Do not have an account?
Already have an account?

ಫಾರ್ಮ್ 10BB (ಮೌಲ್ಯಮಾಪನ ವರ್ಷ 2023-24 ರ ನಂತರ)

ಫಾರ್ಮ್ 10BB (ಮೌಲ್ಯಮಾಪನ ವರ್ಷ 2023-24 ರ ನಂತರ) ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1. ಯಾವ ತೆರಿಗೆ ಮೌಲ್ಯಮಾಪನ ವರ್ಷದಿಂದ ಮರು-ಅಧಿಸೂಚಿಸಲಾದ ಫಾರ್ಮ್ 10BB ಅನ್ವಯಿಸುತ್ತದೆ?

21 ಫೆಬ್ರವರಿ 2023ರ ಅಧಿಸೂಚನೆ ಸಂಖ್ಯೆ 7/2023 ಮೂಲಕ ಅಧಿಸೂಚಿತಗೊಂಡ ನಮೂನೆ 10BB, ಮೌಲ್ಯಮಾಪನ ವರ್ಷ 2023-24 ರಿಂದ ಮುಂದಕ್ಕೆ ಅನ್ವಯವಾಗುತ್ತದೆ.

2. ಸೂಚನೆ ಸಂಖ್ಯೆ 7/2023 ಹೊರಡಿಸುವ ಮೊದಲು ಸಲ್ಲಿಸಲಾಗುತ್ತಿದ್ದ ಫಾರ್ಮ್ 10BB, ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಇನ್ನೂ ಲಭ್ಯವಿದೆಯೇ?

ಅಸ್ತಿತ್ವದಲ್ಲಿರುವ ಫಾರ್ಮ್ 10BB ಪೋರ್ಟಲ್‌ನಲ್ಲಿ ಲಭ್ಯವಿದೆ ಮತ್ತು ಇದು ತೆರಿಗೆ ಮೌಲ್ಯಮಾಪನ ವರ್ಷ 2022-23 ರವರೆಗೆ ಮಾತ್ರ ಅನ್ವಯಿಸುತ್ತದೆ.

2022-23 ರವರೆಗಿನ ತೆರಿಗೆ ಮೌಲ್ಯಮಾಪನ ವರ್ಷಗಳ ಸಲ್ಲಿಕೆಗಳಿಗಾಗಿ, ಫಾರ್ಮ್ 10BB ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಲಭ್ಯವಿದೆ. ಅದನ್ನು ಈ ಮುಂದಿನ ರೀತಿಯಲ್ಲಿ ಪ್ರವೇಶಿಸಬಹುದು-

“ಇ-ಸಲ್ಲಿಕೆ → ಆದಾಯ ತೆರಿಗೆ ಫಾರ್ಮ್ಸ್ → ಆದಾಯ ತೆರಿಗೆ ಫಾರ್ಮ್‌ಗಳನ್ನು ಸಲ್ಲಿಸಿ → ಆದಾಯ ತೆರಿಗೆ ಕಾಯ್ದೆ 1961 ಪ್ರಕಾರದ ಫಾರ್ಮ್‌ಗಳು → ಫಾರ್ಮ್ 10BB” ಅನ್ನು ಸಿಎ (CA) ಗೆ ನಿಯೋಜಿಸಲು ಬಳಸಬಹುದು.

 ಅಥವಾ

ಪರ್ಯಾಯವಾಗಿ, "ನನ್ನ CA" ಕಾರ್ಯನಿರ್ವಹಣೆಯನ್ನು ಬಳಸಿಕೊಂಡು ಫಾರ್ಮ್ ನಿಯೋಜಿಸಬಹುದು.

3. ಅಧಿಸೂಚನೆ ಸಂಖ್ಯೆ 7/2023 ಮೂಲಕ ಅಧಿಸೂಚಿತಗೊಂಡ ನಮೂನೆ 10BB ಅನ್ನು ಲೆಕ್ಕಪರಿಶೋಧಿತ ಘಟಕವು (Auditee) ಯಾವಾಗ ಸಲ್ಲಿಸಬೇಕು?

