Do not have an account?
Already have an account?

ಆಧಾರ್ ಲಿಂಕ್ ಮಾಡಿ ಕುರಿತು ಬಳಕೆದಾರ ಕೈಪಿಡಿ

 

1. ಅವಲೋಕನ

ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 139AA ಅಥವಾ ಆದಾಯ ತೆರಿಗೆ ಕಾಯ್ದೆ, 2025 ರ ಸೆಕ್ಷನ್ 262 ರ ನಿಬಂಧನೆಗಳ ಪ್ರಕಾರ, PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. PAN ಕಾರ್ಡ್‌ನ ಹೊಸ ಅರ್ಜಿದಾರರಿಗೆ, ಅರ್ಜಿ ಹಂತದಲ್ಲಿಯೇ ಆಧಾರ್-PAN ಲಿಂಕ್ ಅನ್ನು ಸ್ವಯಂಚಾಲಿತವಾಗಿ ಮಾಡಲಾಗುತ್ತದೆ. 01-07-2017 ರಂದು ಅಥವಾ ಅದಕ್ಕೂ ಮೊದಲು PAN ಹಂಚಿಕೆಯಾದ ಅಸ್ತಿತ್ವದಲ್ಲಿರುವ PAN ಹೊಂದಿರುವವರಿಗೆ, PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಲಿಂಕ್ ಆಧಾರ್ ಸೇವೆಯು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ (www.incometax.gov.in) ವೈಯಕ್ತಿಕ ತೆರಿಗೆದಾರರಿಗೆ (ನೋಂದಾಯಿತ ಮತ್ತು ನೋಂದಾಯಿಸದ ಎರಡಕ್ಕೂ) ಲಭ್ಯವಿದೆ. ನೀವು ನಿಮ್ಮ PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ PAN ನಿಷ್ಕ್ರಿಯವಾಗುತ್ತದೆ. ಆದಾಗ್ಯೂ, ವಿನಾಯಿತಿ ಪಡೆದ ವರ್ಗದ ಅಡಿಯಲ್ಲಿ ಬರುವ ಕೆಲವು ವ್ಯಕ್ತಿಗಳು PAN ನಿಷ್ಕ್ರಿಯವಾಗುವುದರಿಂದ ಉಂಟಾಗುವ ಪರಿಣಾಮಗಳಿಗೆ ಒಳಪಡುವುದಿಲ್ಲ.

ಆಧಾರ್ ಅನ್ನು PANನೊಂದಿಗೆ ಲಿಂಕ್ ಮಾಡಲು ಎರಡು ಪ್ರಮುಖ ಹಂತಗಳಿವೆ.

1. ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಆಧಾರ್-ಪ್ಯಾನ್ ಲಿಂಕ್ ಶುಲ್ಕ ಪಾವತಿ (ಮೈನರ್ ಹೆಡ್ 500 ಅಡಿಯಲ್ಲಿ, ಮೇಜರ್ ಹೆಡ್ 0021 ರಲ್ಲಿ, ಒಂದೇ ಚಲನ್ ಮೂಲಕ).

2. ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಆಧಾರ್ ಅನ್ನು PANನೊಂದಿಗೆ ಲಿಂಕ್ ಮಾಡಿ.

ಆಧಾರ್ ಅನ್ನು ಪ್ಯಾನ್‌ಗೆ ಲಿಂಕ್ ಮಾಡಿದ ನಂತರ, 'ಆಧಾರ್-ಪ್ಯಾನ್ ಲಿಂಕ್ ಸ್ಥಿತಿ' ಸೌಲಭ್ಯದ ಮೂಲಕ ಅದರ ಸ್ಥಿತಿಯನ್ನು ಪರಿಶೀಲಿಸಬಹುದು.

