Do not have an account?
Already have an account?

ಫಾರ್ಮ್ 10B (A.Y. 2023-24 ರ ನಂತರ)

ಫಾರ್ಮ್ 10B (ಆರ್ಥಿಕ ವರ್ಷ 2023-24 ನಂತರ) ಕುರಿತ ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1: ಯಾವ ತೆರಿಗೆ ಮೌಲ್ಯಮಾಪನ ವರ್ಷದಿಂದ ಮರು-ಅಧಿಸೂಚನೆ ಹೊರಡಿಸಿದ ಫಾರ್ಮ್ 10B ಅನ್ವಯಿಸುತ್ತದೆ?

ಫೆಬ್ರವರಿ 21, 2023 ರಂದು ಅಧಿಸೂಚನೆ ಸಂಖ್ಯೆ 7/2023 ರಲ್ಲಿ ಸೂಚಿಸಲಾದ ಫಾರ್ಮ್ 10B, 2023-24 ರ ಮೌಲ್ಯಮಾಪನ ವರ್ಷದಿಂದ ಅಂದರೆ A.Y. 2023-24 ಮತ್ತು ಮುಂಬರುವ ವರ್ಷಕ್ಕೆ ಅನ್ವಯಿಸುತ್ತದೆ.

2. ಅಧಿಸೂಚನೆ ಸಂಖ್ಯೆ 7/2023 ನೀಡುವುದಕ್ಕೆ ಮುಂಚಿತವಾಗಿ ಸಲ್ಲಿಸಲಾಗುತ್ತಿದ್ದ ಫಾರ್ಮ್ 10B ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಇನ್ನೂ ಲಭ್ಯವಿದೆಯೇ?

ಹೌದು, ಹಳೆಯ ಫಾರ್ಮ್ 10B ಸಹ ಪೋರ್ಟಲ್‌ನಲ್ಲಿ ಲಭ್ಯವಿದೆ ಮತ್ತು ಇದು ತೆರಿಗೆ ಮೌಲ್ಯಮಾಪನ ವರ್ಷ 2022-23 ರವರೆಗೆ ಮಾತ್ರ ಅನ್ವಯಿಸುತ್ತದೆ.

2022-23 ರವರೆಗಿನ ಮೌಲ್ಯಮಾಪನ ವರ್ಷಗಳ ಸಲ್ಲಿಕೆಗಳಿಗಾಗಿ, ಫಾರ್ಮ್ 10B ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಲಭ್ಯವಿದೆ. ಅದನ್ನು ಹೀಗೆ ಪಡೆಯಬಹುದು-

ಚಾರ್ಟರ್ಡ್ ಅಕೌಂಟೆಂಟ್ (CA) ಅವರಿಗೆ ನಿಯೋಜನೆ ಮಾಡಲು "ಇ-ಸಲ್ಲಿಕೆ > ಆದಾಯ ತೆರಿಗೆ ಫ಼ಾರ್ಮ್‌ಗಳು > ಆದಾಯ ತೆರಿಗೆ ಫ಼ಾರ್ಮ್‌ಗಳ ಸಲ್ಲಿಕೆ > ಆದಾಯ ತೆರಿಗೆ ಕಾಯ್ದೆ, 1961ರ ಪ್ರಕಾರದ ಫಾರ್ಮ್‌ಗಳು > ಫ಼ಾರ್ಮ್ 10B"

< 

ಪರ್ಯಾಯವಾಗಿ, “ನನ್ನ CA” ಸೌಲಭ್ಯದ ಮೂಲಕವೂ ಈ ಫಾರ್ಮ್ ಅನ್ನು ನಿಯೋಜಿಸಬಹುದು.

3. ಅಧಿಸೂಚನೆ ಸಂಖ್ಯೆ 7/2023ರ ಮೂಲಕ ಅಧಿಸೂಚಿತಗೊಂಡ ಫಾರ್ಮ್ 10B ಅನ್ನು ಲೆಕ್ಕಪರಿಶೋಧಿತ ಘಟಕ (Auditee) ಯಾವಾಗ ಸಲ್ಲಿಸಬೇಕು?

ಮೌಲ್ಯಮಾಪನ ವರ್ಷ (A.Y.) 2023-24 ರಿಂದ ಮುಂದಕ್ಕೆ, ಕೆಳಗೆ ಉಲ್ಲೇಖಿಸಲಾದ ಯಾವುದೇ ಷರತ್ತುಗಳನ್ನು ಪೂರೈಸಿದಲ್ಲಿ ಮರು-ಅಧಿಸೂಚಿತ ಫಾರ್ಮ್ 10B ಅನ್ವಯವಾಗುತ್ತದೆ -

