Do not have an account?
Already have an account?

ಫಾರ್ಮ್ 34BC

ಫಾರ್ಮ್ 34 BC ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)

1. "ವಿವಾದ ಪರಿಹಾರ ಸಮಿತಿ ಎಂದರೇನು?"

ವಿವಾದ ಪರಿಹಾರ ಸಮಿತಿ (ಮುಂದೆ 'DRC' ಎಂದು ಉಲ್ಲೇಖಿಸಲಾಗುತ್ತದೆ) ಎಂಬುದು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 245MA ಮತ್ತು ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 44DAA ಅನ್ವಯ ಕೇಂದ್ರ ಸರ್ಕಾರದಿಂದ ರಚಿಸಲಾದ ಸಮಿತಿಯಾಗಿದೆ. CIT(ಅಪೀಲ್ಸ್) ಅವರ ಮುಂದೆ ಬಾಕಿ ಇರುವ ಅಥವಾ ಇನ್ನೂ ಸಲ್ಲಿಸಬೇಕಿರುವ ಪ್ರಕರಣಗಳಿಗೆ, DRC ನಿಯಮಿತ ಮೇಲ್ಮನವಿ ಪ್ರಕ್ರಿಯೆಗೆ ಪರ್ಯಾಯ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

2. "ವಿವಾದ ಪರಿಹಾರ ಸಮಿತಿಗೆ (DRC) ಅರ್ಜಿ ಸಲ್ಲಿಸಲು ಯಾರು ಅರ್ಹರು?"

ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 245MA(5) ಮತ್ತು ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 44DAD ರ ಅನ್ವಯ ಆದಾಯ ತೆರಿಗೆ ಕಾಯ್ದೆ, 1961 ರಲ್ಲಿ 'ನಿರ್ದಿಷ್ಟ ವ್ಯಕ್ತಿ' ಎಂದು ವ್ಯಾಖ್ಯಾನಿಸಲಾದ ತೆರಿಗೆದಾರರು ಫಾರ್ಮ್ 34BC ಸಲ್ಲಿಸುವ ಮೂಲಕ DRC ಅನ್ನು ಸಂಪರ್ಕಿಸಬಹುದು.

3. ವಿವಾದ ಪರಿಹಾರ ಯೋಜನೆಯ (ಮುಂದೆ 'e-DRS' ಎಂದು ಉಲ್ಲೇಖಿಸಲಾಗುತ್ತದೆ) ಪ್ರಯೋಜನವನ್ನು ಪಡೆಯಲು ಅರ್ಹವಾಗಿರುವ 'ನಿರ್ದಿಷ್ಟ ವ್ಯಕ್ತಿ' ಯಾರು?"

(I) 'ನಿರ್ದಿಷ್ಟ ವ್ಯಕ್ತಿ' ಎಂದರೆ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 245MA(5) ಪ್ರಕಾರ ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 44DAD ರ ಅನ್ವಯ ಷರತ್ತುಗಳನ್ನು ಪೂರೈಸುವ ವ್ಯಕ್ತಿ ಎಂದರ್ಥ. ಆ ಷರತ್ತುಗಳು ಈ ಕೆಳಗಿನಂತಿವೆ:

  1. ಅವರು ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ, 1974ರ ಅಡಿಯಲ್ಲಿ ಬಂಧನದ ಆದೇಶದಡಿಯಲ್ಲಿರುವ ವ್ಯಕ್ತಿಯಾಗಿರಬಾರದು.

"ಆದಾಗ್ಯೂ,ಈ ಷರತ್ತಿನ ಮೇರೆಗೆ" —

(i) ಉಲ್ಲೇಖಿತ ಕಾಯಿದೆಯ ಸೆಕ್ಷನ್ 9 ಅಥವಾ ಸೆಕ್ಷನ್ 12A ರ ವಿಧಿಗಳು ಅನ್ವಯಿಸದಂತಹ ಬಂಧನ ಆದೇಶವಾಗಿದ್ದು, ಆ ಬಂಧನ ಆದೇಶವನ್ನು ಉಲ್ಲೇಖಿತ ಕಾಯಿದೆಯ ಸೆಕ್ಷನ್ 8 ರ ಅಡಿಯಲ್ಲಿ ಸಲಹಾ ಮಂಡಳಿ ನೀಡಿದ ವರದಿಯ ಆಧಾರದ ಮೇಲೆ ಅಥವಾ ಸಲಹಾ ಮಂಡಳಿಯ ವರದಿ ಸ್ವೀಕರಿಸುವ ಮೊದಲು ಹಿಂತೆಗೆದುಕೊಳ್ಳಲಾಗಿದ್ದರೆ; ಅಥವಾ

ii) ಉಲ್ಲೇಖಿತ ಕಾಯಿದೆಯ ಸೆಕ್ಷನ್ 9 ರ ವಿಧಿಗಳು ಅನ್ವಯವಾಗುವ ಬಂಧನ ಆದೇಶವಾಗಿದ್ದು, ಆ ಆದೇಶವನ್ನು ಸೆಕ್ಷನ್ 9 ರ ಉಪವಿಭಾಗ (3) ರ ಅಡಿಯಲ್ಲಿ ನಡೆಸಬೇಕಾದ ಪರಿಶೀಲನೆಗೆ ನಿಗದಿಪಡಿಸಿದ ಅವಧಿ ಮುಗಿಯುವ ಮೊದಲು ಅಥವಾ ಆ ಪರಿಶೀಲನೆಯ ಆಧಾರದ ಮೇಲೆ ಹಿಂತೆಗೆದುಕೊಳ್ಳದಿದ್ದಲ್ಲಿ, ಅಥವಾ ಉಲ್ಲೇಖಿತ ಕಾಯಿದೆಯ ಸೆಕ್ಷನ್ 8 ಹಾಗೂ ಸೆಕ್ಷನ್ 9 ರ ಉಪವಿಭಾಗ (2) ರ ಅನ್ವಯ ಸಲಹಾ ಮಂಡಳಿಯ ವರದಿಯ ಆಧಾರದ ಮೇಲೆ ಹಿಂತೆಗೆದುಕೊಳ್ಳದಿದ್ದಲ್ಲಿ; ಅಥವಾ

((iii) ಉಲ್ಲೇಖಿತ ಕಾಯಿದೆಯ ಸೆಕ್ಷನ್ 12A ರ ವಿಧಿಗಳು ಅನ್ವಯವಾಗುವ ಬಂಧನ ಆದೇಶವಾಗಿದ್ದು, ಆ ಆದೇಶವನ್ನು ಅದೇ ಸೆಕ್ಷನ್‌ನ ಉಪವಿಭಾಗ (3) ರ ಅಡಿಯಲ್ಲಿ ನಡೆಯುವ ಮೊದಲ ಪರಿಶೀಲನೆಗೆ ನಿಗದಿಪಡಿಸಿದ ಅವಧಿ ಮುಗಿಯುವ ಮೊದಲು ಅಥವಾ ಆ ಮೊದಲ ಪರಿಶೀಲನೆಯ ಆಧಾರದ ಮೇಲೆ ಹಿಂತೆಗೆದುಕೊಳ್ಳದಿದ್ದರೆ, ಅಥವಾ ಉಲ್ಲೇಖಿತ ಕಾಯಿದೆಯ ಸೆಕ್ಷನ್ 8 ಹಾಗೂ ಸೆಕ್ಷನ್ 12A ರ ಉಪವಿಭಾಗ (6) ರ ಅನ್ವಯ ಸಲಹಾ ಮಂಡಳಿಯ ವರದಿಯ ಆಧಾರದ ಮೇಲೆ ಹಿಂತೆಗೆದುಕೊಳ್ಳದಿದ್ದರೆ; ಅಥವಾ

(iv) ಆ ಬಂಧನ ಆದೇಶವನ್ನು ಸಮರ್ಥ ನ್ಯಾಯಾಧಿಕಾರ ಹೊಂದಿರುವ ನ್ಯಾಯಾಲಯದಿಂದ ರದ್ದುಪಡಿಸಲಾಗಿರಬಾರದು.

