ಆಧಾರ್ ಜೋಡಿಸಿ
(ಆಧಾರ್ ಲಿಂಕ್ ಮಾಡಿ. ನಿಮ್ಮ ತೆರಿಗೆ ಪ್ರಯಾಣವನ್ನು ಸರಳಗೊಳಿಸಿ)
(ಆಧಾರ್ ಲಿಂಕ್ ಮಾಡಿ. ನಿಮ್ಮ ತೆರಿಗೆ ಪ್ರಯಾಣವನ್ನು ಸರಳಗೊಳಿಸಿ)
ಆಧಾರ್ ಲಿಂಕ್ ಮಾಡಿ ಕುರಿತು ಸಾಮಾನ್ಯ ಪ್ರಶ್ನೆಗಳು
1. ಆಧಾರ್ ಹಾಗೂ PANನ್ನು ಯಾರೆಲ್ಲಾ ಲಿಂಕ್ ಮಾಡಬೇಕು?
ಆದಾಯ ತೆರಿಗೆ ಕಾಯ್ದೆ, 1961,ರ ಸೆಕ್ಷನ್ 139AA(2A)ರನ್ವಯ ಯಾರು 1 ಜುಲೈ 2017ರ ಸಮಯದಲ್ಲಿ PAN ಹೊಂದಿದ್ದು ಹಾಗೆಯೇ ಆಧಾರ್ ಸಂಖ್ಯೆ ಪಡೆಯಲು ಸೂಕ್ತವಿದ್ದಾರೋ ಅಂತಹ ವ್ಯಕ್ತಿಗಳೆಲ್ಲಾ ನಿಗದಿತ ರೀತಿಯಲ್ಲಿ ಆಧಾರ ಸಂಖ್ಯೆಯನ್ನು ನಮೂದಿಸಬೇಕು.
ಆರಂಭದಲ್ಲಿ, 30 ಜೂನ್ 2023ರೊಳಗೆ ಆಧಾರ ಲಿಂಕ್ ಮಾಡದ PANಗಳೆಲ್ಲ ನಿಷ್ಕ್ರಿಯವಾಗಬೇಕಿತ್ತು.
ಈ ಕೊನೆಯ ದಿನಾಂಕವನ್ನು ನಂತರ ರೂ.೧೦೦೦ ನಿಗದಿಪಡಿಸಿದ ಶುಲ್ಕದೊಂದಿಗೆ 31 ಮೇ 2024ರ ವರೆಗೆ ವಿಸ್ತರಿಸಲಾಯಿತು.
ಅನಂತರದ ಸಹಾಯತೆ(ಅಧಿಸೂಚನೆ ಸಂಖ್ಯೆ 26/2025 ದಿನಾಂಕ 3 ಎಪ್ರಿಲ್ 2025):
ಆಧಾರ್ ನೋಂದಣಿ ಐಡಿ ಆಧಾರದ ಮೇಲೆ PAN ಕಾರ್ಡ್ ಪಡೆದ ವ್ಯಕ್ತಿಗಳಿಗೆ ವಿಶೇಷ ವಿಸ್ತರಣೆಯನ್ನು ನೀಡಲಾಗಿತ್ತು. ಅಂತಹ ವ್ಯಕ್ತಿಗಳು 31 ಡಿಸೆಂಬರ್ 2025ಕ್ಕಿಂತ ಮೊದಲು ವಾಸ್ತವಿಕ ಆಧಾರ ಸಂಖ್ಯೆಯನ್ನು PAN-ಆಧಾರ ಲಿಂಕೇಜ್ ಗೆ ಬಳಸಿ ಪೂರ್ಣಗೊಳಿಸಬೇಕಿತ್ತು .
ಈ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ, ದಿನಾಂಕ 1 ಜನವರಿ 2026ರಿಂದ ಇಂತಹ ಪ್ಯಾನ್ ಗಳು ನಿಷ್ಕ್ರಿಯಗೊಳ್ಳಲಿದ್ದವು.
