1. ಅವಲೋಕನ
ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಗಳಿಸಿದ ಒಟ್ಟು ಆದಾಯದ ಮೇಲೆ ಒಟ್ಟು ಆದಾಯ ತೆರಿಗೆ ಹೊಣೆಗಾರಿಕೆಯನ್ನು ಲೆಕ್ಕಹಾಕಲಾಗುತ್ತದೆ. ಆದಾಗ್ಯೂ, ನಿರ್ದಿಷ್ಟ ಆರ್ಥಿಕ ವರ್ಷದ ಆದಾಯವು ಸಂಬಳದ ಸ್ವರೂಪದಲ್ಲಿ ಮುಂಗಡ ಅಥವಾ ಬಾಕಿ ಪಾವತಿಯನ್ನು ಒಳಗೊಂಡಿದ್ದರೆ, ಆದಾಯ ತೆರಿಗೆ ಕಾಯ್ದೆಯು ತೆರಿಗೆ ಭಾದ್ಯತೆಯ ಹೆಚ್ಚುವರಿಯಾದ ಹೊರೆಗೆ ಪರಿಹಾರವನ್ನು (ಸೆಕ್ಷನ್ 89ರ ಅಡಿಯಲ್ಲಿ) ಅನುಮತಿಸುತ್ತದೆ.
ಅಂತಹ ರಿಯಾಯಿತಿಯನ್ನು ಕ್ಲೈಮ್ ಮಾಡಲು ಫಾರ್ಮ್ 10E ಅನ್ನು ಸಲ್ಲಿಸಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಫಾರ್ಮ್ 10E ಅನ್ನು ಸಲ್ಲಿಸುವುದು ಸೂಕ್ತವಾಗಿದೆ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಸಲ್ಲಿಸಲು ಈ ಫಾರ್ಮ್ ಲಭ್ಯವಿದೆ. ಫಾರ್ಮ್ 10E ಅನ್ನು ಸಲ್ಲಿಸದಿದ್ದರೆ ಮತ್ತು ತೆರಿಗೆದಾರರು ಸೆಕ್ಷನ್ 89ರ ಅಡಿಯಲ್ಲಿ ಪರಿಹಾರವನ್ನು ಕ್ಲೈಮ್ ಮಾಡಿದರೆ, ITR ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ ಆದರೆ ಕ್ಲೈಮ್ ಮಾಡಿದ ಪರಿಹಾರವನ್ನು ಅನುಮತಿಸಲಾಗುವುದಿಲ್ಲ. ಸಂಬಳದ ಅಡಿಯಲ್ಲಿ ಬಾಕಿ/ಮುಂಗಡ ಆದಾಯದ ಮೇಲೆ ತೆರಿಗೆ ಪರಿಹಾರವನ್ನು ಪಡೆಯಲು ಫಾರ್ಮ್ 10E ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಫಾರ್ಮ್ 10E ಅನ್ನು ಆನ್‌ಲೈನ್ ವಿಧಾನದ ಮೂಲಕ ಮಾತ್ರ ಸಲ್ಲಿಸಬಹುದು.
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
- ನೀವು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರಾಗಿರಬೇಕು
- ತೆರಿಗೆದಾರರ PAN ಸ್ಥಿತಿ "ಸಕ್ರಿಯ" ಆಗಿರಬೇಕು
3. ಫಾರ್ಮ್ ಬಗ್ಗೆ
3.1 ಉದ್ದೇಶ
ಆದಾಯ ತೆರಿಗೆ ಕಾಯಿದೆಯು ಸೆಕ್ಷನ್ 89 ರ ಅಡಿಯಲ್ಲಿ ತೆರಿಗೆದಾರರಿಗೆ ಯಾವುದೇ ಸಂಬಳ ಅಥವಾ ಲಾಭಕ್ಕಾಗಿ ತೆರಿಗೆದಾರರು ಒಂದು ಹಣಕಾಸು ವರ್ಷದಲ್ಲಿ ಮುಂಚಿತವಾಗಿ ಪಡೆದ ಅಥವಾ ಬಾಕಿ ಇರುವ ಸಂಬಳ ಅಥವಾ ಕುಟುಂಬ ಪಿಂಚಣಿಗೆ ಬದಲಾಗಿ ಪರಿಹಾರವನ್ನು ಒದಗಿಸುತ್ತದೆ. ಮೌಲ್ಯಮಾಪನ ಮಾಡಿದ ಒಟ್ಟು ಆದಾಯದ ಮೇಲಿನ ದರವು ಮೌಲ್ಯಮಾಪನವಾಗಬೇಕಾಗಿದ್ದಒಟ್ಟು ಆದಾಯದ ಮೇಲಿನ ದರಕ್ಕಿಂತ ಹೆಚ್ಚು ಇರುವುದರಿಂದ ಈ ಪರಿಹಾರವನ್ನು ನೀಡಲಾಗುತ್ತದೆ. ಫಾರ್ಮ್ 10E ಯಲ್ಲಿ ನಿಮ್ಮ ಆದಾಯದ ವಿವರಗಳನ್ನು ನೀಡುವ ಮೂಲಕ ಅಂತಹ ಪರಿಹಾರವನ್ನು ಪಡೆಯಬಹುದು.
