1. ತೆರಿಗೆ ಪಾವತಿಗಳನ್ನು ಮಾಡಲು ಯಾವ ಕಾಯಿದೆ ಅನ್ವಯವಾಗುತ್ತದೆ?
ನೀವು ತೆರಿಗೆ ವರ್ಷ 2026–27 ಅಥವಾ ಅದರ ನಂತರದ ಅವಧಿಗೆ ತೆರಿಗೆ ಪಾವತಿಯನ್ನು ಮಾಡುತ್ತಿದ್ದರೆ, ಆದಾಯ ತೆರಿಗೆ ಕಾಯಿದೆ, 2025 ಅನ್ವಯವಾಗುತ್ತದೆ.
ತೆರಿಗೆ ವರ್ಷ 2026–27 ಕ್ಕಿಂತ ಹಿಂದಿನ ಅವಧಿಗಳಿಗೆ (ಅಂದರೆ, ಮೌಲ್ಯಮಾಪನ ವರ್ಷ 2026–27 ಅಥವಾ ಅದಕ್ಕಿಂತ ಮುಂಚಿನ ಅವಧಿಗೆ) ಸಂಬಂಧಿಸಿದ ಪಾವತಿಗಳಿಗಾಗಿ, ನೀವು ಆದಾಯ ತೆರಿಗೆ ಕಾಯಿದೆ, 1961 ಅನ್ನು ಆಯ್ಕೆ ಮಾಡಬೇಕು.
2. ಮೌಲ್ಯಮಾಪನ ವರ್ಷ (AY) 2026–27 ಕ್ಕೆ ಸ್ವಯಂ ಮೌಲ್ಯಮಾಪನ ತೆರಿಗೆಯನ್ನು ಪಾವತಿಸಲು ಯಾವ ಕಾಯಿದೆ ಅನ್ವಯವಾಗುತ್ತದೆ?
ಮೌಲ್ಯಮಾಪನ ವರ್ಷ (AY) 2026–27 ಕ್ಕೆ ಸ್ವಯಂ ಮೌಲ್ಯಮಾಪನ ತೆರಿಗೆ ಪಾವತಿಸಲು, ಆದಾಯ ತೆರಿಗೆ ಕಾಯಿದೆ, 1961 ಅನ್ವಯವಾಗುತ್ತದೆ.
ತೆರಿಗೆ ವರ್ಷ 2026–27 ಮತ್ತು ನಂತರದ ಅವಧಿಗೆ ಸಂಬಂಧಿಸಿದ ಪಾವತಿಗಳಿಗಾಗಿ, ಆದಾಯ ತೆರಿಗೆ ಕಾಯಿದೆ, 2025 ಅನ್ನು ಆಯ್ಕೆ ಮಾಡಬೇಕು.
3. ತೆರಿಗೆ ವರ್ಷ 2026–27 ಕ್ಕೆ ಮುಂಗಡ ತೆರಿಗೆ ಪಾವತಿಸಲು ಯಾವ ಕಾಯಿದೆ ಅನ್ವಯವಾಗುತ್ತದೆ?
ತೆರಿಗೆ ವರ್ಷ 2026–27 ಕ್ಕೆ ಸಂಬಂಧಿಸಿದ ಮುಂಗಡ ತೆರಿಗೆ ಪಾವತಿಗೆ ಅನ್ವಯವಾಗುವ ಕಾಯಿದೆ ಆದಾಯ ತೆರಿಗೆ ಕಾಯಿದೆ, 2025 ಆಗಿದೆ.
4. ಆದಾಯ ತೆರಿಗೆ ಕಾಯಿದೆ, 2025 ರ ಅಡಿಯಲ್ಲಿ ಯಾವ ಪಾವತಿಗಳು ಅನ್ವಯಿಸುವುದಿಲ್ಲ?
