸಲು ಉಳಿದಿರುವ ಸಮಯವನ್ನು ತೋರಿಸುತ್ತದೆ. OTP ಮರುಕಳುಹಿಸಿ ಮೇಲೆ ಕ್ಲಿಕ್ ಮಾಡಿದಾಗ, ಹೊಸ OTP ಯನ್ನು ರಚಿಸಲಾಗುವುದು.
ERI ನೋಂದಣಿ ವಿನಂತಿಯನ್ನು ಸಲ್ಲಿಸಿದ ನಂತರ, ಈ ಕೆಳಗಿನ ಸಂದರ್ಭಗಳಲ್ಲಿ ಒಂದು ಹೊರಹೊಮ್ಮುತ್ತದೆ. ಇನ್ನಷ್ಟು ತಿಳಿಯಲು ಆಯಾ ಸೆಕ್ಷನ್‌ಗಳಿಗೆ ಹೋಗಿ.
| ಪ್ರಕರಣ | ಸೆಕ್ಷನ್ ಸಂಖ್ಯೆ |
|---|---|
| ನೋಂದಣಿ ಅರ್ಜಿಯನ್ನು ರಿಜಿಸ್ಟ್ರಾರ್ ಅನುಮೋದಿಸಿದಾಗ | ಸೆಕ್ಷನ್ 3.2.1 ಗೆ ಹೋಗಿ |
| ನೋಂದಣಿ ವಿನಂತಿಯು ದೋಷಗಳನ್ನು ಹೊಂದಿರುವಾಗ | ಸೆಕ್ಷನ್ 3.2.2 ಗೆ ಹೋಗಿ |
| ನೋಂದಣಿ ವಿನಂತಿಯನ್ನು ತಿರಸ್ಕರಿಸಿದಾಗ | ಸೆಕ್ಷನ್ 3.2.3 ಗೆ ಹೋಗಿ |
| ನೋಂದಣಿ ವಿನಂತಿಯು ರಿಜಿಸ್ಟ್ರಾರ್ ಬಳಿ ಬಾಕಿ ಇರುವಾಗ | ಸೆಕ್ಷನ್ 3.2.4 ಗೆ ಹೋಗಿ |
3.2.1 ನೋಂದಣಿ ಅರ್ಜಿಯನ್ನು ರಿಜಿಸ್ಟ್ರಾರ್ ಅನುಮೋದಿಸಿದಾಗ
ಹಂತ 1: 6 ಅಂಕಿಯ OTPಯ ಯಶಸ್ವಿ ಮೌಲ್ಯೀಕರಣದ ನಂತರ, ಅನುಮೋದಿತ ಅರ್ಜಿಯು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ. ಮುಂದುವರಿಯಿರಿ ಕ್ಲಿಕ್ ಮಾಡಿ.
ಹಂತ 2: ಪಾಸ್ವರ್ಡ್ ಹೊಂದಿಸಿ ಸ್ಕ್ರೀನ್‌ನಲ್ಲಿ, ನಿರ್ದಿಷ್ಟ ಕ್ಷೇತ್ರಗಳಲ್ಲಿ ಅದೇ ಪಾಸ್‌ವರ್ಡ್ ನಮೂದಿಸಿ ಮತ್ತು ನೋಂದಾಯಿಸಿ ಮೇಲೆ ಕ್ಲಿಕ್ ಮಾಡಿ.
ಸೂಚನೆ:
- ರಿಫ್ರೆಶ್ ಮಾಡಿ ಅಥವಾ ಹಿಂದಿರುಗಿ ಕ್ಲಿಕ್ ಮಾಡಿ.
- ನಿಮ್ಮ ಹೊಸ ಪಾಸ್ವರ್ಡ್ ಅನ್ನು ನಮೂದಿಸುವಾಗ, ಪಾಸ್‌ವರ್ಡ್ ನೀತಿಯ ಬಗ್ಗೆ ಜಾಗರೂಕರಾಗಿರಿ:
- ಇದು ಕನಿಷ್ಠ 8 ಅಕ್ಷರಗಳನ್ನು ಮತ್ತು ಗರಿಷ್ಠ 14 ಅಕ್ಷರಗಳನ್ನು ಹೊಂದಿರಬೇಕು.
- ಇದು ದೊಡ್ಡಕ್ಷರ ಮತ್ತು ಸಣ್ಣ ಅಕ್ಷರಗಳನ್ನು ಒಳಗೊಂಡಿರಬೇಕು.
- ಇದು ಒಂದಾದರೂ ಸಂಖ್ಯೆಯನ್ನು ಹೊಂದಿರಬೇಕು.