2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು:

  • ಮಾನ್ಯ PAN
  • ಆಧಾರ್ ಸಂಖ್ಯೆ
  • ಮಾನ್ಯ ಮೊಬೈಲ್ ಸಂಖ್ಯೆ

3. ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಆಧಾರ್-PAN ಲಿಂಕ್ ಶುಲ್ಕವನ್ನು ಹೇಗೆ ಪಾವತಿಸುವುದು

ಹಂತ 1: ಇ-ಸಲ್ಲಿಕೆ ಪೋರ್ಟಲ್ ನ ಮುಖಪುಟಕ್ಕೆ ಭೇಟಿ ನೀಡಿ.

Data responsive

ಕ್ವಿಕ್ ಲಿಂಕ್ಸ್ (ತ್ವರಿತ ಲಿಂಕ್‌ಗಳು) ವಿಭಾಗದಲ್ಲಿ 'ಆಧಾರ್ ಲಿಂಕ್ ಮಾಡಿ' ಮೇಲೆ ಕ್ಲಿಕ್ ಮಾಡಿ. ಪರ್ಯಾಯವಾಗಿ, ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಿ ಮತ್ತು 'ಪ್ರೊಫೈಲ್' ವಿಭಾಗದಲ್ಲಿ 'ಆಧಾರ್ ಲಿಂಕ್ ಮಾಡಿ' ಮೇಲೆ ಕ್ಲಿಕ್ ಮಾಡಿ.

Data responsiveData responsive

ಹಂತ 2:‘ಆಧಾರ್ ಲಿಂಕ್ ಮಾಡಿ' ವಿಭಾಗದಲ್ಲಿ ‘ಮುಂದುವರಿಸಿ’ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3: ನಿಮ್ಮ PAN ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ‘ಮೌಲ್ಯೀಕರಿಸಿ’ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 4: ‘ಇ-ಪೇ ತೆರಿಗೆ ಮೂಲಕ ಪಾವತಿಸುವುದನ್ನು ಮುಂದುವರಿಸಿ’ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 5: ಅನ್ವಯವಾಗುವ ಆದಾಯ ತೆರಿಗೆ ಕಾಯ್ದೆ, 2025 ಆಯ್ಕೆಮಾಡಿ ಮತ್ತು 'ಮುಂದುವರಿಸಿ' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 6: OTP ಸ್ವೀಕರಿಸಲು ನಿಮ್ಮ PAN ಅನ್ನು ನಮೂದಿಸಿ, PAN ಮತ್ತು ಯಾವುದೇ ಮಾನ್ಯ ಮೊಬೈಲ್ ಸಂಖ್ಯೆಯನ್ನು ದೃಢೀಕರಿಸಿ.

Data responsive

ಹಂತ 7: OTP ಪರಿಶೀಲನೆಯ ನಂತರ, ನಿಮ್ಮನ್ನು ಇ-ಪೇ ತೆರಿಗೆ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. 'ಮುಂದುವರಿಸಿ' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 8: ‘ಆದಾಯ ತೆರಿಗೆ’ ಟೈಲ್‌ನಲ್ಲಿ ‘ಮುಂದುವರಿಯಿರಿ’ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 9:ಸಂಬಂಧಿತ ತೆರಿಗೆ ವರ್ಷ, ಇತರ ರಶೀದಿಗಳಾಗಿ ಪಾವತಿಯ ಪ್ರಕಾರ (500), ಪಾವತಿಯ ಉಪ ಪ್ರಕಾರ (ಆಧಾರ್‌ನೊಂದಿಗೆ PAN ಲಿಂಕ್ ಮಾಡುವಲ್ಲಿ ವಿಳಂಬಕ್ಕಾಗಿ ಶುಲ್ಕ) ಆಯ್ಕೆಮಾಡಿ ಮತ್ತು 'ಮುಂದುವರಿಸಿ' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 10:ಅನ್ವಯವಾಗುವ ಮೊತ್ತವು ಇತರೆ ವಿಭಾಗದ ಎದುರು ಸ್ವಯಂಚಾಲಿತವಾಗಿ ಭರ್ತಿಯಾಗಿರುತ್ತದೆ. ‘ಮುಂದುವರಿಸಿ’ ಮೇಲೆ ಕ್ಲಿಕ್ ಮಾಡಿ.

