Do not have an account?
Already have an account?

ನನ್ನ ಚಾರ್ಟರ್ಡ್ ಅಕೌಂಟೆಂಟ್ (CA) ಕುರಿತು ಬಳಕೆದಾರರ ಕೈಪಿಡಿ

 

 1. ಅವಲೋಕನ

ನನ್ನ CA ಸೇವೆಯು, ಈ ಕೆಳಗಿನ ವರ್ಗಗಳಿಗೆ ಒಳಪಡುವ ಇ-ಸಲ್ಲಿಕೆ ಪೋರ್ಟಲ್‌ನ ಎಲ್ಲಾ ನೋಂದಾಯಿತ ಬಳಕೆದಾರರಿಗೆ ಲಭ್ಯವಿದೆ:

  • ಪ್ರತ್ಯೇಕ ವ್ಯಕ್ತಿ
  • ಹಿಂದೂ ಅವಿಭಕ್ತ ಕುಟುಂಬ (HUF)
  • ಕಂಪನಿ, ಸಮೂಹ ಸಂಸ್ಥೆಗಳು (AOP), ವ್ಯಕ್ತಿಗಳ ಸಂಘ (BOI), ಕೃತಕ ನ್ಯಾಯಾಂಗ ವ್ಯಕ್ತಿ (AJP), ಟ್ರಸ್ಟ್, ಸರ್ಕಾರ, ಸ್ಥಳೀಯ ಪ್ರಾಧಿಕಾರ (LA), ಸಂಸ್ಥೆ
  • ತೆರಿಗೆ ಕಡಿತದಾರರು ಮತ್ತು ಸಂಗ್ರಹಣಾಕಾರರು

ಈ ಸೇವೆಯಿಂದ, ನೋಂದಾಯಿತ ಬಳಕೆದಾರರು:

  • ಅವರ ಅಧಿಕೃತ ಚಾರ್ಟರ್ಡ್ ಅಕೌಂಟೆಂಟ್ಸ್ (CA) ಗಳ ಪಟ್ಟಿಯನ್ನು ವೀಕ್ಷಿಸಬಹುದು
  • CA ಯವರಿಗೆ ಫಾರ್ಮ್‌ಗಳನ್ನು ನಿಯೋಜಿಸಬಹುದು
  • ನಿಯೋಜಿಸಿದ ಫಾರ್ಮ್‌ಗಳನ್ನು ಹಿಂಪಡೆಯಬಹುದು
  • CA ಅನ್ನು ಸಕ್ರಿಯಗೊಳಿಸಬಹುದು
  • CA ಅನ್ನು ನಿಷ್ಕ್ರಿಯಗೊಳಿಸಬಹುದು

2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು

  • ಇ-ಸಲ್ಲಿಕೆ ಪೋರ್ಟಲ್‌ನ ಮಾನ್ಯ ಬಳಕೆದಾರ ID ಮತ್ತು ಪಾಸ್ ವರ್ಡ್ ಹೊಂದಿರುವ ನೋಂದಾಯಿತ ಬಳಕೆದಾರರು
  • CA ರವರು, ಮಾನ್ಯವಾದ CA ಸದಸ್ಯತ್ವ ಸಂಖ್ಯೆಯನ್ನು ಹೊಂದಿರಬೇಕು ಮತ್ತು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರಬೇಕು
  • ಒಬ್ಬ ವ್ಯಕ್ತಿಯ ಸಂದರ್ಭದಲ್ಲಿ, PAN ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿರಬೇಕು (ಎಂದು ಶಿಫಾರಸು ಮಾಡಲಾಗಿದೆ)

3. ಹಂತ-ಹಂತದ ಮಾರ್ಗದರ್ಶಿ

3.1 CA ವೀಕ್ಷಿಸಿ

ಹಂತ 1: ಬಳಕೆದಾರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆಗಿ.

Data responsive

ವೈಯಕ್ತಿಕ ಬಳಕೆದಾರರಿಗೆ, PAN ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ‘ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಆಗಿಲ್ಲದ ಕಾರಣ ನಿಮ್ಮ PAN ನಿಷ್ಕ್ರಿಯವಾಗಿದೆ’ ಎಂಬ ಪಾಪ್-ಅಪ್ ಸಂದೇಶವನ್ನು ನೀವು ನೋಡುತ್ತೀರಿ.

PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಈಗಲೇ ಲಿಂಕ್‌ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ, ಇಲ್ಲವಾದರೆ ಮುಂದುವರೆಯಿರಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ಅಧಿಕೃತ ಪಾಲುದಾರರು > ನನ್ನ ಚಾರ್ಟರ್ಡ್ ಅಕೌಂಟೆಂಟ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3: ನನ್ನ ಚಾರ್ಟರ್ಡ್ ಅಕೌಂಟೆಂಟ್(ಗಳು) ಪುಟ ತೆರೆಯುತ್ತದೆ. ಇದರಲ್ಲಿ ಸಂಬಂಧಿತ ಟ್ಯಾಬ್‌ಗಳ ಅಡಿಯಲ್ಲಿ ಸಕ್ರಿಯ ಮತ್ತು ನಿಷ್ಕ್ರಿಯ ಸಿಎ ಗಳನ್ನು ಪ್ರದರ್ಶಿಸಲಾಗುತ್ತದೆ.

Data responsive


ಹಂತ 4:ಎಲ್ಲಾ ಹೊಂದಾಣಿಕೆಯ ದಾಖಲೆಗಳನ್ನು ವೀಕ್ಷಿಸಲುಹೆಸರಿನ ಮೂಲಕ ಹುಡುಕಿಪಠ್ಯಪೆಟ್ಟಿಗೆಯಲ್ಲಿ ಹೆಸರನ್ನು ನಮೂದಿಸಿ.

Data responsive

ಹಂತ 5: ನಿರ್ದಿಷ್ಟ ಸಿಎಗೆ (CA) ನಿಯೋಜಿಸಲಾದ ಎಲ್ಲಾ ಫಾರ್ಮ್‌ಗಳ ಸ್ಥಿತಿ ಮತ್ತು ವಿವರಗಳನ್ನು ಪ್ರದರ್ಶಿಸಲು ನಿಯೋಜಿತ ಫಾರ್ಮ್‌ಗಳನ್ನು ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿ.

Data responsive

ನನ್ನ ಚಾರ್ಟರ್ಡ್ ಅಕೌಂಟೆಂಟ್(ಗಳು) ಪುಟವನ್ನು ಪ್ರವೇಶಿಸಿದ ನಂತರ ನೀವು ನಿರ್ವಹಿಸಬಹುದಾದ ಇತರೆ ಕ್ರಿಯೆಗಳು ಕೆಳಗಿನಂತಿವೆ:

CA ಯನ್ನು ಸೇರಿಸಿ

ಸೆಕ್ಷನ್ 3.2 ಅನ್ನು ನೋಡಿ

CA ಗೆ ಫಾರ್ಮ್‌ಗಳನ್ನು ನಿಯೋಜಿಸಿ

ಸೆಕ್ಷನ್ 3.3 ಅನ್ನು ನೋಡಿ

CA ಯನ್ನು ನಿಷ್ಕ್ರಿಯಗೊಳಿಸಿ

ಸೆಕ್ಷನ್ 3.4 ಅನ್ನು ನೋಡಿ

CA ಯನ್ನು ಸಕ್ರಿಯಗೊಳಿಸಿ

ಸೆಕ್ಷನ್ 3.5 ಅನ್ನು ನೋಡಿ

ಫಾರ್ಮ್ ಅನ್ನು ಹಿಂಪಡೆಯಿರಿ

ಸೆಕ್ಷನ್ 3.6 ಅನ್ನು ನೋಡಿ

3.2: CA ಅನ್ನು ಸೇರಿಸಿ

ಹಂತ 1: ಸಿಎಗೆ (CA) ಫಾರ್ಮ್‌‌ಗಳನ್ನು ನಿಯೋಜಿಸಲು, ಸಿಎ ಅನ್ನು ನಿಮ್ಮ ಪ್ರೊಫೈಲ್‌ನಲ್ಲಿ ನೀವು ಸೇರಿಸಿ ಅಧಿಕೃತಗೊಳಿಸಿರಬೇಕು. ನೀವು ಸಿಎ ಸೇರಿಸಲು ಬಯಸಿದರೆ, CA ಅನ್ನು ಸೇರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ಚಾರ್ಟರ್ಡ್ ಅಕೌಂಟೆಂಟ್(ಗಳು)(CA) ಸೇರಿಸಿ ಪುಟ ತೆರೆಯುತ್ತದೆ. ಸಿಎ (CA) ಯ ಸದಸ್ಯತ್ವದ ಸಂಖ್ಯೆಯನ್ನು ನಮೂದಿಸಿ. ಸಿಎ ಹೆಸರು ಡೇಟಾಬೇಸ್‌ನಿಂದ ಸ್ವಯಂಚಾಲಿತವಾಗಿ ಭರ್ತಿ ಮಾಡಲಾಗುತ್ತದೆ.