  1. ಅವರ ವಿರುದ್ಧ ಮೊಕದ್ದಮೆ ಹೂಡಲಾಗಿರಬಾರದು ಮತ್ತು ಈ ಕೆಳಗಿನ ಯಾವುದೇ ಕಾಯಿದೆಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕೆ ಗುರಿಯಾಗಿರಬಾರದು:
  • ಭಾರತೀಯ ದಂಡ ಸಂಹಿತೆ, (1860 ರ ಕಾಯಿದೆ ಸಂಖ್ಯೆ 45)
  • ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 (1967 ರ ಕಾಯಿದೆ ಸಂಖ್ಯೆ 37)
  • ಮಾದಕ ದ್ರವ್ಯಗಳು ಮತ್ತು ಮನೋವೈಜ್ಞಾನಿಕ ಪದಾರ್ಥಗಳ ಕಾಯಿದೆ, 1985 (1985 ರ ಕಾಯಿದೆ ಸಂಖ್ಯೆ 61)
  • ಬೇನಾಮಿ ವ್ಯವಹಾರಗಳ ನಿಷೇಧ ಕಾಯಿದೆ, 1988 (1988 ರ ಕಾಯಿದೆ ಸಂಖ್ಯೆ 45)
  • ಭ್ರಷ್ಟಾಚಾರ ತಡೆಗಟ್ಟುವಿಕೆ ಕಾಯಿದೆ, 1988 (1988 ರ ಕಾಯಿದೆ ಸಂಖ್ಯೆ 49) ಅಥವಾ
  • ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ,2002(2003 ರ ಕಾಯಿದೆ ಸಂಖ್ಯೆ 15)
  1. ಅವರು ಆದಾಯ ತೆರಿಗೆ ಕಾಯಿದೆಯ ವಿಧಿಗಳ ಅಡಿಯಲ್ಲಿ ಅಥವಾ ಭಾರತೀಯ ದಂಡ ಸಂಹಿತೆ, 1860 (1860 ರ ಕಾಯಿದೆ ಸಂಖ್ಯೆ 45) ಅಡಿಯಲ್ಲಿ ಶಿಕ್ಷಾರ್ಹವಾದ ಯಾವುದೇ ಅಪರಾಧಕ್ಕಾಗಿ ಆದಾಯ ತೆರಿಗೆ ಪ್ರಾಧಿಕಾರದಿಂದ ದೋಷಾರೋಪಣೆ ಪ್ರಾರಂಭಿಸಲ್ಪಟ್ಟ ವ್ಯಕ್ತಿಯಾಗಿರಬಾರದು; ಅಥವಾ ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ನಾಗರಿಕ ಹೊಣೆಗಾರಿಕೆಯನ್ನು ಜಾರಿಗೊಳಿಸುವ ಉದ್ದೇಶಕ್ಕಾಗಿ ದೋಷಾರೋಪಣೆ ಪ್ರಾರಂಭಿಸಲ್ಪಟ್ಟಿರಬಾರದು. ಹಾಗೆಯೇ, ಆದಾಯ ತೆರಿಗೆ ಪ್ರಾಧಿಕಾರವು ಪ್ರಾರಂಭಿಸಿದ ಅಂತಹ ದೋಷಾರೋಪಣೆಯ ಪರಿಣಾಮವಾಗಿ ಅವರು ಯಾವುದೇ ಅಪರಾಧಕ್ಕೆ ಸಂಬಂಧಿಸಿ ದೋಷಿ ಎಂದು ತೀರ್ಪುಗೊಂಡಿರಬಾರದು.
  1. ಅವರು ಆದಾಯ ತೆರಿಗೆ ಪ್ರಾಧಿಕಾರದಿಂದ ಪ್ರಾರಂಭಿಸಲಾದ ದೋಷಾರೋಪಣೆಯ ಪರಿಣಾಮವಾಗಿ ಯಾವುದೇ ಅಂತಹ ಅಪರಾಧಕ್ಕೆ ಸಂಬಂಧಿಸಿ ದೋಷಿ ಎಂದು ನ್ಯಾಯಾಲಯದಿಂದ ತೀರ್ಪುಗೊಂಡ ವ್ಯಕ್ತಿಯಾಗಿರಬಾರದು.
  1. ಅವರು ವಿಶೇಷ ನ್ಯಾಯಾಲಯ (ಪತ್ರಭದ್ರತೆಗಳ ವ್ಯವಹಾರಗಳಿಗೆ ಸಂಬಂಧಿಸಿದ ಅಪರಾಧಗಳ ವಿಚಾರಣೆ) ಕಾಯಿದೆ, 1992 (1992 ರ ಕಾಯಿದೆ ಸಂಖ್ಯೆ 27) ರ ಸೆಕ್ಷನ್ 3 ಅಡಿಯಲ್ಲಿ ಅಧಿಸೂಚಿಸಲ್ಪಟ್ಟ ವ್ಯಕ್ತಿಯಾಗಿರಬಾರದು.
  1. ಅವರು ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 44DAD ಅನ್ವಯ, ವಿವಾದ ಪರಿಹಾರವನ್ನು ಕೋರುವ ಮೌಲ್ಯಮಾಪನ ವರ್ಷದ ಸಂಬಂಧವಾಗಿ, ಕಪ್ಪು ಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳು) ಹಾಗೂ ತೆರಿಗೆ ಹೇರಿಕೆ ಕಾಯಿದೆ, 2015 ರ ಅಡಿಯಲ್ಲಿ ವಿಚಾರಣೆ ನಡೆಯುತ್ತಿರಬಾರದು.

(II) ನಿಯಮಾನುಸಾರ ನಿಗದಿಪಡಿಸಬಹುದಾದ ಇತರೆ ಷರತ್ತುಗಳು.

4. ನಿರ್ದಿಷ್ಟ ಆದೇಶಗಳಿಗೆ ಸಂಬಂಧಿಸಿದಂತೆ ವಿವಾದ ಪರಿಹಾರ ಸಮಿತಿ (DRC) ಮುಂದೆ ಅರ್ಜಿ ಸಲ್ಲಿಸಲು ಅಗತ್ಯವಾದ ಷರತ್ತುಗಳು ಯಾವುವು?

ತೆರಿಗೆದಾರರು ಫಾರ್ಮ್ 34BC ಅನ್ನು ಸಲ್ಲಿಸುವ ಮೂಲಕ ನಿರ್ದಿಷ್ಟ ಆದೇಶಗಳಿಗೆ ಸಂಬಂಧಿಸಿದಂತೆ ವಿವಾದ ಪರಿಹಾರ ಸಮಿತಿ (DRC) ಯನ್ನು ಸಂಪರ್ಕಿಸಬಹುದು. ಆದರೆ, ಕೆಳಗಿನ ಷರತ್ತುಗಳನ್ನು ಪೂರೈಸಿದಾಗ ಮಾತ್ರ ಇದು ಸಾಧ್ಯ:

  1. ಅಂತಹ ಆದೇಶದಲ್ಲಿ ಪ್ರಸ್ತಾಪಿಸಲಾದ ಅಥವಾ ಮಾಡಲಾದ ಬದಲಾವಣೆಗಳು/ಸೇರ್ಪಡೆಗಳ ಒಟ್ಟು ಮೊತ್ತವು ₹10 ಲಕ್ಷಗಳನ್ನು ಮೀರಿರಬಾರದು;
  2. ಅಂತಹ ಆದೇಶಕ್ಕೆ ಸಂಬಂಧಿಸಿದ ಮೌಲ್ಯಮಾಪನ ವರ್ಷಕ್ಕೆ ಮೌಲ್ಯಮಾಪಕರು ರಿಟರ್ನ್ ಅನ್ನು ಸಲ್ಲಿಸಿರಬೇಕು ಮತ್ತು ಆ ರಿಟರ್ನ್ ಪ್ರಕಾರದ ಒಟ್ಟು ಆದಾಯವು ₹50 ಲಕ್ಷಗಳನ್ನು ಮೀರಿರಬಾರದು; ಮತ್ತು
  3. ಅಂತಹ ಆದೇಶವು ಸೆಕ್ಷನ್ 132 ಅಡಿಯಲ್ಲಿ ಆರಂಭಿಸಲಾದ ಶೋಧ, ಸೆಕ್ಷನ್ 132A ಅಡಿಯಲ್ಲಿ ಮಾಡಿದ ವಿನಂತಿ, ಅಥವಾ ಸೆಕ್ಷನ್ 133A ಅಡಿಯಲ್ಲಿ ನಡೆಸಲಾದ ಸಮೀಕ್ಷೆ ಆಧಾರಿತವಾಗಿರಬಾರದು; ಅಥವಾ
  4. ಅಂತಹ ಆದೇಶವು ಸೆಕ್ಷನ್ 90 ಅಥವಾ ಸೆಕ್ಷನ್ 90A ನಲ್ಲಿ ಉಲ್ಲೇಖಿಸಲಾದ ಒಪ್ಪಂದದ ಅಡಿಯಲ್ಲಿ ಸ್ವೀಕರಿಸಲಾದ ಮಾಹಿತಿಯ ಆಧಾರದ ಮೇಲೆ ಇರಬಾರದು.
  5. ₹10 ಲಕ್ಷದ ಸೇರ್ಪಡೆಯು ಮೂಲದಲ್ಲೇ ತೆರಿಗೆ ಕಡಿತ ಅಥವಾ ಸಂಗ್ರಹಣೆ (TDS/TCS) ಮಾಡುವಲ್ಲಿ ಉಂಟಾದ ಲೋಪಕ್ಕೆ ಸಂಬಂಧಿಸಿದಿದ್ದರೆ, ಆ ಮೊತ್ತವು TDS ಅನ್ನು ಕಡಿತಗೊಳಿಸಬೇಕಾಗಿದ್ದ ಅಥವಾ TCS ಅನ್ನು ಸಂಗ್ರಹಿಸಬೇಕಾಗಿದ್ದ ವ್ಯಕ್ತಿಯಿಂದ ಕಡಿತಗೊಳಿಸಲ್ಪಡದ ಅಥವಾ ಸಂಗ್ರಹಿಸಲ್ಪಡದ ಮೊತ್ತವಾಗಿರುತ್ತದೆ.

5. ನಿಯಮ 44DAD ಪ್ರಕಾರ ತೆರಿಗೆದಾರರು DRC ಅನ್ನು ಸಂಪರ್ಕಿಸಬಹುದಾದ ‘ನಿರ್ದಿಷ್ಟ ಆದೇಶಗಳು’ ಯಾವುವು?

ಕೆಳಗಿನ ಆದೇಶಗಳ (‘ನಿರ್ದಿಷ್ಟ ಆದೇಶಗಳು’) ಸಂಬಂಧವಾಗಿ DRC ಗೆ ಅರ್ಜಿ ಸಲ್ಲಿಸಬಹುದು.

