ನನ್ನ ಬ್ಯಾಂಕ್ ಖಾತೆ ಕುರಿತು ಬಳಕೆದಾರರ ಕೈಪಿಡಿ
1. ಪಕ್ಷಿನೋಟ
ನನ್ನ ಬ್ಯಾಂಕ್ ಖಾತೆ ಸೇವೆಯು, ದೃಢೀಕೃತ PAN ಮತ್ತು ದೃಢೀಕೃತ ಬ್ಯಾಂಕ್ ಖಾತೆಯನ್ನು ಹೊಂದಿ, ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಲಾಗಿನ್ ಮಾಡಿದ ಎಲ್ಲಾ ನೋಂದಾಯಿತ ತೆರಿಗೆದಾರರಿಗೆ ಲಭ್ಯವಿದೆ. ಈ ಸೇವೆಯು ನಿಮಗೆ ಈ ಕೆಳಗಿನವುಗಳನ್ನು ಮಾಡಲು ಅನುಮತಿಸುತ್ತದೆ:
- ಬ್ಯಾಂಕ್ ಖಾತೆಯನ್ನು ಸೇರಿಸಲು ಮತ್ತು ಅದನ್ನು ಪೂರ್ವ-ದೃಢೀಕರಿಸಲು
- ಮುಚ್ಚಲಾದ ಅಥವಾ ನಿಷ್ಕ್ರಿಯಗೊಳಿಸಲಾದ ಬ್ಯಾಂಕ್ ಖಾತೆಯನ್ನು ತೆಗೆದುಹಾಕಲು
- ಆದಾಯ ತೆರಿಗೆ ಮರುಪಾವತಿ ಪಡೆಯಲು ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡಲು, ದೃಢೀಕರಿಸಲಾದ ಬ್ಯಾಂಕ್ ಖಾತೆಯನ್ನು ನಾಮನಿರ್ದೇಶನ ಮಾಡಲು
- ಬ್ಯಾಂಕ್ ಖಾತೆಯಲ್ಲಿ ತೆರಿಗೆ ಮರುಪಾವತಿ ಸ್ವೀಕರಿಸದಂತೆ, ನಾಮನಿರ್ದೇಶನದಿಂದ ಬ್ಯಾಂಕ್ ಖಾತೆಯನ್ನು ತೆಗೆದುಹಾಕಲು
- ದೃಢೀಕರಿಸಲಾದ ಬ್ಯಾಂಕ್ ಖಾತೆಗೆ EVC ಅನ್ನು ಸಕ್ರಿಯಗೊಳಿಸಲು ಅಥವಾ ನಿಷ್ಕ್ರಿಯಗೊಳಿಸಲು (ವೈಯಕ್ತಿಕ ತೆರಿಗೆದಾರರಿಗೆ ಮಾತ್ರ, ಇ-ಸಲ್ಲಿಕೆಯೊಂದಿಗೆ ಸಂಯೋಜಿತಗೊಂಡಿರುವ ಬ್ಯಾಂಕ್‌ಗಳಿಗೆ ಮಾತ್ರ)
- ಪೂರ್ವ-ದೃಢೀಕರಣ ವಿಫಲವಾಗಿರುವ ಬ್ಯಾಂಕ್ ಖಾತೆಗಳನ್ನು ಮರು-ಮೌಲ್ಯೀಕರಿಸಲು
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
- ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ದೃಢೀಕೃತ ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ನೋಂದಾಯಿತ ಬಳಕೆದಾರ
- ಪೂರ್ವ-ದೃಢೀಕರಿಸಬೇಕಾದ ಬ್ಯಾಂಕ್ ಖಾತೆಯೊಂದಿಗೆ PAN ಲಿಂಕ್ ಆಗಿರಬೇಕು
| ಸೇವೆ | ಪೂರ್ವಾಪೇಕ್ಷಿತಗಳು |
|---|---|
| ಬ್ಯಾಂಕ್ ಖಾತೆಯನ್ನು ಸೇರಿಸಿ ಮತ್ತು ದೃಢೀಕರಿಸಿ |
1. ಖಾತೆಯು PANನೊಂದಿಗೆ ಲಿಂಕ್ ಆಗಿರಬೇಕು.
ಗಮನಿಸಿ*: ಬಳಕೆದಾರರ ಲಾಗಿನ್ ಪ್ರಕಾರವನ್ನು ಆಧರಿಸಿ ಪರಿಶೀಲನೆ ಆಯ್ಕೆಗಳು ಲಭ್ಯವಿರುತ್ತವೆ. |
| ಬ್ಯಾಂಕ್ ಖಾತೆಯನ್ನು ತೆಗೆದುಹಾಕಿ |
1. ಈ ಕೆಳಗಿನ ಯಾವುದಾದರೂ ಒಂದು ಪರಿಶೀಲನೆ ವಿಧಾನದ ಪ್ರವೇಶ ಇರಬೇಕು*:
ಗಮನಿಸಿ*: ಬಳಕೆದಾರರ ಲಾಗಿನ್ ಪ್ರಕಾರವನ್ನು ಆಧರಿಸಿ ಪರಿಶೀಲನೆ ಆಯ್ಕೆಗಳು ಲಭ್ಯವಿರುತ್ತವೆ. |
| ಮರುಪಾವತಿಗಾಗಿ ಬ್ಯಾಂಕ್ ಖಾತೆಯನ್ನು ನಾಮನಿರ್ದೇಶನ ಮಾಡಿ ಅಥವಾ ನಾಮನಿರ್ದೇಶನದಿಂದ ಬ್ಯಾಂಕ್ ಖಾತೆಯನ್ನು ತೆಗೆದುಹಾಕಿ |
1. ದೃಢೀಕರಿಸಲಾದ ಬ್ಯಾಂಕ್ ಖಾತೆ. |
| EVC ಅನ್ನು ಸಕ್ರಿಯಗೊಳಿಸಿ |
1.ಇ-ಸಲ್ಲಿಕೆಯೊಂದಿಗೆ ಸಂಯೋಜಿತಗೊಂಡಿರುವ ಬ್ಯಾಂಕ್‌ಗಳೊಂದರಲ್ಲಿ ಖಾತೆ ಇರಬೇಕು. |
3. ಹಂತ-ಹಂತದ ಮಾರ್ಗದರ್ಶಿ
ಹಂತ 1:ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆಗಿ.