1. ಲೆಕ್ಕಪರಿಶೋಧಿತ ಘಟಕದ (Auditee) ಒಟ್ಟು ಆದಾಯವು, ಕೆಳಗೆ ಉಲ್ಲೇಖಿಸಲಾದ ವಿಧಿಗಳು/ವಿಭಾಗಗಳ ಅನ್ವಯವನ್ನು ಪರಿಗಣಿಸದೆ ಲೆಕ್ಕ ಹಾಕಿದಾಗ -
a) ಸೆಕ್ಷನ್ 10 ರ ಉಪವಿಧಿ 23C ರ ಉಪಖಂಡಗಳು (iv), (v), (vi) ಮತ್ತು (via)
b) ಹಿಂದಿನ ವರ್ಷದಲ್ಲಿ ಐದು ಕೋಟಿ ರೂಪಾಯಿಗಳನ್ನು ಮೀರಿದರೆ. ಕಾಯ್ದೆಯ 11 ಮತ್ತು 12 ಸೆಕ್ಷನ್‌ಗಳು,

2. ಲೆಕ್ಕಪರಿಶೋಧಿತ ಘಟಕವು (Auditee) ಹಿಂದಿನ ವರ್ಷದಲ್ಲಿ ಯಾವುದಾದರೂ ವಿದೇಶಿ ಕೊಡುಗೆಯನ್ನು ಸ್ವೀಕರಿಸಿದ್ದರೆ

3. ಲೆಕ್ಕಪರಿಶೋಧಿತ ಘಟಕವು (Auditee) ಹಿಂದಿನ ವರ್ಷದಲ್ಲಿ ತನ್ನ ಆದಾಯದ ಯಾವುದಾದರೂ ಒಂದು ಭಾಗವನ್ನು ಭಾರತದ ಹೊರಗೆ ವಿನಿಯೋಗಿಸಿದ್ದರೆ.

ಹೆಚ್ಚಿನ ವಿವರಗಳಿಗಾಗಿ, ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 16CC ಮತ್ತು ನಿಯಮ 17B ಅನ್ನು ನೋಡಬಹುದು.

4. ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಫಾರ್ಮ್ 10B (A.Y. 2023-24 ನಂತರ) ಸಲ್ಲಿಸುವುದು ಹೇಗೆ

ಫಾರ್ಮ್ 10B ಅನ್ನು ಸಲ್ಲಿಸಲು ದಯವಿಟ್ಟು ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ 1) ತೆರಿಗೆದಾರರ ಲಾಗಿನ್: CA ಗೆ ಫಾರ್ಮ್ ನಿಯೋಜಿಸಿ. ಫಾರ್ಮ್ ಅನ್ನು ಎರಡು ರೀತಿಯಲ್ಲಿ ನಿಯೋಜಿಸಬಹುದು-

ಅ ) "ಇ-ಸಲ್ಲಿಕೆ > ಆದಾಯ ತೆರಿಗೆ ಫ಼ಾರ್ಮ್‌ಗಳು > ಆದಾಯ ತೆರಿಗೆ ಫ಼ಾರ್ಮ್‌ಗಳ ಸಲ್ಲಿಕೆ > ಆದಾಯ ತೆರಿಗೆ ಕಾಯ್ದೆ, 1961ರ ಪ್ರಕಾರದ ಫಾರ್ಮ್‌ಗಳು > ಫ಼ಾರ್ಮ್ 10B(A.Y. 2023-24 ನಂತರ) " b) ಅಧಿಕೃತ ಪಾಲುದಾರರು > ನನ್ನ ಚಾರ್ಟರ್ಡ್ ಅಕೌಂಟೆಂಟ್ > CA ಅನ್ನು ಸೇರಿಸಿ (ಈಗಾಗಲೇ ಸೇರಿಸದಿದ್ದರೆ) > ಆದಾಯ ತೆರಿಗೆ ಕಾಯ್ದೆ, 1961ಕ್ಕೆ ಅನ್ವಯಿಸುವ ಫ಼ಾರ್ಮ್‌ಗಳು > ಫಾರ್ಮ್ 10B (ಮೌಲ್ಯಮಾಪನ ವರ್ಷ 2023-24 ರಿಂದ ಮುಂದಕ್ಕೆ)ನಿಯೋಜಿಸಿ.
ಹಂತ 2) CA ಲಾಗಿನ್: CA ಅವರು ಕಾರ್ಯಪಟ್ಟಿಯ “ನಿಮ್ಮ ಕ್ರಮಕ್ಕಾಗಿ” ಟ್ಯಾಬ್ ಮೂಲಕ ನಿಯೋಜನೆಯನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು

Step 3) CA ಅವರು ನಿಯೋಜನೆಯನ್ನು ಸ್ವೀಕರಿಸಿದರೆ, ಅವರು ಸಲ್ಲಿಕೆಯ ಆಫ್‌ಲೈನ್ ಮೋಡ್‌ನಲ್ಲಿ JSON ಜೊತೆಗೆ PDF ಅಡಕಗಳನ್ನು ಅಪ್‌ಲೋಡ್ ಮಾಡಬೇಕು

Step 4) CA ಅವರು ಮಾನ್ಯ ಅಡಕಗಳೊಂದಿಗೆ JSON ಅನ್ನು ಸಲ್ಲಿಸಿದ ನಂತರ, ತೆರಿಗೆದಾರರು (Taxpayer) ಕಾರ್ಯಪಟ್ಟಿಯ “ನಿಮ್ಮ ಕ್ರಮಕ್ಕಾಗಿ” ಟ್ಯಾಬ್ ಮೂಲಕ CA ಅಪ್‌ಲೋಡ್ ಮಾಡಿದ ಫಾರ್ಮ್ ಅನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು

5: ಮೇಲಿನ ಪ್ರಶ್ನೆ ಸಂಖ್ಯೆ 3ರಲ್ಲಿ ಉಲ್ಲೇಖಿಸಲಾದ “ಲೆಕ್ಕಪರಿಶೋಧಿತ ಘಟಕ (auditee)” ಎಂದರೇನು?

