Do not have an account?
Already have an account?

1. ಅವಲೋಕನ


ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರಿಗೆ ITR-2 ಸೇವೆಯನ್ನು ಮುಂಗಡ-ಭರ್ತಿ ಮಾಡುವುದು ಮತ್ತು ಫೈಲ್ ಮಾಡುವುದು ಲಭ್ಯವಿದೆ. ಇ-ಫೈಲಿಂಗ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ITR-2 ಅನ್ನು ಫೈಲ್ ಮಾಡಲು ಈ ಸೇವೆಯು ವೈಯಕ್ತಿಕ ತೆರಿಗೆದಾರರಿಗೆ ಅವಕಾಶ ಮಾಡಿಕೊಡುತ್ತದೆ. ಈ ಬಳಕೆದಾರರ ಕೈಪಿಡಿ ಆನ್‌ಲೈನ್ ವಿಧಾನದ ಮೂಲಕ ITR-2 ಫೈಲ್ ಮಾಡುವುದನ್ನು ಒಳಗೊಂಡಿದೆ.

2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು

ಸಾಮಾನ್ಯ
  • ಮಾನ್ಯ ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರು
  • PAN ಸ್ಥಿತಿಯು ಸಕ್ರಿಯವಾಗಿದೆ
ಇತರೆ
  • PAN ಮತ್ತು ಆಧಾರ್ ಲಿಂಕ್ ಮಾಡಿ
  • ಕನಿಷ್ಠ ಒಂದು ಬ್ಯಾಂಕ್ ಖಾತೆಯನ್ನು ಪೂರ್ವ-ಮೌಲ್ಯೀಕರಿಸಿ ಮತ್ತು ರೀಫಂಡ್‌ಗೆ ನಾಮನಿರ್ದೇಶನ ಮಾಡಿ (ಶಿಫಾರಸು ಮಾಡಲಾಗಿದೆ)
  • ಆಧಾರ್ / ಇ-ಫೈಲಿಂಗ್ ಪೋರ್ಟಲ್ / ನಿಮ್ಮ ಬ್ಯಾಂಕ್ / NSDL / CDSL (ಇ-ಪರಿಶೀಲನೆಗಾಗಿ) ಜೊತೆಗೆ ಲಿಂಕ್ ಮಾಡಲಾದ ಮಾನ್ಯವಾದ ಮೊಬೈಲ್ ನಂಬರ್
  • ಆಫ್‌ಲೈನ್ ಉಪಯುಕ್ತತೆಯನ್ನು ಡೌನ್‌ ಲೋಡ್ ಮಾಡಿ ಅಥವಾ ಮೂರನೇ ವ್ಯಕ್ತಿಯ ಸಾಫ್ಟ್ವೇರ್ ಅನ್ನು ಪಡೆಯಿರಿ (ಆಫ್‌ಲೈನ್ ವಿಧಾನ ಬಳಸಿ)

ಫಾರ್ಮ್ ಅನ್ನು ಸಲ್ಲಿಸುವ ಮೊದಲು, ನೀವು ಈ ಕೆಳಗಿನ ITR-2 ವಿಭಾಗಗಳನ್ನು ಭರ್ತಿ ಮಾಡಬೇಕು. ಇದು ಸಾರಾಂಶದ ವಿಭಾಗವಾಗಿದ್ದು, ನಿಮ್ಮ ತೆರಿಗೆ ಗಣನೆ/ಲೆಕ್ಕಾಚಾರವನ್ನು ನೀವು ಪರಿಶೀಲಿಸುತ್ತೀರಿ ಮತ್ತು ತೆರಿಗೆ ಪಾವತಿಸುತ್ತೀರಿ ಹಾಗೂ ಅಂತಿಮ ಪರಿಶೀಲನೆಗಾಗಿ ರಿಟರ್ನ್ ಅನ್ನು ಸಲ್ಲಿಸುತ್ತೀರಿ:

3.1 ಭಾಗ A ಸಾಮಾನ್ಯ
3.2 ಸಂಬಳದ ವೇಳಾಪಟ್ಟಿ
3.3 ಗೃಹ ಆಸ್ತಿಯ ವೇಳಾಪಟ್ಟಿ
3.4 ಬಂಡವಾಳ ಲಾಭಗಳ ವೇಳಾಪಟ್ಟಿ
3.5 ವೇಳಾಪಟ್ಟಿ 112A ಮತ್ತು ವೇಳಾಪಟ್ಟಿ-115AD(1)(iii) ನಿಬಂಧನೆ
3.6 ಇತರ ಮೂಲಗಳ ವೇಳಾಪಟ್ಟಿ
3.7 CYLA ವೇಳಾಪಟ್ಟಿ
3.8 BFLA ವೇಳಾಪಟ್ಟಿ
3.9 CFL ವೇಳಾಪಟ್ಟಿ
3.10 VI-A ವೇಳಾಪಟ್ಟಿ
3.11 ವೇಳಾಪಟ್ಟಿ 80G ಮತ್ತು ವೇಳಾಪಟ್ಟಿ 80GGA
3.12 AMT ವೇಳಾಪಟ್ಟಿ
3.13 AMTC ವೇಳಾಪಟ್ಟಿ
3.14 SPI ವೇಳಾಪಟ್ಟಿ
3.15 SI ವೇಳಾಪಟ್ಟಿ
3.16 EI ವೇಳಾಪಟ್ಟಿ
3.17 PTI ವೇಳಾಪಟ್ಟಿ
3.18 FSI ವೇಳಾಪಟ್ಟಿ
3.19 TR ವೇಳಾಪಟ್ಟಿ
3.20 FA ವೇಳಾಪಟ್ಟಿ
3.21 5A ವೇಳಾಪಟ್ಟಿ
3.22 AL ವೇಳಾಪಟ್ಟಿ
3.23 ಭಾಗ B – ಒಟ್ಟು ಆದಾಯ (TI)
3.24 ಪಾವತಿಸಿದ ತೆರಿಗೆ
3.25 ಭಾಗ B-TTI

3.1 ಭಾಗ A ಸಾಮಾನ್ಯ
ಫಾರ್ಮ್‌ನ ಭಾಗ A ಸಾಮಾನ್ಯ ವಿಭಾಗದಲ್ಲಿ, ನಿಮ್ಮ ಇ-ಫೈಲಿಂಗ್ ಪ್ರೊಫೈಲ್‌ನಿಂದ ಮುಂಗಡ-ಭರ್ತಿ ಮಾಡಿದ ಡೇಟಾವನ್ನು ನೀವು ಪರಿಶೀಲಿಸುವ ಅಗತ್ಯವಿದೆ. ನಿಮ್ಮ ಕೆಲವು ವೈಯಕ್ತಿಕ ಡೇಟಾವನ್ನು ನೇರವಾಗಿ ಫಾರ್ಮ್‌ನಲ್ಲಿ ತಿದ್ದು/ಸಂಪಾದಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಆದರೂ, ನಿಮ್ಮ ಇ-ಫೈಲಿಂಗ್ ಪ್ರೊಫೈಲ್‌ಗೆ ಹೋಗುವ ಮೂಲಕ ನೀವು ಅಗತ್ಯವಿರುವ ಬದಲಾವಣೆಗಳನ್ನು ಮಾಡಬಹುದು. ನಿಮ್ಮ ಸಂಪರ್ಕ ವಿವರಗಳು, ಫೈಲಿಂಗ್ ಸ್ಥಿತಿ, ವಸತಿ ಸ್ಥಿತಿ ಮತ್ತು ಬ್ಯಾಂಕ್ ವಿವರಗಳನ್ನು ಫಾರ್ಮ್‌ನಲ್ಲಿಯೇ ನೀವು ಸಂಪಾದಿಸಬಹುದು.

