Do not have an account?
Already have an account?

1. ಅವಲೋಕನ


ಈ ಪೂರ್ವ-ಲಾಗಿನ್ ಸೇವೆಯು ಇ-ಫೈಲಿಂಗ್ ಪೋರ್ಟಲ್ ಅಲ್ಲಿ ನೋಂದಣಿ ಮಾಡಲು ಮತ್ತು ಪ್ರವೇಶಿಸಲು ಬಯಸುವ ಎಲ್ಲಾ ತೆರಿಗೆ ಕಡಿತದಾರರಿಗೆ/ಕಡಿತಗಾರರಿಗೆ ಲಭ್ಯವಿದೆ. ನೋಂದಣಿ ಸೇವೆಯು ಎಲ್ಲಾ ತೆರಿಗೆ ಸಂಬಂಧಿತ ಚಟುವಟಿಕೆಗಳನ್ನು ಪ್ರವೇಶಿಸಲು ಮತ್ತು ಟ್ರ್ಯಾಕ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು

  • ಮಾನ್ಯ ಮತ್ತು ಸಕ್ರಿಯ TAN
  • ಪ್ರಧಾನ ಸಂಪರ್ಕದ PAN ಅನ್ನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು

3. ಹಂತ-ಹಂತವಾದ ಮಾರ್ಗದರ್ಶಿ

ಹಂತ 1: ಇ-ಫೈಲಿಂಗ್ ಪೋರ್ಟಲ್ ಮುಖಪುಟಕ್ಕೆ ಹೋಗಿ, ನೋಂದಾಯಿಸಿ ಕ್ಲಿಕ್ ಮಾಡಿ.

Data responsive


ಹಂತ 2: ಇತರರು ಕ್ಲಿಕ್ ಮಾಡಿ ಮತ್ತು ಪ್ರವರ್ಗವನ್ನು ತೆರಿಗೆ ಕಡಿತಗಾರರು ಮತ್ತು ಸಂಗ್ರಹಣಕಾರರು ಎಂದು ಆಯ್ಕೆಮಾಡಿ.

Data responsive


ಹಂತ 3: ಸಂಸ್ಥೆಯ TAN ಅನ್ನು ನಮೂದಿಸಿ ಮತ್ತು ಮೌಲ್ಯೀಕರಿಸಿ ಕ್ಲಿಕ್ ಮಾಡಿ.

Data responsive


ಹಂತ 4a: ಡೇಟಾಬೇಸ್‌ನಲ್ಲಿ TAN ಲಭ್ಯವಿದ್ದರೆ, TRACES ನಲ್ಲಿ ನೋಂದಾಯಿಸಲಾಗಿದ್ದು ಮತ್ತು ನೋಂದಣಿ ವಿನಂತಿಯನ್ನು ಈಗಾಗಲೇ ಸಲ್ಲಿಸಿರುವುದಿಲ್ಲ ಮತ್ತು ಅನುಮೋದನೆಗೆ ಬಾಕಿ ಉಳಿದಿದೆ:

  • ಮೂಲ ವಿವರಗಳು ಪುಟವನ್ನು ವೀಕ್ಷಿಸಲು ಮುಂದುವರಿಯಿರಿ ಕ್ಲಿಕ್ ಮಾಡಿ.
  • ಮೂಲ ವಿವರಗಳನ್ನು ಪೂರ್ವ-ಭರ್ತಿ ಮಾಡಲಾಗಿದೆ. ಮುಂದುವರಿಸಿಎಂದು ಕ್ಲಿಕ್ ಮಾಡಿ.
Data responsive


ಹಂತ 4b: ಡೇಟಾಬೇಸ್‌ನಲ್ಲಿ TAN ಲಭ್ಯವಿದೆ, ಆದರೆ TRACES ಜೊತೆ ನೋಂದಣಿ ಆಗಿರುವುದಿಲ್ಲ ಮತ್ತು ಈಗಾಗಲೇ ನೋಂದಣಿ ವಿನಂತಿಯನ್ನು ಸಲ್ಲಿಸಿರುವುದಿಲ್ಲ ಮತ್ತು ಅನುಮೋದನೆಗೆ ಬಾಕಿ ಉಳಿದಿದೆ:

  • TRACES ಪುಟವನ್ನು ವೀಕ್ಷಿಸಲು ಮುಂದುವರಿಯಿರಿ ಕ್ಲಿಕ್ ಮಾಡಿ.
  • ಮೂಲ ವಿವರಗಳುಪುಟವನ್ನು ವೀಕ್ಷಿಸಲು TRACES ಮೇಲಿನಇ-ಫೈಲಿಂಗ್‌ನಲ್ಲಿ ನೋಂದಣಿ ಮಾಡಿ ಕ್ಲಿಕ್ ಮಾಡಿ.
  • ಅಗತ್ಯವಿರುವಂತೆ ಮೂಲ ವಿವರಗಳನ್ನು ನಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.