  1. ಮೌಲ್ಯಮಾಪನ ಆದೇಶಗಳಿಗೆ ಸಂಬಂಧಿಸಿದವು

ತೆರಿಗೆದಾರರು ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಕೆಳಗಿನ ಆದೇಶಗಳ ಸಂಬಂಧವಾಗಿ DRC ಅನ್ನು ಸಂಪರ್ಕಿಸಬಹುದು:

  1. ಸೆಕ್ಷನ್ 144C(1) ರಲ್ಲಿ ಉಲ್ಲೇಖಿಸಲಾದ ಕರಡು ಮೌಲ್ಯಮಾಪನ ಆದೇಶ
  2. ಸೆಕ್ಷನ್ 143(1) ಅಡಿಯಲ್ಲಿ ನೀಡಲಾಗುವ ಮಾಹಿತಿ, ಅಲ್ಲಿ ತೆರಿಗೆದಾರರು ಆ ಆದೇಶದಲ್ಲಿ ಮಾಡಲಾದ ಸರಿಪಡಿಕೆಗಳಿಗೆ ಆಕ್ಷೇಪಣೆ ವ್ಯಕ್ತಪಡಿಸುವ ಸಂದರ್ಭದಲ್ಲಿರುವುದು;
  3. ವಿವಾದ ಪರಿಹಾರ ಮಂಡಳಿಯ ನಿರ್ದೇಶನಗಳ ಅನುಸಾರ ಹೊರಡಿಸಲಾದ ಆದೇಶವನ್ನು ಹೊರತುಪಡಿಸಿ, ಮೌಲ್ಯಮಾಪನ ಅಥವಾ ಮರುಮೌಲ್ಯಮಾಪನ ಆದೇಶ; ಅಥವಾ
  4. ಮೌಲ್ಯಮಾಪನವನ್ನು ಹೆಚ್ಚಿಸುವ ಅಥವಾ ನಷ್ಟವನ್ನು ಕಡಿಮೆ ಮಾಡುವ ಪರಿಣಾಮ ಹೊಂದಿರುವ ಸೆಕ್ಷನ್ 154 ಅಡಿಯಲ್ಲಿ ಹೊರಡಿಸಲಾದ ಆದೇಶ.
  1. TDS/TCS ವಿಷಯಗಳಿಗೆ ಸಂಬಂಧಿಸಿದವು

ತೆರಿಗೆದಾರರು TDS/TCS ವಿಷಯಗಳ ಕುರಿತು ಕೆಳಕಂಡ ಆದೇಶಗಳ ಬಗ್ಗೆ DRC ಅನ್ನು ಸಂಪರ್ಕಿಸಬಹುದು:

1. ಸೆಕ್ಷನ್ 200A(1) ಅಡಿಯಲ್ಲಿ ನೀಡಲಾಗುವ ಸೂಚನೆ, ಅಲ್ಲಿ ಕಡಿತಗಾರ ಆ ಆದೇಶದಲ್ಲಿ ಮಾಡಲಾದ ಸರಿಪಡಿಕೆಗಳಿಗೆ ಆಕ್ಷೇಪಣೆ ವ್ಯಕ್ತಪಡಿಸುವ ಸಂದರ್ಭದಲ್ಲಿರುವುದು;

2. ಸೆಕ್ಷನ್ 206CB(1) ಅಡಿಯಲ್ಲಿ ನೀಡಲಾಗುವ ಸೂಚನೆ, ಅಲ್ಲಿ ಸಂಗ್ರಹಕ ಆ ಆದೇಶದಲ್ಲಿ ಮಾಡಲಾದ ಸರಿಪಡಿಕೆಗಳಿಗೆ ಆಕ್ಷೇಪಣೆ ವ್ಯಕ್ತಪಡಿಸುವ ಸಂದರ್ಭದಲ್ಲಿರುವುದು;

3. ಸೆಕ್ಷನ್ 201 ಅಡಿಯಲ್ಲಿ ಹೊರಡಿಸಲಾದ ಆದೇಶ ಅಥವಾ ಸೆಕ್ಷನ್ 206C(6A) ಅಡಿಯಲ್ಲಿ ಹೊರಡಿಸಲಾದ ಆದೇಶ;

6. ತೆರಿಗೆದಾರರು DRC ಅನ್ನು ಏಕೆ ಸಂಪರ್ಕಿಸಬೇಕು?

CBDT ಯ ಅಧಿಸೂಚನೆ ಸಂಖ್ಯೆ S.O. 1642(E), ದಿನಾಂಕ 05.04.2022 ರ ಮೂಲಕ ಪ್ರಕಟಿಸಲಾದ ಯೋಜನೆಯ ಪ್ರಕಾರ, ತೆರಿಗೆದಾರರು ತೆರಿಗೆಗಳನ್ನು ಪಾವತಿಸಿದ ನಂತರ ದೋಷಾರೋಪಣೆಯಿಂದ ವಿನಾಯಿತಿ, ದಂಡದ ಮನ್ನಾ ಅಥವಾ ಕಡಿತ ಪಡೆಯಲು ಹಾಗೂ ಮೇಲ್ಮನವಿಯನ್ನು ತ್ವರಿತವಾಗಿ ವಿಲೇವಾರಿ ಮಾಡಿಸಿಕೊಳ್ಳಲು DRC ಅನ್ನು ಸಂಪರ್ಕಿಸಬಹುದು.

7. DRC (ವಿವಾದ ಪರಿಹಾರ ಸಮಿತಿ)ಯ ಅಧಿಕಾರಗಳು ಯಾವುವು?

DRC ಯ ಅಧಿಕಾರಗಳನ್ನು 2022 ರ ಇ-DRS ನ ಪ್ಯಾರಾ 5(1) ರಲ್ಲಿ ನೀಡಲಾಗಿದೆ, ಅವುಗಳು ಈ ಕೆಳಗಿನಂತಿವೆ:

(1) ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 44DAC ನಲ್ಲಿ ನಿಗದಿಪಡಿಸಲಾದ ಷರತ್ತುಗಳನ್ನು ಪೂರೈಸಿದಲ್ಲಿ, ವಿವಾದ ಪರಿಹಾರ ಸಮಿತಿ (DRC) ಗೆ ದಂಡವನ್ನು ಮನ್ನಾ ಮಾಡುವ ಅಥವಾ ಆದಾಯ ತೆರಿಗೆ ಕಾಯಿದೆಯ ದೋಷಾರೋಪಣೆಯ ನಿಬಂಧನೆಗಳಿಂದ ವಿನಾಯಿತಿ ನೀಡುವ ಅಧಿಕಾರವಿರುತ್ತದೆ.

(2) ವಿವಾದ ಪರಿಹಾರ ಸಮಿತಿಯ ಮುಂದೆ ನಡೆಯುವ ಯಾವುದೇ ವಿಚಾರಣೆಯನ್ನು ಸೆಕ್ಷನ್ 193 ಮತ್ತು 228 ರ ಪ್ರಕಾರ ಮತ್ತು ಭಾರತೀಯ ದಂಡ ಸಂಹಿತೆಯ (1860 ರ 45) ಸೆಕ್ಷನ್ 196 ರ ಉದ್ದೇಶಗಳಿಗಾಗಿ ನ್ಯಾಯಾಂಗ ಪ್ರಕ್ರಿಯೆ ಎಂದು ಪರಿಗಣಿಸಲಾಗುತ್ತದೆ ಮತ್ತು ಪ್ರತಿಯೊಂದು ಆದಾಯ-ತೆರಿಗೆ ಪ್ರಾಧಿಕಾರವನ್ನು ಸೆಕ್ಷನ್ 195 ರ ಉದ್ದೇಶಗಳಿಗಾಗಿ ಸಿವಿಲ್ ನ್ಯಾಯಾಲಯವೆಂದು ಪರಿಗಣಿಸಲಾಗುತ್ತದೆ, ಆದರೆ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973 ರ (1974 ರ 2) ಅಧ್ಯಾಯ XXVI ರ ಉದ್ದೇಶಗಳಿಗಾಗಿ ಅಲ್ಲ.

(3) ವಿವಾದ ಪರಿಹಾರ ಸಮಿತಿ (DRC) ಯ ಯಾವುದೇ ಆದೇಶವನ್ನು ಜಾರಿಗೆ ತರುವಲ್ಲಿ ಯಾವುದೇ ತೊಂದರೆ ಉಂಟಾದಲ್ಲಿ, ಸಮಿತಿಯು ಸ್ವಯಂ ಪ್ರೇರಿತವಾಗಿ ಅಥವಾ ತೆರಿಗೆದಾರನು ಸಲ್ಲಿಸಿದ ಅರ್ಜಿಯ ಮೇರೆಗೆ, ಅಥವಾ ಮೌಲ್ಯಮಾಪನ ಅಧಿಕಾರಿಯು ಪ್ರಧಾನ ಆದಾಯ ತೆರಿಗೆ ಆಯುಕ್ತ ಅಥವಾ ಆದಾಯ ತೆರಿಗೆ ಆಯುಕ್ತರ ಮೂಲಕ ಸಲ್ಲಿಸಿದ ವಿನಂತಿಯ ಮೇರೆಗೆ, ಆದಾಯ ತೆರಿಗೆ ಕಾಯಿದೆಯ ವಿಧಿಗಳಿಗೆ ವಿರುದ್ಧವಾಗದ ರೀತಿಯಲ್ಲಿ ಆ ತೊಂದರೆಯನ್ನು ನಿವಾರಿಸಬಹುದು.