ಕಾಯ್ದೆಯ ಸೆಕ್ಷನ್ 10 ರ ಖಂಡ (23C) ಯ ಉಪಖಂಡಗಳು (iv), (v), (vi) ಅಥವಾ (via) ಗಳಲ್ಲಿ ಉಲ್ಲೇಖಿಸಲಾದ ಯಾವುದೇ ನಿಧಿ (fund) ಅಥವಾ ಸಂಸ್ಥೆ (institution) ಅಥವಾ ಟ್ರಸ್ಟ್ (trust) ಅಥವಾ ಯಾವುದೇ ವಿಶ್ವವಿದ್ಯಾಲಯ ಅಥವಾ ಇತರ ಶೈಕ್ಷಣಿಕ ಸಂಸ್ಥೆ ಅಥವಾ ಯಾವುದೇ ಆಸ್ಪತ್ರೆ ಅಥವಾ ಇತರ ವೈದ್ಯಕೀಯ ಸಂಸ್ಥೆ, ಅಥವಾ ಕಾಯ್ದೆಯ 11 ಅಥವಾ 12 ಸೆಕ್ಷನ್‌ಗಳಲ್ಲಿ ಉಲ್ಲೇಖಿಸಲಾದ ಯಾವುದೇ ಟ್ರಸ್ಟ್ ಅಥವಾ ಸಂಸ್ಥೆಯನ್ನು ಈ ಫಾರ್ಮ್‌ನಲ್ಲಿ "ಲೆಕ್ಕಪರಿಶೋಧಿತ ಘಟಕ (Auditee)" ಎಂದು ಕರೆಯಲಾಗುತ್ತದೆ.

6. ಫಾರ್ಮ್ 10B (A.Y. 2023-24 ನಂತರ) ಸಲ್ಲಿಸಲು ಅಂತಿಮ ದಿನಾಂಕ ಯಾವುದು?

ಫಾರ್ಮ್‌ನ ಸಲ್ಲಿಕೆ ಕೊನೆಯ ದಿನಾಂಕವು ವಿಭಾಗ 44AB ನಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ದಿನಾಂಕದಂದು ಅಥವಾ ಅದಕ್ಕೂ ಮೊದಲು ಆಗಿರುತ್ತದೆ; ಅಂದರೆ ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 139 ರ ಸಬ್ ಸೆಕ್ಷನ್ (1) ಅಡಿಯಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕಕ್ಕಿಂತ ಒಂದು ತಿಂಗಳು ಮುಂಚಿತವಾಗಿ ಸಲ್ಲಿಸಬೇಕು.

7. ಹೊಸ ಫಾರ್ಮ್ 10B ಗಾಗಿ ಆಫ್‌ಲೈನ್ ಯುಟಿಲಿಟಿಯನ್ನು ಹೇಗೆ ಡೌನ್‌ಲೋಡ್ ಮಾಡಬಹುದು?‍

"ಮುಖಪುಟ | ಆದಾಯ ತೆರಿಗೆ ಇಲಾಖೆ > ಡೌನ್‌ಲೋಡ್ ವಿಭಾಗಕ್ಕೆ ಹೋಗಿ > ಆದಾಯ ತೆರಿಗೆ ಫಾರ್ಮ್‌ಗಳು > ಫಾರ್ಮ್ 10B (ಮೌಲ್ಯಮಾಪನ ವರ್ಷ 2023-24 ನಂತರ)" ತಲುಪಿ "ಫಾರ್ಮ್ ಯೂಟಿಲಿಟಿ" ಮೇಲೆ ಕ್ಲಿಕ್ ಮಾಡಿ.

ಪರ್ಯಾಯವಾಗಿ, CA ಅವರು ಫಾರ್ಮ್ ಅಪ್‌ಲೋಡ್ ಮಾಡುವ ಸಮಯದಲ್ಲಿ ಆಫ಼್ ಲೈನ್ ಯುಟಿಲಿಟಿ ಆಯ್ಕೆಯ ಅಡಿಯಲ್ಲಿ ಇರುವ ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕವೂ ಈ ಮಾರ್ಗವನ್ನು ಪ್ರವೇಶಿಸಬಹುದು.

ಸೂಚನೆ: JSON ಅನ್ನು ಡೌನ್‌ಲೋಡ್ ಮಾಡಲು ಮತ್ತು ಅಪ್‌ಲೋಡ್ ಮಾಡಲು, ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಲಭ್ಯವಿರುವ ಯೂಟಿಲಿಟಿಯ ಇತ್ತೀಚಿನ ಆವೃತ್ತಿಯನ್ನು ಯಾವಾಗಲೂ ಬಳಸುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.