- ಇದು ಒಂದಾದರೂ ವಿಶೇಷ ಅಕ್ಷರವನ್ನು ಹೊಂದಿರಬೇಕು (ಉದಾ., @ # $ %).
ಹಂತ 3: ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡಿದೆ, ಮತ್ತು ನಮೂದಿಸಿದ ಪಾಸ್‌ವರ್ಡ್ ಸಿಸ್ಟಮ್‌ನಲ್ಲಿ ಉಳಿಸಲ್ಪಡುತ್ತದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ ಪೇಜ್‍ಗೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ.
3.2.2 ನೋಂದಣಿ ವಿನಂತಿಯು ದೋಷಗಳನ್ನು ಹೊಂದಿದ್ದಾಗ
ಹಂತ 1: ನಮೂದಿಸಿದ OTP ಯ ಯಶಸ್ವಿ ಮೌಲ್ಯೀಕರಣದ ನಂತರದಲ್ಲಿ, ನಿಮ್ಮನ್ನು ದೋಷಯುಕ್ತ ಅರ್ಜಿ ಪೇಜ್‌ಗೆ ಕರೆದೊಯ್ಯಲಾಗುತ್ತದೆ. ದೋಷಗಳನ್ನು ಹೊಂದಿರುವ ದಾಖಲೆಗಳ ಪಟ್ಟಿಯನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಪರಿಶೀಲಿಸದ ದಾಖಲೆಗಳ ಪಟ್ಟಿಯನ್ನು ಲಗತ್ತಿಸಲು ಮರುಸಲ್ಲಿಸಿ ಕ್ಲಿಕ್ ಮಾಡಿ.
ಹಂತ 2: ಪರಿಶೀಲಿಸದ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, ಮುಂದುವರಿಯಿರಿ ಮೇಲೆ ಕ್ಲಿಕ್ ಮಾಡಿ.
ಸೂಚನೆ:
ಲಗತ್ತು PDF ಸ್ವರೂಪದಲ್ಲಿರಬೇಕು ಮತ್ತು 5 MB ಗಾತ್ರಕ್ಕಿಂತ ಕಡಿಮೆ ಇರಬೇಕು.
ಹಂತ 3: ಮುಂದಿನ ಸ್ಕ್ರೀನ್‌ನಲ್ಲಿ ವಿವರಗಳನ್ನು ಪರಿಶೀಲಿಸಿ ಮತ್ತು ಸಲ್ಲಿಸಿ ಕ್ಲಿಕ್ ಮಾಡಿ.
ಹಂತ 4: ನೋಂದಣಿ ವಿನಂತಿಯನ್ನು ಸಲ್ಲಿಸಲಾಗಿದೆ ಎನ್ನುವ ಸ್ಕ್ರೀನ್ ಅನ್ನು ಪ್ರದರ್ಶಿಸಲಾಗುತ್ತದೆ.
3.2.3 ನೋಂದಣಿ ವಿನಂತಿಯನ್ನು ತಿರಸ್ಕರಿಸಿದಾಗ
ಹಂತ 1: ನಮೂದಿಸಿದ OTP ಮೌಲ್ಯೀಕರಿಸಿದ ನಂತರ, ಅರ್ಜಿ ತಿರಸ್ಕರಿಸಲಾಗಿದೆ ಎನ್ನುವ ಸ್ಕ್ರೀನ್ ಅನ್ನು ನಿಮಗೆ ಪ್ರದರ್ಶಿಸಲಾಗುತ್ತದೆ. ನೀವು ERI ಆಗಿ ನೋಂದಣಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಬಯಸಿದರೆ ಹೋಮ್‌ಪೇಜ್‌ಗೆ ಹೋಗಿ ಕ್ಲಿಕ್ ಮಾಡಿ ಮತ್ತು ನೋಂದಣಿ ವಿನಂತಿಯನ್ನು ಸಲ್ಲಿಸಿ.
3.2.4ನೋಂದಣಿ ವಿನಂತಿಯು ರಿಜಿಸ್ಟ್ರಾರ್ ಬಳಿ ಉಳಿದಿರುವಾಗ
ಹಂತ 1: ನಮೂದಿಸಿದ OTP ಮೌಲ್ಯೀಕರಿಸುವಾಗ, ಅನುಮೋದನೆ ಬಾಕಿ ಇರುವ ಅರ್ಜಿಯ ಸ್ಕ್ರೀನ್ ಅನ್ನು ನಿಮಗೆ ಪ್ರದರ್ಶಿಸಲಾಗುತ್ತದೆ.