3.2 ಸಂಬಳದ ವೇಳಾಪಟ್ಟಿ
ಸಂಬಳದ ವೇಳಾಪಟ್ಟಿಯಲ್ಲಿ, ಸಂಬಳ / ಪಿಂಚಣಿ, ಸೆಕ್ಷನ್ 16 ರ ಅಡಿಯಲ್ಲಿ ವಿನಾಯಿತಿ ಪಡೆದ ಭತ್ಯೆಗಳು ಹಾಗೂ ಕಡಿತಗಳಿಂದ ನಿಮ್ಮ ಆದಾಯದ ವಿವರಗಳನ್ನು ನೀವು ಪರಿಶೀಲಿಸಬೇಕು / ನಮೂದಿಸಬೇಕು / ಸಂಪಾದಿಸಬೇಕು.

3.3 ಗೃಹ ಆಸ್ತಿಯ ವೇಳಾಪಟ್ಟಿ
ಗೃಹ ಆಸ್ತಿಯ ವೇಳಾಪಟ್ಟಿಯಲ್ಲಿ, ಗೃಹ ಆಸ್ತಿಗೆ ಸಂಬಂಧಿಸಿದ ವಿವರಗಳನ್ನು (ಸ್ವಯಂ- ವಾಸವಿರುವ, ಬಾಡಿಗೆಗೆ ಕೊಟ್ಟಿರು,ವ ಅಥವಾ ಬಾಡಿಗೆಗೆ ಬಿಡಲಾಗಿದೆ ಎಂದು ಪರಿಗಣಿಸಿದ) ನೀವು ಪರಿಶೀಲಿಸಬೇಕು / ನಮೂದಿಸಬೇಕು / ಸಂಪಾದಿಸಬೇಕು. ಸಹ-ಮಾಲೀಕರು, ಬಾಡಿಗೆದಾರರ ವಿವರಗಳು, ಬಾಡಿಗೆ, ಬಡ್ಡಿ, ಪಾಸ್ ಥ್ರೂ ಆದಾಯ ಇತ್ಯಾದಿಗಳನ್ನು ವಿವರಗಳು ಒಳಗೊಂಡಿದೆ.

3.4 CG ವೇಳಾಪಟ್ಟಿ – ಬಂಡವಾಳ ಲಾಭಗಳು
ವಿಭಿನ್ನ ರೀತಿಯ ಬಂಡವಾಳ ಸ್ವತ್ತುಗಳ ಮಾರಾಟ / ವರ್ಗಾವಣೆಯಿಂದ ಉಂಟಾಗುವ ಬಂಡವಾಳ ಲಾಭಗಳನ್ನು ಬೇರ್ಪಡಿಸಲಾಗಿದೆ. ಒಂದೇ ರೀತಿಯ, ಒಂದಕ್ಕಿಂತ ಹೆಚ್ಚಿನ ಬಂಡವಾಳ ಆಸ್ತಿಯ ಮಾರಾಟ ಅಥವಾ ವರ್ಗಾವಣೆಯಿಂದ ಬಂಡವಾಳ ಲಾಭಗಳು ಉಂಟಾದ ಸಂದರ್ಭದಲ್ಲಿ, ಒಂದೇ ರೀತಿಯ ಇಂತಹ ಎಲ್ಲಾ ಬಂಡವಾಳ ಸ್ವತ್ತುಗಳಿಗೆ ಸಂಬಂಧಿಸಿದಂತೆ ದಯವಿಟ್ಟು ಬಂಡವಾಳ ಲಾಭಗಳ ಏಕೀಕೃತ ಗಣನೆ/ಲೆಕ್ಕಾಚಾರವನ್ನು ಮಾಡಿ. ಆದರೆ ಭೂಮಿ / ಕಟ್ಟಡದ ವರ್ಗಾವಣೆಯ ಸಂದರ್ಭದಲ್ಲಿ, ಪ್ರತಿ ಭೂಮಿ / ಕಟ್ಟಡದ ಕಡೆಗೆ ಗಣನೆ/ಲೆಕ್ಕಾಚಾರವನ್ನು ನಮೂದಿಸುವುದು ಕಡ್ಡಾಯವಾಗಿದೆ. ಬಂಡವಾಳ ಲಾಭಗಳ ವೇಳಾಪಟ್ಟಿಯಲ್ಲಿ, ನಿಮ್ಮ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಬಂಡವಾಳ ಲಾಭಗಳು / ಹೊಂದಿರುವ ಎಲ್ಲಾ ರೀತಿಯ ಬಂಡವಾಳ ಸ್ವತ್ತುಗಳಿಗೆ ನಷ್ಟಗಳ ವಿವರಗಳನ್ನು ನೀವು ನಮೂದಿಸಬೇಕು.

3.5 ಶೆಡ್ಯೂಲ್‌ 112A ಮತ್ತು ವೇಳಾಪಟ್ಟಿ-115AD(1)(iii) ನಿಬಂಧನೆ

  • 112A ವೇಳಾಪಟ್ಟಿಯಲ್ಲಿ, ಕಂಪನಿಯ ಇಕ್ವಿಟಿ ಷೇರುಗಳ ಮಾರಾಟ, ಈಕ್ವಿಟಿ ಆಧಾರಿತ ನಿಧಿ, ಅಥವಾ STT ಅನ್ನು ಪಾವತಿಸುವ ವ್ಯವಹಾರ ಟ್ರಸ್ಟ್‌ನ ಒಂದು ಘಟಕದ ಕುರಿತು ವಿವರಗಳನ್ನು ನೀವು ಪರಿಶೀಲಿಸಬೇಕು / ನಮೂದಿಸಬೇಕು / ಸಂಪಾದಿಸಬೇಕು.
  • 115AD ವೇಳಾಪಟ್ಟಿಯ (1)(iii) ನಿಬಂಧನೆಯು 112A ಗಾಗಿ ಒಂದೇ ರೀತಿಯ ವಿವರಗಳನ್ನು ನಮೂದಿಸುವುದನ್ನು ಒಳಗೊಂಡಿದೆ, ಆದರೆ ನಿವಾಸಿಗಳಲ್ಲದವರಿಗೆ ಅನ್ವಯಿಸುತ್ತದೆ.

ಸೂಚನೆ: ಷೇರುಗಳನ್ನು 31ನೇ ಜನವರಿಯಂದು ಅಥವಾ ಅದಕ್ಕಿಂತ ಮೊದಲು ಖರೀದಿಸಿದ್ದರೆ. 2018, ವೇಳಾಪಟ್ಟಿ 112A ಮತ್ತು ವೇಳಾಪಟ್ಟಿ-115AD(1)(iii) ನಿಬಂಧನೆಯ ಅಡಿಯಲ್ಲಿ ಪ್ರತಿ ವರ್ಗಾವಣೆಯ ಷೇರುಪತ್ರ ಪ್ರಕಾರವಾಗಿ ವಿವರಗಳನ್ನು ನಮೂದಿಸುವುದು ಕಡ್ಡಾಯವಾಗಿದೆ.

