1. ಅವಲೋಕನ
ಬಾಕಿ ಉಳಿದಿರುವ ಬೇಡಿಕೆ ಪ್ರತಿಕ್ರಿಯೆ ಸೇವೆಯು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಎಲ್ಲಾ ನೋಂದಾಯಿತ ಬಳಕೆದಾರರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿನ ಬಾಕಿ ಇರುವ ಬೇಡಿಕೆಯನ್ನು ವೀಕ್ಷಿಸಲು ಮತ್ತು / ಅಥವಾ ಸಲ್ಲಿಸಲು ಮತ್ತು ಅನ್ವಯವಾಗುವಲ್ಲೆಲ್ಲಾ ಬಾಕಿ ಇರುವ ಬೇಡಿಕೆಯನ್ನು ಪಾವತಿಸಲು ಅನುಮತಿಸುತ್ತದೆ. ಈ ಸೇವೆಯ ಮೂಲಕ, ಈ ಕೆಳಗಿನವರು ಎತ್ತಿರುವ ಬಾಕಿ ತೆರಿಗೆ ಬೇಡಿಕೆಗಳಿಗೆ ನಿಮ್ಮ ಪ್ರಕ್ರಿಯೆಯನ್ನು ನೀವು ಸಲ್ಲಿಸಬಹುದು.
- ಕೇಂದ್ರೀಕೃತ ಸಂಸ್ಕರಣಾ ಕೇಂದ್ರ; ಅಥವಾ
- ತೆರಿಗೆ ಮೌಲ್ಯಮಾಪನ ಅಧಿಕಾರಿ
2. ಈ ಸೇವೆಯನ್ನು ಪಡೆಯಲು ಬೇಕಾದ ಪೂರ್ವಾಪೇಕ್ಷಿತಗಳು
- ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಮಾನ್ಯತೆ ಹೊಂದಿದ ಬಳಕೆದಾರರ ID ಮತ್ತು ಪಾಸ್‌ವರ್ಡ್‌ನೊಂದಿಗೆ ನೋಂದಾಯಿತ ಬಳಕೆದಾರರಿಗೆ
3. ಹಂತ-ಹಂತವಾಗಿ ಮಾರ್ಗದರ್ಶನ
3.1. ಬಾಕಿ ಉಳಿದಿರುವ ಬೇಡಿಕೆಗೆ ಪ್ರತಿಕ್ರಿಯೆ (ತೆರಿಗೆದಾರರಿಗೆ)
ಹಂತ 1: ನಿಮ್ಮ ಬಳಕೆದಾರರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
ಹಂತ 2: ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ, ನಿಮ್ಮ ಬಾಕಿ ಉಳಿದಿರುವ ಬೇಡಿಕೆಗಳ ಸೂಚಿ ಪಟ್ಟಿಯನ್ನು ವೀಕ್ಷಿಸಲು ಬಾಕಿ ಉಳಿದಿರುವ ಕ್ರಮಗಳು > ಬಾಕಿ ಉಳಿದಿರುವ ಬೇಡಿಕೆ ಬಗ್ಗೆ ಪ್ರತಿಕ್ರಿಯೆಯ ಮೇಲೆ ಕ್ಲಿಕ್ ಮಾಡಿ.
ಸೂಚನೆ: ನೀವು ಬೇಡಿಕೆಯನ್ನು ಪಾವತಿ ಮಾಡಲು ಬಯಸಿದರೆ, ಬೇಡಿಕೆಯನ್ನು ಪಾವತಿ ಮಾಡಲು ಈಗಲೇ ಪಾವತಿ ಮಾಡಿ ಮೇಲೆ ಕ್ಲಿಕ್ ಮಾಡಬಹುದು. ನೀವು ತೆರಿಗೆ ಪಾವತಿ ಮಾಡಬೇಕಾದಲ್ಲಿ ನಿಮ್ಮನ್ನು ತೆರಿಗೆಯ ಇ-ಪಾವತಿ ಪುಟಕ್ಕೆ ಕರೆದೊಯ್ಯಲಾಗುತ್ತದೆ.