Data responsive

ಈಗ, ಚಲನ್ ರಚನೆಯಾಗುತ್ತದೆ. ಮುಂದಿನ ಪರದೆಯಲ್ಲಿ, ನೀವು ಪಾವತಿ ವಿಧಾನವನ್ನು ಆಯ್ಕೆ ಮಾಡಬೇಕು. ಪಾವತಿ ವಿಧಾನವನ್ನು ಆಯ್ಕೆ ಮಾಡಿದ ನಂತರ, ನಿಮ್ಮನ್ನು ಬ್ಯಾಂಕ್ ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು ಪಾವತಿ ಮಾಡಬಹುದು.

ಶುಲ್ಕವನ್ನು ಪಾವತಿಸಿದ ನಂತರ, ಇ-ಸಲ್ಲಿಕೆ ಪೋರ್ಟಲ್ ನಲ್ಲಿ ನಿಮ್ಮ ಆಧಾರ್ ಅನ್ನು PAN ನೊಂದಿಗೆ ಲಿಂಕ್ ಮಾಡಬಹುದು.

4. ಶುಲ್ಕ ಪಾವತಿಯ ನಂತರ ಆಧಾರ್ PAN ಲಿಂಕ್ ವಿನಂತಿಯನ್ನು ಹೇಗೆ ಸಲ್ಲಿಸುವುದು

ಆಧಾರ್ PAN ಲಿಂಕ್ ವಿನಂತಿಯನ್ನು ಲಾಗಿನ್ ನಂತರದ ಮತ್ತು ಲಾಗಿನ್ ಪೂರ್ವದ ವಿಧಗಳಲ್ಲಿ ಮಾಡಬಹುದು.

ಪ್ರತಿ ವಿಧದ ಹಂತಗಳನ್ನು ಒಂದೊಂದಾಗಿ ಕೆಳಗೆ ವಿವರಿಸಲಾಗಿದೆ:

ಆಧಾರ್ PAN ಲಿಂಕ್ ವಿನಂತಿಯನ್ನು ಸಲ್ಲಿಸಿ (ಲಾಗಿನ್ ಮಾಡಿದ ನಂತರ):

ಹಂತ 1: ಇ-ಸಲ್ಲಿಕೆ ಪೋರ್ಟಲ್‌ಗೆ ಹೋಗಿ > ‘ಲಾಗಿನ್’ > ಡ್ಯಾಶ್‌ಬೋರ್ಡ್‌ನಲ್ಲಿ, ಪ್ರೊಫೈಲ್ ವಿಭಾಗದಲ್ಲಿ ಆಧಾರ್‌ ಅನ್ನು PAN ನೊಂದಿಗೆ ಲಿಂಕ್‌ ಮಾಡಿ ಆಯ್ಕೆಯ ಅಡಿಯಲ್ಲಿ , ‘ಆಧಾರ್ ಲಿಂಕ್ ಮಾಡಿ’ ಮೇಲೆ ಕ್ಲಿಕ್ ಮಾಡಿ.

Data responsive

ಅಥವಾ ಪರ್ಯಾಯವಾಗಿ, ವೈಯಕ್ತಿಕ ವಿವರಗಳ ವಿಭಾಗದಲ್ಲಿ 'ಆಧಾರ್ ಲಿಂಕ್ ಮಾಡಿ' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ‘ಮೌಲ್ಯೀಕರಿಸಿ’ ಮೇಲೆ ಕ್ಲಿಕ್ ಮಾಡಿ.

