1. ಅವಲೋಕನ
ಫೈಲ್ ಮಾಡಿದ ಫಾರ್ಮ್‌ಗಳನ್ನು ವೀಕ್ಷಿಸಿ ಸೇವೆಯು ಲಾಗಿನ್ ಮಾಡಿದ ನಂತರ ಇ-ಫೈಲಿಂಗ್ ಪೋರ್ಟಲ್‌ನ ಎಲ್ಲಾ ನೋಂದಾಯಿತ ಬಳಕೆದಾರರಿಗೂ ಇದಕ್ಕೂ ಮುಂಚೆ ಸಲ್ಲಿಸಿದ ಆದಾಯ ತೆರಿಗೆ ಫಾರ್ಮ್‌ಗಳನ್ನು ವೀಕ್ಷಿಸಲು ಉಪಲಬ್ಧವಿದೆ. ಈ ಸೇವೆಯು ನಿಮಗೆ ಕೆಳಗಿನವುಗಳನ್ನು ಅನುಮತಿಸುತ್ತದೆ:
- PDF ನಲ್ಲಿ ಆದಾಯ ತೆರಿಗೆ ಫಾರ್ಮ್‌ಗಳನ್ನು ವೀಕ್ಷಿಸಿ
- ಸ್ವೀಕೃತಿಯನ್ನು (ರಶೀದಿ) ವೀಕ್ಷಿಸಿ
- ಅಪ್‌ಲೋಡ್ ಮಾಡಿದ JSON ವೀಕ್ಷಿಸಿ (ಅನ್ವಯವಾಗುವಲ್ಲೆಲ್ಲಾ)
- ಫಾರ್ಮ್‌ನ ಸ್ಥಿತಿಯನ್ನು ಟ್ರ್ಯಾಕ್ ಮಾಡಿ
- ಇತರ ಲಗತ್ತುಗಳನ್ನು ವೀಕ್ಷಿಸಿ
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
- ಮಾನ್ಯ ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರಿಗೆ
3. ಹಂತ ಹಂತದ ಮಾರ್ಗದರ್ಶಿ
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
ಹಂತ 2: ನಿಮ್ಮ ಡ್ಯಾಶ್‌ಬೋರ್ಡ್ ಮೇಲೆ, ಇ-ಫೈಲ್ >ಆದಾಯ ತೆರಿಗೆ ಫಾರ್ಮ್‌ಗಳು >ಸಲ್ಲಿಸಿದ ಫಾರ್ಮ್‌ಗಳನ್ನು ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿ
ಹಂತ 3: ಒಂದು ವೇಳೆ ನಿಮ್ಮ ಬಳಿ ಹಲವು ಫಾರ್ಮ್‌ಗಳಿದ್ದರೆ, ಸಲ್ಲಿಸಿದ ಫಾರ್ಮ್‌ಗಳನ್ನು ವೀಕ್ಷಿಸಿ ಪುಟದಲ್ಲಿ, ಫಾರ್ಮ್ ಹೆಸರು ಅಥವಾ ಫಾರ್ಮ್ ಸಂಖ್ಯೆಯನ್ನು ನಮೂದಿಸಿ ಮತ್ತು ಹುಡುಕಿ. ನೀವು ಅಥವಾ CA ಸಲ್ಲಿಸಿದ ಎಲ್ಲಾ ಫಾರ್ಮ್‌ಗಳನ್ನು CA ಸ್ವೀಕರಿಸಿದ್ದಾರೆ ಅಥವಾ ತಿರಸ್ಕರಿಸಿದ್ದಾರೆ ಅಥವಾ ಪರಿಶೀಲಿಸಿದ್ದಾರೆ ಎಂಬ ಫಾರ್ಮ್ ಸ್ಥಿತಿಯೊಂದಿಗೆ ವೀಕ್ಷಿಸಲು ನಿಮಗೆ ಸಾಧ್ಯವಾಗುತ್ತದೆ.
ಹಂತ 4: ನೀವು ಈ ಹಿಂದೆ ಸಲ್ಲಿಸಿದ ಫಾರ್ಮ್‌ಗಳ ಪಟ್ಟಿಯಿಂದ, ನೀವು ವೀಕ್ಷಿಸಲು ಬಯಸುವ ಫಾರ್ಮ್ ಅನ್ನು ಕ್ಲಿಕ್ ಮಾಡಿ.
ಹಂತ 5: ಆಯ್ದ ಫಾರ್ಮ್‌ಗಾಗಿ, ಫಾರ್ಮ್ ಸಲ್ಲಿಸಿದ ತೆರಿಗೆ ಮೌಲ್ಯಮಾಪನ ವರ್ಷವನ್ನು ಡೌನ್‌ಲೋಡ್ ಆಯ್ಕೆಯೊಂದಿಗೆ ಪ್ರದರ್ಶಿಸಲಾಗುತ್ತದೆ. ಫಾರ್ಮ್ ಜೊತೆಗೆ ಸಲ್ಲಿಸಿದ ಫಾರ್ಮ್ / ರಶೀದಿ / ಲಗತ್ತುಗಳನ್ನು ಡೌನ್‌ಲೋಡ್ ಮಾಡಲು ಪ್ರಾರಂಭಿಸಲು ಡೌನ್‌ಲೋಡ್ ಮಾಡಿ ಅನ್ನು ಕ್ಲಿಕ್ ಮಾಡಿ.
ಸೂಚನೆ:
- ನಿಮ್ಮ ಬಳಿ ಒಂದು TAN ಲಾಗಿನ್ ಅಥವಾ CA ಲಾಗಿನ್ ಇದ್ದರೆ, ಪ್ರತ್ಯೇಕವಾಗಿ ಅಂತೆಯೇ ಟೋಕನ್ ಸಂಖ್ಯೆಯ ಅಡಿಯಲ್ಲಿ ಸಲ್ಲಿಸಿದ ಬೃಹತ್ ಪ್ರಮಾಣದ 15CA ಮತ್ತು 15CB ಯನ್ನು ವೀಕ್ಷಿಸಲು ಅದೇ ಪ್ರಕ್ರಿಯೆಯನ್ನು ಅನುಸರಿಸಿ.
- ಆಯಾ ಫಾರ್ಮ್‌ಗೆ ಸಂಬಂಧಿತ ಮಾನದಂಡಗಳ ಆಧಾರದ ಮೇಲೆ, ನೀವು ಫಿಲ್ಟರ್ ಮಾಡಲು ಫಿಲ್ಟರ್ ಆಯ್ಕೆಯನ್ನು ಬಳಸಬಹುದು.