8. DRC ಯು ಪ್ರಕ್ರಿಯೆಗಳನ್ನು ಕೊನೆಗೊಳಿಸಬಹುದೇ?

DRC ಯು ಕಾರ್ಯವಿಧಾನಗಳ ಯಾವುದೇ ಹಂತದಲ್ಲಿ, ಕೆಳಗಿನ ಸಂದರ್ಭಗಳಲ್ಲಿ ಕಾರ್ಯವಿಧಾನಗಳನ್ನು ಅಂತ್ಯಗೊಳಿಸಲು ನಿರ್ಧರಿಸಬಹುದು:

(i) ತೆರಿಗೆದಾರರು ಪ್ರಕ್ರಿಯೆಯ ಸಮಯದಲ್ಲಿ ಸಹಕರಿಸಲು ವಿಫಲರಾದರೆ.

(ii) ತೆರಿಗೆದಾರರು ನೋಟಿಸ್‌ಗೆ ಪ್ರತಿಕ್ರಿಯಿಸಲು ಅಥವಾ ನೋಟಿಸ್‌ಗೆ ಉತ್ತರವಾಗಿ ಅಗತ್ಯ ಮಾಹಿತಿಯನ್ನು ಸಲ್ಲಿಸಲು ವಿಫಲರಾದಲ್ಲಿ.

(iii) ತೆರಿಗೆದಾರರು/ತೆರಿಗೆದಾರರು ವಿಚಾರಣೆಯ ಯಾವುದೇ ನಿರ್ದಿಷ್ಟ ವಿಷಯವನ್ನು ಮರೆಮಾಡಿದ್ದಾರೆ ಅಥವಾ ಸುಳ್ಳು ಸಾಕ್ಷ್ಯವನ್ನು ನೀಡಿದ್ದಾರೆ ಎಂದು ಸಮಿತಿಗೆ ಮನದಟ್ಟಾದರೆ.

(iv) ಯೋಜನೆಯ 4ನೇ ಪ್ಯಾರಾಗ್ರಾಫ್‌ನ ಉಪಪ್ಯಾರಾ (1) ರ ಕ್ಲಾಸ್ (xviii) ಪ್ರಕಾರ ಅಗತ್ಯವಿರುವಂತೆ ತೆರಿಗೆದಾರನು ಬೇಡಿಕೆಯ ಮೊತ್ತವನ್ನು ಪಾವತಿಸಲು ವಿಫಲವಾದರೆ.

9. DRC ಯ ಮುಂದೆ ಅರ್ಜಿ ಸಲ್ಲಿಸುವುದು ಹೇಗೆ?

ನಿರ್ದಿಷ್ಟ ಆದೇಶದಲ್ಲಿನ ಯಾವುದೇ ಬದಲಾವಣೆಯಿಂದ ಉಂಟಾಗುವ ವಿವಾದಕ್ಕೆ ಸಂಬಂಧಿಸಿದಂತೆ DRCಗೆ ವಿದ್ಯುನ್ಮಾನ ರೂಪದಲ್ಲಿ ಫಾರ್ಮ್‌ ಸಂಖ್ಯೆ 34BC ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು.ಈ ಅರ್ಜಿಯೊಂದಿಗೆ ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 44DAB ಪ್ರಕಾರ ರೂ. 1,000/- ಶುಲ್ಕವನ್ನು ಪಾವತಿಸಬೇಕು. ಫಾರ್ಮ್ 34BC ಸಲ್ಲಿಸುವ ಹಂತಗಳು ಈ ಕೆಳಗಿನಂತಿವೆ:

ಹಂತ 1: ನಿಮ್ಮ ಬಳಕೆದಾರ ಗುರುತು ಮತ್ತು ಪಾಸ್ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆಗಿ.

ಹಂತ 2: ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ, ಇ-ಫೈಲ್ >ಆದಾಯ ತೆರಿಗೆ ಫಾರ್ಮ್‌ಗಳು >ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ ಮೇಲೆ ಕ್ಲಿಕ್‌ ಮಾಡಿ.

ಹಂತ 3: ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ ಪುಟದಲ್ಲಿ, ಆದಾಯ ತೆರಿಗೆ ಕಾಯಿದೆ‌ 1961 ರ ಅನ್ವಯ ಫಾರ್ಮ್ ಗಳು ಟ್ಯಾಬ್ ಅಡಿಯಲ್ಲಿ ಫಾರ್ಮ್‌ 34BC ಅನ್ನು ಆಯ್ಕೆಮಾಡಿ. ಪರ್ಯಾಯವಾಗಿ, ಫಾರ್ಮ್ ಹುಡುಕಲು ಹುಡುಕಾಟ ಬಾಕ್ಸ್‌ನಲ್ಲಿ ಫಾರ್ಮ್ 34BC ಎಂದು ನಮೂದಿಸಬಹುದು.

ಹಂತ 4: ಫಾರ್ಮ್‌ 34BC ಪುಟದಲ್ಲಿ,  ತೆರಿಗೆ ಮೌಲ್ಯಮಾಪನ ವರ್ಷ ಅನ್ನು ಆಯ್ಕೆಮಾಡಿ ಮತ್ತು ನಂತರ  ಮುಂದುವರೆಯಿರಿ ಮೇಲೆ ಕ್ಲಿಕ್ ಮಾಡಿ.

ಹಂತ 5: ಫಾರ್ಮ್‌ ಸಂಖ್ಯೆ 34BC ಅನ್ನು ಭರ್ತಿ ಮಾಡಿ (ಅಗತ್ಯವಿದ್ದರೆ ಸಂಬಂಧಿತ ದಾಖಲೆಗಳನ್ನು ಲಗತ್ತಿಸಿ) ಮತ್ತು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಲಭ್ಯವಿರುವ ಸ್ವಯಂ ಘೋಷಣೆ ಅನ್ನು ಸಲ್ಲಿಸಿ ಹಾಗೂ ಅಗತ್ಯ ಶುಲ್ಕ ವನ್ನು ಪಾವತಿಸಿ.

ಹಂತ 6: ಪೂರ್ವ ವೀಕ್ಷಣೆ ಪುಟದಲ್ಲಿರುವ ವಿವರಗಳನ್ನು ಪರಿಶೀಲಿಸಿ, ಎಲ್ಲಾ ಮಾಹಿತಿಗಳು ಸರಿಯಾಗಿ ಭರ್ತಿ ಆಗಿರುವುದನ್ನು ಖಚಿತಪಡಿಸಿ, ನಂತರ ಫಾರ್ಮ್ ಅನ್ನು ಇ-ಪರಿಶೀಲನೆ ಮಾಡುವ ಪ್ರಕ್ರಿಯೆಗೆ ಮುಂದುವರಿಯಿರಿ.

ಹಂತ 7: ತೆರಿಗೆದಾರನು ಆಧಾರ್ OTP, EVC ಅಥವಾ DSC ಬಳಸಿ ಫಾರ್ಮ್‌ ಸಂಖ್ಯೆ 34BC ಅನ್ನು ಇ-ಪರಿಶೀಲನೆ ಮಾಡಬೇಕು.

ಹಂತ 8: ಫಾರ್ಮ್‌ ಸಂಖ್ಯೆ 34BC ಅನ್ನು ಲಗತ್ತುಗಳು ಮತ್ತು ಸ್ವಯಂ ಘೋಷಣೆ ಸಹಿತ ಯಶಸ್ವಿಯಾಗಿ ಸಲ್ಲಿಸಿದ ನಂತರ, ಸಂಬಂಧಿತ ಅಧಿಕಾರಕ್ಷೇತ್ರದ ಪ್ರಾಧಿಕಾರವು ಇ-ಪ್ರಕ್ರಿಯೆಗಳ ಮೂಲಕ ತೆರಿಗೆದಾರರಿಂದ ಅಗತ್ಯ ದಾಖಲೆಗಳನ್ನು ಕೇಳುತ್ತದೆ.

10. ಫಾರ್ಮ್ 34BCಯನ್ನು ಯಾರು ಸಲ್ಲಿಸಬಹುದು?

ನಿರ್ದಿಷ್ಟ ಶರತ್ತುಗಳನ್ನು ಪೂರೈಸುವ ಯಾವುದೇ ತೆರಿಗೆದಾರರು (ದಯವಿಟ್ಟು ಮೇಲಿನ ಪ್ರಶ್ನೆ ಸಂಖ್ಯೆ 4 ಅನ್ನು ನೋಡಿ), ಯಾವುದೇ ನಿರ್ದಿಷ್ಟ ಆದೇಶದ (ದಯವಿಟ್ಟು ಪ್ರಶ್ನೆ ಸಂಖ್ಯೆ 5 ಅನ್ನು ನೋಡಿ) ಕುರಿತು, ವಿವಾದ ಪರಿಹಾರ ಸಮಿತಿ (DRC) ಗೆ ಅರ್ಜಿಯನ್ನು ಸಲ್ಲಿಸಬಹುದು.

11. ಫಾರ್ಮ್‌ 34BC ಅನ್ನು ಯಾವ ಯಾವ ವಿಧಾನಗಳಲ್ಲಿ ಸಲ್ಲಿಸಬಹುದು?

ಫಾರ್ಮ್ 34BC ಅನ್ನು ಕೇವಲ ಆದಾಯ ತೆರಿಗೆ ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬಹುದು.

12. ಫಾರ್ಮ್ 34BC ಅನ್ನು ಹೇಗೆ ಇ-ಪರಿಶೀಲನೆ ಮಾಡಬಹುದು?