Data responsive

ಆಧಾರ್ PAN ಲಿಂಕ್ ವಿನಂತಿಯನ್ನು ಸಲ್ಲಿಸಿ (ಪೂರ್ವ-ಲಾಗಿನ್):

ಹಂತ 1: ಇ- ಸಲ್ಲಿಕೆ ಪೋರ್ಟಲ್ ನ ಮುಖಪುಟಕ್ಕೆ ಹೋಗಿ ಮತ್ತು ‘ತ್ವರಿತ ಲಿಂಕ್ ಗಳು’ ಅಡಿಯಲ್ಲಿ ‘ಆಧಾರ್ ಲಿಂಕ್‌ ಮಾಡಿʼ ಮೇಲೆ ಕ್ಲಿಕ್‌ ಮಾಡಿ.

Data responsive

ಹಂತ 2: ಲಿಂಕ್ ಆಧಾರ್ ವಿಭಾಗದಲ್ಲಿ ‘ಮುಂದುವರಿಸಿ’ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3: PAN ಮತ್ತು ಆಧಾರ್ ನಮೂದಿಸಿ ಮತ್ತು ‘ಮೌಲ್ಯೀಕರಿಸಿ’ ಮೇಲೆ ಕ್ಲಿಕ್ ಮಾಡಿ.

Data responsive

ನೀವು ಆಧಾರ್ PAN ಲಿಂಕ್ ಶುಲ್ಕವನ್ನು ಪಾವತಿಸಿದ್ದರೆ, ಪಾವತಿ ವಿವರಗಳನ್ನು ಪರಿಶೀಲಿಸಲಾಗುತ್ತದೆ. 'ಮುಂದುವರಿಸಿ' ಕ್ಲಿಕ್ ಮಾಡಿ.

Data responsive

ಹಂತ 4: ಅಗತ್ಯವಿರುವ ಕಡ್ಡಾಯ ವಿವರಗಳನ್ನು ನಮೂದಿಸಿ ಮತ್ತು ‘ಆಧಾರ್ ಲಿಂಕ್ ಮಾಡಿ’ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 5: ಹಿಂದಿನ ಹಂತದಲ್ಲಿ ಉಲ್ಲೇಖಿಸಲಾದ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ 6-ಅಂಕಿಯ OTP ಅನ್ನು ನಮೂದಿಸಿ ಮತ್ತು 'ಮೌಲ್ಯೀಕರಿಸಿ' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 6:ಆಧಾರ್ ಲಿಂಕ್‌ಗಾಗಿ ವಿನಂತಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ, ಈಗ ನೀವು ಆಧಾರ್-PAN ಲಿಂಕ್ ಸ್ಥಿತಿಯನ್ನು ಪರಿಶೀಲಿಸಬಹುದು.

Data responsive

ಸನ್ನಿವೇಶ 1: ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಪಾವತಿ ವಿವರಗಳನ್ನು ಪರಿಶೀಲಿಸದಿದ್ದರೆ.

ಹಂತ 1:  PAN ಮತ್ತು ಆಧಾರ್ ಅನ್ನು ಮೌಲ್ಯೀಕರಿಸಿದ ನಂತರ, ನೀವು ಪಾಪ್-ಅಪ್ ಸಂದೇಶವನ್ನು ನೋಡುತ್ತೀರಿ ಅದು

'ಪಾವತಿ ವಿವರಗಳು ಕಂಡುಬಂದಿಲ್ಲ'. ಆಧಾರ್ PAN ಲಿಂಕ್ ವಿನಂತಿಯನ್ನು ಸಲ್ಲಿಸಲು ಶುಲ್ಕ ಪಾವತಿಯು ಪೂರ್ವಾಪೇಕ್ಷಿತವಾಗಿರುವುದರಿಂದ ಶುಲ್ಕ ಪಾವತಿಗಾಗಿ 'ಇ-ಪೇ ತೆರಿಗೆ ಮೂಲಕ ಪಾವತಿಸುವುದನ್ನು ಮುಂದುವರಿಸಿ'ಮೇಲೆ ಕ್ಲಿಕ್ ಮಾಡಿ.