ಹಂತ 2:ಡ್ಯಾಶ್‌ಬೋರ್ಡ್‌ನಿಂದನನ್ನ ಪ್ರೊಫೈಲ್ಪುಟಕ್ಕೆ ಹೋಗಿ.

ಹಂತ 3: ನನ್ನ ಬ್ಯಾಂಕ್ ಖಾತೆ ಮೇಲೆ ಕ್ಲಿಕ್ ಮಾಡಿ.

ನನ್ನ ಬ್ಯಾಂಕ್ ಖಾತೆಗಳುಪುಟದಲ್ಲಿಸೇರಿಸಲಾದ,ವಿಫಲವಾದಮತ್ತುತೆಗೆದುಹಾಕಲಾದ ಬ್ಯಾಂಕ್ ಖಾತೆಗಳುಟ್ಯಾಬ್‌ಗಳನ್ನು ಪ್ರದರ್ಶಿಸಲಾಗುತ್ತವೆ.

ನನ್ನ ಬ್ಯಾಂಕ್ ಖಾತೆ ಸೇವೆಯ ಅಡಿಯಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಲು, ಈ ಕೆಳಗಿನ ಸೆಕ್ಷನ್ ಗಳನ್ನು ನೋಡಿ:
| ಬ್ಯಾಂಕ್ ಖಾತೆಯನ್ನು ಸೇರಿಸಿ ಮತ್ತು ಪೂರ್ವ-ದೃಢೀಕರಿಸಿ | ಸೆಕ್ಷನ್ 3.1 ಗೆ ಹೋಗಿ |
| ಬ್ಯಾಂಕ್ ಖಾತೆಯನ್ನು ತೆಗೆದುಹಾಕಿ | ಸೆಕ್ಷನ್ 3.2 ಗೆ ಹೋಗಿ |
| ಮರುಪಾವತಿಗಾಗಿ ಬ್ಯಾಂಕ್ ಖಾತೆಯನ್ನು ನಾಮನಿರ್ದೇಶನ ಮಾಡಿ ಅಥವಾ ನಾಮನಿರ್ದೇಶನದಿಂದ ಬ್ಯಾಂಕ್ ಖಾತೆಯನ್ನು ತೆಗೆದುಹಾಕಿ | ಸೆಕ್ಷನ್ 3.3 ಗೆ ಹೋಗಿ |
| EVC ಯನ್ನು ಸಕ್ರಿಯಗೊಳಿಸಿ ಮತ್ತು ನಿಷ್ಕ್ರಿಯಗೊಳಿಸಿ | ಸೆಕ್ಷನ್ 3.4 ಗೆ ಹೋಗಿ |
| ಬ್ಯಾಂಕ್ ಖಾತೆಯನ್ನು ಪುನರ್-ದೃಢೀಕರಿಸಿ | ಸೆಕ್ಷನ್ 3.5 ಗೆ ಹೋಗಿ |
| ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡಲು ಬ್ಯಾಂಕ್ ಖಾತೆಯನ್ನು ನಾಮನಿರ್ದೇಶನ ಮಾಡಿ | ಸೆಕ್ಷನ್ 3.6 ಗೆ ಹೋಗಿ |
3.1 ಬ್ಯಾಂಕ್ ಖಾತೆಯನ್ನು ಸೇರಿಸಿ ಮತ್ತು ಪೂರ್ವ-ದೃಢೀಕರಿಸಿ
PAN / ಆಧಾರ್ ಬಳಸಿಕೊಂಡು ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆಗುವ ಮೂಲಕ
ಹಂತ 1: ನನ್ನ ಬ್ಯಾಂಕ್ ಖಾತೆಗಳು ಪುಟದಲ್ಲಿ, ಬ್ಯಾಂಕ್ ಖಾತೆ ಸೇರಿಸಿ ಅನ್ನು ಕ್ಲಿಕ್ ಮಾಡಿ.

ಹಂತ 2: ಬ್ಯಾಂಕ್ ಖಾತೆ ಸೇರಿಸಿ ಪುಟದಲ್ಲಿ, ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿ, ಖಾತೆ ಪ್ರಕಾರ ಮತ್ತು ಖಾತೆದಾರರ ಪ್ರಕಾರ ಆಯ್ಕೆ ಮಾಡಿ, ನಂತರ IFSC ನಮೂದಿಸಿ. IFSC ಆಧರಿಸಿ ಬ್ಯಾಂಕ್ ಹೆಸರು ಮತ್ತು ಶಾಖೆಯ ಹೆಸರು ಸ್ವಯಂಚಾಲಿತವಾಗಿ ಭರ್ತಿಯಾಗುತ್ತದೆ. ನಿಮ್ಮ ಬ್ಯಾಂಕ್ ಇ-ಸಲ್ಲಿಕೆಯೊಂದಿಗೆ ಸಂಯೋಜಿತವಾಗಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ IDಯನ್ನು ನಿಮ್ಮ ಇ-ಸಲ್ಲಿಕೆ ಪ್ರೊಫೈಲ್‌ನಿಂದ ಮೊದಲೇ ಭರ್ತಿ ಮಾಡಲಾಗುತ್ತದೆ ಮತ್ತು ಅವುಗಳನ್ನು ತಿದ್ದುಪಡಿಸಲು ಸಾಧ್ಯವಾಗುವುದಿಲ್ಲ.