ಅದಾಗ್ಯೂ, ಸೂಚಿತ ವಿನಾಯಿತಿ ವರ್ಗದ ಒಳಗಿರುವ ವ್ಯಕ್ತಿಗಳ PANಗಳ ಮೇಲೆ ಇದು ಪರಿಣಾಮ ಬೀರುವದಿಲ್ಲ.
ದಯವಿಟ್ಟು ಗಮನಿಸಿ:
ಸರ್ಕಾರವು ಮೊದಲಿಗೆ ವಾಸ್ತವಿಕ ಆಧಾರ್ ಸಂಖ್ಯೆಯ ಬದಲಿಗೆ ಆಧಾರ್ ನೋಂದಣಿ ಐಡಿಯ ಸಹಾಯದಿಂದ ಪ್ಯಾನ್ ಕಾರ್ಡ್ ಪಡೆದುಕೊಳ್ಳಲು ಅನುಮತಿಸಿತ್ತು. ಆದರೆ ಕೇಂದ್ರ ಬಜೆಟ್ 2025ರ ಸಂದರ್ಭದಲ್ಲಿ ಈ ನಿಬಂಧನೆಯನ್ನು 1 ಅಕ್ಟೋಬರ್ 2024ರಂದೇ ಸ್ಥಗಿತಗೊಳಿಸಿದೆ ಎಂದು ಪ್ರಕಟಿಸಿತು. ಹಣಕಾಸು ವಹಿವಾಟಗಳ ನಿಖರತೆ ಖಚಿತಮಾಡಲು ಹಾಗೂ ವಂಚನೆ ತಪ್ಪಿಸಲು, ಸಿಬಿಡಿಟಿ ಈಗ ಅಂತಹ ಎಲ್ಲಾ ಪ್ಯಾನ್ ಹೋಲ್ಡರ್ಗಳಿಗೂ ತಮ್ಮ ದಾಖಲಾತಿಗಳನ್ನು ನವೀಕರಿಸಲು ಕೇಳುತ್ತಿದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇದನ್ನು ನೋಡಿ ಅಧಿಸೂಚನೆ ಸಂಖ್ಯೆ. 26/2025 ದಿನಾಂಕ 3 April 2025.
2. ಯಾರಿಗೆ ಆಧಾರ್- ಪ್ಯಾನ್ ಲಿಂಕೇಜ್ ಕಡ್ಡಾಯವಲ್ಲ?
ಆಧಾರ್-PAN ಲಿಂಕೇಜ್ ಅಗತ್ಯವು ಕೆಳಗೆ ಸೂಚಿಸಿದ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ:
- ಅಸ್ಸಾಮ, ಜಮ್ಮು ಮತ್ತು ಕಾಶ್ಮೀರ ಹಾಗೂ ಮೇಘಾಲಯ ರಾಜ್ಯಗಳಲ್ಲಿ ವಾಸಿಸುವವರು:
- ಆದಾಯ ತೆರಿಗೆ ಕಾಯ್ದೆ, 1961ರನ್ವಯ ಅನಿವಾಸಿಗಳು:
- ಹಿಂದಿನ ವರ್ಷದ ಯಾವುದೇ ಸಮಯದಲ್ಲಿ ಎಂಭತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾದವರಿಗೆ; ಅಥವಾ
- ಭಾರತದ ನಾಗರೀಕರಲ್ಲದವರು
ಸೂಚನೆ :
- ಎಲ್ಲ ವಿನಾಯಿತಿಗಳು ಈ ವಿಷಯಕ್ಕೆ ಸಂಬಂಧಿಸಿ ಸರ್ಕಾರ ಹೊರಡಿಸುವ ಅಧಿಸೂಚನೆಗಳನ್ನು ಅವಲಂಬಿಸಿ ಮಾರ್ಪಾಡುಗಳಿಗೆ ಒಳಪಟ್ಟಿರುತ್ತವೆ
- ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಇದನ್ನು ನೋಡಿ ಕಂದಾಯ ಇಲಾಖೆಯ ಅಧಿಸೂಚನೆ ಸಂಖ್ಯೆ 37/2017 ದಿನಾಂಕ 11 ಮೇ 2017
- ಆದಾಗ್ಯೂ, ಮೇಲಿನ ಯಾವುದೇ ವಿಭಾಗದಲ್ಲಿ ಬರುವ ಬಳಕೆದಾರರು, ಸ್ವಯಂಪ್ರೇರಣೆಯಿಂದ ಆಧಾರ್ ಅನ್ನು PAN ಜೊತೆ ಲಿಂಕ್ ಮಾಡಲು ಬಯಸಿದರೆ ನಿರ್ದಿಷ್ಟ ಮೊತ್ತದ ಶುಲ್ಕ ಪಾವತಿ ಮಾಡಬೇಕು.
