Do not have an account?
Already have an account?

1. ಅವಲೋಕನ

ಕಂಪನಿಯಾಗಿರದ ಅನಿವಾಸಿಗಳಿಗೆ ಅಥವಾ ತೆರಿಗೆ ವಿಧಿಸಬಹುದಾದ ವಿದೇಶಿ ಕಂಪನಿಗೆ ಮಾಡಿದ ಪಾವತಿಗಳಿಗೆ ಮತ್ತು ಪಾವತಿಯು ರೂ. 5 ಲಕ್ಷ ಮೀರಿದರೆ ಫಾರ್ಮ್ 15CB ಯ ಅಗತ್ಯವಿರುತ್ತದೆ. ಫಾರ್ಮ್ 15CB ಎಂಬುದು ಒಂದು ಸಂದರ್ಭಾಧಾರಿತ ಫಾರ್ಮ್ ಆಗಿದೆ ಹಾಗೂ ಹಾಕಿದ ಷರತ್ತನ್ನು ಪೂರೈಸುವ ಪ್ರತಿ ರವಾನೆಗೆ ಇದು ಅಗತ್ಯವಾಗಿರುತ್ತದೆ.
ಫಾರ್ಮ್ 15CB ಯಲ್ಲಿ, ಪೇಮೆಂಟ್ ಅಥವಾ ಪಾವತಿ, TDS ದರ, TDS ಕಡಿತ ಮತ್ತು ಹಣಕಾಸಿನ ಸ್ವರೂಪದ ಇತರ ವಿವರಗಳು ಮತ್ತು ಹಣ ರವಾನೆ ಮಾಡುವುದು ಉದ್ದೇಶವನ್ನು CA ರವರು ಪ್ರಮಾಣೀಕರಿಸುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಫಾರ್ಮ್ 15 CB ಯು ತೆರಿಗೆ ನಿರ್ಧರಿಸುವ ಪ್ರಮಾಣಪತ್ರವಾಗಿದೆ, ಇದರಲ್ಲಿ CA ಶುಲ್ಕ ವಿಧಿಸುವ ನಿಬಂಧನೆಗಳಿಗೆ ಸಂಬಂಧಿಸಿದಂತೆ ಹಣ ರವಾನೆಯನ್ನು ಪರಿಶೀಲಿಸುತ್ತಾರೆ. ಈ ಫಾರ್ಮ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನದಲ್ಲಿ ಸಲ್ಲಿಸಬಹುದಾಗಿದೆ ಮತ್ತು ಫಾರ್ಮ್ ಸಲ್ಲಿಸಲು ಯಾವುದೇ ಸಮಯದ ಪರಿಮಿತಿಯಿಲ್ಲ ಎಂದು ಸೂಚಿಸಲಾಗಿದೆ.

2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು

  • CA ಅನ್ನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ನೋಂದಾಯಿಸಬೇಕು
  • CA ರವರ PAN ಸ್ಥಿತಿ "ಸಕ್ರಿಯ" ಆಗಿರಬೇಕು
  • CA ಬಳಿ ಅವಧಿ ಮುಗಿದಿರದ ಒಂದು ಮಾನ್ಯ ಡಿಜಿಟಲ್ ಸಹಿ ಪ್ರಮಾಣಪತ್ರವು ಇರಬೇಕು
  • ತೆರಿಗೆದಾರರಿಗೆ ಫಾರ್ಮ್ 15CA ಭಾಗ-C ಅನ್ನು ನಿಯೋಜಿಸಿರಬೇಕಾಗುತ್ತದೆ ಮತ್ತು ಅದನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಒಂದು ವಿನಂತಿಯು CAಗಾಗಿ ಬಾಕಿ ಉಳಿದಿರಬೇಕು