ಹಂತ 3:ಇ-ಪರಿಶೀಲನೆಗೆ ಮುಂದುವರಿಯಿರಿಮೇಲೆ ಕ್ಲಿಕ್ ಮಾಡಿ.

ಇ-ಪರಿಶೀಲನೆ ಆಯ್ಕೆಯನ್ನು ಆಯ್ಕೆ ಮಾಡಿ ಮತ್ತು ಮುಂದುವರಿಯಿರಿ ಅನ್ನು ಕ್ಲಿಕ್ ಮಾಡಿ.

OTP ನಮೂದಿಸಿ ಮತ್ತು ಮಾನ್ಯೀಕರಿಸಿ

ಮೌಲ್ಯೀಕರಣ ವಿನಂತಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಯಶಸ್ಸಿನ ಸಂದೇಶವು ಪ್ರದರ್ಶಿಸಲಾಗುತ್ತದೆ. ಜೊತೆಗೆ, ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿತವಾಗಿರುವ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ IDಗೆ ಸಂದೇಶವನ್ನು ಕಳುಹಿಸಲಾಗುತ್ತದೆ.


3.2 ಬ್ಯಾಂಕ್ ಖಾತೆ ತೆಗೆದುಹಾಕಿ
ಹಂತ 1: ಬೇಕಾದ ಬ್ಯಾಂಕ್ ಖಾತೆಯ ಕ್ರಮ ಕಾಲಮ್‌ನ ಅಡಿಯಲ್ಲಿ ಬ್ಯಾಂಕ್ ಖಾತೆ ತೆಗೆದುಹಾಕಿ ಅನ್ನು ಕ್ಲಿಕ್ ಮಾಡಿ.

ಹಂತ 2: ಬ್ಯಾಂಕ್ ಖಾತೆಯನ್ನು ತೆಗೆದುಹಾಕಲು ಡ್ರಾಪ್‌ಡೌನ್‌ನಿಂದ ಕಾರಣವನ್ನು ಆಯ್ಕೆ ಮಾಡಿ. ಇತರೆ ಅನ್ನು ಆಯ್ಕೆ ಮಾಡಿದರೆ, ಟೆಕ್ಸ್ಟ್‌ಬಾಕ್ಸ್ ನಲ್ಲಿ ಕಾರಣವನ್ನು ನಮೂದಿಸಿ ಮತ್ತು ಮುಂದುವರಿಯಿರಿ ಅನ್ನು ಕ್ಲಿಕ್ ಮಾಡಿ.

ಹಂತ 3: ಇ-ಪರಿಶೀಲನೆ ಆಯ್ಕೆಯನ್ನು ಆಯ್ಕೆ ಮಾಡಿ ಮತ್ತು ಮುಂದುವರಿಯಿರಿ ಅನ್ನು ಕ್ಲಿಕ್ ಮಾಡಿ.

ಹಂತ 4:OTPಯನ್ನು ನಮೂದಿಸಿ ಮತ್ತು ಮೌಲ್ಯೀಕರಿಸಿ.

ಯಶಸ್ವಿಯಾಗಿ ಬ್ಯಾಂಕ್ ಖಾತೆಯನ್ನು ತೆಗೆದುಹಾಕಿದ ನಂತರ, ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.

‘ಮೌಲ್ಯೀಕರಣ ಪ್ರಗತಿಯಲ್ಲಿದೆ’ ಸ್ಥಿತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ನೀವು ತೆಗೆದುಹಾಕಬಹುದು. ತೆಗೆದುಹಾಕಿದ ನಂತರ, ಸರಿಯಾದ ವಿವರಗಳೊಂದಿಗೆ ಅದೇ ಬ್ಯಾಂಕ್ ಖಾತೆಯನ್ನು ಮತ್ತೆ ಸೇರಿಸಲು ಪ್ರಯತ್ನಿಸಬಹುದು.
3.3 ಮರುಪಾವತಿಗಾಗಿ ಬ್ಯಾಂಕ್ ಖಾತೆಯನ್ನು ನಾಮನಿರ್ದೇಶನ ಮಾಡಿ ಅಥವಾ ನಾಮನಿರ್ದೇಶನದಿಂದ ಬ್ಯಾಂಕ್ ಖಾತೆಯನ್ನು ತೆಗೆದುಹಾಕಿ
A. ಮರುಪಾವತಿಗಾಗಿ ಬ್ಯಾಂಕ್ ಖಾತೆಯನ್ನು ನಾಮನಿರ್ದೇಶನ ಮಾಡಿ
ಹಂತ 1:ಮರುಪಾವತಿಗಾಗಿ ಬ್ಯಾಂಕ್ ಖಾತೆಯನ್ನು ನಾಮನಿರ್ದೇಶನ ಮಾಡಲು, ನೀವು ನಾಮನಿರ್ದೇಶನ ಮಾಡಲು ಬಯಸುವ ಬ್ಯಾಂಕ್ ಖಾತೆಯಮರುಪಾವತಿಗಾಗಿ ನಾಮನಿರ್ದೇಶನ ಮಾಡಿಟಾಗಲ್ / ಸ್ವಿಚ್ (ಸ್ವಿಚ್ ಎಡಭಾಗದಲ್ಲಿರುತ್ತದೆ) ಅನ್ನು ಕ್ಲಿಕ್ ಮಾಡಿ.