ತೆರಿಗೆದಾರರು ಆಧಾರ್ OTP, EVC ಅಥವಾ DSC ಬಳಸಿ ಫಾರ್ಮ್ 34BC ಅನ್ನು ಇ-ಪರಿಶೀಲನೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ “ಇ-ಪರಿಶೀಲನೆ ಮಾಡುವ ವಿಧಾನ” ಎಂಬ ಬಳಕೆದಾರ ಕೈಪಿಡಿಯನ್ನು ಉಲ್ಲೇಖಿಸಿ.

13. DRC ಯಲ್ಲಿ ಫಾರ್ಮ್ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟು?

ತೆರಿಗೆದಾರರು ಫಾರ್ಮ್ 34BC ಸಲ್ಲಿಸಲು ಇ-ಪೇ ತೆರಿಗೆ ಕಾರ್ಯದ ಮೂಲಕ ಅರ್ಜಿ ಶುಲ್ಕವಾಗಿ ರೂ. 1,000/- ಪಾವತಿಸಬೇಕಾಗುತ್ತದೆ.

14. ಇ-ಪಾವತಿ ತೆರಿಗೆ ಕಾರ್ಯನಿರ್ವಹಣೆಯ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸುವುದು ಹೇಗೆ ?

ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಲಭ್ಯವಿರುವ ಇ-ಪಾವತಿ ತೆರಿಗೆ ಕಾರ್ಯನಿರ್ವಹಣೆಯ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲಾಗುತ್ತದೆ:

  • PAN ಬಳಕೆದಾರರಿಗೆ: ಇ-ಫೈಲ್‌ > ಇ-ಪೇ ತೆರಿಗೆ > ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆ ಮಾಡಿ > ಆದಾಯ ತೆರಿಗೆ ಕಾಯಿದೆ 1961 > ಹೊಸ ಪಾವತಿ > ಶುಲ್ಕ/ಇತರ ಪಾವತಿ ಟೈಲ್‌ > ಮುಖ್ಯ ಶೀರ್ಷಿಕೆ - ‘ವಿವಿಧ ಆದಾಯ ಸ್ವೀಕೃತಿಗಳು (0075)ʼ > ಉಪ ಶೀರ್ಷಿಕೆ - ‘ಇತರೆ ವಿವಿಧ ಸ್ವೀಕೃತಿಗಳು (800)’ > ಪಾವತಿ ಉಪ-ಪ್ರಕಾರ - "14-ಸೆಕ್ಷನ್ 245MA ಅಡಿಯಲ್ಲಿ ಅರ್ಜಿ ಶುಲ್ಕ (ಫಾರ್ಮ್ 34BC)"
  • TAN ಬಳಕೆದಾರರಿಗೆ: ಇ-ಫೈಲ್‌ > ಇ-ಪೇ ತೆರಿಗೆ > ಅನ್ವಯವಾಗುವ ಆದಾಯ ತೆರಿಗೆ ಕಾಯಿದೆಯನ್ನು ಆಯ್ಕೆ ಮಾಡಿ > ಆದಾಯ ತೆರಿಗೆ ಕಾಯಿದೆ 1961 > ಹೊಸ ಪಾವತಿ > 'ವಿವಿಧ ಆದಾಯ ಸ್ವೀಕೃತಿಗಳು' ಟೈಲ್ > ಮುಖ್ಯ ಶೀರ್ಷಿಕೆ - ‘ವಿವಿಧ ಆದಾಯ ಸ್ವೀಕೃತಿಗಳು (0075)ʼ > ಉಪ ಶೀರ್ಷಿಕೆ - ‘ಇತರೆ ವಿವಿಧ ಸ್ವೀಕೃತಿಗಳು (800)’ > ಪಾವತಿ ಉಪ-ಪ್ರಕಾರ - "14-ಸೆಕ್ಷನ್ 245MA ಅಡಿಯಲ್ಲಿ ಅರ್ಜಿ ಶುಲ್ಕ (ಫಾರ್ಮ್ 34BC)"

15. ಫಾರ್ಮ್ 34BC ಗೆ ಯಾವುದೇ ಕಡ್ಡಾಯ ದಾಖಲೆ ಲಗತ್ತಿಸುವಿಕೆಯ ಅಗತ್ಯವಿದೆಯೇ?

ಹೌದು, ಫಾರ್ಮ್ 34BC ಜೊತೆಗೆ ತೆರಿಗೆದಾರನು ಕಡ್ಡಾಯವಾಗಿ ‘ತೆರಿಗೆದಾರನು ಅವಲಂಬಿಸಿರುವ ದಾಖಲೆ ಸಾಕ್ಷ್ಯಗಳು’ ಹಾಗೂ ‘ಅರ್ಜಿಯನ್ನು ಸಲ್ಲಿಸುವ ಕಾರಣಗಳು’ ಗಳನ್ನು ಲಗತ್ತಿಸಬೇಕು. ಇದಲ್ಲದೆ, ತೆರಿಗೆದಾರನು ಫಾರ್ಮ್ 34BC ಜೊತೆ ಕೆಳಗಿನ ದಾಖಲೆಗಳನ್ನು ಸಹ ಲಗತ್ತಿಸಬೇಕು:‌

  • ಮೌಲ್ಯಮಾಪನ ಅಧಿಕಾರಿಯ /ಡ್ರಾಫ್ಟ್ ಆರ್ಡರ್ ಮೂಲಕ ಆದೇಶ/ಸೂಚನೆಯ ಪ್ರತಿ
  • ಯಾವುದಾದರೂ ಬೇಡಿಕೆ ಸೂಚನೆ ಇದ್ದರೆ
  • ಅರ್ಜಿ ಶುಲ್ಕ ಪಾವತಿಯ ಪುರಾವೆ
  • ಹಿಂದಿರುಗಿಸಿದ ಆದಾಯದ ಮೇಲೆ ಪಾವತಿಸಿದ ತೆರಿಗೆ ಪಾವತಿಯ ಪುರಾವೆ.
  • ಅರ್ಜಿಯನ್ನು ಸಲ್ಲಿಸುವ ಕಾರಣಗಳು

16. "ಫಾರ್ಮ್ 34BC ಸಲ್ಲಿಸುವ ವೇಳೆ 'ಅಮಾನ್ಯ ಮಾಹಿತಿ' ಅಥವಾ 'ಸಲ್ಲಿಕೆ ವಿಫಲವಾಗಿದೆ' ಎಂಬ ದೋಷ ಸಂದೇಶ ಕಾಣಿಸಿಕೊಂಡು ಸಲ್ಲಿಕೆ ವಿಫಲವಾದರೆ, ತೆರಿಗೆದಾರರು ಏನು ಮಾಡಬೇಕು?

ಫಾರ್ಮ್ 34BC ಅನ್ನು ಸಲ್ಲಿಸುವ ಮೊದಲು, "ನನ್ನ ಪ್ರೊಫೈಲ್" ವಿಭಾಗದ ಅಡಿಯಲ್ಲಿ ಇರುವ "ಸಂಪರ್ಕ ವಿವರಗಳು" (ಅಥವಾ ವೈಯಕ್ತಿಕರಲ್ಲದ ತೆರಿಗೆದಾರರ ಸಂದರ್ಭದಲ್ಲಿ "ಪ್ರಮುಖ ವ್ಯಕ್ತಿಯ ವಿವರಗಳು") ಮಾಹಿತಿಯನ್ನು ನವೀಕರಿಸಬೇಕು ಹಾಗೂ ಎಲ್ಲಾ ಕಡ್ಡಾಯ ಕ್ಷೇತ್ರಗಳನ್ನು ಭರ್ತಿ ಮಾಡಿರುವುದನ್ನು ಖಚಿತಪಡಿಸಿಕೊಳ್ಳಬೇಕು.

17: ಫಾರ್ಮ್ 34BC ಗೆ ಪರಿಷ್ಕರಣೆ ಸೌಲಭ್ಯ ಲಭ್ಯವಿದೆಯೇ?

ಇಲ್ಲ, ಒಮ್ಮೆ ಸಲ್ಲಿಸಿದ ಫಾರ್ಮ್ 34BC ಅನ್ನು ಪರಿಷ್ಕರಿಸಲಾಗುವುದಿಲ್ಲ.

18. ಫಾರ್ಮ್ 34BC ಅನ್ನು ಸಲ್ಲಿಸಿದ ನಂತರ ಸಲ್ಲಿಸಿದ ಫಾರ್ಮ್ ವಿವರಗಳನ್ನು ಎಲ್ಲಿ ವೀಕ್ಷಿಸಬೇಕು/ಡೌನ್‌ಲೋಡ್ ಮಾಡಬೇಕು?

ಸಲ್ಲಿಸಿದ ಫಾರ್ಮ್ 34BC ವಿವರಗಳನ್ನು ಇ-ಫೈಲ್ ಟ್ಯಾಬ್ ಅಡಿಯಲ್ಲಿ — ಆದಾಯ ತೆರಿಗೆ ಫಾರ್ಮ್ ಗಳು → ಸಲ್ಲಿಸಿದ ಫಾರ್ಮ್‌ಗಳನ್ನು ವೀಕ್ಷಿಸಿ → ಆದಾಯ ತೆರಿಗೆ ಕಾಯ್ದೆ, 1961 ಅನ್ವಯದ ಫಾರ್ಮ್‌ಗಳು → 34BC ಮೂಲಕ ವೀಕ್ಷಿಸಬಹುದು/ಡೌನ್‌ಲೋಡ್ ಮಾಡಬಹುದು.‌

19. ತೆರಿಗೆದಾರರು ಫಾರ್ಮ್ 34BC ಸಲ್ಲಿಸಿದ ನಂತರ ಯಾವುದೇ ಸಂವಹನವನ್ನು ಪಡೆಯುತ್ತಾರೆಯೇ?

