1. ಅವಲೋಕನ
ಇ-ಫೈಲಿಂಗ್ ಪೋರ್ಟಲ್ ಅಲ್ಲಿ ನೋಂದಾಯಿಸಲು ಮತ್ತು ಅದನ್ನು ಬಳಸಲು ಬಯಸುವ ಎಲ್ಲಾ ಬಾಹ್ಯ ಏಜೆನ್ಸಿಗಳಿಗೆ (ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ಬ್ಯಾಂಕುಗಳು ಮಾತ್ರ) ಈ ಪೂರ್ವ- ಲಾಗಿನ್ ಸೇವೆ ಲಭ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ PAN ಮತ್ತು TAN ಪರಿಶೀಲನೆ ಸೇವೆಗಳನ್ನು ಬಳಸಬಹುದು. ಬ್ಯಾಂಕ್‌ಗಳು ಈ ಮೊದಲೇ ಮಾನ್ಯಗೊಳಿಸಿದ ಬ್ಯಾಂಕ್ ಖಾತೆಯನ್ನು ಬಳಸಬಹುದು, ನೆಟ್‌ಬ್ಯಾಂಕಿಂಗ್ ಮೂಲಕ ಲಾಗಿನ್ ಆಗಬಹುದು ಮತ್ತು ATM ಮೂಲಕ EVC ಪಡೆದುಕೊಳ್ಳಬಹುದು. ITD ಅನುಮೋದನೆಯ ನಂತರ ವಿನಂತಿಸಿದ ವೆಬ್ ಸೇವೆಗಳನ್ನು ಬಳಸಲು ಮತ್ತು ಬಾಹ್ಯ ಏಜೆನ್ಸಿ ಬಳಕೆದಾರರ ರೂಪದಲ್ಲಿ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಲು ನೋಂದಣಿ ಸೇವೆಯು ಬಳಕೆದಾರರನ್ನು ಸಕ್ರಿಯಗೊಳಿಸುತ್ತದೆ.
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
- ಬಾಹ್ಯ ಏಜೆನ್ಸಿಯಾಗಿ ನೋಂದಾಯಿಸಲು ಸಂಸ್ಥೆಯ ಮಾನ್ಯ ಮತ್ತು ಸಕ್ರಿಯ TAN/PAN
- ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಪ್ರಧಾನ ಸಂಪರ್ಕದ ಮಾನ್ಯ ಮತ್ತು ಸಕ್ರಿಯ PAN
- ಬಾಹ್ಯ ಏಜೆನ್ಸಿ ಪ್ರಕಾರದ ಆಧಾರದ ಮೇಲೆ ನೀಡಲಾದ ಫಾರ್ಮ್ಯಾಟ್‌ನಲ್ಲಿ ಸಹಿ ಮಾಡಿದ ವಿನಂತಿ ಪತ್ರ < ಫಾರ್ಮ್ಯಾಟ್‌ಗಳಿಗಾಗಿ ಹಂತ 6 ಅನ್ನು ನೋಡಿ>
3. ಹಂತ-ಹಂತದ ಮಾರ್ಗದರ್ಶಿ
3.1 ನೋಂದಣಿ ವಿನಂತಿಯನ್ನು ಸಲ್ಲಿಸಿ
ಹಂತ 1: ಇ-ಫೈಲಿಂಗ್ ಪೋರ್ಟಲ್ ಹೋಮ್‌ಪೇಜ್‌ಗೆ ಹೋಗಿ, ನೋಂದಣಿ ಕ್ಲಿಕ್ ಮಾಡಿ.