ಹಂತ 2:ನೀವು ಆಯ್ಕೆ ಮಾಡಿದ ಬ್ಯಾಂಕ್ ಖಾತೆಯನ್ನು ನಾಮನಿರ್ದೇಶನ ದೃಢೀಕರಣ ಮಾಡಲುಮುಂದುವರಿಸಿಮೇಲೆ ಕ್ಲಿಕ್ ಮಾಡಿ.

ಯಶಸ್ವಿಯಾಗಿ ನಾಮನಿರ್ದೇಶನ ಮಾಡಿದ ನಂತರ, ಸ್ವಿಚ್ ಬಲಭಾಗಕ್ಕೆ ಚಲಿಸುತ್ತದೆ.

B. ಮರುಪಾವತಿಗಾಗಿ ನಾಮನಿರ್ದೇಶನದಿಂದ ಬ್ಯಾಂಕ್ ಖಾತೆಯನ್ನು ತೆಗೆದುಹಾಕಿ
ಹಂತ 1:ಮರುಪಾವತಿಗಾಗಿ ನಾಮನಿರ್ದೇಶನ ಮಾಡಲಾಗಿರುವ ಬ್ಯಾಂಕ್ ಖಾತೆಯನ್ನು ನಾಮನಿರ್ದೇಶನದಿಂದ ತೆಗೆದುಹಾಕಲು, ನೀವು ತೆಗೆದುಹಾಕಲು ಬಯಸುವ ಬ್ಯಾಂಕ್ ಖಾತೆಯಮರುಪಾವತಿಗಾಗಿ ನಾಮನಿರ್ದೇಶನ ಮಾಡಿಟಾಗಲ್ / ಸ್ವಿಚ್ (ಇದು ಬಲಭಾಗದಲ್ಲಿರುತ್ತದೆ) ಅನ್ನು ಕ್ಲಿಕ್ ಮಾಡಿ.

ಹಂತ 2:ಆಯ್ಕೆ ಮಾಡಿದ ಬ್ಯಾಂಕ್ ಖಾತೆಯ ನಾಮನಿರ್ದೇಶನವನ್ನು ತೆಗೆದುಹಾಕಲು ನೀವು ಬಯಸುವುದನ್ನು ದೃಢೀಕರಿಸಲುಮುಂದುವರಿಯಿರಿಅನ್ನು ಕ್ಲಿಕ್ ಮಾಡಿ.

ನಾಮನಿರ್ದೇಶನವನ್ನು ಯಶಸ್ವಿಯಾಗಿ ತೆಗೆದುಹಾಕಿದ ನಂತರ, ಸ್ವಿಚ್ ಎಡಭಾಗಕ್ಕೆ ಚಲಿಸುತ್ತದೆ.

3.4 EVCಯನ್ನು ಸಕ್ರಿಯಗೊಳಿಸಿ ಮತ್ತು ನಿಷ್ಕ್ರಿಯಗೊಳಿಸಿ
A. EVCಯನ್ನು ಸಕ್ರಿಯಗೊಳಿಸಿ
ಹಂತ 1:ಕ್ರಮಗಳುಕಾಲಮ್‌ನ ಅಡಿಯಲ್ಲಿ, EVC ಸಕ್ರಿಯಗೊಳಿಸಲು ನೀವು ಬಯಸುವ ಬ್ಯಾಂಕ್ ಖಾತೆಯ ಎದುರಿನEVC ಸಕ್ರಿಯಗೊಳಿಸಿಮೇಲೆ ಕ್ಲಿಕ್ ಮಾಡಿ.

ಹಂತ 2:ದೃಢೀಕರಣ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.ಮುಂದುವರಿಸಿಮೇಲೆ ಕ್ಲಿಕ್ ಮಾಡಿ.