3.2 ಇದನ್ನು ಯಾರು ಬಳಸಬಹುದು?
ಎಲ್ಲಾ ನೋಂದಾಯಿತ ಪ್ರತ್ಯೇಕ ಬಳಕೆದಾರರು ಇ-ಫೈಲಿಂಗ್ ಪೋರ್ಟಲ್‌ನಲ್ಲಿ, ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 89 ರ ಪ್ರಕಾರದ ಹಾಗೆ ಪರಿಹಾರವನ್ನು ಪಡೆಯಲು ಅವರ ಆದಾಯದ ವಿವರಗಳನ್ನು ಫಾರ್ಮ್ 10E ನಲ್ಲಿ ಒದಗಿಸಬಹುದು.
3.3 ಫಾರ್ಮ್ ಕುರಿತು ಕಿರುನೋಟ
ಫಾರ್ಮ್ 10E ನಲ್ಲಿ ಏಳು ಭಾಗಗಳಿವೆ:
- ಅನುಬಂಧ I - ಬಾಕಿ ವೇತನ / ಬಾಕಿಗಳಲ್ಲಿ ಸ್ವೀಕರಿಸಲಾದ ಕುಟುಂಬ ಪಿಂಚಣಿ
- ಅನುಬಂಧ I - ಮುಂಚಿತವಾಗಿ ಸ್ವೀಕರಿಸಲಾದ ಸಂಬಳ / ಕುಟುಂಬ ಪಿಂಚಣಿ
- ಅನುಬಂಧ II ಮತ್ತು IIA - ಹಿಂದಿನ ಸೇವೆಗಳಿಗೆ ಸಂಬಂಧಿಸಿದಂತೆ ಗ್ರಾಚ್ಯುಟಿಯ ಸ್ವರೂಪದಲ್ಲಿನ ಪಾವತಿ
- ಅನುಬಂಧ III - 3 ವರ್ಷಗಳಿಗಿಂತ ಹೆಚ್ಚಿಲ್ಲದ ನಿರಂತರ ಸೇವೆಯ ನಂತರ ಅಥವಾ ಉದ್ಯೋಗದ ಅವಧಿಯ ಅವಧಿ ಮೀರದ ಭಾಗವು 3 ವರ್ಷಗಳಿಗಿಂತ ಕಡಿಮೆಯಿಲ್ಲದಿರುವಾಗ ಉದ್ಯೋಗದ ಮುಕ್ತಾಯಕ್ಕೆ ಸಂಬಂಧಿಸಿದಂತೆ ಉದ್ಯೋಗದಾತ ಅಥವಾ ಹಿಂದಿನ ಉದ್ಯೋಗದಾತರಿಂದ ಪರಿಹಾರದ ಸ್ವರೂಪದಲ್ಲಿ ಪಾವತಿ.
- ಅನುಬಂಧ IV - ಪಿಂಚಣಿಯ ಪರಿವರ್ತನೆ
ಸ್ವೀಕರಿಸಿದ ಮೊತ್ತದ ಸ್ವರೂಪವನ್ನು ಆಧರಿಸಿ, ಫಾರ್ಮ್ 10E ಸಲ್ಲಿಸುವಾಗ ಸೂಕ್ತವಾದ ಅನುಬಂಧವನ್ನು ಆಯ್ಕೆ ಮಾಡಬೇಕಾಗುತ್ತದೆ.
4. ಪ್ರತಿ ಹಂತದ ಮಾರ್ಗದರ್ಶನ
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ.
ಹಂತ 2: ಬಳಕೆದಾರ ID (PAN) ಮತ್ತು ಪಾಸ್‌ವರ್ಡ್ ನಮೂದಿಸಿರಿ.