Data responsive

ಹಂತ 3:ಸಿಎ (CA) ಅನ್ನು ಸೇರಿಸಲು ದೃಢೀಕರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಭವಿಷ್ಯದ ಉಲ್ಲೇಖಕ್ಕಾಗಿ ವಹಿವಾಟು IDಯೊಂದಿಗೆ ಒಂದು ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.
 

Data responsive

3.3 CA ಗೆ ಫಾರ್ಮ್‌ಗಳನ್ನು ನಿಯೋಜಿಸಿ

ಹಂತ 1: ನನ್ನ ಚಾರ್ಟರ್ಡ್ ಅಕೌಂಟೆಂಟ್(ಗಳು) ಪುಟದಲ್ಲಿ, ಸಕ್ರಿಯ CA ಟ್ಯಾಬ್‌ನಲ್ಲಿರುವ ಹಾಗೂ ಅಗತ್ಯವಿರುವ CA ಎದುರಿನ ಫಾರ್ಮ್‌ ಗಳನ್ನು ನಿಯೋಜಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ಫಾರ್ಮ್‌‌ಗಳನ್ನು ನಿಯೋಜಿಸಿ ಪುಟದಲ್ಲಿ ಫಾರ್ಮ್‌ ಅನ್ನು ಸೇರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3:“ಆದಾಯ ತೆರಿಗೆ ಕಾಯ್ದೆ 1961 ಪ್ರಕಾರದ ಫಾರ್ಮ್‌ಗಳು, ಫಾರ್ಮ್‌ನ ಹೆಸರು, ಮೌಲ್ಯಮಾಪನ ವರ್ಷ ಮತ್ತು ಸಲ್ಲಿಕೆ ಪ್ರಕಾರ” ಅನ್ನು ಆಯ್ಕೆ ಮಾಡಿ ಮತ್ತು ಆದಾಯ ತೆರಿಗೆ ಕಾಯ್ದೆ 1961 ರ ಫಾರ್ಮ್‌ಗಳನ್ನು ನಿಯೋಜಿಸಲು ಸೇರಿಸಿ ಮೇಲೆ ಕ್ಲಿಕ್ ಮಾಡಿ.

 

“ಆದಾಯ ತೆರಿಗೆ ಕಾಯ್ದೆ 2025 ಪ್ರಕಾರದ ಫಾರ್ಮ್‌ಗಳು, ಫಾರ್ಮ್ ಹೆಸರು, ತೆರಿಗೆ ವರ್ಷ ಮತ್ತು ಸಲ್ಲಿಕೆ ಪ್ರಕಾರ” ಅನ್ನು ಆಯ್ಕೆ ಮಾಡಿ ಮತ್ತು ಆದಾಯ ತೆರಿಗೆ ಕಾಯ್ದೆ 2025 ರ ಫಾರ್ಮ್ ಗಳನ್ನು ನಿಯೋಜಿಸಲು ಸೇರಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 4:ಆಯ್ಕೆ ಮಾಡಿದ ಫಾರ್ಮ್‌ ಅನ್ನುಫಾರ್ಮ್‌ ಅನ್ನು ನಿಯೋಜಿಸಿಪುಟದಲ್ಲಿ ಸೇರಿಸಿರುವುದಾಗಿ ಪ್ರದರ್ಶಿಸಲಾಗುತ್ತದೆ. ಪ್ರದರ್ಶಿಸಲಾದ ಮಾಹಿತಿಯನ್ನು ಪರಿಶೀಲಿಸಿ ಮತ್ತುಸಲ್ಲಿಸಿಮೇಲೆ ಕ್ಲಿಕ್ ಮಾಡಿ.

 

Data responsive

ವಹಿವಾಟಿನ ID ಜೊತೆಗೆ ಯಶಸ್ವಿಯಾಗಿದೆ ಎಂಬ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.

Data responsive


3.4 CA ಯನ್ನು ನಿಷ್ಕ್ರಿಯಗೊಳಿಸಿ

ಹಂತ 1:ನನ್ನ ಚಾರ್ಟರ್ಡ್ ಅಕೌಂಟೆಂಟ್(ಗಳು) ಪುಟದಲ್ಲಿ, ಸಕ್ರಿಯ ಟ್ಯಾಬ್‌ನ ಅಡಿಯಲ್ಲಿ ಇರುವ ಅಗತ್ಯ ಸಕ್ರಿಯ CA ಎದುರಿನ ನಿಷ್ಕ್ರಿಯಗೊಳಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ಸಿಎ (CA) ನಿಷ್ಕ್ರಿಯಗೊಳಿಸಿ ಪುಟದಲ್ಲಿ, ನಿಷ್ಕ್ರಿಯಗೊಳಿಸುವ ಕಾರಣವನ್ನು ಆಯ್ಕೆ ಮಾಡಿ ಮತ್ತು ಮುಂದುವರೆಯಿರಿಮೇಲೆ ಕ್ಲಿಕ್ ಮಾಡಿ.