ಆದಾಯ ತೆರಿಗೆ ಕಾಯಿದೆ, 2025 ರ ಅಡಿಯಲ್ಲಿ ಕೆಳಗಿನ ತೆರಿಗೆ ಪಾವತಿಗಳನ್ನು ಕೈಬಿಡಲಾಗಿದೆ ಮತ್ತು ಆದ್ದರಿಂದ ಅವು ಅನ್ವಯಿಸುವುದಿಲ್ಲ:
1. ಸರ್ಟ್ಯಾಕ್ಸ್ (102)
2. ಕಂಪನಿಗಳ ವಿತರಿತ ಲಾಭದ ಮೇಲಿನ ತೆರಿಗೆ (106)
3. ಯೂನಿಟ್ ಹೋಲ್ಡರ್ಗಳಿಗೆ ವಿತರಿಸಲಾದ ಆದಾಯದ ಮೇಲಿನ ತೆರಿಗೆ (107)
4. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 115QA ಅಡಿಯಲ್ಲಿ ಷೇರುಗಳ ಮರುಖರೀದಿಗೆ ಸಂಬಂಧಿಸಿದ ದೇಶೀಯ ಕಂಪನಿಯ ವಿತರಿತ ಆದಾಯದ ಮೇಲಿನ ತೆರಿಗೆ (108)
5. ಕಪ್ಪು ಹಣ ಕಾಯಿದೆ, 2015 ರ ಅಡಿಯಲ್ಲಿ ಬೇಡಿಕೆ / ದಂಡ / ಬಡ್ಡಿಯ ಪಾವತಿ (109)
6. ಬ್ಯಾಂಕಿಂಗ್ ನಗದು ವ್ಯವಹಾರ ತೆರಿಗೆ (0036)
7. ಫ್ರಿಂಜ್ ಬೆನಿಫಿಟ್ ತೆರಿಗೆ (0026)
8. ಹೋಟೆಲ್ ರಸೀದಿ ತೆರಿಗೆ (0023)
9. ಬಡ್ಡಿ ತೆರಿಗೆ (0024)
10. ಎಸ್ಟೇಟ್ ಸುಂಕ (0031)
11. ಸಂಪತ್ತು ತೆರಿಗೆ (0032)
12. ಉಡುಗೊರೆ ತೆರಿಗೆ (0033)
13. ಸಮೀಕರಣ ಲೆವಿ (119)
5. ಮೌಲ್ಯಮಾಪನ ವರ್ಷ (AY) ಮತ್ತು ತೆರಿಗೆ ವರ್ಷ ಒಂದೇ ಆಗಿದೆಯೇ?
ಇಲ್ಲ. ಮೌಲ್ಯಮಾಪನ ವರ್ಷ ಎಂಬ ಪರಿಕಲ್ಪನೆಯು ಆದಾಯ ತೆರಿಗೆ ಕಾಯಿದೆ, 1961 ರ ಅಡಿಯಲ್ಲಿ ಅಸ್ತಿತ್ವದಲ್ಲಿದೆ, ಆದರೆ ತೆರಿಗೆ ವರ್ಷ ಎಂಬ ಪರಿಭಾಷೆಯನ್ನು ಆದಾಯ ತೆರಿಗೆ ಕಾಯಿದೆ, 2025 ರ ಮೂಲಕ ಪರಿಚಯಿಸಲಾಗಿದೆ.
ಆದಾಯ ತೆರಿಗೆ ಕಾಯಿದೆ, 2025 ರ ಅಡಿಯಲ್ಲಿ ಮೌಲ್ಯಮಾಪನ ವರ್ಷ ಎಂಬ ಪರಿಕಲ್ಪನೆ ಇರುವುದಿಲ್ಲ.
6. ತೆರಿಗೆ ವರ್ಷ ಎಂದರೇನು?
ತೆರಿಗೆ ವರ್ಷ ಎಂದರೆ ಏಪ್ರಿಲ್ 1 ರಂದು ಪ್ರಾರಂಭವಾಗುವ ಹನ್ನೆರಡು ತಿಂಗಳ ಆರ್ಥಿಕ ವರ್ಷವಾಗಿದೆ.