Data responsive

ಗಮನಿಸಿ: ನೀವು ಈಗಾಗಲೇ ಶುಲ್ಕವನ್ನು ಪಾವತಿಸಿದ್ದರೆ, 4-5 ಕೆಲಸದ ದಿನಗಳವರೆಗೆ ಕಾಯಿರಿ. ಅದರ ನಂತರ, ನೀವು ವಿನಂತಿಯನ್ನು ಸಲ್ಲಿಸಬಹುದು.

ಗಮನಿಸಿ: ದಯವಿಟ್ಟು ನಿಮ್ಮ ಸರಿಯಾದ ಆಧಾರ್ ಅನ್ನು ನಿಮ್ಮ PANನೊಂದಿಗೆ ಲಿಂಕ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಆಧಾರ್ ಮತ್ತು PAN ಈಗಾಗಲೇ ಲಿಂಕ್ ಆಗಿದ್ದರೆ ಅಥವಾ PAN ಬೇರೆ ಯಾವುದಾದರೂ ಆಧಾರ್ ಗೆ ಲಿಂಕ್ ಆಗಿದ್ದರೆ ಅಥವಾ ಪ್ರತಿಯಾಗಿ, ನೀವು ಈ ಕೆಳಗಿನ ದೋಷಗಳನ್ನು ಪಡೆಯುತ್ತೀರಿ:

ಸನ್ನಿವೇಶ 2: PAN ಈಗಾಗಲೇ ಆಧಾರ್ ಅಥವಾ ಬೇರೆ ಯಾವುದಾದರೂ ಆಧಾರ್‌ನೊಂದಿಗೆ ಲಿಂಕ್ ಆಗಿದೆ:

Data responsive

ನಿಮ್ಮ ಪ್ರಾದೇಶಿಕ ಮೌಲ್ಯಮಾಪನ ಅಧಿಕಾರಿ (JAO) ಅನ್ನು ನೀವು ಸಂಪರ್ಕಿಸಬೇಕಾಗಬಹುದು ಮತ್ತು ತಪ್ಪಾದ ಪ್ಯಾನ್‌ನೊಂದಿಗೆ ನಿಮ್ಮ ಆಧಾರ್ ಲಿಂಕ್ ಅನ್ನು ತೆಗೆದುಹಾಕಲು (ಡಿಲಿಂಕ್ ಮಾಡಲು) ವಿನಂತಿಯನ್ನು ಸಲ್ಲಿಸಿ.

ನಿಮ್ಮ ಪ್ರಾದೇಶಿಕ ಮೌಲ್ಯಮಾಪನ ಅಧಿಕಾರಿ (JAO)ಯ ಸಂಪರ್ಕ ವಿವರಗಳನ್ನು ತಿಳಿದುಕೊಳ್ಳಲು, https://eportal.incometax.gov.in/iec/foservices/#/pre-login/knowYourAO (ಪೂರ್ವ-ಲಾಗಿನ್) ಗೆ ಭೇಟಿ ನೀಡಿ.

ಅಥವಾ https://eportal.incometax.gov.in/iec/foservices/#/dashboard/myProfile/jurisdictionDetail (ಲಾಗಿನ್ ನಂತರ)

ಸನ್ನಿವೇಶ 3: ನೀವು ಚಲನ್ ಪಾವತಿ ಮಾಡಿದ್ದರೆ ಮತ್ತು ಪಾವತಿಗಳು ಮತ್ತು ವಿವರಗಳನ್ನು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಪರಿಶೀಲಿಸಿದ್ದರೆ.