8. ಸಿಸ್ಟಮ್‌ನಲ್ಲಿ ಫಾರ್ಮ್ 10B ಅನ್ನು ಪರಿಶೀಲಿಸಲು ಲಭ್ಯವಿರುವ ವಿಧಾನಗಳು ಯಾವುವು?

ಫಾರ್ಮ್ 10B (ಮೌಲ್ಯಮಾಪನ ವರ್ಷ 2023-24 ರ ನಂತರ)ಗಾಗಿ ಲಭ್ಯವಿರುವ ಪರಿಶೀಲನಾ ವಿಧಾನಗಳು:

  • CA ಗಳಿಗೆ, ಫಾರ್ಮ್ ಅಪ್‌ಲೋಡ್ ಮಾಡಲು ಕೇವಲ DSC (Digital Signature Certificate) ಆಯ್ಕೆಯಷ್ಟೇ ಲಭ್ಯವಿದೆ.
  • ಕಂಪನಿಗಳನ್ನು ಹೊರತುಪಡಿಸಿದ ತೆರಿಗೆದಾರರಿಗೆ (Auditee), CA ಅಪ್‌ಲೋಡ್ ಮಾಡಿದ ಫಾರ್ಮ್ ಅನ್ನು ಸ್ವೀಕರಿಸಲು DSC (ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್) ಮತ್ತು EVC (ಎಲೆಕ್ಟ್ರಾನಿಕ್ ಪರಿಶೀಲನಾ ಕೋಡ್) ಎರಡೂ ಆಯ್ಕೆಗಳು ಲಭ್ಯವಿವೆ.
  • ಕಂಪನಿಗಳಿಗೆ ಕೇವಲ, CA ಅಪ್‌ಲೋಡ್ ಮಾಡಿದ ಫಾರ್ಮ್ ಅನ್ನು ಸ್ವೀಕರಿಸಲು DSC (ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್) ಆಯ್ಕೆ ಮಾತ್ರ ಲಭ್ಯವಿದೆ.

9. ಮರು-ಅಧಿಸೂಚಿತ ಫಾರ್ಮ್ 10B ಗೆ ಸಂಬಂಧಿಸಿದಂತೆ ಪ್ರಶ್ನೆ ಸಂಖ್ಯೆ 3ರಲ್ಲಿ ಉಲ್ಲೇಖಿಸಲಾದ “ವಿದೇಶಿ ಕೊಡುಗೆ” ಎಂಬುದರ ಅರ್ಥವೇನು?

ನಿಯಮ 16CC ಮತ್ತು ನಿಯಮ 17B ಗಳ ಉದ್ದೇಶಕ್ಕಾಗಿ, “ವಿದೇಶಿ ಕೊಡುಗೆ” ಎಂಬ ಪದಕ್ಕೆ, ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ, 2010 (2010ರ 42) ರ ಸೆಕ್ಷನ್ 2 ರ ಸಬ್-ಸೆಕ್ಷನ್ (1) ರ ಖಂಡ (h) ನಲ್ಲಿ ನೀಡಿರುವ ಅದೇ ಅರ್ಥ ಅನ್ವಯವಾಗುತ್ತದೆ.

10."ವಿವರಗಳನ್ನು ಸೇರಿಸಿ" ಆಯ್ಕೆ ಮತ್ತು "CSV ಅಪ್‌ಲೋಡ್ ಮಾಡಿ" ಆಯ್ಕೆ ಒಟ್ಟಿಗೆ ಇರುವ ಕೋಷ್ಟಕವನ್ನು ಹೊಂದಿರುವ ಅನುಸೂಚಿಗಳಿಗಾಗಿ ದಾಖಲೆಗಳನ್ನು ಒದಗಿಸುವುದು ಹೇಗೆ?

“ವಿವರಗಳನ್ನು ಸೇರಿಸಿ" ಮತ್ತು “CSV ಅಪ್‌ಲೋಡ್ ಮಾಡಿ” ಎರಡೂ ಆಯ್ಕೆಗಳನ್ನು ಒಟ್ಟಿಗೆ ಹೊಂದಿರುವ ಅನುಸೂಚಿಗಳಿಗಾಗಿ, ದಯವಿಟ್ಟು ಈ ಕೆಳಗಿನವುಗಳನ್ನು ಗಮನಿಸಿ:-

  1. 50 ಸಂಖ್ಯೆಗಳವರೆಗಿನ ದಾಖಲೆಗಳಿಗೆ: ಕೋಷ್ಟಕ ಅಥವಾ CSV ಆಯ್ಕೆಯನ್ನು ಬಳಸಬಹುದು.
  2. 50 ಕ್ಕಿಂತ ಹೆಚ್ಚಿನ ದಾಖಲೆಗಳ ಸಂಖ್ಯೆಗೆ: ಕೇವಲ CSV ಆಯ್ಕೆಯನ್ನು ಮಾತ್ರ ಬಳಸಬಹುದು.ದತ್ತಾಂಶಗಳನ್ನು CSV ಅಡಕದ ರೂಪದಲ್ಲೇ ಪ್ರದರ್ಶಿಸಲಾಗುತ್ತದೆ.
  3. CSV ಅಪ್‌ಲೋಡ್ ಮಾಡಿ ಆಯ್ಕೆಯನ್ನು ಬಳಸುವಾಗ, ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:-