3.1 ಉದ್ದೇಶ

ಫಾರ್ಮ್ 15CB ಎನ್ನುವುದು ಅನಿವಾಸಿಗಳಿಗೆ (ಒಂದು ಕಂಪನಿಯಾಗಿರದ) ಅಥವಾ ಒಂದು ವಿದೇಶಿ ಕಂಪನಿಗೆ, ಪೇಮೆಂಟ್ ಅನ್ನು ಪಾವತಿ ಮಾಡಬೇಕಾದರೆ ಅಗತ್ಯವಿರುವ ಅಕೌಂಟೆಂಟ್‌ನ ಪ್ರಮಾಣಪತ್ರ ಆಗಿದ್ದು ಇದಕ್ಕೆ ತೆರಿಗೆ ವಿಧಿಸಬಹುದಾಗಿದೆ ಮತ್ತು ಒಂದುವೇಳೆ ಪಾವತಿ/ಅಂತಹ ಪಾವತಿಯ ಒಟ್ಟು ಮೊತ್ತವು ಆರ್ಥಿಕ ವರ್ಷದಲ್ಲಿ ರೂ 5 ಲಕ್ಷ ಮೀರುತ್ತದೆ ಎಂದಾದರೆ ಈ ಫಾರ್ಮ್ ಬೇಕಾಗುತ್ತದೆ.
ಈ ಫಾರ್ಮ್ CAಗೆ ಭಾರತದಿಂದ ಹೊರಗಡೆ ಹಣ ರವಾನೆಯ ವಿವರಗಳನ್ನು ಪ್ರಮಾಣೀಕರಿಸಲು ಅನುವು ಮಾಡಿಕೊಡುತ್ತದೆ ಮತ್ತು ಅಂತಿಮವಾಗಿ ಫಾರ್ಮ್ 15 CA ಭಾಗ C ಅನ್ನು ಫೈಲ್ ಮಾಡುವಾಗ ಪಾವತಿ ಮಾಡುವ ಜವಾಬ್ದಾರಿಯುತ ವ್ಯಕ್ತಿಯಿಂದ ಬಳಸಲ್ಪಡುತ್ತದೆ

3.2 ಇದನ್ನು ಯಾರು ಬಳಕೆ ಮಾಡಬಹುದು?

ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟ ಒಬ್ಬ CA ಮತ್ತು ಪಾವತಿ ಮಾಡುವ ಜವಾಬ್ದಾರಿಯುತ ವ್ಯಕ್ತಿಯಿಂದ ಫಾರ್ಮ್ 15CA, ಭಾಗ-C ಅನ್ನು ನಿಯೋಜಿಸಲಾದ ಒಬ್ಬರಿಗೆ ಫಾರ್ಮ್ 15CBಯಲ್ಲಿ ವಿವರಗಳನ್ನು ಪ್ರಮಾಣೀಕರಿಸಲು ಅಧಿಕಾರ ನೀಡಲಾಗಿದೆ. ಸಲ್ಲಿಸಿದ ಫಾರ್ಮ್‍ನ ಇ-ಪರಿಶೀಲನೆಗಾಗಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆ ಎನ್ನುವ ಒಂದು DSC ಸಹ CA ಬಳಿ ಇರಬೇಕು.

4. ಫಾರ್ಮ್ ಕುರಿತು ಕಿರುನೋಟ

ಅರ್ಜಿ ಸಲ್ಲಿಸುವ ಮುನ್ನ ಫಾರ್ಮ್ 15CB ನಲ್ಲಿ ಭರ್ತಿ ಮಾಡಬೇಕಾದ ಆರು ವಿಭಾಗಗಳಿವೆ. ಅವುಗಳು ಈ ಮುಂದಿನವುಗಳಾಗಿವೆ:

  1. ಹಣ ಪಡೆಯುವವರ (ಸ್ವೀಕೃತದಾರರ) ವಿವರಗಳು
  2. ಹಣ ರವಾನೆಯ (ನಿಧಿ ವರ್ಗಾವಣೆ) ವಿವರಗಳು
  3. ತೆರಿಗೆ ಸಂಭಾವ್ಯತೆಯ ವಿವರಗಳು
  4. DTAA ವಿವರಗಳು
  5. ಅಕೌಂಟೆಂಟ್ (CA) ವಿವರಗಳು
  6. ಪರಿಶೀಲನೆ

 

Data responsive


ಫಾರ್ಮ್ 15CB ಯ ವಿಭಾಗಗಳ ತುರ್ತು ನೋಟ ಇಲ್ಲಿದೆ.