ಉದಾಹರಣೆಗೆ, ಆದಾಯ ತೆರಿಗೆ ಕಾಯಿದೆ, 2025 ರ ಅಡಿಯಲ್ಲಿ ತೆರಿಗೆ ವರ್ಷ 2026–27 ಎಂದರೆ ಆರ್ಥಿಕ ವರ್ಷ 2026–27 ಅನ್ನು ಸೂಚಿಸುತ್ತದೆ.
7. "ಉಳಿಸಿದ ಕರಡುಗಳು" ಟ್ಯಾಬ್ ಅಡಿಯಲ್ಲಿ ಚಲನ್ಗಳನ್ನು ಯಾವಾಗ ಉಳಿಸಲಾಗುತ್ತದೆ ಮತ್ತು ಅವುಗಳನ್ನು ಎಷ್ಟು ಅವಧಿಯವರೆಗೆ ಸಂಗ್ರಹಿಸಲಾಗುತ್ತದೆ?7. "ಉಳಿಸಿದ ಕರಡುಗಳು" ಟ್ಯಾಬ್ ಅಡಿಯಲ್ಲಿ ಚಲನ್ಗಳನ್ನು ಯಾವಾಗ ಉಳಿಸಲಾಗುತ್ತದೆ ಮತ್ತು ಅವುಗಳನ್ನು ಎಷ್ಟು ಅವಧಿಯವರೆಗೆ ಸಂಗ್ರಹಿಸಲಾಗುತ್ತದೆ?
ಬಳಕೆದಾರರು “ಕರಡು ರೂಪದಲ್ಲಿ ಉಳಿಸಿ” ಎಂಬುದರ ಮೇಲೆ ಕ್ಲಿಕ್ ಮಾಡಿದಾಗ, ಆವರೆಗೆ ದಾಖಲಿಸಲಾದ ವಿವರಗಳನ್ನು ಉಳಿಸಲಾಗುತ್ತದೆ ಮತ್ತು “ಉಳಿಸಲಾದ ಕರಡುಗಳು” ಎಂಬ ಟ್ಯಾಬ್ ಅಡಿಯಲ್ಲಿ ದಾಖಲಿಸಲಾಗುತ್ತದೆ.
ಉಳಿಸಿದ ಕರಡು ಚಲನ್ಗಳು (CRN ರಚಿಸುವ ಮೊದಲು) ಕೊನೆಯ ನವೀಕರಣದ ದಿನಾಂಕದಿಂದ 15 ದಿನಗಳವರೆಗೆ ಸಂಗ್ರಹಿಸಲಾಗುತ್ತವೆ.
8. “ಉಳಿಸಿದ ಕರಡುಗಳು” ಎಂಬ ಟ್ಯಾಬ್ ಅಡಿಯಲ್ಲಿ ಉಳಿಸಲಾದ ಚಲನ್ಗಳಿಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು?
ತೆರಿಗೆದಾರರು 'ಕ್ರಮಗಳು' ಎಂಬ ಟ್ಯಾಬ್ ಅನ್ನು ಬಳಸಿಕೊಂಡು ಉಳಿಸಿದ ಕರಡು ಚಲನ್ಗಳನ್ನು ಸಂಪಾದಿಸಬಹುದು ಅಥವಾ ಅಳಿಸಬಹುದು.
ಒಂದು ಅಥವಾ ಹೆಚ್ಚಿನ ಕರಡುಗಳನ್ನು ಆಯ್ಕೆ ಮಾಡಿ ಅಳಿಸಲು ಚೆಕ್ಬಾಕ್ಸ್ ಸೌಲಭ್ಯವನ್ನೂ ಒದಗಿಸಲಾಗಿದೆ.
9. 'ರಚಿಸಲಾದ ಚಲನ್ಗಳು' ಎಂಬ ಟ್ಯಾಬ್ ಅಡಿಯಲ್ಲಿ ಚಲನ್ಗಳನ್ನು ಯಾವಾಗ ಉಳಿಸಲಾಗುತ್ತದೆ?