“ಎಕ್ಸೆಲ್ ಟೆಂಪ್ಲೇಟ್ ಡೌನ್‌ಲೋಡ್ ಮಾಡಿ -> ದಾಖಲೆಗಳನ್ನು ಸೇರಿಸಿ > ಎಕ್ಸೆಲ್ ಟೆಂಪ್ಲೇಟ್ ಅನ್ನು .csv ಫೈಲ್‌ಗೆ ಪರಿವರ್ತಿಸಿ -> .csv ಫೈಲ್ ಅನ್ನು ಅಪ್‌ಲೋಡ್ ಮಾಡಿ”

  1. CSV ಫೈಲ್ ಅನ್ನು ಅಪ್‌ಲೋಡ್ ಮಾಡಿದಾಗಲೆಲ್ಲಾ, ಅಸ್ತಿತ್ವದಲ್ಲಿರುವ ದಾಖಲೆಗಳು/ಡೇಟಾ ಯಾವುದಾದರೂ ಇದ್ದರೆ ಇದು ಅದನ್ನೆಲ್ಲಾ ತೆಗೆದುಹಾಕುತ್ತದೆ. ಹಳೆಯ ದಾಖಲೆಗಳನ್ನು ಅಳಿಸಲಾಗುತ್ತದೆ ಮತ್ತು ಇತ್ತೀಚಿನ CSV ಮೂಲಕ ಅಪ್ಲೋಡ್ ಮಾಡಿದ ದಾಖಲೆಗಳು ಉಳಿಯುತ್ತವೆ.

11. ಫಾರ್ಮ್ ಅನ್ನು ಭರ್ತಿ ಮಾಡಲು ಯಾವುದೇ ಸೂಚನೆಗಳು ಅಥವಾ ಮಾರ್ಗದರ್ಶನ ಲಭ್ಯವಿದೆಯೇ?

ಹೌದು, CA ಸೂಚನಾ ಫೈಲ್ ಅನ್ನು ಫಾರ್ಮ್ 10B ನ ಯುಟಿಲಿಟಿಯಲ್ಲಿ ಡೌನ್‌ಲೋಡ್ ಮಾಡಬಹುದು (A.Y .2023-24 ರಿಂದ).

12. ಹೊಸ ಫಾರ್ಮ್ 10B ಯಲ್ಲಿ, ಅನ್ವಯವಾಗುವಂತೆ, ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟ ಹೇಳಿಕೆ ಮತ್ತು ತೆರಿಗೆ ಲೆಕ್ಕಪರಿಶೋಧನಾ ವರದಿಯನ್ನು ಎಲ್ಲಿಗೆ ಅಪ್‌ಲೋಡ್ ಮಾಡಬೇಕು?

ಲೆಕ್ಕಪರಿಶೋಧಕರು ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟದ ಲೆಕ್ಕಪತ್ರ ಮತ್ತು 3CA/3CB ಅಡಿಯಲ್ಲಿ ಆಡಿಟ್ ವರದಿಯನ್ನು PDF ಅಥವಾ ಜಿಪ್ ಫೈಲ್‌ನಲ್ಲಿ ಪೋಷಕ ದಾಖಲೆಗಳ ಅಡಿಯಲ್ಲಿ ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಫಾರ್ಮ್ ಅನ್ನು ಸಲ್ಲಿಸುವ ಸಮಯದಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.

"ವಿವಿಧ ಅಡಕಗಳು" ಎಂಬ ಹೆಸರಿನಲ್ಲಿ ಐಚ್ಛಿಕವಾದುದನ್ನು ಅಡಕಗೊಳಿಸುವ ಆಯ್ಕೆ ಇದೆ. ಅಲ್ಲಿ ಯಾವುದೇ ಇತರ ಸಂಬಂಧಿತ ದಾಖಲೆಯನ್ನು ಅಡಕಗೊಳಿಸಬಹುದು.

ಪ್ರತಿಯೊಂದು ದಾಖಲೆಯ ಗಾತ್ರವು 5 MB ಮೀರಬಾರದು ಮತ್ತು ಎಲ್ಲಾ ಅಡಕಗಳು ಒಟ್ಟಿಗೆ 50MB ಮೀರಬಾರದು ಎಂಬುದನ್ನು ದಯವಿಟ್ಟು ಗಮನಿಸಿ. ಎಲ್ಲಾ ಅಡಕಗಳು PDF/ZIP ಫಾರ್ಮ್ಯಾಟ್‌ನಲ್ಲಿ ಮಾತ್ರ ಇರಬೇಕು ಮತ್ತು ZIP ಫೋಲ್ಡರ್‌ನಲ್ಲಿರುವ ಎಲ್ಲಾ ಫೈಲ್‌ಗಳು PDF ಫಾರ್ಮ್ಯಾಟ್‌ನಲ್ಲಿ ಮಾತ್ರ ಫೈಲ್‌ಗಳನ್ನು ಹೊಂದಿರಬೇಕು.