ಬಾಕಿ ಉಳಿದಿರುವ ಬೇಡಿಕೆಯ ಪುಟದಲ್ಲಿ ಪ್ರತಿಕ್ರಿಯೆಯಾಗಿ ನೀವು "ಇತ್ತೀಚಿನ ಸೆಕ್ಷನ್ 245 ನೋಟಿಸ್" ಅಥವಾ "ಹಿಂದೆ ನೀಡಲಾದ ಸೆಕ್ಷನ್ 245 ನೋಟಿಸ್" ಬಟನ್‌ಗಳನ್ನು ಕ್ಲಿಕ್ ಮಾಡುವ ಮೂಲಕ ಇತ್ತೀಚಿನ ಮತ್ತು ಹಿಂದಿನ ಸೆಕ್ಷನ್ 245 ನೋಟಿಸ್‌ಗಳನ್ನು ಡೌನ್‌ಲೋಡ್ ಮಾಡಬಹುದು."
ನೀವು ಈ ಹಿಂದೆ ನೀಡಲಾದ ನೋಟಿಸ್‌ಗಳನ್ನು ಡೌನ್‌ಲೋಡ್ ಮಾಡಲು ಬಯಸಿದರೆ, ಅದರಲ್ಲಿ 245 ನೋಟಿಸ್ ನೀಡಲಾದ ಹಣಕಾಸಿನ ವರ್ಷವನ್ನು ಆಯ್ಕೆ ಮಾಡಿ, ಮತ್ತು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಬಾಕಿಯಿರುವ ಮೊತ್ತದ ಪುಟದಲ್ಲಿ ಪ್ರತಿಕ್ರಿಯೆ ನೀಡಲು, ಬಾಕಿ ಉಳಿದಿರುವ ಬೇಡಿಕೆಗೆ ಪ್ರತಿಕ್ರಿಯೆಯನ್ನು ಸಲ್ಲಿಸಲು ಪ್ರತಿಕ್ರಿಯೆನ್ನು ಸಲ್ಲಿಸಿ ಕ್ಲಿಕ್ ಮಾಡಿ.
ಸನ್ನಿವೇಶದ ಆಧಾರದ ಮೇಲೆ, ನೀವು ಸಂಬಂಧಿತ ಸೆಕ್ಷನ್‌ಗೆ ಹೋಗಬಹುದು:
| ಬೇಡಿಕೆಯು ಸರಿಯಾಗಿದ್ದು, ನೀವು ಈಗಾಗಲೇ ಪಾವತಿ ಮಾಡದಿದ್ದರೆ | ಸೆಕ್ಷನ್ 3.1(A) ಅನ್ನು ನೋಡಿ |
| ಬೇಡಿಕೆ ಸರಿಯಾಗಿದ್ದು, ನೀವು ಈಗಾಗಲೇ ಪಾವತಿಸಿದ್ದರೆ | ಸೆಕ್ಷನ್ 3.1(B) ಅನ್ನು ನೋಡಿ |
| ನೀವು ಬೇಡಿಕೆಯನ್ನು ಅಸಮ್ಮತಿಸಿದರೆ (ಪೂರ್ಣವಾಗಿ ಅಥವಾ ಭಾಗಶಃವಾಗಿ) | ಸೆಕ್ಷನ್ 3.1[C) ಅನ್ನು ನೋಡಿ |
ಸೂಚನೆ: ನೀವು ಸಲ್ಲಿಸಿರುವ ಎಲ್ಲಾ ಪ್ರತಿಕ್ರಿಯೆಗಳನ್ನು ವೀಕ್ಷಿಸಲು, ಬಾಕಿ ಮೊತ್ತದ ಬಗ್ಗೆ ಪ್ರತಿಕ್ರಿಯೆ ಪುಟದಲ್ಲಿ, ಒಂದು ನಿರ್ದಿಷ್ಟ ಬೇಡಿಕೆಯ ಮುಂದೆ ವೀಕ್ಷಿಸಿ ಅನ್ನು ಕ್ಲಿಕ್ ಮಾಡಿ.