'ರಚಿಸಲಾದ ಚಲನ್ಗಳು' ಎಂಬ ಟ್ಯಾಬ್ನಲ್ಲಿ CRN ರಚಿಸಲ್ಪಟ್ಟಿದ್ದರೂ, CIN ಇನ್ನೂ ರಚನೆಯಾಗದ, ಸ್ವೀಕರಿಸದ ಅಥವಾ ನವೀಕರಿಸದ ಚಲನ್ಗಳನ್ನು ಪ್ರದರ್ಶಿಸಲಾಗುತ್ತದೆ.
10. 'ರಚಿಸಲಾದ ಚಲನ್ಗಳು' ಎಂಬ ಟ್ಯಾಬ್ನಲ್ಲಿರುವ ಚಲನ್ಗಳ ಮೇಲೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಮತ್ತು ಅವುಗಳನ್ನು ಎಷ್ಟು ಅವಧಿಯವರೆಗೆ ಸಂಗ್ರಹಿಸಲಾಗುತ್ತದೆ?
ಆಯ್ಕೆಮಾಡಲಾದ ಪಾವತಿ ವಿಧಾನವನ್ನು ಅವಲಂಬಿಸಿ ಕ್ರಮಗಳು ಲಭ್ಯವಿರುರುತ್ತವೆ ಮತ್ತು ಇವುಗಳನ್ನು ಒಳಗೊಂಡಿರುತ್ತವೆ:
• ಪಾವತಿಸಿ (ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಅಥವಾ ಪಾವತಿ ಗೇಟ್ವೇಗಾಗಿ)
• ಚಲನ್ ಫಾರ್ಮ್ / ಮ್ಯಾಂಡೇಟ್ ಫಾರ್ಮ್ ಡೌನ್ಲೋಡ್ ಮಾಡಿ (OTC ಮತ್ತು NEFT/RTGS ಗಾಗಿ)
• ನಕಲಿಸಿ ಮತ್ತು ವಿವರಗಳನ್ನು ವೀಕ್ಷಿಸಿ (ಎಲ್ಲಾ ಪಾವತಿ ವಿಧಾನಗಳಿಗೆ ಸಾಮಾನ್ಯ)
ರಚಿಸಲಾದ ಚಲನ್, CRN ರಚನೆಯಾದ ದಿನಾಂಕದಿಂದ T+15 ದಿನಗಳ ನಂತರ ಅವಧಿ ಮುಗಿಯುತ್ತದೆ.
ಅವಧಿ ಮುಗಿದ ಚಲನ್ಗಳು "ರಚಿಸಲಾದ ಚಲನ್ಗಳು" ಟ್ಯಾಬ್ನಲ್ಲಿ "ಮಾನ್ಯತೆಯ ಅಂತಿಮ ದಿನಾಂಕ"ದಿಂದ 30 ದಿನಗಳವರೆಗೆ ಗೋಚರಿಸುತ್ತವೆ.
11. ಪಾವತಿ ಇತಿಹಾಸ ಟ್ಯಾಬ್ ಅಡಿಯಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬಹುದು?
ತೆರಿಗೆದಾರರು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು:
• ಚಲನ್ ರಸೀದಿಯನ್ನು (PDF ಸ್ವರೂಪದಲ್ಲಿ) ಡೌನ್ಲೋಡ್ ಮಾಡಿ
• 'ವಿವರಗಳನ್ನು ನೋಡಿ' ಮೂಲಕ ಚಲನ್ ಸಾರಾಂಶವನ್ನು ನೋಡಬಹುದು
• 'ಚಲನ್ ನಕಲಿಸಿ' ಮೂಲಕ ಪೂರ್ವಭರಿತ ವಿವರಗಳೊಂದಿಗೆ ಹೊಸ ಪಾವತಿಯನ್ನು ಪ್ರಾರಂಭಿಸಬಹುದು
12. ಇ-ಸಲ್ಲಿಕೆ ಪೋರ್ಟಲ್ನಲ್ಲಿ ಯಾವ ಪಾವತಿ ವಿಧಾನಗಳು ಲಭ್ಯವಿವೆ?