13. ಫೈಲ್ ಮಾಡಲಾದ ಫಾರ್ಮ್ 10B (A.Y. 2023-24 ರಿಂದ) ಯನ್ನು ಪರಿಷ್ಕರಿಸಬಹುದೇ?

ಹೌದು, ಸಲ್ಲಿಸಿದ ಫಾರ್ಮ್ 10B ಗೆ ಪರಿಷ್ಕರಣೆ ಆಯ್ಕೆ ಲಭ್ಯವಿದೆ.

14. ಫಾರ್ಮ್ 10B ಸಲ್ಲಿಕೆಯು ಪೂರ್ಣಗೊಂಡಿದೆಯೆಂದು ಯಾವಾಗ ಪರಿಗಣಿಸಲಾಗುತ್ತದೆ ?

ತೆರಿಗೆದಾರರು CA ಸಲ್ಲಿಸಿದ ಫಾರ್ಮ್ ಅನ್ನು ಅಂಗೀಕರಿಸಿದಾಗ ಮತ್ತು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸಕ್ರಿಯ DSC ಅಥವಾ EVC ಯೊಂದಿಗೆ ಅದನ್ನು ಪರಿಶೀಲಿಸಿದಾಗ ಮಾತ್ರ ಫಾರ್ಮ್‌ನ ಸಲ್ಲಿಕೆ ಪೂರ್ಣಗೊಂಡಿದೆ ಎಂದು ಪರಿಗಣಿಸಲಾಗುತ್ತದೆ.

15. ಫಾರ್ಮ್ 10B ಯ ಆಫ್‌ಲೈನ್ ಯುಟಿಲಿಟಿಯನ್ನು ಭರ್ತಿ ಮಾಡಲು ಅನುಸೂಚಿಗಳ ಪ್ಯಾನೆಲ್‌ಗಳು ಯಾವಾಗ ಲಭ್ಯವಿರುತ್ತವೆ?

ಬಳಕೆದಾರರು ಫಾರ್ಮ್‌ನಲ್ಲಿ ಇತರ ಪ್ಯಾನೆಲ್‌ಗಳನ್ನು ಪೂರ್ಣಗೊಳಿಸಿದಾಗ ಮಾತ್ರ ಭರ್ತಿ ಮಾಡಲು ಅನುಸೂಚಿಗಳ ಪ್ಯಾನಲ್‌ಗಳು ಲಭ್ಯವಿರುತ್ತವೆ.

16. ಬಳಕೆದಾರರು ಕಳೆದ ವರ್ಷ ಫಾರ್ಮ್ 10B ಅನ್ನು ಸಲ್ಲಿಸಿದ್ದಾರೆ; ಹಾಗಾದರೆ ಮೌಲ್ಯಮಾಪನ ವರ್ಷ 2023-24 ರ ನಂತರ ಫಾರ್ಮ್ 10B ಅಥವಾ 10BB ಯಲ್ಲಿ ಯಾವ ಫಾರ್ಮ್ ಅನ್ನು ಸಲ್ಲಿಸಬೇಕು?

ಆದಾಯ ತೆರಿಗೆ (3ನೇ ತಿದ್ದುಪಡಿ) ನಿಯಮಗಳು, 2023 ರ ಮೂಲಕ ನಿಯಮ 16CC ಮತ್ತು ನಿಯಮ 17B ಗಳಲ್ಲಿ ತಿದ್ದುಪಡಿ ಮಾಡಲಾಗಿದೆ. ಹಿಂದಿನ ಮೌಲ್ಯಮಾಪನ ವರ್ಷಗಳಲ್ಲಿ ಯಾವ ಫಾರ್ಮ್ ಸಲ್ಲಿಸಲಾಗಿದೆ ಎಂಬುದನ್ನು ಪರಿಗಣಿಸದೆ, ಮೌಲ್ಯಮಾಪನ ವರ್ಷ 2023-24 ರಿಂದ ಮುಂದಕ್ಕೆ ಫಾರ್ಮ್ 10B ಮತ್ತು 10BB ಯ ಅನ್ವಯತೆಯನ್ನು (applicability) ತಿದ್ದುಪಡಿ ಮಾಡಲಾದ ನಿಯಮ 16CC ಮತ್ತು ನಿಯಮ 17B ಆಧಾರವಾಗಿ ನಿರ್ಧರಿಸಲಾಗುತ್ತದೆ.

17. ಫಾರ್ಮ್ 10B (ಮೌಲ್ಯಮಾಪನ ವರ್ಷ 2023-24 ರಿಂದ ಮುಂದಕ್ಕೆ) ಸಲ್ಲಿಸಿದ ನಂತರ, ಸಲ್ಲಿಸಿದ ಫಾರ್ಮ್ ವಿವರಗಳನ್ನು ಎಲ್ಲಿ ವೀಕ್ಷಿಸಬಹುದು?