ಹಣ ಪಡೆಯುವವರ (ಸ್ವೀಕೃತದಾರರು) ವಿವರಗಳು ಪೇಜ್ ಎಂದರೆ ಅಲ್ಲಿ ಸ್ವೀಕೃತದಾರರ ವಿವರಗಳು/ ಪ್ರೊಫೈಲ್ ಅನ್ನು ಪರಿಷ್ಕರಿಸಿ ಪ್ರದರ್ಶಿಸಲಾಗುತ್ತದೆ.

Data responsive


ಹಣ ರವಾನೆಯ (ನಿಧಿ ವರ್ಗಾವಣೆ) ವಿವರಗಳುಪೇಜ್, ಇದರಲ್ಲಿ ಹಣ ರವಾನೆ ಮಾಡುವ ಮೊತ್ತವನ್ನು ಮತ್ತು ಬ್ಯಾಂಕ್ ವಿವರಗಳನ್ನು ಪರಿಷ್ಕರಿಸಿ ಪ್ರದರ್ಶಿಸಲಾಗುತ್ತದೆ.

Data responsive


ತೆರಿಗೆ ಸಂಭವನೀಯತೆ ವಿವರಗಳು ವಿಭಾಗವೆಂದರೆ DTAA ಯನ್ನು ಪರಿಗಣಿಸದೆಯೇ ತೆರಿಗೆ ಅರ್ಹತೆಯ ವಿವರಗಳನ್ನು ಪರಿಷ್ಕರಿಸಿ ಪ್ರದರ್ಶಿಸಲಾಗುತ್ತದೆ.

Data responsive


DTAA ವಿವರಗಳು ಪೇಜ್‍ನಲ್ಲಿ, ಭಾರತದಲ್ಲಿ ತೆರಿಗೆ ವಿಧಿಸಬಹುದಾದ ಆದಾಯವಾಗಿದ್ದರೆ DTAA ಅಡಿಯಲ್ಲಿ CA ರವರು ಹಕ್ಕುಸಮರ್ಥನೆ ಪಡೆಯುವ ಪರಿಹಾರದ ವಿವರಗಳನ್ನು ಅಪ್‌ಲೋಡ್ ಮಾಡಬಹುದು.

Data responsive


ಅಕೌಂಟೆಂಟ್ (CA) ವಿವರಗಳು ಪೇಜ್‍ನಲ್ಲಿ ನೀವು ಅಕೌಂಟೆಂಟ್ ಹೆಸರು, ವ್ಯವಹಾರ ಸಂಸ್ಥೆ, ಸದಸ್ಯತ್ವ ID ಮತ್ತು ವಿಳಾಸದ ವಿವರಗಳನ್ನು ಒದಗಿಸುತ್ತೀರಿ.

Data responsive


ಕೊನೆಯ ವಿಭಾಗವು ಪರಿಶೀಲನೆ ಪೇಜ್ ಆಗಿದ್ದು, ಅದರಲ್ಲಿ ಡಿಜಿಟಲ್ ಸಹಿ ಪ್ರಮಾಣಪತ್ರದೊಂದಿಗೆ ಒದಗಿಸಲಾದ ಎಲ್ಲಾ ವಿವರಗಳನ್ನು CA ರವರು ಪರಿಶೀಲಿಸುತ್ತಾರೆ.

Data responsive


5. ಪ್ರವೇಶಿಸುವುದು ಮತ್ತು ಸಲ್ಲಿಸುವುದು ಹೇಗೆ

ಈ ಕೆಳಗಿನ ವಿಧಾನಗಳ ಮೂಲಕ ನೀವು ಫಾರ್ಮ್ 15CB ಅನ್ನು ಭರ್ತಿ ಮಾಡಿ ಸಲ್ಲಿಸಬಹುದು:

  • ಆನ್‌ಲೈನ್ ವಿಧಾನ - ಇ-ಫೈಲಿಂಗ್ ಪೋರ್ಟಲ್ ಮೂಲಕ
  • ಆಫ್‌ಲೈನ್ ವಿಧಾನ - ಆಫ್‌ಲೈನ್ ಉಪಯುಕ್ತತೆಯ ಮೂಲಕ