ಇ-ಸಲ್ಲಿಕೆ ಪೋರ್ಟಲ್ನಿಂದ ರಚಿಸಲಾದ ಚಲನ್ಗಳನ್ನು ಬಳಸಿಕೊಂಡು ಕೆಳಗಿನ ಪಾವತಿ ವಿಧಾನಗಳ ಮೂಲಕ ತೆರಿಗೆ ಪಾವತಿಗಳನ್ನು ಮಾಡಬಹುದು:
• ನೆಟ್ ಬ್ಯಾಂಕಿಂಗ್
• ಡೆಬಿಟ್ ಕಾರ್ಡ್
• ಪಾವತಿ ಗೇಟ್ವೇ (ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / UPI)
• NEFT / RTGS (ಮ್ಯಾಂಡೇಟ್ ಫಾರ್ಮ್ ಮೂಲಕ)
• ಆಯ್ದ ಬ್ಯಾಂಕ್ ಶಾಖೆಗಳಲ್ಲಿ ಕೌಂಟರ್ ಮೂಲಕ (ನಗದು, ಚೆಕ್, DD)
13. ನೆಟ್ ಬ್ಯಾಂಕಿಂಗ್ ಬಳಸಿ ನಾನು ತೆರಿಗೆ ಪಾವತಿಯನ್ನು ಹೇಗೆ ಮಾಡಬಹುದು?
ತೆರಿಗೆದಾರರು ಇ-ಸಲ್ಲಿಕೆ ಪೋರ್ಟಲ್ಗೆ ಲಾಗಿನ್ ಮಾಡಿ, "ಇ-ಸಲ್ಲಿಕೆ → ಇ-ತೆರಿಗೆ ಪಾವತಿ" ಗೆ ಹೋಗಿ, ಹೊಸ ಪಾವತಿಯನ್ನು ಪ್ರಾರಂಭಿಸಬೇಕು, ಅನ್ವಯವಾಗುವ ತೆರಿಗೆ ವಿವರಗಳನ್ನು ಆಯ್ಕೆ ಮಾಡಬೇಕು, ಪಾವತಿ ವಿಧಾನವಾಗಿ ನೆಟ್ ಬ್ಯಾಂಕಿಂಗ್ ಅನ್ನು ಆಯ್ಕೆ ಮಾಡಬೇಕು, ವಿವರಗಳನ್ನು ಪರಿಶೀಲಿಸಿ ಪಾವತಿಯನ್ನು ಪೂರ್ಣಗೊಳಿಸಬೇಕು.
ಯಶಸ್ವಿ ಪಾವತಿಯ ನಂತರ, ದೃಢೀಕರಣವನ್ನು ಮಿಂಚೋಲೆ (email) ಮತ್ತು SMS ಮೂಲಕ ಕಳುಹಿಸಲಾಗುತ್ತದೆ ಮತ್ತು ಚಲನ್ ರಸೀದಿಯು "ಪಾವತಿ ಇತಿಹಾಸ" ಅಡಿಯಲ್ಲಿ ಲಭ್ಯವಿರುತ್ತದೆ.
14. ಕೌಂಟರ್ ಮೂಲಕ (OTC) ಪಾವತಿ ವಿಧಾನವನ್ನು ಬಳಸಿಕೊಂಡು ನಾನು ತೆರಿಗೆ ಪಾವತಿಯನ್ನು ಹೇಗೆ ಮಾಡಬಹುದು?