ಮೌಲ್ಯಮಾಪನ ವರ್ಷ 2023-24 ರಿಂದ ಮುಂದಕ್ಕೆ, ಕೆಳಗೆ ಉಲ್ಲೇಖಿಸಿರುವ ಯಾವುದೇ ಷರತ್ತುಗಳು ಪೂರೈಸಲ್ಪಟ್ಟಿದ್ದರೆ, ಮರು-ಅಧಿಸೂಚಿತಗೊಂಡ ಫಾರ್ಮ್ 10B ಅನ್ವಯವಾಗುತ್ತದೆ —‌

  1. ಅನ್ವಯವಾಗುವ ವಿಧಿ/ವಿಭಾಗದ ನಿಬಂಧನೆಗಳನ್ನು ಪರಿಗಣಿಸದೆ, ಲೆಕ್ಕಪರಿಶೋಧಿತ ಘಟಕದ (Auditee) ಒಟ್ಟು ಆದಾಯವು-
  1. ಸೆಕ್ಷನ್ 10 ರ ಅಧಿನಿಯಮ 23C ಯ ಉಪ-ನಿಯಮಗಳು (iv), (v), (vi) ಮತ್ತು (via)
  2. ಕಾಯ್ದೆಯ ಸೆಕ್ಷನ್ 11 ಮತ್ತು 12,

ಹಿಂದಿನ ವರ್ಷದಲ್ಲಿ ಐದು ಕೋಟಿ ರೂಪಾಯಿಗಳನ್ನು ಮೀರಿದ್ದರೆ

  1. ಲೆಕ್ಕಪರಿಶೋಧಿತ ಘಟಕವು ಹಿಂದಿನ ವರ್ಷದಲ್ಲಿ ಯಾವುದೇ ವಿದೇಶಿ ಕೊಡುಗೆಯನ್ನು ಸ್ವೀಕರಿಸಿದ್ದರೆ
  2. ಲೆಕ್ಕಪರಿಶೋಧನಾ ಘಟಕವು ಹಿಂದಿನ ವರ್ಷದಲ್ಲಿ ತನ್ನ ಆದಾಯದ ಯಾವುದೇ ಭಾಗವನ್ನು ಭಾರತದ ಹೊರಗೆ ವಿನಿಯೋಗಿಸಿದ್ದರೆ.

    ಇತರೆ ಎಲ್ಲಾ ಸಂದರ್ಭಗಳಲ್ಲಿ, ಮರು-ಅಧಿಸೂಚಿತ ಫಾರ್ಮ್ ಸಂಖ್ಯೆ 10BB ಅನ್ವಯವಾಗುತ್ತದೆ.

    ಹೆಚ್ಚಿನ ವಿವರಗಳಿಗಾಗಿ, ನೀವು ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 16CC ಮತ್ತು ನಿಯಮ 17B ಅನ್ನು ನೋಡಬಹುದು.

4. ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಫಾರ್ಮ್ 10BB (ಮೌಲ್ಯಮಾಪನ ವರ್ಷ 2023-24 ರ ನಂತರ) ಸಲ್ಲಿಸುವ ಪ್ರಕ್ರಿಯೆ ಏನಿದೆ?

ಫಾರ್ಮ್ 10BB (ಮೌಲ್ಯಮಾಪನ ವರ್ಷ 2023-24 ರ ನಂತರ) ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:

ಹಂತ 1) ತೆರಿಗೆದಾರರ ಲಾಗಿನ್: CA ಗೆ ಫಾರ್ಮ್ ನಿಯೋಜಿಸಿ. ಫಾರ್ಮ್ ಅನ್ನು ಈ ಎರಡು ರೀತಿಯಲ್ಲಿ ನಿಯೋಜಿಸಬಹುದು-

  1. ಇ-ಸಲ್ಲಿಕೆ → ಆದಾಯ ತೆರಿಗೆ ಫಾರ್ಮ್‌ಗಳು → ಆದಾಯ ತೆರಿಗೆ ಫಾರ್ಮ್‌‍ಗಳನ್ನು ಸಲ್ಲಿಸಿ → ಆದಾಯ ತೆರಿಗೆ ಕಾಯ್ದೆ 1961 ಪ್ರಕಾರದ ಫಾರ್ಮ್‌ಗಳು → ಫಾರ್ಮ್ 10BB (ಮೌಲ್ಯಮಾಪನ ವರ್ಷ 2023-24 ರಿಂದ ಮುಂದಕ್ಕೆ)
  2. ಅಧಿಕೃತ ಪಾಲುದಾರರು → ನನ್ನ ಚಾರ್ಟರ್ಡ್ ಅಕೌಂಟೆಂಟ್ (CA) → CA ಸೇರಿಸಿ (ಹಿಂದೆ ಸೇರಿಸದಿದ್ದರೆ) → ಆದಾಯ ತೆರಿಗೆ ಕಾಯ್ದೆ 1961 ಪ್ರಕಾರದ ಫಾರ್ಮ್‌ಗಳು → ಫಾರ್ಮ್ 10BB ಅನ್ನು ನಿಯೋಜಿಸಿ (ಮೌಲ್ಯಮಾಪನ ವರ್ಷ 2023-24 ರಿಂದ ಮುಂದಕ್ಕೆ)