ಗಮನಿಸಿ:
- ಈ ಕೆಳಗಿನ ಷರತ್ತುಗಳನ್ನು ಪೂರೈಸಿದರೆ ಮಾತ್ರ ಮೌಲ್ಯೀಕರಿಸಲಾದ ಬ್ಯಾಂಕ್ ಖಾತೆಗೆ EVC ಅನ್ನು ಸಕ್ರಿಯಗೊಳಿಸಬಹುದು:
- ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ IDಯನ್ನು ಬ್ಯಾಂಕ್ ಪರಿಶೀಲಿಸಿರಬೇಕು.
- ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಿರುವ ನಿಮ್ಮ ಮೊಬೈಲ್ ಸಂಖ್ಯೆಯು ಬ್ಯಾಂಕ್ ಪರಿಶೀಲಿಸಿರುವ ಮೊಬೈಲ್ ಸಂಖ್ಯೆಯು ಒಂದೇ ಇರಬೇಕು. ಎರಡೂ ಸಂಖ್ಯೆಗಳು ಒಂದೇ ಆಗಿರುವುದನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಇ-ಸಲ್ಲಿಕೆ ಪ್ರೊಫೈಲ್‌ನಲ್ಲಿರುವ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್‌ಗೆ ಲಿಂಕ್ ಮಾಡಿರುವ ಸಂಖ್ಯೆಗೆ ನವೀಕರಿಸಿ ಅಥವಾ ನಿಮ್ಮ ಬ್ಯಾಂಕ್‌ನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆಯನ್ನು ನಿಮ್ಮ ಇ-ಸಲ್ಲಿಕೆ ಪ್ರೊಫೈಲ್‌ನಲ್ಲಿರುವ ಸಂಖ್ಯೆಗೆ ನವೀಕರಿಸಿ.
- ಬೇರೆ ಯಾವುದೇ ಬ್ಯಾಂಕ್ ಖಾತೆಗೆ EVC ಸಕ್ರಿಯಗೊಳಿಸಿರಬಾರದು.
- ನಿಮ್ಮ ಬ್ಯಾಂಕ್ ಇ-ಸಲ್ಲಿಕೆ ಪೋರ್ಟಲ್‌ನೊಂದಿಗೆ ಸಂಯೋಜಿಸಲ್ಪಟ್ಟಿರಬೇಕು. ಇ-ಸಲ್ಲಿಕೆ ಪೋರ್ಟಲ್‌ನೊಂದಿಗೆ ಸಂಯೋಜಿಸಲ್ಪಟ್ಟಿರುವ ಬ್ಯಾಂಕ್‌ಗಳ ಪಟ್ಟಿಯನ್ನು ಮೇಲೆ ಕ್ಲಿಕ್ ಮಾಡುವ ಮೂಲಕ ನೋಡಬಹುದು.ಲಾಗಿನ್ > ನನ್ನ ಪ್ರೊಫೈಲ್ > ನನ್ನ ಬ್ಯಾಂಕ್ ಖಾತೆ > ಟಿಪ್ಪಣಿಗಳು ಸೆಕ್ಷನ್ > "ಬ್ಯಾಂಕ್‌ಗಳ ಪಟ್ಟಿ"
- ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಕೇವಲ ಪೂರ್ವ-ಮೌಲ್ಯೀಕರಿಸಲು ಬಯಸಿದರೆ ಮತ್ತು EVCಯನ್ನು ಸಕ್ರಿಯಗೊಳಿಸಲು ಬಯಸದಿದ್ದರೆ, ನಿಮ್ಮ ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಬ್ಯಾಂಕ್ ಪರಿಶೀಲಿಸಿರುವ ಸಂಪರ್ಕ ವಿವರಗಳಿಗೆ ಹೊಂದಿಕೆಯಾಗುವ ಅಗತ್ಯವಿಲ್ಲ.
ಮೇಲಿನ ಷರತ್ತುಗಳನ್ನು ಪೂರೈಸಿದರೆ, ಆಯ್ಕೆಮಾಡಿದ ಬ್ಯಾಂಕ್ ಖಾತೆಗೆ EVC ಯಶಸ್ವಿಯಾಗಿ ಸಕ್ರಿಯಗೊಳ್ಳುತ್ತದೆ ಮತ್ತು ಅದರ ಸ್ಥಿತಿಯು ಮೌಲ್ಯೀಕರಿಸಲಾಗಿದೆ ಮತ್ತು EVC ಸಕ್ರಿಯಗೊಳಿಸಲಾಗಿದೆ ಎಂದು ನವೀಕರಿಸಲಾಗುತ್ತದೆ:

ಹಂತ 3: ಒಂದು ಬ್ಯಾಂಕ್ ಖಾತೆಗೆ ಈಗಾಗಲೇ EVC ಸಕ್ರಿಯಗೊಳಿಸಲಾಗಿದ್ದರೆ ಮತ್ತು ನೀವು ಮತ್ತೊಂದು ಬ್ಯಾಂಕ್ ಖಾತೆಗೆ EVC ಸಕ್ರಿಯಗೊಳಿಸಲು ಪ್ರಯತ್ನಿಸಿದರೆ, ಅದಕ್ಕೆ ಸಂಬಂಧಿಸಿದಂತೆ ಒಂದು ಸಂದೇಶವು ಪ್ರದರ್ಶಿಸಲಾಗುತ್ತದೆ. ಆ ಸಂದೇಶದಲ್ಲಿ ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ. ಹಂತ 2ರಲ್ಲಿ ತಿಳಿಸಲಾದ ಷರತ್ತುಗಳನ್ನು ಪೂರೈಸಿದ್ದರೆ, ಆ ಬ್ಯಾಂಕ್ ಖಾತೆಗೆ EVC ಸಕ್ರಿಯಗೊಳ್ಳುತ್ತದೆ. ಈ ಸಂದರ್ಭದಲ್ಲಿ, ಮೊದಲು EVC ಸಕ್ರಿಯಗೊಳಿಸಲಾಗಿದ್ದ ಬ್ಯಾಂಕ್ ಖಾತೆಗೆ EVC ನಿಷ್ಕ್ರಿಯಗೊಳ್ಳುತ್ತದೆ.

ಸೂಚನೆ: ನೀವು ರದ್ದುಮಾಡಿ ಮೇಲೆ ಕ್ಲಿಕ್ ಮಾಡಿದರೆ ಅಥವಾ ಸಂದೇಶವನ್ನು ಮುಚ್ಚಿದರೆ, ಈಗಾಗಲೇ ಇರುವ ಬ್ಯಾಂಕ್ ಖಾತೆಗೆ EVC ಸಕ್ರಿಯವಾಗಿಯೇ ಉಳಿಯುತ್ತದೆ.
B. EVCಯನ್ನು ನಿಷ್ಕ್ರಿಯಗೊಳಿಸಿ
ಹಂತ 1:EVC ಸಕ್ರಿಯಗೊಳಿಸಲಾಗಿರುವ ಬ್ಯಾಂಕ್ ಖಾತೆಯಕ್ರಮಗಳುಕಾಲಮ್‌ನ ಅಡಿಯಲ್ಲಿEVC ನಿಷ್ಕ್ರಿಯಗೊಳಿಸಿಮೇಲೆ ಕ್ಲಿಕ್ ಮಾಡಿ.