ಇ-ಸಲ್ಲಿಕೆ ಪೋರ್ಟಲ್ನಲ್ಲಿ ಚಲನ್ ರಚಿಸಿದ ನಂತರ, ಮತ್ತು 'ಬ್ಯಾಂಕ್ ಕೌಂಟರ್ನಲ್ಲಿ ಪಾವತಿಸಿ' ಅನ್ನು ಆಯ್ಕೆ ಮಾಡಿದ ನಂತರ, ಚಲನ್ ಫಾರ್ಮ್ (CRN) ಅನ್ನು ಮುದ್ರಿಸಿ, ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಆಯ್ಕೆಮಾಡಿದ ಬ್ಯಾಂಕ್ ಶಾಖೆಯಲ್ಲಿ ಸಲ್ಲಿಸಬೇಕು.
ಪಾವತಿ ಪೂರ್ಣಗೊಂಡ ನಂತರ, 'ಪಾವತಿ ದೃಢೀಕರಣ'ವೂ 'ಚಲನ್ ರಸೀದಿ'ಯೂ 'ಪಾವತಿ ಇತಿಹಾಸ'ದ ಅಡಿಯಲ್ಲಿ ಲಭ್ಯವಿರುತ್ತದೆ.
15. NEFT/RTGS ವಿಧಾನವನ್ನು ಬಳಸಿಕೊಂಡು ನಾನು ತೆರಿಗೆ ಪಾವತಿಯನ್ನು ಹೇಗೆ ಮಾಡಬಹುದು?
NEFT/RTGS ಅನ್ನು ಪಾವತಿ ವಿಧಾನವಾಗಿ ಆಯ್ಕೆ ಮಾಡಿದ ನಂತರ, ಮ್ಯಾಂಡೇಟ್ ಫಾರ್ಮ್ ರಚಿಸಲಾಗುತ್ತದೆ.
ತೆರಿಗೆದಾರರು ಮ್ಯಾಂಡೇಟ್ ಫಾರ್ಮ್ ಅನ್ನು ಮುದ್ರಿಸಿ, ಫಲಾನುಭವಿ ವಿವರಗಳನ್ನು ಸೇರಿಸಿದ ನಂತರ ಬ್ಯಾಂಕ್ ಶಾಖೆಯಲ್ಲಿ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ NEFT/RTGS ಬಳಸಿ ಪಾವತಿಯನ್ನು ಮಾಡಬೇಕು.
ಯಶಸ್ವಿ ಪಾವತಿಯ ನಂತರ, ಚಲನ್ ವಿವರಗಳು "ಪಾವತಿ ಇತಿಹಾಸ"ದ ಅಡಿಯಲ್ಲಿ ಕಾಣಿಸಿಕೊಳ್ಳುತ್ತವೆ.
16. ಡೆಬಿಟ್ ಕಾರ್ಡ್ ಬಳಸಿ ನಾನು ತೆರಿಗೆ ಪಾವತಿಯನ್ನು ಹೇಗೆ ಮಾಡಬಹುದು?
ತೆರಿಗೆದಾರರು ಡೆಬಿಟ್ ಕಾರ್ಡ್ ಅನ್ನು ಪಾವತಿ ವಿಧಾನವಾಗಿ ಆಯ್ಕೆ ಮಾಡಿ, ವಿವರಗಳನ್ನು ಪರಿಶೀಲಿಸಿ, ಆಯ್ಕೆಮಾಡಿದ ಬ್ಯಾಂಕ್ ಮೂಲಕ ವಹಿವಾಟನ್ನು ಪೂರ್ಣಗೊಳಿಸಬೇಕು.
ಯಶಸ್ವಿ ಪಾವತಿಯ ದೃಢೀಕರಣವನ್ನು ಮಿಂಚೋಲೆ (email) ಮತ್ತು SMS ಮೂಲಕ ಕಳುಹಿಸಲಾಗುತ್ತದೆ.
17. ಪಾವತಿ ಗೇಟ್ವೇ ಬಳಸಿ ನಾನು ತೆರಿಗೆ ಪಾವತಿಯನ್ನು ಹೇಗೆ ಮಾಡಬಹುದು?