ಹಂತ 2) CA ಲಾಗಿನ್: ಕಾರ್ಯಪಟ್ಟಿಯ "ನೀವು ಕ್ರಮತೆಗೆದುಕೊಳ್ಳುವುದಕ್ಕಾಗಿ" ಟ್ಯಾಬ್‌ನಲ್ಲಿ CA ನಿಯೋಜನೆಯನ್ನು ಸ್ವೀಕರಿಸಿ ಫಾರ್ಮ್ ಅನ್ನು ಅಪ್‌ಲೋಡ್ ಮಾಡಬಹುದು.

ಹಂತ 3) ತೆರಿಗೆದಾರರ ಲಾಗಿನ್: ಕಾರ್ಯಪಟ್ಟಿಯ "ನೀವು ಕ್ರಮತೆಗೆದುಕೊಳ್ಳುವುದಕ್ಕಾಗಿ" ಟ್ಯಾಬ್‌ನಲ್ಲಿ CA ಅಪ್‌ಲೋಡ್ ಮಾಡಿದ ಫಾರ್ಮ್ ಅನ್ನು ತೆರಿಗೆದಾರರು ಸ್ವೀಕರಿಸಬಹುದು.

ದಯವಿಟ್ಟು ‌ಫಾರ್ಮ್‌ ಅನ್ನು ಸೆಕ್ಷನ್ 44ABರಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ದಿನಾಂಕದ ಮೊದಲು, ಅಂದರೆ ವಿಭಾಗ 139ರ ಉಪವಿಭಾಗ (1) ಅಡಿಯಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕಕ್ಕಿಂತ ಒಂದು ತಿಂಗಳು ಮುಂಚಿತವಾಗಿ, ಅಪ್‌ಲೋಡ್ ಮಾಡಿ ಮತ್ತು ಸ್ವೀಕೃತಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ಯಾವುದೇ ತಡವಾದ ಸಲ್ಲಿಕೆಯ ಪರಿಣಾಮಗಳನ್ನು ತಪ್ಪಿಸಬಹುದು.

5. ಮೇಲಿನ ಪ್ರಶ್ನೆ ಸಂಖ್ಯೆ 3ರಲ್ಲಿ ಉಲ್ಲೇಖಿಸಲಾದ “ಲೆಕ್ಕಪರಿಶೋಧಿತ ಘಟಕ” ಎಂದರೇನು?

ಕಾಯಿದೆಯ ಸೆಕ್ಷನ್ 10 ರ ಅಧಿನಿಯಮ (23C) ರ ಉಪ-ಅಧಿನಿಯಮ (iv), (v), (vi) ಅಥವಾ (via) ನಲ್ಲಿ ಉಲ್ಲೇಖಿಸಲಾದ ಯಾವುದೇ ನಿಧಿ ಅಥವಾ ಸಂಸ್ಥೆ ಅಥವಾ ಟ್ರಸ್ಟ್ ಅಥವಾ ಯಾವುದೇ ವಿಶ್ವವಿದ್ಯಾನಿಲಯ ಅಥವಾ ಇತರ ಶಿಕ್ಷಣ ಸಂಸ್ಥೆ ಅಥವಾ ಯಾವುದೇ ಆಸ್ಪತ್ರೆ ಅಥವಾ ಇತರ ವೈದ್ಯಕೀಯ ಸಂಸ್ಥೆಗಳು ಅಥವಾ ಕಾಯಿದೆಯ ಸೆಕ್ಷನ್ 11 ಅಥವಾ 12 ರಲ್ಲಿ ಉಲ್ಲೇಖಿಸಲಾದ ಯಾವುದೇ ಟ್ರಸ್ಟ್ ಅಥವಾ ಸಂಸ್ಥೆಯನ್ನು ಈ ಫಾರ್ಮ್‌ನಲ್ಲಿ "ಲೆಕ್ಕಪರಿಶೋಧಿತ ಘಟಕ" (auditee) ಎಂದು ಉಲ್ಲೇಖಿಸಲಾಗುತ್ತದೆ.