ಸೂಚನೆ: ನೀವು ಮೊದಲು TRACES ನಲ್ಲಿ ನೋಂದಾಯಿಸಬೇಕು. ಅಲ್ಲಿಂದ, ಇ-ಫೈಲಿಂಗ್‍ನಲ್ಲಿ ನೋಂದಾಯಿಸಿ ಕ್ಲಿಕ್ ಮಾಡಿದರೆ ನಿಮ್ಮನ್ನು ಇ-ಫೈಲಿಂಗ್‍ನಲ್ಲಿ ನೋಂದಣಿ ಮಾಡಿ ಪುಟಕ್ಕೆ ಕರೆದೊಯ್ಯಲಾಗುತ್ತದೆ.

ಹಂತ 4c: ಡೇಟಾಬೇಸ್‌ನಲ್ಲಿ TAN ಲಭ್ಯವಿದ್ದು, ನೋಂದಣಿ ವಿನಂತಿಯನ್ನು ಈಗಾಗಲೇ ಸಲ್ಲಿಸಲಾಗಿದ್ದು ಮತ್ತು ಅನುಮೋದನೆಗೆ ಬಾಕಿ ಉಳಿದಿದೆ:

  • ದೋಷ ಸಂದೇಶ ತೋರಿಸಲಾಗುತ್ತದೆ ಮತ್ತು ನೀವು ನೋಂದಣಿ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಲು ಆಯ್ಕೆಮಾಡಬಹುದು.


ಹಂತ 5: ಪಾವತಿಗಳನ್ನು ಮಾಡುವ ಅಥವಾ ತೆರಿಗೆ ಸಂಗ್ರಹಿಸುವ ವ್ಯಕ್ತಿಯ ವಿವರಗಳು ನಮೂದಿಸಿ ಮತ್ತು ಮುಂದುವರಿಯಿರಿ ಕ್ಲಿಕ್ ಮಾಡಿ.

Data responsive


ಹಂತ 6: ಪ್ರಾಥಮಿಕ ಮೊಬೈಲ್ ನಂಬರ್/ಸಂಖ್ಯೆ, ಇಮೇಲ್ ID ಮತ್ತು ಅಂಚೆ ವಿಳಾಸ ಸೇರಿದಂತೆ ಸಂಪರ್ಕ ವಿವರಗಳು ಒದಗಿಸಿ. ಮುಂದುವರಿಸಿ ಆಯ್ಕೆಯನ್ನು ಕ್ಲಿಕ್ ಮಾಡಿ.

Data responsive


ಹಂತ 7: ಹಂತ 6 ರಲ್ಲಿ ನಮೂದಿಸಿದ ಹಾಗೆ ನಿಮ್ಮ ಪ್ರಾಥಮಿಕ ಮೊಬೈಲ್ ನಂಬರ್ ಅಥವಾ ಸಂಖ್ಯೆಗೆ ಮತ್ತು ಇಮೇಲ್ ID ಗೆ ಎರಡು ಪ್ರತ್ಯೇಕ OTP ಗಳನ್ನು ಕಳುಹಿಸಲಾಗಿದೆ. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ IDಯಲ್ಲಿ ಸ್ವೀಕೃತವಾದ ಪ್ರತ್ಯೇಕ 6- ಅಂಕಿಯ OTP ಗಳನ್ನು ನಮೂದಿಸಿ ಮತ್ತು ಮುಂದುವರಿಯಿರಿ ಕ್ಲಿಕ್ ಮಾಡಿ.