ಹಂತ 1:PAN ಮತ್ತು ಆಧಾರ್ ಅನ್ನು ಮೌಲ್ಯೀಕರಿಸಿದ ನಂತರ 'ನಿಮ್ಮ ಪಾವತಿ ವಿವರಗಳನ್ನು ಪರಿಶೀಲಿಸಲಾಗಿದೆ' ಎಂಬ ಪಾಪ್-ಅಪ್ ಸಂದೇಶವನ್ನು ನೀವು ನೋಡುತ್ತೀರಿ. ಆಧಾರ್ PAN ಲಿಂಕ್ ಮಾಡುವ ವಿನಂತಿಯನ್ನು ಸಲ್ಲಿಸಲು ದಯವಿಟ್ಟು ಪಾಪ್-ಅಪ್ ಸಂದೇಶದಲ್ಲಿ 'ಮುಂದುವರಿಸಿ' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2:ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು 'ಆಧಾರ್ ಲಿಂಕ್‌ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3: ಆಧಾರ್ PAN ಲಿಂಕ್‌ಗಾಗಿ ವಿನಂತಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ, ಈಗ ನೀವು ಆಧಾರ್ PAN ಲಿಂಕ್ ಸ್ಥಿತಿಯನ್ನು ಪರಿಶೀಲಿಸಬಹುದು.

Data responsive

5. ಆಧಾರ್ ಲಿಂಕ್ ಸ್ಥಿತಿಯನ್ನು ವೀಕ್ಷಿಸಿ (ಪೂರ್ವ-ಲಾಗಿನ್)

ಹಂತ 1: ಇ-ಸಲ್ಲಿಕೆ ಪೋರ್ಟಲ್ ಮುಖಪುಟದಲ್ಲಿ, 'ತ್ವರಿತ ಲಿಂಕ್ ಗಳುʼ ಅಡಿಯಲ್ಲಿ, 'ಆಧಾರ್ ಲಿಂಕ್ ಮಾಡಿ/ಸ್ಥಿತಿ ವೀಕ್ಷಣೆ' ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ‘ಸ್ಥಿತಿ ವೀಕ್ಷಿಸಿ’ ಟೈಲ್‌ನಲ್ಲಿ ‘ಮುಂದುವರಿಸಿ’ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3:ನಿಮ್ಮ PAN ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು 'ಲಿಂಕ್ ಆಧಾರ್ ಸ್ಥಿತಿಯನ್ನು ವೀಕ್ಷಿಸಿ' ಮೇಲೆ ಕ್ಲಿಕ್ ಮಾಡಿ.

Data responsive

ಯಶಸ್ವಿ ದೃಢೀಕರಣದ ನಂತರ, ನಿಮ್ಮ ಲಿಂಕ್ ಆಧಾರ್ ಸ್ಥಿತಿಯ ಕುರಿತು ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.

ಆಧಾರ್-ಪ್ಯಾನ್ ಲಿಂಕ್ ಪ್ರಗತಿಯಲ್ಲಿದೆ ಎಂದರೆ:

Data responsive

ಆಧಾರ್-PAN ಲಿಂಕ್ ಯಶಸ್ವಿಯಾಗಿದ್ದರೆ:

Data responsive

6. ಲಿಂಕ್ ಆಧಾರ್ ಸ್ಥಿತಿಯನ್ನು ವೀಕ್ಷಿಸಿ (ಲಾಗಿನ್ ನಂತರ)

ಹಂತ 1: ಲಾಗಿನ್ ಆದ ನಂತರ, ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ, ‘ಆಧಾರ್ ಲಿಂಕ್ ಮಾಡಿ’ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ಪರ್ಯಾಯವಾಗಿ, ನೀವು ‘ನನ್ನ ಪ್ರೊಫೈಲ್’ > ‘ಲಿಂಕ್ ಆಧಾರ್ ಸ್ಥಿತಿ’ ಗೆ ಹೋಗಬಹುದು.

(ನಿಮ್ಮ ಆಧಾರ್ ಈಗಾಗಲೇ ಲಿಂಕ್ ಆಗಿದ್ದರೆ, ಆಧಾರ್ ಸಂಖ್ಯೆಯನ್ನು ಪ್ರದರ್ಶಿಸಲಾಗುತ್ತದೆ. ಆಧಾರ್ ಲಿಂಕ್ ಆಗದಿದ್ದರೆ ‘ಲಿಂಕ್ ಆಧಾರ್ ಸ್ಥಿತಿ’ ಪ್ರದರ್ಶಿಸಲಾಗುತ್ತದೆ).