6. ಮರು-ಅಧಿಸೂಚಿತ ಫಾರ್ಮ್ 10BB ಯ ಪ್ರಕಾರ ಪ್ರಶ್ನೆ ಸಂಖ್ಯೆ 3 ರಲ್ಲಿ ಉಲ್ಲೇಖಿಸಿರುವ "ವಿದೇಶಿ ಕೊಡುಗೆ"ಯ ಅರ್ಥವೇನು?

ನಿಯಮ 16CC ಮತ್ತು ನಿಯಮ 17B ಗಾಗಿ, "ವಿದೇಶಿ ಕೊಡುಗೆ" ಎಂಬ ಪದವು ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ, 2010 (2010 ರ 42) ರ ಸೆಕ್ಷನ್ 2 ರ ಸಬ್-ಸೆಕ್ಷನ್ (1) ರ ಅಧಿನಿಯಮ (h) ದಲ್ಲಿ ಅದೇ ಅರ್ಥವನ್ನು ಹೊಂದಿರುತ್ತದೆ.

7. ಫಾರ್ಮ್ 10BB (2023-24 ರ ನಂತರದ ಮೌಲ್ಯಮಾಪನ ವರ್ಷಗಳಿಗೆ) ಸಲ್ಲಿಸಲು ಅಂತಿಮ ದಿನಾಂಕ ಯಾವುದು?

ಫಾರ್ಮ್ 10BB ಅನ್ನು ವಿಭಾಗ 44ABರಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ದಿನಾಂಕದ ಮೊದಲು, ಅಂದರೆ ಸೆಕ್ಷನ್ 139(1) ಅಡಿಯಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕಕ್ಕಿಂತ ಒಂದು ತಿಂಗಳು ಮುಂಚಿತವಾಗಿ ಸಲ್ಲಿಸಬೇಕು.

8. ಮೌಲ್ಯಮಾಪನ ವರ್ಷ 2023-24 ರಿಂದ ಮುಂದಕ್ಕೆ) ಇರುವ ಫಾರ್ಮ್ 10BB ಸಲ್ಲಿಕೆ ಯಾವಾಗ ಪೂರ್ಣಗೊಂಡಂತೆ ಪರಿಗಣಿಸಲಾಗುತ್ತದೆ?

ತೆರಿಗೆದಾರರು CA ಅಪ್‌ಲೋಡ್ ಮಾಡಿದ ಫಾರ್ಮ್ ಅನ್ನು ಸ್ವೀಕರಿಸಿ, ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸಕ್ರಿಯ DSC ಅಥವಾ EVC ಯೊಂದಿಗೆ ಅದನ್ನು ಪರಿಶೀಲಿಸಿದಾಗ ಮಾತ್ರ ಫಾರ್ಮ್‌ನ ಸಲ್ಲಿಕೆ ಪೂರ್ಣಗೊಂಡಿದೆ ಎಂದು ಪರಿಗಣಿಸಲಾಗುತ್ತದೆ.

9. ಫಾರ್ಮ್ 10BB (ಮೌಲ್ಯಮಾಪನ ವರ್ಷ 2023-24 ನಂತರ) ಗಾಗಿ ಯಾವ ಪರಿಶೀಲನೆಯ ವಿಧಾನಗಳು ಲಭ್ಯವಿರುತ್ತವೆ?