ಹಂತ 3 : ಇ-ಫೈಲ್ >ಆದಾಯ ತೆರಿಗೆ ಫಾರ್ಮ್‌ಗಳು > ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿರಿ
ಹಂತ 4 : ಫಾರ್ಮ್ 10E ಯನ್ನು ಆಯ್ಕೆ ಮಾಡಿರಿ/ಹುಡುಕಿರಿ
ಹಂತ 5: AY ಆಯ್ಕೆಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 6: ಪ್ರಾರಂಭಿಸೋಣ ಕ್ಲಿಕ್ ಮಾಡಿ
ಹಂತ 7 : ಆದಾಯದ ವಿವರಗಳಿಗೆ ಸಂಬಂಧಿಸಿದ ಅನ್ವಯವಾಗುವ ಐಟಂಗಳನ್ನು ಆಯ್ಕೆ ಮಾಡಿ
ಹಂತ 8: ವೈಯಕ್ತಿಕ ಮಾಹಿತಿಯನ್ನು ದೃಢೀಕರಿಸಿ ಮತ್ತು ಉಳಿಸಿ ಕ್ಲಿಕ್ ಮಾಡಿ.
ಗಮನಿಸಿ: ದಯವಿಟ್ಟು ವಸತಿ ಸ್ಥಿತಿ ಸೇರಿದಂತೆ "ನನ್ನ ಪ್ರೊಫೈಲ್" ವಿಭಾಗದ ಅಡಿಯಲ್ಲಿ ಎಲ್ಲಾ ಕಡ್ಡಾಯ ವಿವರಗಳು ಪೂರ್ಣಗೊಂಡಿವೆ ಎಂದು ಖಚಿತಪಡಿಸಿಕೊಳ್ಳಿ. "ನನ್ನ ಪ್ರೊಫೈಲ್" ಹೈಪರ್ಲಿಂಕ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಸಂಪರ್ಕ ವಿವರಗಳು ಮತ್ತು ವಸತಿ ಸ್ಥಿತಿಯನ್ನು ನೀವು ಬದಲಾಯಿಸಬಹುದು.
ಹಂತ 9.1.a : ವೈಯಕ್ತಿಕ ಮಾಹಿತಿ ಟ್ಯಾಬ್ ಈಗ ದೃಢೀಕರಿಸಲ್ಪಟ್ಟಿದೆ, ಬಾಕಿ ವೇತನ/ಕುಟುಂಬ ಪಿಂಚಣಿ (ನಿಮಗೆ ಅನ್ವಯಿಸಿದರೆ) ಮೇಲೆ ಕ್ಲಿಕ್ ಮಾಡಿ
ಹಂತ 9.1. b : ಈ ಭಾಗವು ಬಾಕಿಯಲ್ಲಿ ಪಡೆದ ಸಂಬಳ / ಕುಟುಂಬ ಪಿಂಚಣಿಯ ಸಾಮಾನ್ಯ ವಿವರಗಳನ್ನು ಒಳಗೊಂಡಿರುತ್ತದೆ.
ವಿವರಗಳನ್ನು ನಮೂದಿಸಿ ಮತ್ತು ಉಳಿಸಿಅನ್ನು ಕ್ಲಿಕ್ ಮಾಡಿ
"ಬಾಕಿಯಲ್ಲಿ ಸ್ವೀಕರಿಸಿದ ಸಂಬಳ/ಕುಟುಂಬ ಪಿಂಚಣಿ" ಕ್ಷೇತ್ರದಲ್ಲಿನ ವಿವರಗಳನ್ನು ಕೋಷ್ಟಕ A ನಲ್ಲಿ ಒದಗಿಸಲಾದ ಮಾಹಿತಿಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ ಮತ್ತು ಕ್ರಮ ಸಂಖ್ಯೆ 6 ನಂತರ ಸೇರಿಸಲಾಗುತ್ತದೆ. "ಹಿಂದಿನ ವಿವಿಧ ವರ್ಷಗಳಿಗೆ ಸಂಬಂಧಿಸಿದ ಬಾಕಿಯಲ್ಲಿ ಪಡೆದ ಸಂಬಳ/ಕುಟುಂಬ ಪಿಂಚಣಿಯ ವಿವರಗಳು".