3.6 ಇತರ ಮೂಲಗಳ ವೇಳಾಪಟ್ಟಿ
ಇತರ ಮೂಲಗಳ ವೇಳಾಪಟ್ಟಿ ವಿಭಾಗದಲ್ಲಿ, ವಿಶೇಷ ದರಗಳಲ್ಲಿ ವಿಧಿಸುವ ಶುಲ್ಕಗಳು, ಸೆಕ್ಷನ್ 57 ರ ಅಡಿಯಲ್ಲಿನ ಕಡಿತಗಳು ಹಾಗೂ ರೇಸ್ ಕುದುರೆಗಳನ್ನು ಒಳಗೊಂಡ ಆದಾಯ ಸೇರಿದಂತೆ (ಆದರೆ ಇದಕ್ಕೆ ಸೀಮಿತವಾಗಿಲ್ಲ), ಇತರ ಮೂಲಗಳಿಂದ ನಿಮ್ಮ ಎಲ್ಲಾ ಆದಾಯದ ವಿವರಗಳನ್ನು ನೀವು ಪರಿಶೀಲಿಸಬೇಕು / ನಮೂದಿಸಬೇಕು / ಸಂಪಾದಿಸಬೇಕು.

3.7 ವೇಳಾಪಟ್ಟಿ ಪ್ರಸಕ್ತ ವರ್ಷದ ನಷ್ಟದ ಹೊಂದಾಣಿಕೆಯ (CYLA) ವೇಳಾಪಟ್ಟಿ
ವೇಳಾಪಟ್ಟಿ ಪ್ರಸಕ್ತ ವರ್ಷದ ನಷ್ಟದ ಹೊಂದಾಣಿಕೆಯಲ್ಲಿ (CYLA), ಪ್ರಸಕ್ತ ವರ್ಷದ ನಷ್ಟಗಳನ್ನು ಹೊಂದಿಸಿದ ನಂತರ ನೀವು ಆದಾಯದ ವಿವರಗಳನ್ನು ನೋಡಲು ಸಾಧ್ಯವಾಗುತ್ತದೆ. ಇದರಿಂದ ಹೊರಗೆ ತೆಗೆದುಕೊಂಡು ಹೋಗಲು ಅನುಮತಿಸಿದ ವಿಲೀನಗೊಳಿಸದ ನಷ್ಟಗಳನ್ನು ಭವಿಷ್ಯದ ವರ್ಷಗಳಲ್ಲಿ ಮುಂದಕ್ಕೆ ಒಯ್ಯಲು ವೇಳಾಪಟ್ಟಿ CFL ಗೆ ಕರೆದೊಯ್ಯಲಾಗುತ್ತದೆ.

3.8 ವೇಳಾಪಟ್ಟಿ ಮುಂದಕ್ಕೆ ತಂದ ನಷ್ಟದ ಹೊಂದಾಣಿಕೆ (BFLA) ವೇಳಾಪಟ್ಟಿ
ವೇಳಾಪಟ್ಟಿ ಮುಂದಕ್ಕೆ ತಂದ ನಷ್ಟದ ಹೊಂದಾಣಿಕೆಯಲ್ಲಿ (BFLA), ಹಿಂದಿನ ವರ್ಷಗಳ ನಷ್ಟವನ್ನು ಮುಂದಕ್ಕೆ ತಂದಿಟ್ಟ ನಂತರ ನೀವು ಆದಾಯದ ವಿವರಗಳನ್ನು ನೋಡಬಹುದು.

3.9 ವೇಳಾಪಟ್ಟಿ ಮುಂದಕ್ಕೆ ಒಯ್ಯುವ ನಷ್ಟಗಳು (CFL) ವೇಳಾಪಟ್ಟಿ
ವೇಳಾಪಟ್ಟಿ ಮುಂದಕ್ಕೆ ಒಯ್ಯುವ ನಷ್ಟಗಳಲ್ಲಿ (CFL), ಭವಿಷ್ಯದ ವರ್ಷಗಳಲ್ಲಿ ಮುಂದಕ್ಕೆ ಒಯ್ಯಬೇಕಾದ ನಷ್ಟಗಳ ವಿವರಗಳನ್ನು ನೀವು ನೋಡಬಹುದು.

3.10 ವೇಳಾಪಟ್ಟಿ VI-A
ವೇಳಾಪಟ್ಟಿ VI-A ನಲ್ಲಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 - ಭಾಗಗಳು B, C, CA ಮತ್ತು D (ಕೆಳಗೆ ನಿರ್ದಿಷ್ಟಪಡಿಸಿದಂತೆ ಉಪವಿಭಾಗಗಳು) ಅಡಿಯಲ್ಲಿ ಕ್ಲೈಮ್ ಮಾಡಲು ನೀವು ಯಾವುದೇ ಕಡಿತಗಳನ್ನು ಸೇರಿಸಬೇಕು ಹಾಗೂ ಪರಿಶೀಲಿಸಬೇಕು.

ಸೂಚನೆ: 1ನೇ ಏಪ್ರಿಲ್ 2020 ರಿಂದ 31 ನೇ ಜುಲೈ 2020 ರವರೆಗಿನ ಅವಧಿಗೆ ಹೂಡಿಕೆ / ಠೇವಣಿ/ ಪಾವತಿಗಳಿಗೆ ಸಂಬಂಧಿಸಿದಂತೆ ಕಡಿತವನ್ನು ಈಗಾಗಲೇ ತೆರಿಗೆ ಮೌಲ್ಯಮಾಪನ ವರ್ಷ 20-21 ರಲ್ಲಿ ಕ್ಲೈಮ್ ಮಾಡಿದ್ದರೆ, ಪುನಃ ಕ್ಲೈಮ್ ಮಾಡಲು ಸಾಧ್ಯವಾಗುವುದಿಲ್ಲ.

3.11 ವೇಳಾಪಟ್ಟಿ 80G ಮತ್ತು ವೇಳಾಪಟ್ಟಿ 80GGA
ವೇಳಾಪಟ್ಟಿ 80G ಮತ್ತು ವೇಳಾಪಟ್ಟಿ 80GGA ನಲ್ಲಿ, ಕಡಿತಕ್ಕೆ ಅರ್ಹವಾದ ದೇಣಿಗೆಗಳ ವಿವರಗಳನ್ನು ನೀವು ವಿಭಾಗ 80G ಮತ್ತು ವಿಭಾಗ 80GGA ಅಡಿಯಲ್ಲಿ ಒದಗಿಸಬೇಕಾಗುತ್ತದೆ.

3.12 ವೇಳಾಪಟ್ಟಿ AMT
ವೇಳಾಪಟ್ಟಿ AMT ನಲ್ಲಿ, ನೀವು ಪಾವತಿಸಬೇಕಾದ ಪರ್ಯಾಯ ಕನಿಷ್ಠ ತೆರಿಗೆಯ ಗಣನೆ/ಲೆಕ್ಕಾಚಾರವನ್ನು ಸೆಕ್ಷನ್ 115JC ಅಡಿಯಲ್ಲಿ ದೃಢೀಕರಿಸಬೇಕು.