ಪಾವತಿ ಗೇಟ್ವೇ ಅನ್ನು ಆಯ್ಕೆ ಮಾಡಿದ ನಂತರ, ತೆರಿಗೆದಾರರನ್ನು ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ UPI ಬಳಸಿ ಪಾವತಿಯನ್ನು ಪೂರ್ಣಗೊಳಿಸಲು ಪಾವತಿ ಗೇಟ್ವೇ ವೆಬ್ಸೈಟ್ಗೆ ಕರೆದೊಯ್ಯಲಾಗುತ್ತದೆ.
ವಹಿವಾಟು ಶುಲ್ಕಗಳು ಗೇಟ್ವೇಗಳ ನಡುವೆ ಬದಲಾಗಬಹುದು.
ಪಾವತಿ ಯಶಸ್ವಿಯಾದ ನಂತರ ದೃಢೀಕರಣವನ್ನು ಕಳುಹಿಸಲಾಗುತ್ತದೆ.
18. CSI ಕಡತವೆಂದರೇನು?
CSI ಕಡತದಲ್ಲಿ ಪಾವತಿ ಮೊತ್ತ, ದಿನಾಂಕ, ಸೆಕ್ಷನ್ ಮತ್ತು ತೆರಿಗೆಯ ಪ್ರಕಾರದಂತಹ ಪ್ರಮುಖ ಚಲನ್ ಮಾಹಿತಿಗಳು ಒಳಗೊಂಡಿರುತ್ತವೆ.
ತೆರಿಗೆ ಪಾವತಿಗಳನ್ನು ಸರಿಯಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆಯೇ ಎಂಬುದನ್ನು ಪರಿಶೀಲಿಸಲು TDS ರಿಟರ್ನ್ ಸಲ್ಲಿಸುವ ಸಮಯದಲ್ಲಿ ಇದನ್ನು ಬಳಸಲಾಗುತ್ತದೆ.
19. CSI ಕಡತವನ್ನು ಯಾರು ಡೌನ್ಲೋಡ್ ಮಾಡಬಹುದು?
TAN ಬಳಕೆದಾರರು ಮಾತ್ರ, TAN ಅನ್ನು ಬಳಕೆದಾರ ID ಆಗಿ ಬಳಸಿಕೊಂಡು, ಲಾಗಿನ್ ಮಾಡುವ ಮೂಲಕ, CSI ಕಡತವನ್ನು ಡೌನ್ಲೋಡ್ ಮಾಡಬಹುದು.
20. CSI ಕಡತವನ್ನು ನಾನು ಹೇಗೆ ಡೌನ್ಲೋಡ್ ಮಾಡಬಹುದು?
TAN ಮೂಲಕ ಲಾಗಿನ್ ಮಾಡಿದ ನಂತರ, "ಇ-ಸಲ್ಲಿಕೆ → ಇ-ತೆರಿಗೆ ಪಾವತಿ → ಪಾವತಿ ಇತಿಹಾಸ"ಕ್ಕೆ ಹೋಗಿ, 'ಪಾವತಿ ದಿನಾಂಕ' ಶೋಧಕವನ್ನು (filter) ಅನ್ವಯಿಸಿ ಮತ್ತು ಆಯ್ಕೆ ಸಕ್ರಿಯಗೊಂಡ ನಂತರ CSI ಕಡತವನ್ನು ಡೌನ್ಲೋಡ್ ಮಾಡಬಹುದು.
CSI ಕಡತಗಳನ್ನು 'ಮೌಲ್ಯಮಾಪನ ವರ್ಷ' ಅಥವಾ 'ಪಾವತಿ ಪ್ರಕಾರ'ದ ಶೋಧಕಗಳನ್ನು ಬಳಸಿಕೊಂಡು ಡೌನ್ಲೋಡ್ ಮಾಡಲು ಸಾಧ್ಯವಿಲ್ಲ.
