Do not have an account?
Already have an account?

ನಿಮ್ಮ PAN ಪರಿಶೀಲಿಸಿ

(PAN ಪರಿಶೀಲನೆ ಸರಳವಾಗಿದೆ)

(PAN ಪರಿಶೀಲನೆ ಸರಳವಾಗಿದೆ)

Frequently Asked Questions

ನಿಮ್ಮ PAN ಪರಿಶೀಲಿಸಿ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1. ನಾನು ನನ್ನ PAN ಅನ್ನು ಏಕೆ ಪರಿಶೀಲಿಸಬೇಕು?

ನೀವು ನಿಮ್ಮ PAN ಅನ್ನು ಈ ಕೆಳಗಿನ ಉದ್ದೇಶಗಳಿಗಾಗಿ ಪರಿಶೀಲಿಸಬಹುದು:

  • ನಿಮ್ಮ ಪ್ಯಾನ್ ಕಾರ್ಡ್‌ನ ವಿವರಗಳು, ಉದಾಹರಣೆಗೆ ಪ್ಯಾನ್ ಕಾರ್ಡ್‌ನಲ್ಲಿರುವ ಹೆಸರು, ಹುಟ್ಟಿದ ದಿನಾಂಕ ಮತ್ತು ಪ್ಯಾನ್ ಡೇಟಾಬೇಸ್‌ನಲ್ಲಿ ಲಭ್ಯವಿರುವ ವಿವರಗಳು ಒಂದೇ ಆಗಿವೆಯೇ ಎಂದು ಪರಿಶೀಲಿಸಿ.
  • ನಿಮ್ಮ PAN ಸಕ್ರಿಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೌಲ್ಯೀಕರಿಸಿ.

2. PAN ಪರಿಶೀಲನೆಗಾಗಿ ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನಾನು ನನ್ನ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸುವ ಅಗತ್ಯವಿದೆಯೇ?

ಪರಿಶೀಲನೆ ಪ್ರಕ್ರಿಯೆಯ ವೇಳೆ, OTP ಸ್ವೀಕರಿಸಲು ನಿಮಗೆ ಲಭ್ಯವಿರುವ ಯಾವುದೇ ಮಾನ್ಯ ಮೊಬೈಲ್ ಸಂಖ್ಯೆಯನ್ನು ಬಳಸಬಹುದು. OTP 15 ನಿಮಿಷಗಳವರೆಗೆ ಮಾನ್ಯವಾಗಿದ್ದು, ಗರಿಷ್ಠ ಮೂರು ಪ್ರಯತ್ನಗಳಿಗೆ ಮಾತ್ರ ಅವಕಾಶ ಇರುತ್ತದೆ.

3. ಯಾವುದೇ ಒಬ್ಬ ತೆರಿಗೆದಾರರಿಗೆ ಒಂದೇ ಮೊಬೈಲ್ ಸಂಖ್ಯೆಯೊಂದಿಗೆ ಪರಿಶೀಲಿಸಬಹುದಾದ PANಗಳ ಸಂಖ್ಯೆಗೆ ಮಿತಿಯಿದೆಯೇ?

ಹೌದು, ಒಂದು ದಿನದಲ್ಲಿ, ಒಂದು ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು, ನೀವು ಗರಿಷ್ಠ 5 ಬೇರೆ ಬೇರೆ PANಗಳನ್ನು ಪರಿಶೀಲಿಸಬಹುದು.

4. ಬಾಹ್ಯ ಏಜೆನ್ಸಿ(ಸಂಸ್ಥೆ)ಯಾಗಿ, ನಾನು ಬಳಕೆದಾರರ PAN ಅನ್ನು ಮೌಲ್ಯೀಕರಿಸಬಹುದೇ?

ಹೌದು, ಬಾಹ್ಯ ಏಜೆನ್ಸಿಗಳು ಸೇರಿದಂತೆ ಎಲ್ಲಾ ನೋಂದಾಯಿತ ಬಳಕೆದಾರರಿಗೆ PAN ಪರಿಶೀಲನೆ ಸೇವೆ ಲಭ್ಯವಿದೆ. ಸಾಮೂಹಿಕ PAN / TAN ಪರಿಶೀಲನೆಯು ಬಾಹ್ಯ ಏಜೆನ್ಸಿಗಳಿಗೆ ಪ್ರತ್ಯೇಕ ಸೇವೆಯಾಗಿದ್ದು, ಇದಕ್ಕೆ ಇಲಾಖೆಯ ಅನುಮೋದನೆ ಅಗತ್ಯವಿರುತ್ತದೆ.

5. ನನ್ನ PAN ವಿವರಗಳನ್ನು ಆನ್‌ಲೈನ್‌ನಲ್ಲಿ ನಾನು ಹೇಗೆ ನೋಡಬಹುದು?

ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಲಭ್ಯವಿರುವ ನಿಮ್ಮ PAN ತಿಳಿಯಿರಿ ಸೇವೆಗೆ ನೀವು ಭೇಟಿ ನೀಡಬಹುದು. ನಿಮ್ಮ PAN ಮಾನ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನೀವು ಈ ಸೇವೆಯನ್ನು ಸಹ ಬಳಸಬಹುದು.

Detailed guides and documentation