3.13 ವೇಳಾಪಟ್ಟಿ AMTC
ವೇಳಾಪಟ್ಟಿ AMTC ನಲ್ಲಿ, ನೀವು ತೆರಿಗೆ ಕ್ರೆಡಿಟ್‌ಗಳ ವಿವರಗಳನ್ನು ಸೆಕ್ಷನ್ 115JD ಅಡಿಯಲ್ಲಿ ಸೇರಿಸಬೇಕು.

3.14 ವೇಳಾಪಟ್ಟಿ SPI
ವೇಳಾಪಟ್ಟಿ SPI ನಲ್ಲಿ, ವಿಭಾಗ 64 ರ ಪ್ರಕಾರ ನಿಮ್ಮ ಆದಾಯದೊಂದಿಗೆ ಸೇರಿಸಿಕೊಳ್ಳಬಹುದಾದ ಅಥವಾ ಅಗತ್ಯವಿರುವ ನಿರ್ದಿಷ್ಟ ವ್ಯಕ್ತಿಗಳ ( ಉದಾ. ಸಂಗಾತಿ, ಅಪ್ರಾಪ್ತ ಮಗು ) ಆದಾಯವನ್ನು ನೀವು ಸೇರಿಸಬೇಕು.

3.15 ವೇಳಾಪಟ್ಟಿ SI
ವೇಳಾಪಟ್ಟಿ SI ನಲ್ಲಿ, ವಿಶೇಷ ದರಗಳಲ್ಲಿ ತೆರಿಗೆ ವಿಧಿಸಬಹುದಾದ ಆದಾಯವನ್ನು ನಿಮಗೆ ನೋಡಲು ಸಾಧ್ಯವಾಗುತ್ತದೆ. ಸೂಕ್ತವಾದ ವೇಳಾಪಟ್ಟಿಗಳಲ್ಲಿ ಒದಗಿಸಲಾದ ಮೊತ್ತಗಳಿಂದ ತೆಗೆದುಕೊಳ್ಳಲಾದ ಆದಾಯದ ಪ್ರಕಾರಗಳ ಅಡಿಯಲ್ಲಿನ ಮೊತ್ತ, ಅಂದರೆ, ಶೆಡ್ಯೂಲ್‌ OS, ಶೆಡ್ಯೂಲ್‌ BFLA.

3.16 ವೇಳಾಪಟ್ಟಿ ವಿನಾಯಿತಿ ಪಡೆದ ಆದಾಯ (EI)
ವೇಳಾಪಟ್ಟಿ ವಿನಾಯಿತಿ ಪಡೆದ ಆದಾಯ (EI) ನಲ್ಲಿ, ನೀವು ವಿನಾಯಿತಿಗೊಳಗಾದ ಆದಾಯದ ವಿವರಗಳನ್ನು ಒದಗಿಸಬೇಕಾಗುತ್ತದೆ ಅಂದರೆ, ಆದಾಯವನ್ನು ಒಟ್ಟು ಆದಾಯದಲ್ಲಿ ಸೇರಿಸಬಾರದು ಅಥವಾ ತೆರಿಗೆ ವಿಧಿಸಲಾಗುವುದಿಲ್ಲ. ಈ ವೇಳಾಪಟ್ಟಿಯಲ್ಲಿ ಸೇರಿಸಲಾದ ಆದಾಯ ಪ್ರಕಾರಗಳಲ್ಲಿ ಬಡ್ಡಿ, ಲಾಭಾಂಶ, ಕೃಷಿ ಆದಾಯ, ಯಾವುದೇ ವಿನಾಯಿತಿಗೊಳಗಾದ ಇತರ ಆದಾಯ, DTAA ಮೂಲಕ ತೆರಿಗೆ ವಿಧಿಸಲಾಗದ ಆದಾಯ ಮತ್ತು ತೆರಿಗೆ ವಿಧಿಸಲಾಗದ ಆದಾಯದ ಪಾಸ್ ಥ್ರೂ ಸೇರಿದೆ.

3.17 ವೇಳಾಪಟ್ಟಿ ಪಾಸ್ ಥ್ರೂ ಆದಾಯ (PTI)
ವೇಳಾಪಟ್ಟಿ ಪಾಸ್ ಥ್ರೂ ಆದಾಯ (PTI) ನಲ್ಲಿ, ವಿಭಾಗ 115UA ಅಥವಾ 115UB ನಲ್ಲಿ ಉಲ್ಲೇಖಿಸಿದಂತೆ ವ್ಯವಹಾರ ಟ್ರಸ್ಟ್ ಅಥವಾ ಹೂಡಿಕೆ ನಿಧಿಯಿಂದ ಸ್ವೀಕರಿಸಿದ ಪಾಸ್ ಥ್ರೂ ಆದಾಯದ ವಿವರಗಳನ್ನು ನೀವು ಒದಗಿಸಬೇಕಾಗುತ್ತದೆ

3.18 ವೇಳಾಪಟ್ಟಿ ವಿದೇಶಿ ಮೂಲದ ಆದಾಯ (FSI)
ವೇಳಾಪಟ್ಟಿ ವಿದೇಶಿ ಮೂಲದ ಆದಾಯ (FSI) ನಲ್ಲಿ, ಭಾರತದ ಹೊರಗಿನ ಯಾವುದೇ ಮೂಲದಿಂದ ಬರುವ ಅಥವಾ ಸಂಚಿತಗೊಳ್ಳುವ ಆದಾಯದ ವಿವರಗಳನ್ನು ನೀವು ವರದಿ ಮಾಡಬೇಕಾಗುತ್ತದೆ. ಈ ವೇಳಾಪಟ್ಟಿ ನಿವಾಸಿಗಳಿಗೆ ಮಾತ್ರ ಲಭ್ಯವಿದೆ.

3.19 ವೇಳಾಪಟ್ಟಿ TR
ವೇಳಾಪಟ್ಟಿ TR ನಲ್ಲಿ, ಪ್ರತಿ ದೇಶಕ್ಕೆ ಸಂಬಂಧಿಸಿದಂತೆ ಭಾರತದ ಹೊರಗೆ ಪಾವತಿಸುವ ತೆರಿಗೆಗಳಿಗಾಗಿ ಭಾರತದಲ್ಲಿ ಹಕ್ಕು ಸಾಧಿಸುತ್ತಿರುವ ತೆರಿಗೆ ಪರಿಹಾರದ ಸಾರಾಂಶವನ್ನು ನೀವು ಒದಗಿಸಬೇಕಾಗುತ್ತದೆ. ಈ ವೇಳಾಪಟ್ಟಿ, ವೇಳಾಪಟ್ಟಿ FSI ನಲ್ಲಿ ಒದಗಿಸಲಾದ ವಿವರವಾದ ಮಾಹಿತಿಯ ಸಾರಾಂಶವನ್ನು ಸೆರೆಹಿಡಿಯುತ್ತದೆ.