 

Data responsive

ಒಂದು ಯಶಸ್ವಿ ಸಂದೇಶವನ್ನು ವ್ಯವಹಾರ ಐಡಿ (Transaction ID) ಸಹಿತವಾಗಿ ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ದಯವಿಟ್ಟು ಆ ವ್ಯವಹಾರ ಐಡಿಯನ್ನು ಗಮನದಲ್ಲಿಟ್ಟುಕೊಳ್ಳಿ.

Data responsive

3.5 CA ಯನ್ನು ಸಕ್ರಿಯಗೊಳಿಸಿ

ಹಂತ 1: ನಿಷ್ಕ್ರಿಯ ಸಿಎ ಅನ್ನು ಸಕ್ರಿಯಗೊಳಿಸಲು ನನ್ನ ಚಾರ್ಟರ್ಡ್ ಅಕೌಂಟೆಂಟ್(ಗಳು) ಪುಟದಲ್ಲಿ, ಸಂಬಂಧಿತ CA ಎದುರಿನ ನಿಷ್ಕ್ರಿಯಗೊಳಿಸಿ ಟ್ಯಾಬ್‌ನಲ್ಲಿರುವ ಸಕ್ರಿಯಗೊಳಿಸಿ ಮೇಲೆ ಕ್ಲಿಕ್‌ ಮಾಡಿ

Data responsive

ಹಂತ 2: ಸಕ್ರಿಯಗೊಳಿಸಬೇಕಾದ ಸಿಎಯ ಪೂರ್ವಭರಿತ ವಿವರಗಳನ್ನು ಪ್ರದರ್ಶಿಸುವಂತೆ ಚಾರ್ಟರ್ಡ್ ಅಕೌಂಟೆಂಟ್ ಗಳನ್ನು ಸೇರಿಸಿ ಪುಟ ತೆರೆಯುತ್ತದೆ.

Data responsive

ಹಂತ 3: ಭರ್ತಿ ಮಾಡಿದ ವಿವರಗಳು ಸರಿಯಾಗಿದ್ದರೆ ದೃಢೀಕರಿಸಿ ಮೇಲೆ ಕ್ಲಿಕ್ ಮಾಡಿ. ಇಲ್ಲದಿದ್ದರೆ ರದ್ದುಮಾಡಿ ಮೇಲೆ ಕ್ಲಿಕ್ ಮಾಡಿ.

Data responsive

ಒಂದು ಯಶಸ್ವಿ ಸಂದೇಶವನ್ನು ವ್ಯವಹಾರ ಐಡಿ (Transaction ID) ಸಹಿತವಾಗಿ ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ದಯವಿಟ್ಟು ಆ ವ್ಯವಹಾರ ಐಡಿಯನ್ನು ಗಮನದಲ್ಲಿಟ್ಟುಕೊಳ್ಳಿ.

Data responsive

3.6 ಫಾರ್ಮ್ ಹಿಂಪಡೆಯಿರಿ

ಹಂತ 1: ಸ‌ಕ್ರಿಯ ಟ್ಯಾಬ್‌ನ ಅಡಿಯಲ್ಲಿ ನಿಯೋಜಿತ ಫಾರ್ಮ್‌ಗಳನ್ನು ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 2: ಹಿಂತೆಗೆದುಕೊಳ್ಳಬೇಕಾದ ಸಂಬಂಧಿತ ಫಾರ್ಮ್‌ನ ಎದುರಿನ ಹಿಂಪಡೆಯಿರಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3: ಫಾರ್ಮ್‌ಗಳನ್ನು ಹಿಂತೆಗೆದುಕೊಳ್ಳಲು ದೃಢೀಕರಿಸಿಮೇಲೆ ಕ್ಲಿಕ್ ಮಾಡಿ.

Data responsive

ಆಯ್ಕೆ ಮಾಡಿದ ಫಾರ್ಮ್ ಅನ್ನು ಹಿಂಪಡೆಯಲಾಗಿದೆ ಎಂದು ಯಶಸ್ಸು ಸಂದೇಶವನ್ನು ಪ್ರದರ್ಶಿಸಲಾಗುತ್ತದೆ, CA ಆ ಫಾರ್ಮ್‌ನಲ್ಲಿ ಯಾವುದೇ ಮುಂದಿನ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.

Data responsive