ಹೌದು, ಫಾರ್ಮ್ 34BC ಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ ತೆರಿಗೆದಾರರಿಗೆ SMS ಮತ್ತು ಇಮೇಲ್ ಸಂದೇಶವನ್ನು ಕಳುಹಿಸಲಾಗುತ್ತದೆ.

20. ಸಲ್ಲಿಸಿದ ಫಾರ್ಮ್ ವಿವರಗಳನ್ನು ವೀಕ್ಷಿಸಲು ಅಥವಾ ಫಾರ್ಮ್ 34BC ಸಲ್ಲಿಸಿದ ಬಗ್ಗೆ ಯಾವುದೇ ಸಂವಹನವನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೆ ತೆರಿಗೆದಾರರು ಏನು ಮಾಡಬೇಕು?

ಇಂತಹ ಯಾವುದೇ ಸಮಸ್ಯೆಗಾಗಿ, ಸಂಬಂಧಿತ ARN ರಸೀದಿ, ಅಂಗೀಕಾರ ಸಂಖ್ಯೆ ಅಥವಾ ಇತರ ಸಂಬಂಧಿತ ದಾಖಲೆಗಳನ್ನು ಲಗತ್ತಿಸಿ "ಆಕ್ಷೇಪಣೆಗಳು" ಟ್ಯಾಬ್ ಅಡಿಯಲ್ಲಿ ದೂರು ಸಲ್ಲಿಸಬಹುದು.

21: DRC ಗೆ ಅರ್ಜಿ ಸಲ್ಲಿಸಲು ಇರುವ ಕಾಲಮಿತಿ ಏನು?

ಇ-DRS ಗಾಗಿ ಅರ್ಜಿಯನ್ನು ಫಾರ್ಮ್ ಸಂಖ್ಯೆ 34BC ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ನಲ್ಲಿನ ನಿಯಮಗಳ 44DAB ನಿಯಮದಲ್ಲಿ ಉಲ್ಲೇಖಿಸಲಾಗಿದೆ:

  1. CIT (ಮೇಲ್ಮನವಿಗಳು) ಮುಂದೆ ಮೇಲ್ಮನವಿ ಇನ್ನೂ ಭರ್ತಿ ಮಾಡಬೇಕಾದ ಸಂದರ್ಭಗಳಲ್ಲಿ, ನಿರ್ದಿಷ್ಟಪಡಿಸಿದ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಒಂದು ತಿಂಗಳೊಳಗೆ.
  2. ಮೇಲ್ಮನವಿ ಈಗಾಗಲೇ ಸಲ್ಲಿಸಲಾಗಿದ್ದು ಆದಾಯ ತೆರಿಗೆ ಆಯುಕ್ತ (ಅಪೀಲ್) ಅವರ ಮುಂದೆ ಬಾಕಿಯಿದ್ದರೆ, ಇ-DRS ಗೆ ಅರ್ಜಿಯನ್ನು 30.09.2024 ರಂದು ಅಥವಾ ಅದಕ್ಕೂ ಮೊದಲು ಸಲ್ಲಿಸಬೇಕು.
  3. ನಿರ್ದಿಷ್ಟಪಡಿಸಿದ ಆದೇಶವನ್ನು 31.08.2024 ರಂದು ಅಥವಾ ಅದಕ್ಕಿಂತ ಮೊದಲು ಅಂಗೀಕರಿಸಿದ ಪ್ರಕರಣಗಳಲ್ಲಿ ಮತ್ತು ಅಂತಹ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಸಮಯವು CIT (ಮೇಲ್ಮನವಿಗಳು) ಅವಧಿ ಮುಗಿಯದಿದ್ದಲ್ಲಿ, ವಿವಾದ ಪರಿಹಾರಕ್ಕಾಗಿ ಅರ್ಜಿಯನ್ನು 30.09.2024ರಂದು ಅಥವಾ ಮೊದಲು ಸಲ್ಲಿಸಬಹುದು.

22. ಫಾರ್ಮ್ 34BC ಅಡಿಯಲ್ಲಿ ಅವರ ಅರ್ಜಿಯನ್ನು ಸ್ವೀಕರಿಸಲಾಗಿದೆಯೇ ಅಥವಾ ತಿರಸ್ಕರಿಸಲಾಗಿದೆಯೇ ಎಂದು ತೆರಿಗೆದಾರರಿಗೆ ಹೇಗೆ ತಿಳಿಯುತ್ತದೆ?

ಫಾರ್ಮ್ 34BC ಅನ್ನು ನಿಯೋಜಿತ ವಿವಾದ ಪರಿಹಾರ ಸಮಿತಿಗೆ ಯಶಸ್ವಿಯಾಗಿ ಸಲ್ಲಿಸಿದ ನಂತರ, ತೆರಿಗೆದಾರರಿಗೆ ಅವರ ನೋಂದಾಯಿತ ಇ-ಮೇಲ್ ವಿಳಾಸಕ್ಕೆ ಹಾಗೂ ಫಾರ್ಮ್ 34BC ಯ 12ನೇ ಅಂಕಿಯಲ್ಲಿ ಆಯ್ಕೆಮಾಡಿದ ಇ-ಮೇಲ್ ವಿಳಾಸಕ್ಕೆ, ಜೊತೆಗೆ ಇ-ಸಲ್ಲಿಕೆ ಪೋರ್ಟಲ್‌ನ ಇ-ಪ್ರಕ್ರಿಯೆಗಳು ವಿಭಾಗದಲ್ಲಿಯೂ ಮಾಹಿತಿ/ಸಂವಹನವನ್ನು ಪಡೆಯುತ್ತಾರೆ.

ತೆರಿಗೆದಾರರಿಗೆ ಕೆಳಗಿನ ವಿಷಯಗಳಿಗೆ ಸಂಬಂಧಿಸಿದ ಸಂವಹನ ದೊರೆಯುತ್ತದೆ:

  1. ಸಲ್ಲಿಸಿದ ನಂತರ ಅರ್ಜಿಯಲ್ಲಿ ಯಾವುದೇ ಕೊರತೆ ಕಂಡುಬಂದರೆ ಕೊರತೆಯನ್ನು ತೆಗೆದುಹಾಕಲು ತೆರಿಗೆದಾರರನ್ನು ಕೇಳುವ ಕೊರತೆ ಪತ್ರವನ್ನು ನೀಡಲಾಗುತ್ತದೆ.
  1. ಅರ್ಜಿಯನ್ನು ಸ್ವೀಕರಿಸುವ ಪತ್ರ.
  1. ಪ್ರಸ್ತಾವಿತ ನಿರಾಕರಣೆಗೆ ಕಾರಣಗಳನ್ನು ನೀಡಿ, ತಮ್ಮ ಅರ್ಜಿಯನ್ನು ಏಕೆ ತಿರಸ್ಕರಿಸಬಾರದು ಎಂದು ಕಾರಣವನ್ನು ವಿನಂತಿಸಿ ತೆರಿಗೆದಾರರಿಗೆ ಕಾರಣ ಕೇಳಲಾಗುವ ಪತ್ರ.

23. ತೆರಿಗೆದಾರರು ತಮ್ಮ ಅರ್ಜಿಯಲ್ಲಿನ ವ್ಯತ್ಯಾಸಗಳನ್ನು ಹೇಗೆ ಸರಿಪಡಿಸಬಹುದು?

ತೆರಿಗೆದಾರರು ಇ-ಸಲ್ಲಿಕೆ ಪೋರ್ಟಲ್‌ನ ಇ-ಕಾರ್ಯವಿಧಾನಗಳು ಅಡಿಯಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ಅರ್ಜಿಯಲ್ಲಿನ ಕೊರತೆಯನ್ನು ಸರಿಪಡಿಸಬಹುದು. ತೆರಿಗೆದಾರರು ಅಗತ್ಯವಾದ ದಾಖಲೆಗಳು/ಮಾಹಿತಿಯನ್ನು ‘ಪ್ರತಿಕ್ರಿಯೆ ಸಲ್ಲಿಸಿ’ ಬಟನ್ ಮೂಲಕ DRC ಗೆ ಸಲ್ಲಿಸಬಹುದು.

24: DRC ಮೂಲಕ ಅರ್ಜಿ ತಿರಸ್ಕರಿಸಲಾದ ನಂತರ ‘ಬಾಕಿಯಿರುವ ಮೇಲ್ಮನವಿ’ ಗೆ ಏನು ಆಗುತ್ತದೆ? ಅಥವಾ CIT ಮುಂದೆ ಮೇಲ್ಮನವಿ ಸಲ್ಲಿಸದೇ DRC ಗೆ ಬಂದಿದ್ದರೆ ಏನು ಆಗುತ್ತದೆ?