ಹಂತ 2: ಇತರರನ್ನು ಕ್ಲಿಕ್ ಮಾಡಿ ಮತ್ತು ಪ್ರವರ್ಗವನ್ನು ಬಾಹ್ಯ ಏಜೆನ್ಸಿ ಎಂದು ಆಯ್ಕೆ ಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 3: ಮೂಲ ವಿವರಗಳು ಪೇಜ್‍ನಲ್ಲಿ ಏಜೆನ್ಸಿ ಪ್ರಕಾರ, ಸಂಸ್ಥೆಯ TAN / PAN, ಸಂಸ್ಥೆಯ ಹೆಸರು ಮತ್ತು DOI ಸೇರಿದಂತೆ ಎಲ್ಲಾ ಕಡ್ಡಾಯ ವಿವರಗಳನ್ನು ನಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 4: ಪ್ರಾಥಮಿಕ ಸಂಪರ್ಕ ವಿವರಗಳು ಪೇಜ್ ನಲ್ಲಿ ಪ್ರಾಥಮಿಕ ಮೊಬೈಲ್ ನಂಬರ್/ಸಂಖ್ಯೆ, ಇಮೇಲ್ ID ಮತ್ತು ಅಂಚೆ ವಿಳಾಸ ಸೇರಿದಂತೆ ಪ್ರಧಾನ ಸಂಪರ್ಕ ವಿವರಗಳನ್ನು ನಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 5: ಹಂತ 4 ರಲ್ಲಿ ನಮೂದಿಸಿದ ಪ್ರಾಥಮಿಕ ಮೊಬೈಲ್ ನಂಬರ್/ಸಂಖ್ಯೆ ಮತ್ತು ಇಮೇಲ್ ID ಗೆ ಎರಡು ಪ್ರತ್ಯೇಕ OTP ಗಳನ್ನು ಕಳುಹಿಸಲಾಗಿದೆ. ನಿಮ್ಮ ಮೊಬೈಲ್ ನಂಬರ್/ಸಂಖ್ಯೆ ಮತ್ತು ಇಮೇಲ್ IDಗಳಲ್ಲಿ ಸ್ವೀಕರಿಸಿದ ಪ್ರತ್ಯೇಕ 6- ಅಂಕಿಯ OTPಗಳನ್ನು ನಮೂದಿಸಿ ಮತ್ತು ಮುಂದುವರಿಯಿರಿ ಕ್ಲಿಕ್ ಮಾಡಿ.
ಸೂಚನೆ:
- OTP 15 ನಿಮಿಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.
- ಸರಿಯಾದ OTP ನಮೂದಿಸಲು ನೀವು 3 ಪ್ರಯತ್ನಗಳನ್ನು ಹೊಂದಿರುತ್ತೀರಿ.
- ಸ್ಕ್ರೀನ್ ಮೇಲೆ OTP ಮುಕ್ತಾಯ ಕೌಂಟ್‌ಡೌನ್ ಟೈಮರ್ OTP ಯಾವಾಗ ಮುಕ್ತಾಯಗೊಳ್ಳುತ್ತದೆ ಎಂದು ನಿಮಗೆ ತಿಳಿಸುತ್ತದೆ.
- OTP ಪುನಃ ಕಳುಹಿಸಿ ಎಂದು ಕ್ಲಿಕ್ ಮಾಡಿದಾಗ ಒಂದು ಹೊಸ OTPಯನ್ನು ಜನರೇಟ್ ಮಾಡಲಾಗುತ್ತದೆ ಮತ್ತು ಕಳುಹಿಸಲಾಗುತ್ತದೆ.
ಹಂತ 6: ಸಹಿ ಮಾಡಿದ ವಿನಂತಿಯ ಪತ್ರದ ಸ್ಕ್ಯಾನ್ ಮಾಡಿದ ಪ್ರತಿಯನ್ನು ಲಗತ್ತಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
Requisition_Letter_For_Central_and_State_Government_departments_or_agencies

ಸೂಚನೆ:
- ಒಂದು ಲಗತ್ತಿನ ಗರಿಷ್ಠ ಗಾತ್ರವು 5 MB ಆಗಿರಬೇಕು.