3. ಆಧಾರ್ ಮತ್ತು PAN ಅನ್ನು ಹೇಗೆ ಲಿಂಕ್ ಮಾಡುವುದು?
ನೋಂದಾಯಿತ ಮತ್ತು ನೋಂದಾಯಿಸದ ಬಳಕೆದಾರರೀರ್ವರು ತಮ್ಮ ಆಧಾರ್ ಮತ್ತು PANನ್ನು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಲಾಗಿನ್ ಆಗದೆಯೂ ಲಿಂಕ್ ಮಾಡಬಹುದು. ನೀವು ಇದಕ್ಕಾಗಿ ಇ-ಫೈಲಿಂಗ್ ನ ಮುಖ್ಯಪುಟದಲ್ಲಿನ ಕ್ವಿಕ್ ಲಿಂಕ್ ʼಲಿಂಕ್ ಆಧಾರ್ʼ ಬಳಸಿ ಆಧಾರ್ ಮತ್ತು PANನ್ನು ಲಿಂಕ್ ಮಾಡಬಹುದು
4. ನಾನು ಆಧಾರ್ ಮತ್ತು PAN ಅನ್ನು ಲಿಂಕ್ ಮಾಡದಿದ್ದರೆ ಏನಾಗುತ್ತದೆ?
ನೀವು 30 ಜೂನ್ 2023ರೊಳಗೆ ಆಧಾರ್ ದೊಂದಿಗೆ ಲಿಂಕ್ ಮಾಡದಿದ್ದಲ್ಲಿ ನಿಮ್ಮ PAN ನಿಷ್ಕ್ರಿಯಗೊಳ್ಳುತ್ತದೆ ಮತ್ತೆ PAN ನಿಷ್ಕ್ರಿಯಗೊಂಡರೆ ಈ ಕೆಳಗಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ:
- ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಬಾಕಿ ಇರುವ ಯಾವುದೇ ಪ್ರಮಾಣದ ತೆರಿಗೆ ಅಥವಾ ಅದರ ಭಾಗವನ್ನು ಅವರಿಗೆ ರೀಫಂಡ್ ಮಾಡಲಾಗುವುದಿಲ್ಲ;
- ನಿಯಮ 114AAA ಯ ಉಪ - ನಿಯಮ (4) ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ದಿನಾಂಕದಿಂದ ಆರಂಭಿಸಿ ಮತ್ತು ಅದು ಕಾರ್ಯನಿರ್ವಹಿಸುವ ದಿನಾಂಕದೊಂದಿಗೆ ಕೊನೆಗೊಳ್ಳುವ ಅವಧಿಯ ಮರುಪಾವತಿಯ ಮೇಲೆ ಬಡ್ಡಿಯನ್ನು ಅವರಿಗೆ ಪಾವತಿಸಲಾಗುವುದಿಲ್ಲ;
- ಅಂತಹ ವ್ಯಕ್ತಿಯ ತೆರಿಗೆಯನ್ನು ಅಧ್ಯಾಯ XVJJ-B ಅಡಿಯಲ್ಲಿ ಕಡಿತಗೊಳಿಸಬಹುದಾದ ಸಂದರ್ಭದಲ್ಲಿ, ಸೆಕ್ಷನ್ 206AA ಯ ನಿಬಂಧನೆಗಳಿಗೆ ಅನುಗುಣವಾಗಿ ಆ ತೆರಿಗೆಯನ್ನು ಹೆಚ್ಚಿನ ದರದಲ್ಲಿ ಕಡಿತಗೊಳಿಸಲಾಗುತ್ತದೆ;
- ಅಂತಹ ವ್ಯಕ್ತಿಯ ತೆರಿಗೆಯನ್ನು ಅಧ್ಯಾಯ XVJJ-B ಅಡಿಯಲ್ಲಿ ಮೂಲದಲ್ಲಿ ಸಂಗ್ರಹಿಸಬಹುದಾದಲ್ಲಿ, ಸೆಕ್ಷನ್ 206CC ಯ ನಿಬಂಧನೆಗಳಿಗೆ ಅನುಗುಣವಾಗಿ ಆ ತೆರಿಗೆಯನ್ನು ಹೆಚ್ಚಿನ ದರದಲ್ಲಿ ಸಂಗ್ರಹಿಸಲಾಗುವುದು.
ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಇವುಗಳನ್ನು ನೋಡಿ, ಸುತ್ತೋಲೆ ಸಂಖ್ಯೆ 03 of 2023 ದಿನಾಂಕ <sup> 28 ಮಾರ್ಚ್ 2023 </sup> ಹಾಗೂ ; ಅಧಿಸೂಚನೆ ಸಂಖ್ಯೆ 26/2025 ದಿನಾಂಕ <sup>3 ಎಪ್ರಿಲ್ 2025 </sup> .
5. ನನ್ನ ಆಧಾರ್ ಅನ್ನು PAN ನೊಂದಿಗೆ ಲಿಂಕ್ ಮಾಡಲು ಸಾಧ್ಯವಿಲ್ಲ ಏಕೆಂದರೆ ನನ್ನ ಹೆಸರು/ಫೋನ್ ಸಂಖ್ಯೆ/ಆಧಾರ್ ಮತ್ತು PANನಲ್ಲಿ ಹುಟ್ಟಿದ ದಿನಾಂಕದಲ್ಲಿ ಹೊಂದಾಣಿಕೆಯಾಗುತ್ತಿಲ್ಲ. ಈಗ ನಾನೇನು ಮಾಡಬೇಕು?
PAN ಅಥವಾ ಆಧಾರ್ ಡೇಟಾಬೇಸ್ ಯಾವುದಾದರೂ ಒಂದರಲ್ಲಿ ನಿಮ್ಮ ವಿವರಗಳನ್ನು ಸರಿಪಡಿಸಿ ಎರಡನ್ನೂ ಹೊಂದಾಣಿಸಿ.
I<>PANನಲ್ಲಿ ನಿಮ್ಮಹೆಸರನ್ನು ನವೀಕರಿಸಲು, ದಯವಿಟ್ಟು ಸಂಪರ್ಕಿಸಿ Protean https://www.onlineservices.nsdl.com/paam/endUserRegisterContact.htmlor UTIITSL https://www.pan.utiitsl.com/.
ಆಧಾರ್ ನಲ್ಲಿ ನಿಮ್ಮ ಹೆಸರನ್ನು ನವೀಕರಿಸಲು, ದಯವಿಟ್ಟು ಸಂಪರ್ಕಿಸಿ UIDAI at https://uidai.gov.in/en/my-aadhaar/updateaadhaar.html. ನೀವು ಇಮೇಲ್ ಸಹ ಮಾಡಬಹುದು UIDAI Helpdesk via mail (authsupport@uidai.net.in)ನಿಮ್ಮ ಆಧಾರ್ ಸಂಖ್ಯೆಗಾಗಿ ನಿರ್ದಿಷ್ಟವಾದ ಡೇಟಾ ಅನ್ನು ಕೋರಿ.