ಸೂಚನೆ: ಇನ್ನಷ್ಟು ತಿಳಿದುಕೊಳ್ಳಲು ಆಫ್‌ಲೈನ್ ಉಪಯುಕ್ತತೆಯ ಶಾಸನಬದ್ಧ ಫಾರ್ಮ್‌ಗಳನ್ನು ನೋಡಿ
ಆನ್‌ಲೈನ್ ವಿಧಾನದ ಮೂಲಕ ಫಾರ್ಮ್ 15CB ಭರ್ತಿ ಮಾಡಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:


5.1 ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ

ಹಂತ 1: ಮಾನ್ಯ CA ರುಜುವಾತುಗಳೊಂದಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ.

Data responsive


ಹಂತ 2: ಬಾಕಿ ಇರುವ ಐಟಂಗಳ ಪಟ್ಟಿಯನ್ನು ಪ್ರದರ್ಶಿಸುವ ವರ್ಕ್‍ಲಿಸ್ಟ್ ಮೆನುಗೆ ನ್ಯಾವಿಗೇಟ್ ಮಾಡಿ.

ಹಂತ 3: ನಿಯೋಜನೆ ವಿನಂತಿಯನ್ನು ಸ್ವೀಕರಿಸಿದರೆ, ಫಾರ್ಮ್ 15CB ಮತ್ತು ಒಪ್ಪಂದದ ಲಗತ್ತುಗಳನ್ನು ಡೌನ್‌‍ ಲೋಡ್ ಮಾಡಿ ಎನ್ನುವ ಹೈಪರ್‌ಲಿಂಕ್ ಒಂದನ್ನು ಸಕ್ರಿಯಗೊಳಿಸಲಾಗುತ್ತದೆ.

ಸೂಚನೆ: ನಿಯೋಜನೆ ವಿನಂತಿಯನ್ನು ತಿರಸ್ಕರಿಸಿದರೆ, ಅದಕ್ಕೆ ಕಾರಣವನ್ನು ಒದಗಿಸಬೇಕಾಗುತ್ತದೆ.

ಹಂತ 4: ಆಯ್ದ ಹಣ ರವಾನೆದಾರರಿಗೆ ಫಾರ್ಮ್ 15CB ಯನ್ನು ಪ್ರದರ್ಶಿಸಲು ಸಂಬಂಧಿತ ಹೈಪರ್‌ಲಿಂಕ್‌ ಮೇಲೆ ಕ್ಲಿಕ್ ಮಾಡಿ.

ಹಂತ 5: ಅಗತ್ಯವಿರುವ ಎಲ್ಲ ಕ್ಷೇತ್ರಗಳನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿ.

ಹಂತ 6: ನೀವು ಸಲ್ಲಿಕೆಯನ್ನು ದೃಢೀಕರಿಸಲು ಬಯಸಿದರೆ, ಹೌದು ಎಂದು ಕ್ಲಿಕ್ ಮಾಡಿ. ಇಲ್ಲದಿದ್ದರೆ, ಇಲ್ಲ ಎಂದು ಕ್ಲಿಕ್ ಮಾಡಿ.

ಹಂತ 7: ನೀವು ಹೌದು ಎಂದು ಆರಿಸಿದರೆ, DSC ಬಳಸಿ ಪರಿಶೀಲಿಸಲು ನಿಮ್ಮನ್ನು ಆಯ್ಕೆಗಳೊಂದಿಗೆ ಇ-ಪರಿಶೀಲನೆ ಸ್ಕ್ರೀನ್ ಕಡೆಗೆ ಕರೆದೊಯ್ಯಲಾಗುತ್ತದೆ. ಇ-ಪರಿಶೀಲನೆ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಇ-ಪರಿಶೀಲನೆಯಲ್ಲಿ ಬಳಕೆದಾರರ ಕೈಪಿಡಿಯನ್ನು ನೋಡಿ.

ಹಂತ 8: ಯಶಸ್ವಿ ಪರಿಶೀಲನೆಯ ನಂತರ, ನಿಮಗೆ ಯಶಸ್ವಿ ಸಂದೇಶ ಕಾಣಿಸುತ್ತದೆ.

Data responsive

 

6. ಸಂಬಂಧಿತ ವಿಷಯಗಳು