Data responsive

ಗಮನಿಸಿ:

  • ದೃಢೀಕರಣ ವಿಫಲವಾದರೆ, ಸ್ಥಿತಿ ಪುಟದಲ್ಲಿ 'ಲಿಂಕ್ ಆಧಾರ್' ಮೇಲೆ ಕ್ಲಿಕ್ ಮಾಡಿ, ಮತ್ತು ನಿಮ್ಮ PAN ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ನೀವು ಹಂತಗಳನ್ನು ಪುನರಾವರ್ತಿಸಬೇಕಾಗುತ್ತದೆ.
  • PAN ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ಸಲ್ಲಿಸಿರುವ ನಿಮ್ಮ ವಿನಂತಿಯು UIDAI ನೊಂದಿಗೆ ಬಾಕಿ ಇದ್ದರೆ, ನೀವು ಸ್ಥಿತಿಯನ್ನು ನಂತರ ಪರಿಶೀಲಿಸಬೇಕಾಗುತ್ತದೆ.
  • ಈ ಕೆಳಗಿನ ಸಂದರ್ಭಗಳಲ್ಲಿ, ಆಧಾರ್ ಮತ್ತು PAN ಲಿಂಕ್ ರದ್ದು ಮಾಡಲು ನೀವು ನ್ಯಾಯವ್ಯಾಪ್ತಿಯ AO ಅನ್ನು ಸಂಪರ್ಕಿಸಬೇಕಾಗಬಹುದು.
    • ನಿಮ್ಮ ಆಧಾರ್ ಬೇರೊಂದು PAN‌ನೊಂದಿಗೆ ಲಿಂಕ್ ಆಗಿದ್ದಾಗ
    • ನಿಮ್ಮ PAN‌ ಬೇರೊಂದು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದಾಗ

ಯಶಸ್ವೀ ದೃಢೀಕರಣದ ನಂತರ, ನಿಮ್ಮ ಆಧಾರ್ ಲಿಂಕ್ ಸ್ಠಿತಿಗೆ ಸಂಬಂಧಿಸಿದಂತೆ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.

Data responsive

ಹಕ್ಕು ನಿರಾಕರಣೆ:

ಈ ಬಳಕೆದಾರ ಕೈಪಿಡಿಯನ್ನು ಮಾಹಿತಿ ಮತ್ತು ಸಾಮಾನ್ಯ ಮಾರ್ಗದರ್ಶನ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ. ತೆರಿಗೆದಾರರು ತಮ್ಮ ಪ್ರಕರಣಗಳಿಗೆ ಅನ್ವಯವಾಗುವ ನಿಖರವಾದ ಮಾಹಿತಿ, ವ್ಯಾಖ್ಯಾನಗಳು ಮತ್ತು ಸ್ಪಷ್ಟೀಕರಣಗಳಿಗಾಗಿ ಸಂಬಂಧಿತ ಸುತ್ತೋಲೆಗಳು, ಅಧಿಸೂಚನೆಗಳು, ನಿಯಮಗಳು ಹಾಗೂ ಐಟಿ ಕಾಯ್ದೆಯ ನಿಬಂಧನೆಗಳನ್ನು ಉಲ್ಲೇಖಿಸಲು ಸೂಚಿಸಲಾಗಿದೆ. ಈ ಬಳಕೆದಾರ ಕೈಪಿಡಿಯ ಆಧಾರದ ಮೇಲೆ ತೆಗೆದುಕೊಳ್ಳಲಾದ ಕ್ರಮಗಳು ಮತ್ತು/ಅಥವಾ ನಿರ್ಧಾರಗಳಿಗೆ ಇಲಾಖೆ ಜವಾಬ್ದಾರರಾಗಿರುವುದಿಲ್ಲ.