3.20 ವೇಳಾಪಟ್ಟಿ FA
ವೇಳಾಪಟ್ಟಿ FA ನಲ್ಲಿ, ನೀವು ಭಾರತದ ಹೊರಗಿನ ಯಾವುದೇ ಮೂಲದಿಂದ ವಿದೇಶಿ ಸ್ವತ್ತು ಅಥವಾ ಆದಾಯದ ವಿವರಗಳನ್ನು ಒದಗಿಸಬೇಕಾಗುತ್ತದೆ. ನೀವು ಸಾಮಾನ್ಯವಾಗಿ ನಿವಾಸಿ ಅಲ್ಲದಿದ್ದರೆ ಅಥವಾ ಅನಿವಾಸಿಗಳಾಗಿದ್ದರೆ, ಈ ವೇಳಾಪಟ್ಟಿಯನ್ನು ಭರ್ತಿ ಮಾಡಬೇಕಾಗಿಲ್ಲ.

3.21 ವೇಳಾಪಟ್ಟಿ 5A
ಶೆಡ್ಯೂಲ್ 5A ನಲ್ಲಿ, ಪೋರ್ಚುಗೀಸ್ ಸಿವಿಲ್ ಕೋಡ್ 1860 ರ ಅಡಿಯಲ್ಲಿ ನಿಮ್ಮನ್ನು ಸಮುದಾಯದ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುತ್ತಿದ್ದರೆ, ನೀವು ಗಂಡ ಮತ್ತು ಹೆಂಡತಿಯ ನಡುವಿನ ಆದಾಯವನ್ನು ವಿಂಗಡಿಸಲು ಅಗತ್ಯವಾದ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

3.22 ವೇಳಾಪಟ್ಟಿ AL
ನಿಮ್ಮ ಒಟ್ಟು ಆದಾಯವು ₹50 ಲಕ್ಷವನ್ನು ಮೀರಿದರೆ, ವೇಳಾಪಟ್ಟಿ AL ನಲ್ಲಿ ಚಲಿಸಬಲ್ಲ ಮತ್ತು ಸ್ಥಿರ ಆಸ್ತಿಗಳ ವಿವರಗಳನ್ನು ಹಾಗೂ ಅಂತಹ ಸ್ವತ್ತುಗಳಿಗೆ ಸಂಬಂಧಿಸಿದ ಹೊಣೆಗಾರಿಕೆಗಳನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ನೀವು ಅನಿವಾಸಿ ಅಥವಾ ನಿವಾಸಿಯಾಗಿದ್ದು ಆದರೆ ಸಾಮಾನ್ಯವಾಗಿ ವಾಸಿಸದಿದ್ದರೆ, ಭಾರತದಲ್ಲಿ ಇರುವ ಸ್ವತ್ತುಗಳ ವಿವರಗಳನ್ನು ಮಾತ್ರ ಉಲ್ಲೇಖಿಸಬೇಕು.

3.23 ಭಾಗ B – ಒಟ್ಟು ಆದಾಯ (TI)
ಭಾಗ B – ಒಟ್ಟು ಆದಾಯ (TI) ವಿಭಾಗದಲ್ಲಿ, ನೀವು ಫಾರ್ಮ್‌ನಲ್ಲಿ ಭರ್ತಿ ಮಾಡಿದ ಎಲ್ಲಾ ಶೆಡ್ಯೂಲ್‌ಗಳಿಂದ ಸ್ವಯಂ-ಒಟ್ಟುಗೂಡಿದ ಒಟ್ಟು ಆದಾಯದ ನಿಮ್ಮ ಗಣನೆ/ಲೆಕ್ಕಾಚಾರವನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ.

3.24 ತೆರಿಗೆ ಪಾವತಿಸಲಾಗಿದೆ
ತೆರಿಗೆ ಪಾವತಿಸಲಾಗಿದೆ ವಿಭಾಗದಲ್ಲಿ, ಹಿಂದಿನ ಆರ್ಥಿಕ ವರ್ಷದಲ್ಲಿ ನೀವು ಪಾವತಿಸಿದಂತೆ ನಿಮ್ಮ ತೆರಿಗೆ ವಿವರಗಳನ್ನು ಪರಿಶೀಲಿಸಬೇಕಾಗುತ್ತದೆ. ಸಂಬಳದಿಂದ TDS / ಸಂಬಳವನ್ನು ಹೊರತುಪಡಿಸಿದ ಆದಾಯದಿಂದ TDS, TCS, ಮುಂಗಡ ತೆರಿಗೆ ಹಾಗೂ ಸ್ವಯಂ ಮೌಲ್ಯಮಾಪನ ತೆರಿಗೆಯನ್ನು ತೆರಿಗೆ ವಿವರಗಳು ಒಳಗೊಂಡಿರುತ್ತದೆ.

3.25 ಭಾಗ B-TTI
ಭಾಗ B-TTI ಸೆಕ್ಷನ್‌ನಲ್ಲಿ, ಒಟ್ಟು ಆದಾಯದಲ್ಲಿನ ಒಟ್ಟು ಆದಾಯದ ತೆರಿಗೆ ಹೊಣೆಗಾರಿಕೆಯ ಒಟ್ಟಾರೆ ಲೆಕ್ಕಾಚಾರವನ್ನು ನೀವು ನೋಡಲು ಸಾಧ್ಯವಾಗುತ್ತದೆ.

ಹೆಚ್ಚಿನ ವಿವರಗಳಿಗಾಗಿ, ತೆರಿಗೆ ಮೌಲ್ಯಮಾಪನ ವರ್ಷ 2021-22 ಕ್ಕೆ CBDT ಮೂಲಕ ವಿತರಿಸಲಾದ ITR ಅನ್ನು ಫೈಲ್ ಮಾಡಲು ಸೂಚನೆಗಳನ್ನು ನೋಡಿ.

4. ITR-2 ಅನ್ನು ಪ್ರವೇಶಿಸುವುದು ಹಾಗೂ ಸಲ್ಲಿಸುವುದು ಹೇಗೆ

ಈ ಕೆಳಗಿನ ವಿಧಾನಗಳ ಮೂಲಕ ನಿಮ್ಮ ITR ಅನ್ನು ನೀವು ಫೈಲ್ ಮಾಡಬಹುದು ಮತ್ತು ಸಲ್ಲಿಸಬಹುದು:

  • ಆನ್‌ಲೈನ್ ಮೋಡ್ - ಇ-ಫೈಲಿಂಗ್ ಪೋರ್ಟಲ್ ಮೂಲಕ
  • ಆಫ್‌ಲೈನ್ ಮೋಡ್ - ಆಫ್‌ಲೈನ್ ಉಪಯುಕ್ತತೆಯ ಮೂಲಕ

ಇನ್ನಷ್ಟು ತಿಳಿಯಲು ನೀವು ಆಫ್‌ಲೈನ್ ಉಪಯುಕ್ತತೆ (ITR ಗಳಿಗೆ) ಬಳಕೆದಾರ ಕೈಪಿಡಿಯನ್ನು ನೋಡಬಹುದು.