ಹಂತ 9.2.a : ಬಾಕಿ ವೇತನ ಟ್ಯಾಬ್ ಈಗ ದೃಢೀಕರಿಸಲ್ಪಟ್ಟಿದೆ, ಮುಂಗಡ ವೇತನದ ಮೇಲೆ ಕ್ಲಿಕ್ ಮಾಡಿ (ನಿಮಗೆ ಅನ್ವಯಿಸಿದರೆ)
ಹಂತ 9.2.b: ಈ ಭಾಗವು ಮುಂಚಿತವಾಗಿ ಪಡೆದ ಸಂಬಳ / ಕುಟುಂಬ ಪಿಂಚಣಿಯ ಸಾಮಾನ್ಯ ವಿವರಗಳನ್ನು ಒಳಗೊಂಡಿದೆ.
ವಿವರಗಳನ್ನು ನಮೂದಿಸಿ ಮತ್ತು ಉಳಿಸಿಅನ್ನು ಕ್ಲಿಕ್ ಮಾಡಿ
"ಮುಂಗಡವಾಗಿ ಸ್ವೀಕರಿಸಲಾದ ಸಂಬಳ" ಕ್ಷೇತ್ರದಲ್ಲಿನ ವಿವರಗಳನ್ನು ಕೋಷ್ಟಕ A ನಲ್ಲಿ ಒದಗಿಸಲಾದ ಮಾಹಿತಿಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ ಮತ್ತು ಕ್ರಮ ಸಂಖ್ಯೆ 6 ನಂತರ ಸೇರಿಸಲಾಗುತ್ತದೆ. "ಹಿಂದಿನ ವಿವಿಧ ವರ್ಷಗಳಿಗೆ ಸಂಬಂಧಿಸಿದಂತೆ ಮುಂಚಿತವಾಗಿ ಪಡೆದ ಸಂಬಳ/ಕುಟುಂಬ ಪಿಂಚಣಿಯ ವಿವರಗಳು".
ಹಂತ 9.3.a: ಮುಂಗಡ ವೇತನ ಟ್ಯಾಬ್ ಈಗ ದೃಢೀಕರಿಸಲ್ಪಟ್ಟಿದೆ, ಗ್ರಾಚ್ಯುಟಿ ಮೇಲೆ ಕ್ಲಿಕ್ ಮಾಡಿ (ನಿಮಗೆ ಅನ್ವಯಿಸಿದರೆ)
ಹಂತ 9.3.b : ಈ ಭಾಗವು ಹಿಂದಿನ ಸೇವೆಗಳಿಗೆ ಸಂಬಂಧಿಸಿದಂತೆ ಗ್ರಾಚ್ಯುಟಿಯ ಸ್ವರೂಪದಲ್ಲಿ ಪಾವತಿಯ ಸಾಮಾನ್ಯ ವಿವರಗಳನ್ನು ಒಳಗೊಂಡಿದೆ.
ವಿವರಗಳನ್ನು ನಮೂದಿಸಿ ಮತ್ತು ಉಳಿಸಿಅನ್ನು ಕ್ಲಿಕ್ ಮಾಡಿ
ಹಂತ 9.4.a: ಗ್ರಾಚ್ಯುಟಿ ಟ್ಯಾಬ್ ಈಗ ದೃಢೀಕರಿಸಲ್ಪಟ್ಟಿದೆ, ಉದ್ಯೋಗ ಮುಕ್ತಾಯದ ಮೇಲೆ ಪರಿಹಾರದ ಟ್ಯಾಬ್ ಮೇಲೆ ಕ್ಲಿಕ್ ಮಾಡಿ (ನಿಮಗೆ ಅನ್ವಯಿಸಿದರೆ)
ಹಂತ 9.4.b : ಈ ಭಾಗವು 3 ವರ್ಷಗಳಿಗಿಂತ ಹೆಚ್ಚಿಲ್ಲದ ನಿರಂತರ ಸೇವೆಯ ನಂತರ ಅಥವಾ ಉದ್ಯೋಗದ ಅವಧಿಯ ಅವಧಿ ಮೀರದ ಭಾಗವು 3 ವರ್ಷಗಳಿಗಿಂತ ಕಡಿಮೆಯಿಲ್ಲದಿರುವಾಗ ಉದ್ಯೋಗದ ಮುಕ್ತಾಯಕ್ಕೆ ಸಂಬಂಧಿಸಿದಂತೆ ಉದ್ಯೋಗದಾತ ಅಥವಾ ಹಿಂದಿನ ಉದ್ಯೋಗದಾತರಿಂದ ಪರಿಹಾರದ ಸ್ವರೂಪದಲ್ಲಿ ಪಾವತಿಯ ಸಾಮಾನ್ಯ ವಿವರಗಳನ್ನು ಒಳಗೊಂಡಿರುತ್ತದೆ.