3.1 (A) ಬೇಡಿಕೆ ಸರಿಯಾಗಿದ್ದರೆ ಮತ್ತು ನೀವು ಈಗಾಗಲೇ ಪಾವತಿಸದಿದ್ದರೆ ಪ್ರತಿಕ್ರಿಯೆಯನ್ನು ಸಲ್ಲಿಸಿ
ಹಂತ 1: ಬಾಕಿ ಮೊತ್ತದ ಪ್ರತಿಕ್ರಿಯೆಪುಟದಲ್ಲಿ, ಬೇಡಿಕೆ ಸರಿಯಾಗಿದೆಎಂಬ ಆಯ್ಕೆಯನ್ನು ಆರಿಸಿ ಹಾಗೂ ಹಕ್ಕು ನಿರಾಕರಣೆಒಮ್ಮೆ ನೀವು ಬೇಡಿಕೆ ಸರಿಯಾಗಿದೆ ಎಂಬ ಪ್ರತಿಕ್ರಿಯೆಯನ್ನು ಸಲ್ಲಿಸಿದ ಮೇಲೆ ಆ ನಂತರ ನೀವು ಬೇಡಿಕೆಯನ್ನು ಅಸಮ್ಮತಿಸಲು ಸಾಧ್ಯವಿಲ್ಲ.
ಹಂತ 2: ಅದೇ ಪುಟದಲ್ಲಿ, ಇನ್ನೂ ಪಾವತಿಸಿಲ್ಲ ಎಂಬ ಆಯ್ಕೆಯನ್ನು ಆರಿಸಿ ಮತ್ತು ಈಗಲೇ ಪಾವತಿಸಿಮೇಲೆ ಕ್ಲಿಕ್ ಮಾಡಿ.
ಸೂಚನೆ:ತೆರಿಗೆ ಇ-ಪಾವತಿಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ, ಅಲ್ಲಿ ನೀವು ತೆರಿಗೆ ಪಾವತಿ ಮಾಡಬಹುದು.
ಪಾವತಿಯು ಯಶಸ್ವಿಯಾದ ಮೇಲೆ, ವಹಿವಾಟಿನ ID ಜೊತೆಗೆ ಯಶಸ್ಸಿನ ಸಂದೇಶವನ್ನು ಡಿಸ್‌ಪ್ಲೇ ಮಾಡಲಾಗುತ್ತದೆ. ದಯವಿಟ್ಟು, ಭವಿಷ್ಯದ ಉಲ್ಲೇಖಕ್ಕಾಗಿ ವಹಿವಾಟಿನ ID ಯ ಟಿಪ್ಪಣಿ ಇರಿಸಿಕೊಳ್ಳಿ.
3.1 (B) ಬೇಡಿಕೆ ಸರಿಯಾಗಿದ್ದರೆ ಮತ್ತು ನೀವು ಈಗಾಗಲೇ ಪಾವತಿಸಿದ್ದರೆ ಪ್ರತಿಕ್ರಿಯೆಯನ್ನು ಸಲ್ಲಿಸಿ
ಹಂತ 1: ಬಾಕಿಯಿರುವ ಮೊತ್ತದ ಪ್ರತಿಕ್ರಿಯೆ ಪುಟದಲ್ಲಿ, ಬೇಡಿಕೆ ಸರಿಯಾಗಿದೆ ಎಂಬ ಆಯ್ಕೆಯನ್ನು ಆರಿಸಿ ಮತ್ತು ಹಕ್ಕುನಿರಾಕರಣೆ ಒಮ್ಮೆ ನೀವು ಬೇಡಿಕೆ ಸರಿಯಾಗಿದೆ ಎಂಬ ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ, ನೀವು ಬೇಡಿಕೆಯನ್ನು ಅಸಮ್ಮತಿಸಲು ಸಾಧ್ಯವಿಲ್ಲ.
ಹಂತ 2: ಹೌದು, ಈಗಾಗಲೇ ಪಾವತಿಸಲಾಗಿದೆ ಮತ್ತು ಚಲನ್ CIN ಅನ್ನು ಹೊಂದಿದೆ ಎಂಬುದನ್ನು ಆರಿಸಿ.ಚಲನ್ ವಿವರಗನ್ನು ಸೇರಿಸಿ ಮೇಲೆ ಕ್ಲಿಕ್ ಮಾಡಿ.