  1. ತೆರಿಗೆದಾರರು DRC ಗೆ ಅರ್ಜಿ ಸಲ್ಲಿಸುವ ಮೊದಲು ಈಗಾಗಲೇ CIT ಮುಂದೆ ಮೇಲ್ಮನವಿ ಸಲ್ಲಿಸಿದ್ದರೆ, DRC ಯಿಂದ ಫಾರ್ಮ್ 34BC ಅರ್ಜಿ ಅಂಗೀಕರಿಸಲಾದ ನಂತರ ಬಾಕಿಯಿರುವ ಮೇಲ್ಮನವಿ ಕಾರ್ಯವಿಧಾನಗಳು ಸ್ಥಗಿತಗೊಳ್ಳುತ್ತವೆ/ರದ್ದಾಗುತ್ತವೆ. DRC ಅರ್ಜಿಯನ್ನು ತಿರಸ್ಕರಿಸಿದರೆ, ತೆರಿಗೆದಾರರು ಈಗಾಗಲೇ CIT ಮುಂದೆ ಸಲ್ಲಿಸಿರುವ ಮೇಲ್ಮನವಿಯನ್ನು ಮುಂದುವರಿಸಬಹುದು.
  1. ತೆರಿಗೆದಾರರು ನಿರ್ದಿಷ್ಟಪಡಿಸಿದ ಆದೇಶಗಳಿಗೆ ನೇರವಾಗಿ DRC ಅನ್ನು ನೇರವಾಗಿ ಸಂಪರ್ಕಿಸಿದ್ದರೆ, DRC ಅವರ ಮನವಿಯನ್ನು ತಿರಸ್ಕರಿಸಿದ ಪಕ್ಷದಲ್ಲಿ, ಅವರು CIT ಬಳಿ ಹೊಸ ಮೇಲ್ಮನವಿಯನ್ನು ಸಲ್ಲಿಸಬೇಕಾಗುತ್ತದೆ.

25. ತನ್ನ ಅರ್ಜಿಯನ್ನು DRC ಸ್ವೀಕರಿಸಿದೆ ಎಂದು DRC ಇಂದ ಸಂವಹನ ಸ್ವೀಕರಿಸಿದ ನಂತರ ತೆರಿಗೆದಾರರು ಏನು ಮಾಡಬೇಕು?

ತೆರಿಗೆದಾರರು CIT ಮುಂದೆ ಸಲ್ಲಿಸಿದ ಮೇಲ್ಮನವಿಯನ್ನು ಹಿಂತೆಗೆದುಕೊಳ್ಳುವ ಪುರಾವೆಯನ್ನು ಸಲ್ಲಿಸಬೇಕಾಗುತ್ತದೆ ಅಥವಾ ಅರ್ಜಿಯನ್ನು ಸ್ವೀಕರಿಸಿದ DRC ಇಂದ ಸಂವಹನವನ್ನು ಸ್ವೀಕರಿಸಿದ 30 ದಿನಗಳಲ್ಲಿ ತನ್ನ ಪ್ರಕರಣದಲ್ಲಿ ಯಾವುದೇ ಮೇಲ್ಮನವಿ ಪ್ರಕ್ರಿಯೆಗಳು ಬಾಕಿ ಉಳಿದಿಲ್ಲ ಎಂದು ತಿಳಿಸಬೇಕಾಗುತ್ತದೆ.

26. ಕಾಯ್ದೆಯ ಸೆಕ್ಷನ್ 246A ಅಡಿಯಲ್ಲಿ ಸಲ್ಲಿಸಲಾದ ಮೇಲ್ಮನವಿಯನ್ನು ಹಿಂತೆಗೆದುಕೊಳ್ಳುವ ಅಥವಾ ವಿವಾದ ಪರಿಹಾರ ಸಮಿತಿಯ ಮುಂದೆ ಅರ್ಜಿಯನ್ನು ಹಿಂತೆಗೆದುಕೊಳ್ಳುವ ಪುರಾವೆ ಏನು?

CIT ಗೆ ಬರೆದ ವಿನಂತಿ ಪತ್ರದ ನಕಲು ಪ್ರತಿಯೇ ಸಾಕಷ್ಟು ಪುರಾವೆಯಾಗಿದೆ.

27. DRC ತೆರಿಗೆದಾರರ ಅರ್ಜಿಯನ್ನು ತಿರಸ್ಕರಿಸಿದರೆ ಏನಾಗುತ್ತದೆ?

DRC ಯಿಂದ ಅರ್ಜಿ ತಿರಸ್ಕರಿಸಲಾದ ಸಂದರ್ಭದಲ್ಲಿ, ತೆರಿಗೆದಾರರು CIT ಮುಂದೆ ಮೇಲ್ಮನವಿ ಸಲ್ಲಿಸಬಹುದು ಮತ್ತು DRC ಯು ಅರ್ಜಿಯ ಸ್ವೀಕೃತಿ ಕುರಿತು ನಿರ್ಣಯ ಕೈಗೊಳ್ಳಲು ತೆಗೆದುಕೊಂಡ ಅವಧಿಯನ್ನು ಅಂತಹ ಮೇಲ್ಮನವಿ ಸಲ್ಲಿಸಲು ಲಭ್ಯವಿರುವ ಸಮಯದಿಂದ ಪರಿಗಣಿಸಲಾಗುತ್ತದೆ. ತೆರಿಗೆದಾರರು DRC ಗೆ ಅರ್ಜಿ ಸಲ್ಲಿಸುವ ಮೊದಲು ಈಗಾಗಲೇ CIT ಮುಂದೆ ಮೇಲ್ಮನವಿ ಸಲ್ಲಿಸಿದ್ದರೆ, ಅವರು ತಮ್ಮ ಬಾಕಿಯಿರುವ ಮೇಲ್ಮನವಿಯನ್ನು CIT ಮುಂದೆ ಮುಂದುವರಿಸಬಹುದು.

28. DRC ಅರ್ಜಿಯನ್ನು ಸ್ವೀಕರಿಸಿದ ಸಂದರ್ಭದಲ್ಲಿ CIT ಮುಂದೆ ಸಲ್ಲಿಸಲಾದ ಮೂಲ ಮೇಲ್ಮನವಿಗೆ ಏನಾಗುತ್ತದೆ?

DRC ಕಾರ್ಯವಿಧಾನಗಳು ಪೂರ್ಣಗೊಂಡ ನಂತರ, CIT ಬಾಕಿಯಿರುವ ಮೇಲ್ಮನವಿ ಕುರಿತು ‘ಹಿಂಪಡೆಯಲಾಗಿದೆ ಎಂದು ವಜಾಗೊಳಿಸಲಾಗಿದೆ’ ಎಂದು ಆದೇಶ ಹೊರಡಿಸುತ್ತದೆ.

29. DRC ಮುಂದಿನ ಪ್ರಕ್ರಿಯೆಗಳು ಹೇಗೆ ಮುಂದುವರಿಯುತ್ತವೆ?

ತೆರಿಗೆದಾರರು DRC ಇಂದ ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಇ-ಪ್ರಕ್ರಿಯೆಗಳು ಟ್ಯಾಬ್ ಮೂಲಕ ಮತ್ತು ಅವರ ನೋಂದಾಯಿತ ಇ-ಮೇಲ್ ID ಮತ್ತು ಫಾರ್ಮ್ 34BC ಯ ಪಾಯಿಂಟ್ 12 ರಲ್ಲಿ ಅವರು ಉಲ್ಲೇಖಿಸಿದ ಇ-ಮೇಲ್ ID ಮೂಲಕ ಎಲ್ಲಾ ಸಂವಹನಗಳನ್ನು ಸ್ವೀಕರಿಸುತ್ತಾರೆ.

30. DRC ಪ್ರಕ್ರಿಯೆಯ ಸಮಯದಲ್ಲಿ ತೆರಿಗೆದಾರರು ಹೆಚ್ಚುವರಿ ದಾಖಲೆಗಳನ್ನು ಪುರಾವೆಗಳಾಗಿ ಒದಗಿಸಬಹುದೇ?

ಹೌದು, ಅವರು DRC ಪ್ರಕ್ರಿಯೆಗಳ ಸಂದರ್ಭದಲ್ಲಿ ಹೆಚ್ಚುವರಿ ದಾಖಲೆಗಳ ಪುರಾವೆಗಳನ್ನು ಸಲ್ಲಿಸಬಹುದು.

31. ತೆರಿಗೆದಾರರು DRC ಮುಂದೆ ವೈಯಕ್ತಿಕ ವಿಚಾರಣೆಯ ಅವಕಾಶವನ್ನು ಪಡೆಯಬಹುದೇ?

ಯಾವುದೇ ವೈಯಕ್ತಿಕ ವಿಚಾರಣೆ ನೀಡಲಾಗುವುದಿಲ್ಲ. ತೆರಿಗೆದಾರರು ತಮ್ಮ ಪ್ರತಿಕ್ರಿಯೆಯನ್ನು ಕೇವಲ ಇ-ಸಲ್ಲಿಕೆ ಪೋರ್ಟಲ್‌ನ ಇ-ಪ್ರಕ್ರಿಯೆಗಳ ಮೂಲಕ ಮಾತ್ರ ಸಲ್ಲಿಸಬಹುದು. ಆದರೆ ಅವರು ವೀಡಿಯೋ ಕರೆ ಅಥವಾ ವೀಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯದ ಮೂಲಕ ವಿಚಾರಣೆಗಾಗಿ ವಿನಂತಿಸಬಹುದು. ವೀಡಿಯೋ ವಿಚಾರಣೆಯನ್ನು ವೆಬೆಕ್ಸ್, ಗೂಗಲ್ ಮೀಟ್ (Webex, Google Meet) ಮುಂತಾದವುಗಳ ಮೂಲಕ ನಡೆಸಬಹುದು.