ಹಂತ 2:ದೃಢೀಕರಣ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.ಮುಂದುವರಿಸಿಮೇಲೆ ಕ್ಲಿಕ್ ಮಾಡಿ.

ಯಶಸ್ವಿಯಾದ ನಂತರ, ಆಯ್ಕೆಮಾಡಿದ ಬ್ಯಾಂಕ್ ಖಾತೆಗೆ EVC ನಿಷ್ಕ್ರಿಯಗೊಳ್ಳುತ್ತದೆ ಮತ್ತು ಅದರ ಸ್ಥಿತಿಯುಮೌಲ್ಯೀಕರಿಸಲಾಗಿದೆಎಂದು ಮಾತ್ರ ನವೀಕರಿಸಲಾಗುತ್ತದೆ.

3.5 ಬ್ಯಾಂಕ್ ಖಾತೆಯನ್ನು ಮರು-ಮೌಲ್ಯೀಕರಿಸಿ
ಹಂತ 1: ಬ್ಯಾಂಕ್ ಖಾತೆಯ ಮೌಲ್ಯೀಕರಣವು ಈ ಹಿಂದೆ ವಿಫಲವಾಗಿದ್ದರೆ, ಅದರ ವಿವರಗಳು ವಿಫಲವಾದ ಬ್ಯಾಂಕ್ ಖಾತೆಗಳು ಟ್ಯಾಬ್‌ನಲ್ಲಿ ಪ್ರದರ್ಶಿಸಲಾಗುತ್ತವೆ. ನೀವು ಮರು-ಮೌಲ್ಯೀಕರಿಸಬೇಕಾದ ಬ್ಯಾಂಕ್ ಖಾತೆಯ ಕ್ರಮ ಕಾಲಮ್‌ನ ಅಡಿಯಲ್ಲಿ ಮರು-ಮೌಲ್ಯೀಕರಿಸಿ ಮೇಲೆ ಕ್ಲಿಕ್ ಮಾಡಿ.
ಬ್ಯಾಂಕ್‌ಗೆ ಲಿಂಕ್ ಮಾಡಿರುವ ನಿಮ್ಮ ಮೊಬೈಲ್ ಸಂಖ್ಯೆ/ಇಮೇಲ್‌ನಲ್ಲಿ ಅಥವಾ ಇ-ಸಲ್ಲಿಕೆ ಪ್ರೊಫೈಲ್‌ನಲ್ಲಿ ಯಾವುದೇ ನವೀಕರಣವಾಗಿದ್ದರೆ, ಅಥವಾ ನಿಮ್ಮ ಖಾತೆಯ ಪ್ರಕಾರ/ಖಾತೆಯ ಸ್ಥಿತಿಯಲ್ಲಿ ಬದಲಾವಣೆಯಾಗಿದ್ದರೆ, ಸೇರಿಸಿರುವ ಬ್ಯಾಂಕ್ ಖಾತೆಯನ್ನು ನೀವು ಮರು-ಮೌಲ್ಯೀಕರಿಸಬಹುದು.

ಹಂತ 2: ಬ್ಯಾಂಕ್ ಖಾತೆಯನ್ನು ಸೇರಿಸಿ ಪುಟದಲ್ಲಿ ಬ್ಯಾಂಕ್ ಮತ್ತು ಸಂಪರ್ಕ ವಿವರಗಳು ಮೊದಲೇ ಭರ್ತಿಯಾಗಿರುತ್ತವೆ. ಬ್ಯಾಂಕ್ ವಿವರಗಳನ್ನು ತಿದ್ದುಪಡಿಸಬಹುದು, ಆದರೆ ಸಂಪರ್ಕ ವಿವರಗಳನ್ನು ತಿದ್ದುಪಡಿಸಲು ಸಾಧ್ಯವಿರುವುದಿಲ್ಲ. ಅಗತ್ಯವಿದ್ದರೆ ತಿದ್ದುಪಡಿಸಬಹುದಾದ ವಿವರಗಳನ್ನು ನವೀಕರಿಸಿ. ನಂತರ ಇ-ಪರಿಶೀಲನೆಗೆ ಮುಂದುವರಿಯಲು ಮುಂದುವರಿಯಿರಿ ಮೇಲೆ ಕ್ಲಿಕ್ ಮಾಡಿ.

ಹಂತ 3:ಇ-ಪರಿಶೀಲನೆಗಾಗಿ ವಿಧಾನವನ್ನು ಆಯ್ಕೆಮಾಡಿ.

ಆಧಾರ್‌ಗೆ ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಬಂದಿರುವ OTPಯನ್ನು ನಮೂದಿಸಿ.


ಯಶಸ್ವಿಯಾದ ನಂತರ, ಬ್ಯಾಂಕ್ ಖಾತೆಯು ಸೇರಿಸಿರುವ ಬ್ಯಾಂಕ್ ಖಾತೆಗಳು ಟ್ಯಾಬ್‌ನ ಅಡಿಯಲ್ಲಿ ಸೇರಿಸಲಾಗುತ್ತದೆ ಮತ್ತು ಅದರ ಸ್ಥಿತಿಯು ಮೌಲ್ಯೀಕರಣ ಪ್ರಗತಿಯಲ್ಲಿದೆ ಎಂದು ನವೀಕರಿಸಲಾಗುತ್ತದೆ.