ಹಂತ 3: ಚಲನ್ ವಿವರಗಳನ್ನು ಸೇರಿಸಲು, ಪಾವತಿಯ ವಿಧ (ಮೈನರ್ ಹೆಡ್)ವನ್ನು ಆಯ್ಕೆಮಾಡಿ, ಚಲನ್ ಮೊತ್ತ, BSR ಕೋಡ್, ಕ್ರಮ ಸಂಖ್ಯೆ ಯನ್ನು ನಮೂದಿಸಿ ಮತ್ತು ಪಾವತಿಯ ದಿನಾಂಕ ವನ್ನು ಆಯ್ಕೆ ಮಾಡಿ.ಚಲನ್ (PDF) ಪ್ರತಿಯನ್ನು ಅಪ್ಲೋಡ್ ಮಾಡಲು ಅಟ್ಯಾಚ್ಮೆಂಟ್ಅನ್ನು ಕ್ಲಿಕ್ ಮಾಡಿ ಮತ್ತು ಸೇವ್ ಮಾಡಿಅನ್ನು ಕ್ಲಿಕ್ ಮಾಡಿ.
ಸೂಚನೆ:
- ಒಂದು ಅಟ್ಯಾಚ್ಮೆಂಟ್‌ನ ಗರಿಷ್ಠ ಗಾತ್ರ 5MB ಇರಬೇಕು.
ಹಂತ 4: ಚಲನ್ ವಿವರಗಳನ್ನು ನಮೂದಿಸಿದ ನಂತರ, ಪ್ರತಿಕ್ರಿಯೆಯನ್ನು ಸಲ್ಲಿಸಲು ಮತ್ತು ನಮೂದಿಸಿದ ಚಲನ್ ವಿವರಗಳನ್ನು ಸಲ್ಲಿಸಲು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.
ಯಶಸ್ವಿ ಮೌಲ್ಯೀಕರಣದ ನಂತರ, ವಹಿವಾಟಿನ ID ಜೊತೆಗೆ ಯಶಸ್ವಿ ಸಂದೇಶವನ್ನು ಡಿಸ್‌ಪ್ಲೇ ಮಾಡಲಾಗುತ್ತದೆ. ದಯವಿಟ್ಟು, ಭವಿಷ್ಯದ ಉಲ್ಲೇಖಕ್ಕಾಗಿ ವಹಿವಾಟಿನ ID ಯ ಟಿಪ್ಪಣಿ ಇರಿಸಿಕೊಳ್ಳಿ.
3.1 (C) ನೀವು ಬೇಡಿಕೆಯನ್ನು ಅಸಮ್ಮತಿಸಿದರೆ ಪ್ರತಿಕ್ರಿಯೆ ಸಲ್ಲಿಸಿ (ಪೂರ್ಣವಾಗಿ ಅಥವಾ ಭಾಗಶಃವಾಗಿ)
ಹಂತ 1: ಬಾಕಿಯಿರುವ ಮೊತ್ತದ ಪ್ರತಿಕ್ರಿಯೆ ಪುಟದಲ್ಲಿ, ಬೇಡಿಕೆಯ ಮೇಲೆ ಅಸಮ್ಮತಿಯಿದೆ (ಪೂರ್ಣವಾಗಿ ಅಥವಾ ಭಾಗಶಃವಾಗಿ)ಎಂಬ ಆಯ್ಕೆಯನ್ನು ಆರಿಸಿ. ಕಾರಣಗಳನ್ನು ಸೇರಿಸಿ ಮೇಲೆ ಕ್ಲಿಕ್ ಮಾಡಿ
ಹಂತ 2: ನಿಮ್ಮ ಭಿನ್ನಾಭಿಪ್ರಾಯಕ್ಕೆ ಕಾರಣವನ್ನು (ಕಾರಣಗಳನ್ನು) ಆಯ್ಕೆಮಾಡಲು, ಆಯ್ಕೆಗಳಿಂದ ಆರಿಸಿ ಮತ್ತು ಅರ್ಜಿ ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ. (ನೀವು ಒಂದು ಅಥವಾ ಹೆಚ್ಚಿನ ಆಯ್ಕೆಗಳನ್ನು ಆಯ್ಕೆ ಮಾಡಬಹುದು.)