ಸಲ್ಲಿಸಿದ ಫಾರ್ಮ್ ವಿವರಗಳನ್ನು ಇ-ಸಲ್ಲಿಕೆ ಟ್ಯಾಬ್ ---> ಆದಾಯ ತೆರಿಗೆ ಫಾರ್ಮ್‌ಗಳು --->; ಸಲ್ಲಿಸಿದ ಫಾರ್ಮ್‌ಗಳ ನೋಟ ---> ಚಾರ್ಟರ್ಡ್ ಅಕೌಂಟೆಂಟ್ (CA) ಮತ್ತು ತೆರಿಗೆದಾರರ ಲಾಗಿನ್ ಅಡಿಯಲ್ಲಿ ಆದಾಯ ತೆರಿಗೆ ಕಾಯ್ದೆ, 1961ರ ಪ್ರಕಾರದ ಫ಼ಾರ್ಮ್‌ಗಳು ವಿಭಾಗದಲ್ಲಿ ನೋಡಬಹುದು.

18. ನನ್ನ ಆದಾಯವು ತೆರಿಗೆ ವಿಧಿಸಲಾಗದ ಗರಿಷ್ಠ ಮಿತಿಯನ್ನು ಮೀರದಿದ್ದರೂ ಸಹ ಫಾರ್ಮ್ 10B ಅನ್ನು ಸಲ್ಲಿಸಬೇಕೇ?

ದಯವಿಟ್ಟು ಫಾರ್ಮ್ 10B ಅನ್ವಯತೆಗಾಗಿ ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 10 ರ ಖಂಡ (23C) ಯ ಹತ್ತನೇ ಪ್ರಾವಿಸೋದ ಖಂಡ (b) ಗೆ ಸಂಬಂಧಿಸಿದ ಅನ್ವಯವಾಗುವ ವಿಧಿಗಳು ಮತ್ತು ಸೆಕ್ಷನ್ 12A(1) ರ ಖಂಡ (b) ಯ ಉಪಖಂಡ (ii) ಮತ್ತು ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 16CC ಮತ್ತು ನಿಯಮ 17B ಗಳೊಂದಿಗೆ ಓದಬೇಕಾದ ಸಂಬಂಧಿತ ವಿಧಿಗಳನ್ನು ನೋಡಿ.

19. ಫಾರ್ಮ್ 10B ಸಲ್ಲಿಸುವಾಗ “ಸಲ್ಲಿಕೆ ವಿಫಲವಾಗಿದೆ” ಅಥವಾ “ದಯವಿಟ್ಟು ಕೆಳಗಿನ ಸಮಸ್ಯೆಗಳನ್ನು ಸರಿಪಡಿಸಿ ಮತ್ತು ಮತ್ತೆ ಸಲ್ಲಿಸಲು ಪ್ರಯತ್ನಿಸಿ: ಪೂರ್ಣ ಹೆಸರಿನ ಸ್ವರೂಪ ಅಮಾನ್ಯವಾಗಿದೆ, ಫ್ಲ್ಯಾಗ್/ಇನ್‌ಪುಟ್/ಫ್ಲಾಟ್/ವಿಳಾಸ ಅಮಾನ್ಯವಾಗಿದೆ, ದಯವಿಟ್ಟು ಮಾನ್ಯವಾದ ಶೇಕಡಾ ಮೌಲ್ಯ/ಪಿನ್ ಕೋಡ್ ನಮೂದಿಸಿ.” ಮುಂತಾದ ದೋಷಗಳು ಬರುತ್ತಿವೆ.

ಫ಼ಾರ್ಮ್ ಅನ್ನು ಯಶಸ್ವಿಯಾಗಿ ಸಲ್ಲಿಸಲು, ಸಲ್ಲಿಕೆ ಆರಂಭಿಸುವ ಮೊದಲು ನೀವು ಕೆಳಗಿನ ಹಂತಗಳನ್ನು ಖಚಿತಪಡಿಸಿಕೊಳ್ಳಬಹುದು:

  1. CA ಮತ್ತು ತೆರಿಗೆದಾರರ ಪ್ರೊಫೈಲ್‌ನಲ್ಲಿ ಎಲ್ಲಾ ಕಡ್ಡಾಯ ವಿವರಗಳನ್ನು ನವೀಕರಿಸಿರಬೇಕು.
  2. ಅನ್ವಯವಾಗುವ ಪ್ರಮುಖ ವ್ಯಕ್ತಿಯ ವಿವರಗಳನ್ನು ನವೀಕರಿಸಿರಬೇಕು.
  3. ಯೂಟಿಲಿಟಿಯಿಂದ JSON ಅನ್ನು ಯಾವುದೇ ದೋಷ ಇಲ್ಲದೆ ಡೌನ್‌ಲೋಡ್ ಮಾಡಬೇಕು.
  4. ಯಾವಾಗಲೂ ಡೌನ್‌ಲೋಡ್ ವಿಭಾಗದಲ್ಲಿ ಲಭ್ಯವಿರುವ ಇತ್ತೀಚಿನ ಯೂಟಿಲಿಟಿಯನ್ನು ಬಳಸಿಕೊಂಡು, ಮಾನ್ಯವಾದ JSON ಅನ್ನು ರಚಿಸಿ ಮತ್ತು ಅದನ್ನು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.