ಆನ್‌ಲೈನ್ ಮೋಡ್ ಮೂಲಕ ITR ಅನ್ನು ಫೈಲ್ ಮಾಡಲು ಹಾಗೂ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ 1: ನಿಮ್ಮ ಬಳಕೆದಾರರ ಐಡಿ ಮತ್ತು ಗುಪ್ತಪದ/ಪಾಸ್ವರ್ಡ್ ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.


ಹಂತ 2: ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ, ಇ-ಫೈಲ್ > ಆದಾಯ ತೆರಿಗೆ ರಿಟರ್ನ್‌ಗಳು > ಆದಾಯ ತೆರಿಗೆ ರಿಟರ್ನ್‌ಗಳನ್ನು ಫೈಲ್ ಮಾಡಿ ಅನ್ನು ಕ್ಲಿಕ್ ಮಾಡಿ.


ಹಂತ 3: ತೆರಿಗೆ ಮೌಲ್ಯಮಾಪನ ವರ್ಷವನ್ನು 2021 – 22 ಎಂದು ಆಯ್ಕೆಮಾಡಿ ಹಾಗೂ ಮುಂದುವರಿಸಿ ಕ್ಲಿಕ್ ಮಾಡಿ.


ಹಂತ 4: ಫೈಲಿಂಗ್ ವಿಧಾನವನ್ನು ಆನ್‌ಲೈನ್ ಮೂಲಕ ಎಂದು ಆಯ್ಕೆಮಾಡಿ ಹಾಗೂ ಮುಂದುವರಿಯಿರಿ ಕ್ಲಿಕ್ ಮಾಡಿ.


ಸೂಚನೆ: ನೀವು ಈಗಾಗಲೇ ಆದಾಯ ತೆರಿಗೆ ರಿಟರ್ನ್ ಅನ್ನು ಭರ್ತಿ ಮಾಡಿದ್ದರೆ ಮತ್ತು ಅದು ಸಲ್ಲಿಸಲು ಬಾಕಿ ಉಳಿದಿದ್ದರೆ, ಫೈಲಿಂಗ್ ಪುನರಾರಂಭಿಸಿ ಕ್ಲಿಕ್ ಮಾಡಿ. ಉಳಿಸಲಾದ ರಿಟರ್ನ್ ಅನ್ನು ನೀವು ತ್ಯಜಿಸಲು ಮತ್ತು ಹೊಸದಾಗಿ ರಿಟರ್ನ್ ಅನ್ನು ತಯಾರಿಸಲು ಬಯಸಿದರೆ, ಹೊಸ ಫೈಲಿಂಗ್ ಅನ್ನು ಪ್ರಾರಂಭಿಸಿ ಕ್ಲಿಕ್ ಮಾಡಿ.


ಹಂತ 5: ನಿಮಗೆ ಅನ್ವಯವಾಗುವ ರೀತಿಯಲ್ಲಿ ಸ್ಥಿತಿ ಅನ್ನು ಆಯ್ಕೆಮಾಡಿ ಹಾಗೂ ಮುಂದುವರಿಯಲು ಮುಂದುವರಿಸಿ ಕ್ಲಿಕ್ ಮಾಡಿ.


ಹಂತ 6: ಆದಾಯ ತೆರಿಗೆ ರಿಟರ್ನ್‌ ಪ್ರಕಾರವನ್ನು ಆಯ್ಕೆಮಾಡಲು ನಿಮಗೆ ಎರಡು ಆಯ್ಕೆಗಳಿವೆ:

  • ಯಾವ ITR ಫೈಲ್ ಮಾಡಬೇಕು ಎಂದು ನಿಮಗೆ ಖಾತ್ರಿಯಿಲ್ಲದಿದ್ದರೆ, ನೀವು ಯಾವ ITR ಫಾರ್ಮ್ ಅನ್ನು ಫೈಲ್ ಮಾಡಬೇಕು ಎಂದು ನಿರ್ಧರಿಸಲು ನನಗೆ ಸಹಾಯ ಮಾಡಿ ಎಂಬುದನ್ನು ಆಯ್ಕೆಮಾಡಬಹುದು ಮತ್ತು ಮುಂದುವರಿಯಿರಿ ಕ್ಲಿಕ್ ಮಾಡಿ. ಸರಿಯಾದ ITR ಅನ್ನು ನಿರ್ಧರಿಸಲು ಸಿಸ್ಟಂ ನಿಮಗೆ ಸಹಾಯ ಮಾಡಿದ ನಂತರ, ನಿಮ್ಮ ITR ಅನ್ನು ನೀವು ಫೈಲ್ ಮಾಡಬಹುದು.
     
  • ಯಾವ ITR ಫೈಲ್ ಮಾಡಬೇಕು ಎಂದು ನಿಮಗೆ ಖಾತ್ರಿಯಿದ್ದರೆ, ನಾನು ಯಾವ ITR ಫಾರ್ಮ್ ಅನ್ನು ಫೈಲ್ ಮಾಡಬೇಕು ಎಂದು ನನಗೆ ತಿಳಿದಿದೆ ಆಯ್ಕೆಮಾಡಿ.ಡ್ರಾಪ್‌ಡೌನ್‌ನಿಂದ ಅನ್ವಯಿಸುವ ಆದಾಯ ತೆರಿಗೆ ರಿಟರ್ನ್ ಅನ್ನು ಆಯ್ಕೆಮಾಡಿ ಮತ್ತು ITR ನೊಂದಿಗೆ ಮುಂದುವರಿಯಿರಿ ಕ್ಲಿಕ್ ಮಾಡಿ.
     

ಗಮನಿಸಿ:

  • ನಿಮಗೆ ಯಾವ ITR ಅಥವಾ ಶೆಡ್ಯೂಲ್‌ಗಳು ಅಥವಾ ಆದಾಯ ಮತ್ತು ಕಡಿತಗಳ ವಿವರಗಳು ಅನ್ವಯವಾಗುತ್ತವೆ ಎಂದು ತಿಳಿದಿಲ್ಲದಿದ್ದರೆ, ಒಂದಷ್ಟು ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ನಿಮ್ಮ ಉತ್ತರಗಳು ಅದನ್ನು ನಿರ್ಧರಿಸಲು ನಿಮಗೆ ಮಾರ್ಗದರ್ಶನ ನೀಡುತ್ತದೆ ಮತ್ತು ITR ನ ಸರಿಯಾದ / ದೋಷ ಮುಕ್ತ ಫೈಲಿಂಗ್‌ನಲ್ಲಿ ನಿಮಗೆ ಸಹಾಯ ಮಾಡುತ್ತದೆ.
  • ನಿಮಗೆ ಯಾವ ITR ಅಥವಾ ಶೆಡ್ಯೂಲ್‌ಗಳು ಅಥವಾ ಆದಾಯ ಮತ್ತು ಕಡಿತಗಳ ವಿವರಗಳು ಅನ್ವಯವಾಗುತ್ತವೆ ಎಂದು ತಿಳಿದಿದ್ದರೆ, ನೀವು ಪ್ರಶ್ನೆಗಳನ್ನು ಬಿಟ್ಟುಬಿಡಬಹುದು.
  • ಇನ್ನಷ್ಟು ತಿಳಿಯಲು ತೆರಿಗೆ ಮೌಲ್ಯಮಾಪನ ವರ್ಷ 2021 – 22 ಕ್ಕಾಗಿ ವಿಜಾರ್ಡ್ ಆಧಾರಿತ ITR ಬಳಕೆದಾರರ ಕೈಪಿಡಿಯನ್ನು ನೋಡಿ.