21. CSI ಕಡತವನ್ನು ಗರಿಷ್ಠ ಎಷ್ಟು ಅವಧಿಯವರೆಗೆ ಡೌನ್ಲೋಡ್ ಮಾಡಬಹುದು?
'ದಿನಾಂಕ ವ್ಯಾಪ್ತಿ' ಶೋಧಕವನ್ನು ಬಳಸಿಕೊಂಡು ಗರಿಷ್ಠ 24 ತಿಂಗಳ ಅವಧಿಗೆ ಮಾತ್ರ CSI ಕಡತಗಳನ್ನು ಡೌನ್ಲೋಡ್ ಮಾಡಬಹುದು.
22. 01 ಜುಲೈ 2022 ಕ್ಕಿಂತ ಹಿಂದಿನ ಅವಧಿಗಳಿಗೆ ನಾನು CSI ಕಡತವನ್ನು ಡೌನ್ಲೋಡ್ ಮಾಡಬಹುದೇ?
ಇಲ್ಲ. 01 ಜುಲೈ 2022 ಕ್ಕಿಂತ ಹಿಂದಿನ ಅವಧಿಗಳಿಗೆ ಸಂಬಂಧಿಸಿದ CSI ಕಡತಗಳನ್ನು ಇ-ಸಲ್ಲಿಕೆ ಪೋರ್ಟಲ್ನಿಂದ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ.
ಹಿಂದಿನ ಅವಧಿಗಳಿಗೆ, ಬಳಕೆದಾರರು ಕಡತವನ್ನು ಪ್ರೋಟಿಯನ್ (NSDL) ಪೋರ್ಟಲ್ನಿಂದ ಡೌನ್ಲೋಡ್ ಮಾಡಬೇಕು.
23. CSI ಕಡತವನ್ನು ಯಾವ ಸ್ವರೂಪದಲ್ಲಿ ಡೌನ್ಲೋಡ್ ಮಾಡಲಾಗುತ್ತದೆ?
CSI ಕಡತವನ್ನು .csi ಸ್ವರೂಪದಲ್ಲಿ ಡೌನ್ಲೋಡ್ ಮಾಡಲಾಗುತ್ತದೆ, ಇದು RPU ನಂತಹ TDS ರಿಟರ್ನ್ ತಯಾರಿ ಉಪಯುಕ್ತತೆಗಳೊಂದಿಗೆ ಹೊಂದಿಕೊಳ್ಳುತ್ತದೆ.
24. ಲಾಗಿನ್ ಮಾಡದೆ ನನ್ನ ತೆರಿಗೆ ಪಾವತಿ ಸ್ಥಿತಿಯನ್ನು ನಾನು ಹೇಗೆ ಪರಿಶೀಲಿಸಬಹುದು?
ಬಳಕೆದಾರರು ಇ-ಸಲ್ಲಿಕೆ ಪೋರ್ಟಲ್ನ ಲಾಗಿನ್ ಪೂರ್ವ ಸೇವೆಗಳ ಅಡಿಯಲ್ಲಿ 'ನಿಮ್ಮ ಪಾವತಿ ಸ್ಥಿತಿಯನ್ನು ತಿಳಿಯಿರಿ' ಆಯ್ಕೆಯ ಮೂಲಕ PAN, CRN ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ನಂತರ OTP ಪರಿಶೀಲನೆಯನ್ನು ಪೂರ್ಣಗೊಳಿಸುವ ಮೂಲಕ ಪಾವತಿ ಸ್ಥಿತಿಯನ್ನು ಪರಿಶೀಲಿಸಬಹುದು.
25. BSR ಕೋಡ್, ಚಲನ್ ಸಂಖ್ಯೆ ಮತ್ತು ಪಾವತಿ ದಿನಾಂಕದಂತಹ ವಿವರಗಳನ್ನು ನಾನು ಎಲ್ಲಿಂದ ಪಡೆಯಬಹುದು?
ಸಂಬಂಧಿತ ಚಲನ್ಗಾಗಿ 'ಕ್ರಮಗಳು' ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಈ ವಿವರಗಳನ್ನು 'ಪಾವತಿ ಇತಿಹಾಸ' ಟ್ಯಾಬ್ ಅಡಿಯಲ್ಲಿ ಪಡೆಯಬಹುದು.