- ನೀವು ಅಪ್‌ಲೋಡ್ ಮಾಡಲು ಹೆಚ್ಚು ಡಾಕ್ಯುಮೆಂಟ್‌ಗಳನ್ನು ಹೊಂದಿದ್ದರೆ, ಅವುಗಳನ್ನು ಜಿಪ್ ಮಾಡಿದ ಫೋಲ್ಡರ್‌ನಲ್ಲಿ ಇರಿಸಿ ಮತ್ತು ಫೋಲ್ಡರ್ ಅನ್ನು ಅಪ್‌ಲೋಡ್ ಮಾಡಿ. ಒಂದು ಜಿಪ್ಪ್ಡ್ ಫೋಲ್ಡರ್‌ನಲ್ಲಿ ಎಲ್ಲಾ ಲಗತ್ತುಗಳು ಗರಿಷ್ಠ 50 MB ಆಗಿರಬೇಕು.
ಹಂತ 7: ಪರಿಶೀಲಿಸು ವಿವರಗಳು ಪೇಜ್‍ನಲ್ಲಿ ಅಗತ್ಯವಿದ್ದರೆ ವಿವರಗಳನ್ನು ತಿದ್ದುಪಡಿ ಮಾಡಿ. ಪುಟದಲ್ಲಿ ಒದಗಿಸಲಾದ ವಿವರಗಳನ್ನು ಮೌಲ್ಯೀಕರಿಸಿ ಮತ್ತು ಖಚಿತಪಡಿಸಿ ಕ್ಲಿಕ್ ಮಾಡಿ.
ಹಂತ 8: ಪಾಸ್‌ವರ್ಡ್ ಸೆಟ್ ಮಾಡಿ ಪೇಜ್‌ನಲ್ಲಿ ನಿಮ್ಮ ಅಪೇಕ್ಷಿತ ಪಾಸ್‌ವರ್ಡ್ ಅನ್ನು ಪಾಸ್‌ವರ್ಡ್ ಸೆಟ್ ಮಾಡಿ ಮತ್ತುಪಾಸ್‌ವರ್ಡ್ ಖಚಿತಪಡಿಸಿ ಎನ್ನುವ ಎರಡೂ ಕಡೆ ಟೆಕ್ಸ್ಟ್‌ಬಾಕ್ಸ್‌ನಲ್ಲಿ ನಮೂದಿಸಿ ಮತ್ತು ನೊಂದಾಯಿಸಿ ಮೇಲೆ ಕ್ಲಿಕ್ ಮಾಡಿ.
ಸೂಚನೆ:
- ರಿಫ್ರೆಶ್ ಅಥವಾ ಹಿಂದೆ ಅನ್ನು ಕ್ಲಿಕ್ ಮಾಡಬೇಡಿ.
- ನಿಮ್ಮ ಹೊಸ ಪಾಸ್‌ವರ್ಡ್ ಅನ್ನು ನಮೂದಿಸುವಾಗ, ಪಾಸ್‌ವರ್ಡ್ ನಿಯಮಗಳು ಕುರಿತು ಜಾಗರೂಕರಾಗಿರಿ:
- ಇದು ಕನಿಷ್ಠ 8 ಅಕ್ಷರಗಳು ಮತ್ತು ಹೆಚ್ಚೆಂದರೆ 14 ಅಕ್ಷರಗಳಾಗಿರಬೇಕು.
- ಇದರಲ್ಲಿ ದೊಡ್ಡ ಅಕ್ಷರ ಮತ್ತು ಸಣ್ಣ ಅಕ್ಷರಗಳು ಇರಬೇಕು.
- ಇದು ಒಂದಾದರೂ ಸಂಖ್ಯೆಯನ್ನು ಹೊಂದಿರಬೇಕು.
- ಇದು ವಿಶೇಷ ಅಕ್ಷರವನ್ನು ಹೊಂದಿರಬೇಕು (ಉದಾ. @#$%).