ನಂತರ, ನಿಮ್ಮ ಸಂಪರ್ಕ ವಿವರಗಳನ್ನು ಬ್ಯಾಂಕ್ ವಿವರಗಳೊಂದಿಗೆ ಪರಿಶೀಲಿಸಲಾಗುತ್ತದೆ. ಬ್ಯಾಂಕ್ ನಿಮ್ಮ ಖಾತೆಯ ವಿವರಗಳನ್ನು ಪರಿಶೀಲಿಸುತ್ತದೆ, ನಿಮ್ಮ ಬ್ಯಾಂಕ್ ಖಾತೆಯನ್ನು ಮೌಲ್ಯೀಕರಿಸಲಾಗುತ್ತದೆ. ಮೌಲ್ಯೀಕರಣದ ಸ್ಥಿತಿಯನ್ನು ಸೇರಿಸಿರುವ ಬ್ಯಾಂಕ್ ಖಾತೆಗಳು ಟ್ಯಾಬ್‌ನ ಸ್ಥಿತಿ ಕಾಲಮ್‌ನಲ್ಲಿ ಪರಿಶೀಲಿಸಬಹುದು.

ಮೌಲ್ಯೀಕರಣವು ಇನ್ನೂ ವಿಫಲವಾದರೆ, ವಿಫಲವಾದ ಕಾರಣದ ಆಧಾರದ ಮೇಲೆ (ಸಂಯೋಜಿಸಲ್ಪಟ್ಟಿರುವ ಬ್ಯಾಂಕ್‌ಗಳಿಗೆ) ಈ ಕೆಳಗಿನ ಕ್ರಮವನ್ನು ಕೈಗೊಳ್ಳಿ:
| ವಿಫಲತೆಯ ಕಾರಣ | ಕೈಗೊಳ್ಳಬೇಕಾದ ಕ್ರಮ |
| PAN - ಬ್ಯಾಂಕ್ ಖಾತೆ - IFSC ಲಿಂಕ್ ವಿಫಲವಾಗಿದೆ. | ನಿಮ್ಮ PAN ಅನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಲು ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ, ನಂತರ ವಿನಂತಿಯನ್ನು ಸಲ್ಲಿಸಲು ಮರು-ಮೌಲ್ಯೀಕರಿಸಿಮೇಲೆ ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶಾಖೆಯನ್ನು ಸಂಪರ್ಕಿಸಿ. |
| ಹೆಸರು ಹೊಂದಿಕೆಯಾಗಿಲ್ಲ | PAN ಪ್ರಕಾರ ಹೆಸರನ್ನು ನವೀಕರಿಸಲು ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ. ನಂತರ ಮರು-ಮೌಲ್ಯೀಕರಿಸಿ, ವಿವರಗಳನ್ನು ನವೀಕರಿಸಿ ಮತ್ತು ಮರು-ಮೌಲ್ಯೀಕರಣಕ್ಕಾಗಿ ವಿನಂತಿಯನ್ನು ಸಲ್ಲಿಸಿ. |
| ಬ್ಯಾಂಕ್ ಖಾತೆ ಸಂಖ್ಯೆ ಹೊಂದಿಕೆಯಾಗುತ್ತಿಲ್ಲ. | ಮರು-ಮೌಲ್ಯೀಕರಿಸಿ ಮೇಲೆ ಕ್ಲಿಕ್ ಮಾಡಿ, ಸರಿಯಾದ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು ಮರು-ಮೌಲ್ಯೀಕರಣಕ್ಕಾಗಿ ವಿನಂತಿಯನ್ನು ಸಲ್ಲಿಸಿ. |
| ಖಾತೆ ಸಂಖ್ಯೆ ಅಸ್ತಿತ್ವದಲ್ಲಿಲ್ಲ. | ಸರಿಯಾದ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು ಮರು-ಮೌಲ್ಯೀಕರಣಕ್ಕಾಗಿ ವಿನಂತಿಯನ್ನು ಸಲ್ಲಿಸಿ. |
| ಬ್ಯಾಂಕ್ ಖಾತೆ ಮುಚ್ಚಲಾಗಿದೆ / ನಿಷ್ಕ್ರಿಯವಾಗಿದೆ. | ಬೇರೆ ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಪ್ರಯತ್ನಿಸಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶಾಖೆಯನ್ನು ಸಂಪರ್ಕಿಸಿ. |
ಖಾತೆಯು ಇ-ಸಲ್ಲಿಕೆ ಪೋರ್ಟಲ್‌ನೊಂದಿಗೆ ಸಂಯೋಜಿಸಲ್ಪಟ್ಟಿಲ್ಲದ ಬ್ಯಾಂಕ್‌ಗಳಲ್ಲಿ ಇದ್ದರೆ, ಈ ಕೆಳಗಿನ ಕ್ರಮವನ್ನು ಕೈಗೊಳ್ಳಬೇಕು:
| ವಿಫಲತೆಯ ಕಾರಣ | ಕೈಗೊಳ್ಳಬೇಕಾದ ಕ್ರಮ |
| PAN ಅನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿಲ್ಲ. | PAN ಅನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿ ಮತ್ತು ವಿನಂತಿಯನ್ನು ಸಲ್ಲಿಸಲು ಮರು-ಮೌಲ್ಯೀಕರಿಸಿಮೇಲೆ ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶಾಖೆಯನ್ನು ಸಂಪರ್ಕಿಸಿ. |
| PAN ಹೊಂದಿಕೆಯಾಗುತ್ತಿಲ್ಲ | ಸರಿಯಾದ PAN ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿ ಮತ್ತು ವಿನಂತಿಯನ್ನು ಸಲ್ಲಿಸಲು ಮರು-ಮೌಲ್ಯೀಕರಿಸಿಮೇಲೆ ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶಾಖೆಯನ್ನು ಸಂಪರ್ಕಿಸಿ. |
| ಅಮಾನ್ಯವಾದ ಖಾತೆ ಪ್ರಕಾರ. | ಮರು-ಮೌಲ್ಯೀಕರಿಸಿ ಮೇಲೆ ಕ್ಲಿಕ್ ಮಾಡಿ, ಸರಿಯಾದ ಬ್ಯಾಂಕ್ ಖಾತೆ ಪ್ರಕಾರವನ್ನು ಆಯ್ಕೆಮಾಡಿ ಮತ್ತು ಮೌಲ್ಯೀಕರಣಕ್ಕಾಗಿ ವಿನಂತಿಯನ್ನು ಸಲ್ಲಿಸಿ. |
| ಖಾತೆ ಮುಚ್ಚಲಾಗಿದೆ / ನಿಷ್ಕ್ರಿಯ ಖಾತೆ / ವಿವಾದದಲ್ಲಿರುವ ಖಾತೆ / ಖಾತೆ ಸ್ಥಗಿತಗೊಳಿಸಲಾಗಿದೆ ಅಥವಾ ತಡೆಹಿಡಿಯಲಾಗಿದೆ | ಮಾನ್ಯವಾದ ಬೇರೆ ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ಪ್ರಯತ್ನಿಸಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶಾಖೆಯನ್ನು ಸಂಪರ್ಕಿಸಿ. |
| ಖಾತೆದಾರರ ಹೆಸರು ಅಮಾನ್ಯವಾಗಿದೆ. | ಮರು-ಮೌಲ್ಯೀಕರಿಸಿ ಮೇಲೆ ಕ್ಲಿಕ್ ಮಾಡಿ ಮತ್ತು ವಿವರಗಳನ್ನು ನವೀಕರಿಸಿ. PAN ಪ್ರಕಾರ ಹೆಸರನ್ನು ನವೀಕರಿಸಲು ನಿಮ್ಮ ಶಾಖೆಯನ್ನು ಸಂಪರ್ಕಿಸಿ. |
ಬ್ಯಾಂಕ್ ಮೌಲ್ಯೀಕರಣ ಸ್ಥಿತಿಯನ್ನು ‘ಮೌಲ್ಯೀಕರಣವನ್ನು ಮಾಡಲಾಗುವುದಿಲ್ಲ’ ಎಂದು ತೋರಿಸಿದರೆ, ಅದು ಇಲಾಖೆಯಿಂದ ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಲಾಗಲಿಲ್ಲ ಎಂಬುದನ್ನು ಸೂಚಿಸುತ್ತದೆ, ಏಕೆಂದರೆ ಆ ಬ್ಯಾಂಕ್ ಇ-ಸಲ್ಲಿಕೆ ಪೋರ್ಟಲ್‌ನೊಂದಿಗೆ ಸಂಯೋಜಿಸಲ್ಪಟ್ಟ ಬ್ಯಾಂಕ್ ಅಲ್ಲ ಅಥವಾ NPCI ಜೊತೆಗೆ ಸಂಯೋಜಿತವಾಗಿಲ್ಲ. ಇಂತಹ ಸಂದರ್ಭಗಳಲ್ಲಿ, ನೀವು ಇ-ಸಲ್ಲಿಕೆ ಪೋರ್ಟಲ್‌ನೊಂದಿಗೆ ಸಂಯೋಜಿತವಾಗಿರುವ ಬ್ಯಾಂಕ್ (RBI ಪಟ್ಟಿಯ ಪ್ರಕಾರ) ಅಥವಾ NPCI ಜೊತೆ ಸಂಯೋಜಿತವಾಗಿರುವ ಬೇರೆ ಬ್ಯಾಂಕ್ ಖಾತೆಯನ್ನು ಸೇರಿಸಬಹುದು.
3.6 ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡಲು ಮೌಲ್ಯೀಕರಿಸಿದ ಬ್ಯಾಂಕ್ ಖಾತೆಯನ್ನು ನಾಮನಿರ್ದೇಶನ ಮಾಡಿ
ಹಂತ 1:ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡಲು ನಾಮನಿರ್ದೇಶನ ಮಾಡಿ ಬಟನ್ ಅನ್ನು ಸಕ್ರಿಯಗೊಳಿಸಿ:

ಹಂತ 2: ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.

ಹಂತ 3: ಈಗ, ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಮಾಡಲು ಬ್ಯಾಂಕ್ ಖಾತೆಯನ್ನು ನಾಮನಿರ್ದೇಶನ ಮಾಡಲಾಗಿದೆ.

4. ಸಂಬಂಧಿತ ವಿಷಯಗಳು
- ಲಾಗಿನ್
- ನನ್ನ ಪ್ರೊಫೈಲ್
- ITR ಸಲ್ಲಿಸಿ (ITR-1 ರಿಂದ 7)
- ಆದಾಯ ತೆರಿಗೆ ಫಾರ್ಮ್ಗಳನ್ನು ಅಪ್ಲೋಡ್ ಮಾಡಿ
- ಇ-ಪರಿಶೀಲಿಸುವುದು ಹೇಗೆ
- EVCಯನ್ನು ರಚಿಸಿ
- ಸೇವೆ ವಿನಂತಿಗಳನ್ನು ಸಲ್ಲಿಸಿ
- ಇ-ಸಲ್ಲಿಕೆ ಭದ್ರತಾಭಂಡಾರದ ಉನ್ನತ ಭದ್ರತೆ
- ನನ್ನ ಡಿಮ್ಯಾಟ್ ಅಕೌಂಟ್
- ನಿಮ್ಮ ಪಾಸ್‌ವರ್ಡ್ ಮರುಹೊಂದಿಸಿ
- ಪಾಸ್‌ವರ್ಡ್ ಬದಲಾಯಿಸಿ