ಹಂತ 3: ನಿಮ್ಮ ಅಸಮ್ಮತಿಗೆ ಸೂಕ್ತ ಕಾರಣಗಳನ್ನು ಆಯ್ಕೆ ಮಾಡಿದ ನಂತರ, ಬಾಕಿ ಮೊತ್ತದ ಪ್ರತಿಕ್ರಿಯೆ ಪುಟದಲ್ಲಿ ನೀವು ಹಂತ 2 ರಲ್ಲಿ ಪಟ್ಟಿ ಮಾಡಿರುವ ಪ್ರತಿಯೊಂದು ಕಾರಣವನ್ನು ಆಯ್ಕೆ ಮಾಡಿ ಮತ್ತು ಪ್ರತಿ ಕಾರಣಕ್ಕೆ ಸೂಕ್ತ ವಿವರಗಳನ್ನು ನೀಡಿ.
ಸೂಚನೆ: ನೀವು ವಿವರಗಳನ್ನು ಸಲ್ಲಿಸಿರುವ ಕಾರಣಗಳ ಮುಂದೆ ಪೂರ್ಣಗೊಂಡಿದೆ ಎಂದು ಸ್ಥಿತಿಯನ್ನು ತೋರಿಸಲಾಗುತ್ತದೆ.
ಹಂತ 4: ಹಂತ 2 ರಲ್ಲಿ ಪಟ್ಟಿ ಮಾಡಲಾದ ಎಲ್ಲಾ ಕಾರಣಗಳಿಗಾಗಿ ವಿವರಗಳನ್ನು ಸಲ್ಲಿಸಿದ ನಂತರ, ಪಾವತಿ ಸಾರಾಂಶದಲ್ಲಿ ಲಭ್ಯವಿರುವ ಉಳಿದ ಬಾಕಿ ಮೊತ್ತವನ್ನು ಪಾವತಿಸಲು ಈಗಲೇ ಪಾವತಿ ಮಾಡಿ ಅನ್ನು ಕ್ಲಿಕ್ ಮಾಡಿ (ನೀವು ಭಾಗಶಃ ಅಸಮ್ಮತಿ ತೋರಿದ್ದಲ್ಲಿ).
ಸೂಚನೆ:ತೆರಿಗೆ ಇ-ಪಾವತಿಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ, ಅಲ್ಲಿ ನೀವು ತೆರಿಗೆ ಪಾವತಿ ಮಾಡಬಹುದು.
ಹಂತ 5: ಪಾವತಿ ಮಾಡಿದ ನಂತರ, ನಿಮ್ಮನ್ನು ಬಾಕಿ ಇರುವ ಮೊತ್ತದ ಪ್ರತಿಕ್ರಿಯೆಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ, ನಿಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.
ಹಂತ 6: ನಿಮ್ಮ ಸಲ್ಲಿಕೆಯನ್ನು ಖಚಿತಪಡಿಸಲುದೃಢೀಕರಿಸಿ ಮೇಲೆ ಕ್ಲಿಕ್ ಮಾಡಿ.
ಯಶಸ್ವಿ ಮೌಲ್ಯೀಕರಣದ ನಂತರ, ವಹಿವಾಟಿನ ID ಜೊತೆಗೆ ಯಶಸ್ವಿ ಸಂದೇಶವನ್ನು ಡಿಸ್‌ಪ್ಲೇ ಮಾಡಲಾಗುತ್ತದೆ. ದಯವಿಟ್ಟು, ಭವಿಷ್ಯದ ಉಲ್ಲೇಖಕ್ಕಾಗಿ ವಹಿವಾಟಿನ ID ಯ ಟಿಪ್ಪಣಿ ಇರಿಸಿಕೊಳ್ಳಿ.