ಹಂತ 9: ITD ಯಿಂದ ಅನುಮೋದನೆಯ ನಂತರ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಪ್ರಾಥಮಿಕ ಇಮೇಲ್ ID ಯಲ್ಲಿ ನೀವು (EXTPXXXXXX) ಫಾರ್ಮ್ಯಾಟ್‌ನ ಬಾಹ್ಯ ಏಜೆನ್ಸಿ ಬಳಕೆದಾರ ID ಹೊಂದಿರುವ ಇಮೇಲ್ ಅನ್ನು ಸ್ವೀಕರಿಸುತ್ತೀರಿ.
ನೋಂದಣಿ ಮಾಡುವ ಸಮಯದಲ್ಲಿ ನೀವು ಸ್ವೀಕರಿಸಿದ ಬಳಕೆದಾರರ ID ಮತ್ತು ಹೊಂದಿಸಿದ ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ನಿಮಗೆ ಲಾಗಿನ್ ಆಗಲು ಸಾಧ್ಯವಾಗುತ್ತದೆ.
3.2 ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಆನ್‌ಬೋರ್ಡಿಂಗ್
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಣಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು, ಅಗತ್ಯ ವಿವರಗಳನ್ನು ಹಂಚಿಕೊಳ್ಳುವ ಮೂಲಕ ನೀವು ಆದಾಯ ತೆರಿಗೆ ಇಲಾಖೆಯಲ್ಲಿನ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕು.
ಹಂತ 1 : ನಿಮ್ಮ IP ವಿಳಾಸಗಳ ವಿವರಗಳನ್ನು efilingwebmanager@incometax gov.in ಜೊತೆಗೆ ವಿಷಯ: ಬಾಹ್ಯ ಸಂಸ್ಥೆ- ಪರೀಕ್ಷೆಗಾಗಿ UAT ಮೂಲ IP ವಿವರಗಳು ಎಂದು ಹಂಚಿಕೊಳ್ಳಿ
ಹಂತ 2: ಟೆಸ್ಟಿಂಗ್ ಪೋರ್ಟಲ್‌ನಲ್ಲಿ ನಿಮ್ಮನ್ನು ತಾತ್ಕಾಲಿಕವಾಗಿ ನೋಂದಾಯಿಸಲಾಗುತ್ತದೆ. URL, ತಾಂತ್ರಿಕ ವಿವರಗಳು, ಟೆಸ್ಟ್ ಸನ್ನಿವೇಶಗಳು, ಟೆಸ್ಟ್ ಡೇಟಾ ಮತ್ತು ಟೆಸ್ಟ್ ರಿಪೋರ್ಟ್ ಟೆಂಪ್ಲೇಟ್ ಜೊತೆಗೆ ಸಂಬಂಧಿಸಿದ API ಗೇಟ್‌ವೇ ದೃಢೀಕರಣ ರುಜುವಾತುಗಳನ್ನು ನಿಮಗೆ ಒದಗಿಸಲಾಗುತ್ತದೆ.
ಹಂತ 3: ನೀವು efilingwebmanager@incometax.gov.in ನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿನ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಲು, ಅಂತಿಮ UAT ಪರೀಕ್ಷಾ ವರದಿಯನ್ನು ಇಮೇಲ್ ವಿಷಯ: ಬಾಹ್ಯ ಏಜೆನ್ಸಿ- ITD ಅನುಮೋದನೆಗಾಗಿ UAT ಟೆಸ್ಟ್ ರಿಪೋರ್ಟ್ ಜೊತೆ ಹಂಚಿಕೊಳ್ಳಬೇಕಾಗುತ್ತದೆ.
ಹಂತ 4: ಆದಾಯ ತೆರಿಗೆ ಇಲಾಖೆಯಲ್ಲಿನ ಸಕ್ಷಮ ಪ್ರಾಧಿಕಾರದ ಅನುಮೋದನೆಯ ನಂತರವೇ, ಇ-ಫೈಲಿಂಗ್ ಪೋರ್ಟಲ್‌ನ API ಗೇಟ್‌ವೇ ದೃಢೀಕರಣದ ರುಜುವಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗುತ್ತದೆ.