20. ಆದಾಯ ತೆರಿಗೆ ಕಾಯ್ದೆ, 1961 ರ ವಿಭಾಗ 13(3) ನಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ವ್ಯಕ್ತಿಗಳ ವಿವರಗಳನ್ನು, ಹಿಂದಿನ ವರ್ಷದಲ್ಲಿ ಅಂತಹ ವ್ಯಕ್ತಿಗಳೊಂದಿಗೆ ಯಾವುದೇ ವ್ಯವಹಾರ ಇಲ್ಲದಿದ್ದರೂ ಸಹ, ಫಾರ್ಮ್ 10B ರ ಕ್ರಮಸಂಖ್ಯೆ 41 ರಲ್ಲಿ ನೀಡುವುದು ಕಡ್ಡಾಯವೇ?

ಕ್ರಮಸಂಖ್ಯೆ 41ರಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ವ್ಯಕ್ತಿಗಳ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ. ಹೆಚ್ಚಿನ ವಿವರಗಳಿಗೆ 9ನೇ ಅಕ್ಟೋಬರ್ 2023ರ ಸರ್ಕ್ಯುಲರ್ ಸಂಖ್ಯೆ 17/2023 ಅನ್ನು ನೋಡಿ; ಲಭ್ಯವಿರುವ ವ್ಯಕ್ತಿಗಳ ವಿವರಗಳನ್ನು ಒದಗಿಸಬಹುದು.

21. ಮೌಲ್ಯಮಾಪನ ವರ್ಷ 2023-24ಕ್ಕೆ ಫಾರ್ಮ್ 10Bಗಾಗಿ UDIN ಅನ್ನು ಹೇಗೆ ರಚಿಸಬೇಕು?

ಮರು-ಅಧಿಸೂಚಿತ ಫಾರ್ಮ್ 10B, ಮೌಲ್ಯಮಾಪನ ವರ್ಷ 2023-24 ರಿಂದ ಮುಂದಕ್ಕೆ ಅನ್ವಯವಾಗುತ್ತದೆ. UDIN ಅನ್ನು “UDIN ವಿವರಗಳ ನೋಟ/ವೀಕರಣ” ದಲ್ಲಿ ಫ಼ಾರ್ಮ್ ಹೆಸರಾಗಿ "ಫ಼ಾರ್ಮ್ 10B- ಸೆಕ್ಷನ್ 10(23C)(b)(iv)/(v)/(vi)/(via) ಮತ್ತು ಸೆಕ್ಷನ್ 12A(1)(b)(ii) ಯ ಹತ್ತನೇ ಪ್ರೊವೈಸೊ" ಆಯ್ಕೆಮಾಡುವ ಮೂಲಕ ರಚಿಸಬಹುದು.

22. ಮರು-ಅಧಿಸೂಚಿತ ಫಾರ್ಮ್ 10B ಅನ್ನು ಥರ್ಡ್ ಪಾರ್ಟಿ ಸಾಫ್ಟ್‌ವೇರ್ ಮೂಲಕ ಸಲ್ಲಿಸಬಹುದೇ?

ಹೌದು, ಮರು ಅಧಿಸೂಚಿತ ಫಾರ್ಮ್ 10B ಅನ್ನು ಥರ್ಡ್ ಪಾರ್ಟಿ ಸಾಫ್ಟ್‌ವೇರ್ ಬಳಸಿ ಸಲ್ಲಿಸಬಹುದು.

23. ಫಾರ್ಮ್‌ನಲ್ಲಿ ಉಲ್ಲೇಖಿಸಲಾದ ವಹಿವಾಟಿನ ಎಲೆಕ್ಟ್ರಾನಿಕ್ ವಿಧಾನಗಳು ಯಾವುವು?

ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 6ABBA ನಲ್ಲಿ ಉಲ್ಲೇಖಿಸಿದಂತೆ, ಎಲೆಕ್ಟ್ರಾನಿಕ್ ವಿಧಾನಗಳು ಈ ಕೆಳಗಿನ ವಿಧಾನಗಳಾಗಿರಬೇಕು:

(a) ಕ್ರೆಡಿಟ್ ಕಾರ್ಡ್,

(b) ಡೆಬಿಟ್ ಕಾರ್ಡ್,

(c) ನೆಟ್ ಬ್ಯಾಂಕಿಂಗ್,

(d) IMPS (ತ್ವರಿತ ಪಾವತಿ ಸೇವೆ)

(e) UPI (ಏಕೀಕೃತ ಪಾವತಿ ಸೇವೆ),

(f) RTGS (ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್),

(g) NEFT (ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್),

(h) BHIM (ಭಾರತ್ ಇಂಟರ್‌ಫೇಸ್ ಫಾರ್ ಮನಿ) ಆಧಾರ್ ಪೇ.