32. DRC ಇಂದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಯಾವುದೇ ಸಮಯದ ಮಿತಿ ಇದೆಯೇ?

ಹೌದು, DRC ಅರ್ಜಿಯನ್ನು ಸ್ವೀಕರಿಸಿದ ತಿಂಗಳ ಅಂತ್ಯದಿಂದ ಆರು ತಿಂಗಳೊಳಗೆ DRS ,2022ರ [ಪ್ಯಾರಾ4(1)(xv) ಆದೇಶವನ್ನು ರವಾನಿಸುತ್ತದೆ.

33. DRC ಯಿಂದ ಯಾವ ರೀತಿಯ ಆದೇಶಗಳನ್ನು ಹೊರಡಿಸಲಾಗುತ್ತದೆ

DRCಯು ಮೂರು ವಿಧದ ಆದೇಶಗಳನ್ನು ಹೊರಡಿಸಬಹುದು. ಅವುಗಳು ಈ ಕೆಳಗಿನಂತಿವೆ:

(i) ನಿರ್ದಿಷ್ಟ ಆದೇಶದಂತೆ ತಿದ್ದುಪಡಿಗಳು/ಬದಲಾವಣೆಗಳನ್ನು ಮಾಡುವುದು

(ii) ನಿಯಮ 44DAC ಅನುಸಾರ ದಂಡದ ವಿನಾಯಿತಿ/ಕಡಿತ ಮತ್ತು ನ್ಯಾಯಾಂಗ ಪ್ರಕ್ರಿಯೆಯಿಂದ ರಕ್ಷಣೆ ನೀಡುವ ಕುರಿತು ನಿರ್ಧಾರ ಕೈಗೊಳ್ಳುವುದು.

(iii) ನಿರ್ದಿಷ್ಟ ಆದೇಶದಂತೆ ಯಾವುದೇ ತಿದ್ದುಪಡಿ/ಬದಲಾವಣೆಗಳನ್ನು ಮಾಡದಿರುವುದು.

34. ವಿವಾದ ಪರಿಹಾರ ಸಮಿತಿಯ ಮುಂದೆ ಪ್ರಕ್ರಿಯೆಗಳು ಮುಗಿದಿದೆಯೆ ಎಂದು ತೆರಿಗೆದಾರರಿಗೆ ಹೇಗೆ ತಿಳಿಯುತ್ತದೆ?

ವಿವಾದ ಪರಿಹಾರ ಸಮಿತಿಯು ಅರ್ಜಿಯನ್ನು ವಿಲೇವಾರಿ ಮಾಡುವ ಸಂಬಂಧ ನೀಡುವ ನಿರ್ಣಯ/ಆದೇಶದ ಪ್ರತಿಯನ್ನು ತೆರಿಗೆದಾರರ ಇ-ಮೇಲ್ ವಿಳಾಸಕ್ಕೆ ಹಾಗೂ ಅದನ್ನು ಅನುಷ್ಠಾನಗೊಳಿಸಲು ಸಂಬಂಧಿತ ವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿ ಅವರಿಗೂ ಕಳುಹಿಸುತ್ತದೆ. ಜೊತೆಗೆ, ಸಲ್ಲಿಸಿದ ಫಾರ್ಮ್ 34BC ಗೆ ಸಂಬಂಧಿಸಿದ ಆದೇಶವನ್ನು ಇ-ಸಲ್ಲಿಕೆ ಖಾತೆಗೆ ಲಾಗಿನ್ ಮಾಡಿ , ಬಾಕಿಯಿರುವ ಕ್ರಮಗಳು → ಇ-ಪ್ರಕ್ರಿಯೆಗಳು → ನಿಮ್ಮ ಮಾಹಿತಿಗಾಗಿ ಟ್ಯಾಬ್ ಮೂಲಕ ವೀಕ್ಷಿಸಬಹುದು.

35. DRC ಅಂಗೀಕರಿಸಿದ ಆದೇಶವನ್ನು ಸ್ವೀಕರಿಸಿದ ನಂತರ ನ್ಯಾಯವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿಯು ಅನುಸರಿಸಬೇಕಾದ ಕಾರ್ಯವಿಧಾನ.

ಪಾವತಿ ಮಾಡಬೇಕಾದ ದಿನಾಂಕವನ್ನು ನಿರ್ದಿಷ್ಟಪಡಿಸಿ ನ್ಯಾಯವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿ (JAO) ತೆರಿಗೆದಾರರಿಗೆ ಬೇಡಿಕೆಯ ಸೂಚನೆಯೊಂದಿಗೆ DRC ನಿರ್ದೇಶನಗಳ ದೃಷ್ಟಿಯಿಂದ ಮಾರ್ಪಡಿಸಿದ ಆದೇಶದ ಪ್ರತಿಯನ್ನು ಕಳುಹಿಸಬೇಕು.

36. ಬೇಡಿಕೆಯ ಪಾವತಿಯ ನಂತರ ತೆರಿಗೆದಾರರು ಏನು ಮಾಡುತ್ತಾರೆ?

ತೆರಿಗೆದಾರರು ಬೇಡಿಕೆಯ ಪಾವತಿಯಾದ ಪುರಾವೆಯನ್ನು DRC ಗೆ ಹಾಗೂ ಸಂಬಂಧಿತ ವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿ ಅವರಿಗೆ ಸಲ್ಲಿಸಬೇಕು. ಬೇಡಿಕೆಯ ಪಾವತಿ ದೃಢೀಕರಣವನ್ನು ಸ್ವೀಕರಿಸಿದ ನಂತರ, DRC ಲಿಖಿತ ಆದೇಶದ ಮೂಲಕ, ಅನ್ವಯಿಸಿದಲ್ಲಿ, ನ್ಯಾಯಾಂಗ ಪ್ರಕ್ರಿಯೆಯಿಂದ ರಕ್ಷಣೆ ಹಾಗೂ ದಂಡದ ವಿನಾಯಿತಿ/ಕಡಿತವನ್ನು ನೀಡುತ್ತದೆ.

37. ತಿದ್ದುಪಡಿಸಲಾದ ಆದೇಶದ ವಿರುದ್ಧ ಮೇಲ್ಮನವಿ ಅಥವಾ ಪರಿಷ್ಕರಣೆ ಸಲ್ಲಿಸಲು ಅವಕಾಶ ಇದೆಯೇ?

DRC ಯ ನಿರ್ಣಯದ ಆದೇಶವನ್ನು ಜಾರಿಗೆ ತರಲು ತೆರಿಗೆ ಮೌಲ್ಯಮಾಪನ ಅಧಿಕಾರಿಯು ನೀಡಿದ ಆದೇಶದ ವಿರುದ್ಧ ಯಾವುದೇ ಮೇಲ್ಮನವಿ ಅಥವಾ ಪರಿಷ್ಕರಣೆ ಇರುವುದಿಲ್ಲ.

38. DRC ಯ ಆದೇಶದಿಂದ ತೃಪ್ತರಾಗದಿದ್ದರೆ ತೆರಿಗೆದಾರರು CIT(ಮೇಲ್ಮನವಿ)ಗೆ ಹಿಂತಿರುಗಬಹುದೇ?

ಇಲ್ಲ, ಅರ್ಜಿಯನ್ನು DRC ಸ್ವೀಕರಿಸಿದ ನಂತರ ಅವರು CIT(ಮೇಲ್ಮನವಿ) ಗೆ ಹಿಂತಿರುಗಲು ಸಾಧ್ಯವಿಲ್ಲ.

39. ತೆರಿಗೆದಾರರು ತಮ್ಮ ಪರವಾಗಿ ಫಾರ್ಮ್ 34BC ಸಲ್ಲಿಸಲು ಅಧಿಕೃತ ಪ್ರತಿನಿಧಿಯನ್ನು ಸೇರಿಸಬಹುದೇ?

ಹೌದು, ತೆರಿಗೆದಾರರು ತಮ್ಮ ಪರವಾಗಿ ಫಾರ್ಮ್ 34BC ಸಲ್ಲಿಸಲು ಅಧಿಕೃತ ಪ್ರತಿನಿಧಿಯನ್ನು ಸೇರಿಸಬಹುದು. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ‘ಅಧಿಕೃತ ಪ್ರತಿನಿಧಿಯಾಗಿ ನೋಂದಣಿ / ಅಧಿಕಾರ ನೀಡುವ ಬಳಕೆದಾರರ ಕೈಪಿಡಿ’ ಯನ್ನು ಉಲ್ಲೇಖಿಸಿ.

40. DRC ಅನುದಾನ ದಂಡವನ್ನು ಮನ್ನಾ/ಕಡಿತ ಮಾಡಿದರೆ ಏನಾಗುತ್ತದೆ?

ಇಂತಹ ಸಂದರ್ಭದಲ್ಲಿ, ಫೇಸ್‌ಲೆಸ್ ದಂಡ ಘಟಕ ನಲ್ಲಿ ಬಾಕಿಯಿರುವ ದಂಡದ ಕಾರ್ಯವಿಧಾನಗಳನ್ನು ಸಂಬಂಧಿತ ವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿ ಅವರಿಗೆ ವರ್ಗಾಯಿಸಲಾಗುತ್ತದೆ. ದಂಡದ ಕಾರ್ಯವಿಧಾನಗಳನ್ನು ವರ್ಗಾಯಿಸಿದ ನಂತರ, ವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿ(JAO) DRC ಆದೇಶವನ್ನು ಅನುಷ್ಠಾನಗೊಳಿಸುವಂತೆ ಸೂಕ್ತ ಆದೇಶವನ್ನು ಹೊರಡಿಸಿ, ದಂಡದ ವಿನಾಯಿತಿ/ಕಡಿತವನ್ನು ಜಾರಿಗೆ ತರುತ್ತಾರೆ.