ಉದ್ಯೋಗ ಮುಕ್ತಾಯದ ನಂತರ ಪರಿಹಾರದ ಟ್ಯಾಬ್ ವಿವರಗಳನ್ನು ನಮೂದಿಸಿ ಮತ್ತು ಉಳಿಸಿಅನ್ನು ಕ್ಲಿಕ್ ಮಾಡಿ
ಹಂತ 9.5.a : ಉದ್ಯೋಗ ಮುಕ್ತಾಯದ ಮೇಲೆ ಪರಿಹಾರದ ಟ್ಯಾಬ್ ಅನ್ನು ಈಗ ದೃಢೀಕರಿಸಲಾಗಿದೆ, ಪಿಂಚಣಿ ಪರಿವರ್ತನೆಯ ಟ್ಯಾಬ್‌ನ ಮೇಲೆ ಕ್ಲಿಕ್ ಮಾಡಿ (ನಿಮಗೆ ಅನ್ವಯಿಸಿದರೆ)
ಹಂತ 9.5.b: ಈ ಭಾಗವು ಪಿಂಚಣಿಯ ಪರಿವರ್ತನೆಯಲ್ಲಿ ಪಾವತಿಯ ಸಾಮಾನ್ಯ ವಿವರಗಳನ್ನು ಒಳಗೊಂಡಿದೆ.
ಪಿಂಚಣಿ ಪರಿವರ್ತನೆಯ ಟ್ಯಾಬ್‌ನ ವಿವರಗಳನ್ನು ನಮೂದಿಸಿ ಮತ್ತು ಉಳಿಸಿ ಕ್ಲಿಕ್ ಮಾಡಿ
ಹಂತ 10: ಪಿಂಚಣಿ ಪರಿವರ್ತನೆಯ ಟ್ಯಾಬ್ ಈಗ ದೃಢೀಕರಿಸಲ್ಪಟ್ಟಿದೆ, ಪರಿಶೀಲನೆ ಟ್ಯಾಬ್ಅನ್ನು ಕ್ಲಿಕ್ ಮಾಡಿ
ಹಂತ 11 : ಚೆಕ್ ಬಾಕ್ಸ್ಅನ್ನು ಆಯ್ಕೆ ಮಾಡಿ, ಸ್ಥಳ ವನ್ನು ನಮೂದಿಸಿ ಮತ್ತು ಉಳಿಸಿಅನ್ನು ಕ್ಲಿಕ್ ಮಾಡಿ
ಹಂತ 12: ಎಲ್ಲಾ ಟ್ಯಾಬ್‌ಗಳನ್ನು ಈಗ ದೃಢೀಕರಿಸಲಾಗಿದೆ. ಪ್ರಿವ್ಯೂಮೇಲೆ ಕ್ಲಿಕ್ ಮಾಡಿ
ಹಂತ 13 : ಇದು ಫಾರ್ಮ್‌ನ ಪ್ರಿವ್ಯೂ. ಪ್ರಿವ್ಯೂನಲ್ಲಿ ವಿವರಗಳು ಸರಿಯಾಗಿದ್ದರೆ, ಇ-ಪರಿಶೀಲನೆಗೆ ಮುಂದುವರಿಯಿರಿ,ಮೇಲೆ ಕ್ಲಿಕ್ ಮಾಡಿ, ಇಲ್ಲದಿದ್ದರೆ ನೀವು ವಿವರಗಳನ್ನು ತಿದ್ದುಪಡಿ ಮಾಡಬಹುದು.
ಹಂತ 14 : ನೀವು ಯಾವುದೇ ವಿಧಾನದ ಮೂಲಕ ಫಾರ್ಮ್ ಅನ್ನು ಇ-ಪರಿಶೀಲಿಸಬಹುದು.
ಇ-ಪರಿಶೀಲನೆಯ ನಂತರ, ಫಾರ್ಮ್ 10E ಅನ್ನು ಸಲ್ಲಿಸಲಾಗುತ್ತದೆ. ಸ್ವೀಕೃತಿ ಸಂಖ್ಯೆಯನ್ನು ರಚಿಸಲಾಗುತ್ತದೆ ಮತ್ತು ನೋಂದಾಯಿತ ಇ-ಮೇಲ್ ID ಮತ್ತು ಮೊಬೈಲ್ ಸಂಖ್ಯೆಗೆ ಅದನ್ನು ಕಳುಹಿಸಲಾಗುತ್ತದೆ.