Data responsive


ಸೂಚನೆ:

  • OTP 15 ನಿಮಿಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.
  • ಸರಿಯಾದ OTP ನಮೂದಿಸಲು ನೀವು 3 ಪ್ರಯತ್ನಗಳನ್ನು ಹೊಂದಿದ್ದೀರಿ.
  • ಪರದೆಯಲ್ಲಿ OTP ಅವಧಿ ಮೀರುವ ಲೆಕ್ಕದ ಟೈಮರ್ OTP ಅವಧಿ ಮೀರಿದಾಗ ನಿಮಗೆ ಹೇಳುತ್ತದೆ.
  • OTP ಪುನಃ ಕಳುಹಿಸಿ ಮೇಲೆ ಕ್ಲಿಕ್ ಮಾಡಿದಾಗ, ಒಂದು ಹೊಸ OTP ಯನ್ನು ರಚಿಸಲಾಗುತ್ತದೆ ಮತ್ತು ಕಳುಹಿಸಲಾಗುತ್ತದೆ.

ಹಂತ 8: ವಿವರಗಳನ್ನು ಪರಿಶೀಲಿಸಿ ಪುಟದಲ್ಲಿ, ಅಗತ್ಯವಿದ್ದರೆ ವಿವರಗಳನ್ನು ಪರಿಶೀಲಿಸಿ ಮತ್ತು ತಿದ್ದುಪಡಿ ಮಾಡಿ. ದೃಢೀಕರಿಸಿ ಕ್ಲಿಕ್ ಮಾಡಿ.

Data responsive


ಹಂತ 9: ಪಾಸ್‌ವರ್ಡ್ ಹೊಂದಿಸಿ ಪುಟದಲ್ಲಿ, ನಿಮ್ಮ ಅಪೇಕ್ಷಿತ ಪಾಸ್‌ವರ್ಡ್‌ ಅನ್ನು ಪಾಸ್‌ವರ್ಡ್ ಹೊಂದಿಸಿ ಮತ್ತು ಪಾಸ್‌ವರ್ಡ್ ದೃಢೀಕರಿಸಿ ಎರಡೂ ಪಠ್ಯ ಬಾಕ್ಸ್‌ಗಳಲ್ಲಿ ನಮೂದಿಸಿ, ನಿಮ್ಮ ವೈಯಕ್ತಿಕ ಸಂದೇಶವನ್ನು ಹೊಂದಿಸಿ ಹಾಗೂ ನೋಂದಾಯಿಸಿ ಕ್ಲಿಕ್ ಮಾಡಿ.

Data responsive


ಸೂಚನೆ:

  • ರಿಫ್ರೆಶ್ ಅಥವಾ ಹಿಂದಿರುಗಿ ಆಯ್ಕೆಯನ್ನು ಕ್ಲಿಕ್ ಮಾಡಬೇಡಿ.
  • ನಿಮ್ಮ ಹೊಸ ಪಾಸ್‌ವರ್ಡ್ ಅನ್ನು ನಮೂದಿಸುವಾಗ, ಪಾಸ್‌ವರ್ಡ್ ನಿಯಮಗಳ ಕುರಿತು ಜಾಗರೂಕರಾಗಿರಿ:
    • ಇದು ಕನಿಷ್ಠ 8 ಅಕ್ಷರಗಳು ಮತ್ತು ಹೆಚ್ಚೆಂದರೆ 14 ಅಕ್ಷರಗಳದ್ದಾಗಿರಬೇಕು.
    • ಇದರಲ್ಲಿ ದೊಡ್ಡ ಅಕ್ಷರ ಮತ್ತು ಸಣ್ಣ ಅಕ್ಷರಗಳು ಇರಬೇಕು.
    • ಇದು ಒಂದಾದರೂ ಸಂಖ್ಯೆಯನ್ನು ಹೊಂದಿರಬೇಕು.
    • ಇದು ಒಂದು ವಿಶೇಷ ಅಕ್ಷರವನ್ನು ಹೊಂದಿರಬೇಕು (ಉದಾ. @#$%).

ವಹಿವಾಟಿನ ID ಯೊಂದಿಗೆ ಕಾರ್ಯವು ಯಶಸ್ವಿಯಾದ ಸಂದೇಶವನ್ನು ಕಳುಹಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ದಯವಿಟ್ಟು ವಹಿವಾಟಿನ ID ಯನ್ನು ನೆನಪಿಡಿ. ಸಮರ್ಥ ಪ್ರಾಧಿಕಾರದಿಂದ ಅನುಮೋದನೆ ಪಡೆದ ನಂತರವೇ ನೋಂದಣಿ ಪ್ರಕ್ರಿಯೆಯು ಪೂರ್ಣವಾಗುತ್ತದೆ.
 

Data responsive


4. ಸಂಬಂಧಿತ ವಿಷಯಗಳು