ಲಿಂಕಿಂಗ್ ವಿನಂತಿ ವಿಫಲವಾದರೆ, ನೀವು PAN ಸೇವಾ ಪೂರೈಕೆದಾರರ (ಪ್ರೊಟಿಯಾನ್ ಮತ್ತು UTIITSL) ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಆಧಾರಿತ ದೃಢೀಕರಣದ ಆಯ್ಕೆಯನ್ನು ಬಳಸಲು ಸಲಹೆ ನೀಡಲಾಗುತ್ತದೆ. ನೀವು ನಿಮ್ಮ PAN, ಆಧಾರ್, ಶುಲ್ಕ ಪಾವತಿಸಿದ (ರೂ.1000/) ಚಲನ್ ನಕಲನ್ನು ತೆಗೆದುಕೊಂಡು, ಕೇಂದ್ರದಲ್ಲಿ ಅಗತ್ಯವಾದ ಬಯೋಮೆಟ್ರಿಕ್ ದೃಢೀಕರಣದ ಶುಲ್ಕ ಪಾವತಿಸಿದ ನಂತರ ಈ ಸೌಲಭ್ಯವನ್ನು ಪಡೆಯಬಹುದು. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಅಧೀಕೃತ ಸೇವಾ ಪೂರೈಕೆದಾರರ ವಿವರಗಳಿಗಾಗಿ, ಪ್ರೊಟಿಯಾನ್/UTIITSL ಅವರ ಆಯಾ ವೆಬ್ಸೈಟ್ಗಳನ್ನು ಗಮನಿಸಬಹುದು.
6. ನನ್ನ PAN ನಿಷ್ಕ್ರಿಯಗೊಂಡರೆ ನಾನು ಏನು ಮಾಡಬೇಕು?
ನಿಷ್ಕ್ರಿಯಗೊಂಡ PANನ ಈ ಪರಿಣಾಮಗಳು 1ನ ಜುಲೈ 2023 ರಿಂದ ಜಾರಿಯಲ್ಲಿ ಬರಲಾಗುತ್ತವೆ ಮತ್ತು PAN ಸಕ್ರಿಯಗೊಳ್ಳುವವರೆಗೂ ಮುಂದುವರಿಯುತ್ತದೆ. PANನ್ನು ಸಕ್ರಿಯಗೊಳಿಸಲು ಆಧಾರ್ ಸಂಖ್ಯೆಯ ಜೊತೆ ಜೋಡಿಸುವದಾದರೆ ಅನ್ವಯಿಸುವ ಒಂದು ಸಾವಿರ ರೂಪಾಯಿಯ ಶುಲ್ಕ ಸಲ್ಲಿಸುವುದು ಮುಂದುವರೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸುತ್ತೋಲೆ ಸಂಖ್ಯೆ 2023 ರ 03 ದಿನಾಂಕ 28 ಮಾರ್ಚ್ 2023 ಹಾಗೂ ಅಧಿಸೂಚನೆ ಸಂಖ್ಯೆ 26/2025 ದಿನಾಂಕ <sup>3 ಎಪ್ರಿಲ್ 2025</sup>
ಹಕ್ಕು ನಿರಾಕರಣೆ:
ಈ ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನು ಮಾಹಿತಿ ಮತ್ತು ಸಾಮಾನ್ಯ ಮಾರ್ಗದರ್ಶನಕ್ಕಾಗಿ ಮಾತ್ರ ನೀಡಲಾಗಿದೆ. ತೆರಿಗೆದಾರರು ತಮ್ಮ ಪ್ರಕರಣಗಳಿಗೆ ಅನ್ವಯಿಸುವ ನಿಖರ ಮಾಹಿತಿ, ವ್ಯಾಖ್ಯಾನ ಹಾಗೂ ಸ್ಪಷ್ಟತೆಗಳಿಗಾಗಿ ಸಂಬಂಧಿಸಿದ ಸುತ್ತೋಲೆ, ಪ್ರಕಟಣೆ, ನಿಯಮ ಮತ್ತು ಆದಾಯ ತೆರಿಗೆ ಕಾಯ್ದೆಯ ನಿಯಮಗಳನ್ನು ಗಮನಿಸಲು ಸಲಹೆ ನೀಡಲಾಗಿದೆ. ಈ ಪದೇ ಪದೇ ಕೇಳಲಾಗುವ ಪ್ರಶ್ನೆಗಳ ಆಧಾರದ ಮೇಲೆ ತೆಗೆದುಕೊಂಡ ಕ್ರಮಗಳು ಮತ್ತು/ಅಥವಾ ನಿರ್ಧಾರಗಳಿಗೆ ಇಲಾಖೆ ಜವಾಬ್ದಾರನಾಗಿರುವುದಿಲ್ಲ.