ಹಂತ 7: ನಿಮಗೆ ಅನ್ವಯವಾಗುವ ITR ಅನ್ನು ನೀವು ಆಯ್ಕೆಮಾಡಿದ ನಂತರ, ಅಗತ್ಯವಿರುವ ದಾಖಲೆಗಳ ಪಟ್ಟಿಯನ್ನು ಟಿಪ್ಪಣಿ ಮಾಡಿ ಹಾಗೂ ಪ್ರಾರಂಭಿಸೋಣ ಕ್ಲಿಕ್ ಮಾಡಿ.


ಹಂತ 8: ನಿಮ್ಮ ಮುಂಗಡ-ಭರ್ತಿ ಮಾಡಿದ ಡೇಟಾವನ್ನು ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ಸಂಪಾದಿಸಿ. ಬಾಕಿ ಉಳಿದಿರುವ / ಹೆಚ್ಚುವರಿ ಡೇಟಾವನ್ನು ನಮೂದಿಸಿ (ಅಗತ್ಯವಿದ್ದರೆ). ಪ್ರತಿ ವಿಭಾಗದ ಕೊನೆಯಲ್ಲಿ ದೃಢೀಕರಿಸಿ ಅನ್ನು ಕ್ಲಿಕ್ ಮಾಡಿ.


ಹಂತ 9: ನಿಮ್ಮ ಆದಾಯ ಮತ್ತು ಕಡಿತದ ವಿವರಗಳನ್ನು ವಿಭಿನ್ನ ವಿಭಾಗದಲ್ಲಿ ನಮೂದಿಸಿ. ಫಾರ್ಮ್‌ನ ಎಲ್ಲಾ ವಿಭಾಗಗಳನ್ನು ಪೂರ್ಣಗೊಳಿಸಿದ ಮತ್ತು ದೃಢೀಕರಿಸಿದ ನಂತರ, ಮುಂದುವರಿಯಿರಿ ಕ್ಲಿಕ್ ಮಾಡಿ.


ಹಂತ 9a: ತೆರಿಗೆ ಭಾದ್ಯತೆಯಿದ್ದರೆ
ನೀವು ಒದಗಿಸಿದ ವಿವರಗಳನ್ನು ಆಧಾರಿಸಿ, ನಿಮ್ಮ ತೆರಿಗೆ ಗಣನೆ/ಲೆಕ್ಕಾಚಾರದ ಸಾರಾಂಶವನ್ನು ನಿಮಗೆ ತೋರಿಸಲಾಗುತ್ತದೆ. ಗಣನೆ/ಲೆಕ್ಕಾಚಾರದ ಆಧಾರದ ಮೇಲೆ ಪಾವತಿಸಬೇಕಾದ ತೆರಿಗೆ ಭಾದ್ಯತೆಯಿದ್ದರೆ, ನೀವು ಈಗ ಪಾವತಿಸಿ ಮತ್ತು ಪೇಜ್‌ ಕೆಳಭಾಗದಲ್ಲಿ ನಂತರ ಪಾವತಿಸಿ ಆಯ್ಕೆಗಳನ್ನು ಪಡೆಯುತ್ತೀರಿ.


ಗಮನಿಸಿ:

  • ಈಗ ಪಾವತಿಸಿ ಆಯ್ಕೆಯನ್ನು ಬಳಸಲು ಶಿಫಾರಸು ಮಾಡಲಾಗುತ್ತದೆ. BSR ಕೋಡ್ ಮತ್ತು ಚಲನ್ ಕ್ರಮ ಸಂಖ್ಯೆ ಎಚ್ಚರಿಕೆಯಿಂದ ಟಿಪ್ಪಣಿ ಮಾಡಿಕೊಳ್ಳಿ ಹಾಗೂ ಅವುಗಳನ್ನು ಪಾವತಿಯ ವಿವರಗಳಲ್ಲಿ ನಮೂದಿಸಿ.
  • ನೀವು ನಂತರ ಪಾವತಿಸಲು ಬಯಸಿದರೆ, ನಿಮ್ಮ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ ನಂತರ ನೀವು ಪಾವತಿಸಬಹುದು, ಆದರೆ, ಕರ್ತವ್ಯಲೋಪವೆಸಗಿದ ತೆರಿಗೆದಾರರಾಗಿ ಪರಿಗಣಿಸುವ ಅಪಾಯವಿದೆ ಮತ್ತು ತೆರಿಗೆ ಪಾವತಿಸಬೇಕಾದ ಬಡ್ಡಿಯನ್ನು ಪಾವತಿಸುವ ಭಾದ್ಯತೆ ಉದ್ಭವಿಸಬಹುದು.

ಹಂತ 9b: ಯಾವುದೇ ತೆರಿಗೆ ಹೊಣೆಗಾರಿಕೆಯಿಲ್ಲದಿದ್ದರೆ (ಯಾವುದೇ ಬೇಡಿಕೆ / ರೀಫಂಡ್ ಇಲ್ಲ) ಅಥವಾ ನೀವು ರೀಫಂಡ್‌ಗೆ ಅರ್ಹರಾಗಿದ್ದರೆ

ತೆರಿಗೆಯನ್ನು ಪಾವತಿಸಿದ ನಂತರ, ರಿಟರ್ನ್ ಪೂರ್ವವೀಕ್ಷಿಸಿ ಅನ್ನು ಕ್ಲಿಕ್ ಮಾಡಿ. ತೆರಿಗೆ ಹೊಣೆಗಾರಿಕೆಯಿಲ್ಲದಿದ್ದರೆ ಅಥವಾ ತೆರಿಗೆ ಗಣನೆ/ಲೆಕ್ಕಾಚಾರದ ಆಧಾರದ ಮೇಲೆ ರೀಫಂಡ್ ಇದ್ದರೆ, ನಿಮ್ಮನ್ನು ಪೂರ್ವವೀಕ್ಷಿಸಿ ಮತ್ತು ನಿಮ್ಮ ರಿಟರ್ನ್ ಸಲ್ಲಿಸಿ ಪೇಜ್‌ಗೆ ಕರೆದೊಯ್ಯಲಾಗುತ್ತದೆ.


ಹಂತ 10: ನಿಮ್ಮ ರಿಟರ್ನ್ ಅನ್ನು ಪೂರ್ವವೀಕ್ಷಿಸಿ ಮತ್ತು ಸಲ್ಲಿಸಿ ಪೇಜ್‌ನಲ್ಲಿ, ಸ್ಥಳ ನಮೂದಿಸಿ, ಘೋಷಣೆ ಚೆಕ್‌ಬಾಕ್ಸ್ ಆಯ್ಕೆಮಾಡಿ ಮತ್ತು ದೃಢೀಕರಣಕ್ಕೆ ಮುಂದುವರಿಯಿರಿ ಕ್ಲಿಕ್ ಮಾಡಿ.


ಸೂಚನೆ: ನೀವು ತೆರಿಗೆ ರಿಟರ್ನ್ ತಯಾರಕರನ್ನು ತೊಡಗಿಸಿಲ್ಲದಿದ್ದರೆ ಅಥವಾ ನಿಮ್ಮ ರಿಟರ್ನ್ ಅನ್ನು TRP ಸಿದ್ಧಪಡಿಸುತ್ತಿದ್ದರೆ, TRP ಗೆ ಸಂಬಂಧಿಸಿದ ಪಠ್ಯದ ಬಾಕ್ಸ್‌ಗಳನ್ನು ನೀವು ಖಾಲಿ ಬಿಡಬಹುದು.


ಹಂತ 11: ಮೌಲ್ಯೀಕರಿಸಿದ ನಂತರ, ನಿಮ್ಮ ಪೂರ್ವವೀಕ್ಷಿಸಿ ಮತ್ತು ನಿಮ್ಮ ರಿಟರ್ನ್ ಅನ್ನು ಸಲ್ಲಿಸಿ ಪೇಜ್‌ನಲ್ಲಿ, ಪರಿಶೀಲನೆಗೆ ಮುಂದುವರಿಯಿರಿ ಕ್ಲಿಕ್ ಮಾಡಿ.


ಸೂಚನೆ: ನಿಮ್ಮ ರಿಟರ್ನ್‌ನಲ್ಲಿ ದೋಷಗಳ ಪಟ್ಟಿಯನ್ನು ನಿಮಗೆ ತೋರಿಸಿದರೆ, ದೋಷಗಳನ್ನು ಸರಿಪಡಿಸಲು ನೀವು ಫಾರ್ಮ್‌ಗೆ ಹಿಂತಿರುಗಬೇಕು. ಯಾವುದೇ ದೋಷಗಳಿಲ್ಲದಿದ್ದರೆ, ಪರಿಶೀಲನೆಗೆ ಮುಂದುವರಿಯಿರಿ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಇ-ಪರಿಶೀಲನೆಗೆ ಮುಂದುವರಿಯಬಹುದು.


ಹಂತ 12: ನಿಮ್ಮ ಪರಿಶೀಲನೆಯನ್ನು ಪೂರ್ಣಗೊಳಿಸಿ ಪೇಜ್‌ನಲ್ಲಿ, ನಿಮ್ಮ ಆದ್ಯತೆಯ ಆಯ್ಕೆಯನ್ನು ಆರಿಸಿ ಹಾಗೂ ಮುಂದುವರಿಸಿ ಕ್ಲಿಕ್ ಮಾಡಿ.


ನಿಮ್ಮ ರಿಟರ್ನ್ ಅನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ, ಮತ್ತು ನಿಮ್ಮ ITR ಅನ್ನು ಪರಿಶೀಲಿಸಲು ಇ-ಪರಿಶೀಲನೆಯು (ಶಿಫಾರಸು ಮಾಡಲಾದ ಆಯ್ಕೆ - ಈಗ ಇ-ಪರಿಶೀಲಿಸಿ) ಸುಲಭವಾದ ಮಾರ್ಗವಾಗಿದೆ – ಸಹಿ ಮಾಡಿದ ಭೌತಿಕ ITR-V ಅನ್ನು CPC ಗೆ ಅಂಚೆ ಮೂಲಕ ಕಳುಹಿಸುವುದಕ್ಕಿಂತ ಇದು ತ್ವರಿತ, ಕಾಗದರಹಿತ, ಮತ್ತು ಸುರಕ್ಷಿತವಾಗಿದೆ.


ಸೂಚನೆ: ನೀವು ನಂತರ ಇ-ಪರಿಶೀಲಿಸಿ ಆಯ್ಕೆಮಾಡಿದರೆ, ನಿಮ್ಮ ರಿಟರ್ನ್ ಅನ್ನು ನೀವು ಸಲ್ಲಿಸಬಹುದು, ಆದರೂ, ನಿಮ್ಮ ITR ಅನ್ನು ಫೈಲ್ ಮಾಡಿದ 120 ದಿನಗಳ ಒಳಗಾಗಿ ನಿಮ್ಮ ರಿಟರ್ನ್ ಅನ್ನು ನೀವು ಪರಿಶೀಲಿಸುವ ಅಗತ್ಯವಿರುತ್ತದೆ.


ಹಂತ 13: ಇ-ಪರಿಶೀಲನೆ ಪೇಜ್‌ನಲ್ಲಿ, ನೀವು ರಿಟರ್ನ್ ಅನ್ನು ಇ-ಪರಿಶೀಲಿಸಲು ಬಯಸುವ ಆಯ್ಕೆಯನ್ನು ಆರಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.

ಗಮನಿಸಿ:

  • ಇನ್ನಷ್ಟು ತಿಳಿಯಲು ಇ-ಪರಿಶೀಲನೆ ಮಾಡುವುದು ಹೇಗೆ ಬಳಕೆದಾರರ ಕೈಪಿಡಿಯನ್ನು ನೋಡಿ.
  • ನೀವು ITR-V ಮೂಲಕ ಪರಿಶೀಲಿಸಿ ಆಯ್ಕೆಮಾಡಿದರೆ, ನಿಮ್ಮ ITR-V ಯ ಸಹಿ ಮಾಡಿದ ಭೌತಿಕ ನಕಲು ಪ್ರತಿಯನ್ನು ಕೇಂದ್ರೀಕೃತ ಸಂಸ್ಕರಣಾ ಕೇಂದ್ರ, ಆದಾಯ ತೆರಿಗೆ ಇಲಾಖೆ, ಬೆಂಗಳೂರು 560500 ಗೆ ಸಾಮಾನ್ಯ / ಸ್ಪೀಡ್ ಪೋಸ್ಟ್ ಮೂಲಕ 120 ದಿನಗಳ ಒಳಗಾಗಿ ಕಳುಹಿಸಬೇಕು.
  • ದಯವಿಟ್ಟು ನಿಮ್ಮ ಬ್ಯಾಂಕ್ ಖಾತೆಯನ್ನು ನೀವು ಮೊದಲೇ ಮೌಲ್ಯೀಕರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ, ಇದರಿಂದ ಬಾಕಿ ಇರುವ ಯಾವುದೇ ರೀಫಂಡ್‌ಗಳು ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಬಹುದು.
  • ಇನ್ನಷ್ಟು ತಿಳಿಯಲು ನನ್ನ ಬ್ಯಾಂಕ್ ಖಾತೆ ಬಳಕೆದಾರರ ಕೈಪಿಡಿಯನ್ನು ನೋಡಿ.

ನೀವು ರಿಟರ್ನ್ ಅನ್ನು ಇ-ಪರಿಶೀಲನೆ ಮಾಡಿದ ನಂತರ, ವಹಿವಾಟಿನ ID ಮತ್ತು ಸ್ವೀಕೃತಿ ಸಂಖ್ಯೆಯೊಂದಿಗೆ ಯಶಸ್ವಿಯಾದ ಸಂದೇಶವನ್ನು ತೋರಿಸಲಾಗುತ್ತದೆ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಗೆ ನೀವು ದೃಢೀಕರಣದ ಸಂದೇಶವನ್ನು ಸಹ ಸ್ವೀಕರಿಸುತ್ತೀರಿ.

4. ಸಂಬಂಧಿತ ವಿಷಯಗಳು