ಫಾರ್ಮ್ 10BB ಗಾಗಿ ಪರಿಶೀಲನೆಯ ವಿಧಾನಗಳು (AY 2023-24 ರ ನಂತರ):

  • CA ಗಳಿಗೆ, ಫಾರ್ಮ್ ಅನ್ನು ಅಪ್‌ಲೋಡ್ ಮಾಡಲು DSC ಆಯ್ಕೆ ಮಾತ್ರ ಲಭ್ಯವಿದೆ.
  • ಕಂಪನಿಗಳನ್ನು ಹೊರತುಪಡಿಸಿ ತೆರಿಗೆದಾರರಿಗೆ (ಆಡಿಟೀ) CA ಅಪ್‌ಲೋಡ್ ಮಾಡಿದ ಫಾರ್ಮ್ ಅನ್ನು ಸ್ವೀಕರಿಸಲು DSC ಮತ್ತು EVC ಎರಡೂ ಆಯ್ಕೆಗಳು ಲಭ್ಯವಿವೆ.
  • ಕಂಪನಿಗಳಿಗೆ, CA ಅಪ್‌ಲೋಡ್ ಮಾಡಿದ ಫಾರ್ಮ್ ಅನ್ನು ಸ್ವೀಕರಿಸಲು DSC ಆಯ್ಕೆ ಮಾತ್ರ ಲಭ್ಯವಿದೆ.

10. ನಾನು ಕಳೆದ ವರ್ಷ ನಮೂನೆ 10BB ಅನ್ನು ಸಲ್ಲಿಸಿದ್ದೇನೆ. ಮೌಲ್ಯಮಾಪನ ವರ್ಷ 2023-24 ಅಥವಾ ಮುಂದಿನ ಮೌಲ್ಯಮಾಪನ ವರ್ಷಗಳಿಗೆ, ಫಾರ್ಮ್ 10B ಅಥವಾ ಫಾರ್ಮ್ 10BB ಯಲ್ಲಿ ಯಾವುದನ್ನು ಸಲ್ಲಿಸಬೇಕು?

ಆದಾಯ ತೆರಿಗೆ (ಮೂರನೇ ತಿದ್ದುಪಡಿ) ನಿಯಮಗಳು, 2023 ರ ಮೂಲಕ ನಿಯಮ 16CC ಮತ್ತು ನಿಯಮ 17B ಅನ್ನು ತಿದ್ದುಪಡಿ ಮಾಡಲಾಗಿದೆ. ಹಿಂದಿನ ಮೌಲ್ಯಮಾಪನ ವರ್ಷಗಳಲ್ಲಿ ಯಾವ ಫಾರ್ಮ್ ಸಲ್ಲಿಸಲಾಗಿತ್ತು ಎಂಬುದನ್ನು ಪರಿಗಣಿಸದೇ, ಮೌಲ್ಯಮಾಪನ ವರ್ಷ 2023-24 ರಿಂದ ಮುಂದಕ್ಕೆ ಫಾರ್ಮ್ 10B ಮತ್ತು 10BB ಯ ಅನ್ವಯತೆ ತಿದ್ದುಪಡಿ ಮಾಡಲಾದ ನಿಯಮ 16CC ಮತ್ತು ನಿಯಮ 17B ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.‌

11. "ವಿವರಗಳನ್ನು ಸೇರಿಸಿ" ಆಯ್ಕೆ ಮತ್ತು "CSV ಅಪ್ಲೋಡ್ ಮಾಡಿ" ಆಯ್ಕೆ ಒಟ್ಟಿಗೆ ಇರುವ ಕೋಷ್ಟಕವನ್ನು ಹೊಂದಿರುವ ಅನುಸೂಚಿಗಳಿಗಾಗಿ ದಾಖಲೆಗಳನ್ನು ಒದಗಿಸುವುದು ಹೇಗೆ?

ಕ್ರಮಸಂಖ್ಯೆ 23(vii), ಕ್ರಮಸಂಖ್ಯೆ 23(viii) ಮತ್ತು ಕ್ರಮಸಂಖ್ಯೆ 32 ರಲ್ಲಿನ ಎಲ್ಲಾ ಅನುಸೂಚಿಗಳಿಗಾಗಿ, ದಯವಿಟ್ಟು ಈ ಕೆಳಗಿನವುಗಳನ್ನು ಗಮನಿಸಿ:-

  1. 50 ದಾಖಲೆಗಳವರೆಗೆ: ಕೋಷ್ಟಕ ಅಥವಾ CSV ಆಯ್ಕೆಯನ್ನು ಬಳಸಬಹುದು. ಎರಡೂ ಸಂದರ್ಭಗಳಲ್ಲಿ, ದತ್ತಾಂಶವು ಕೋಷ್ಟಕದಲ್ಲಿ ಪ್ರತಿಫಲಿಸುತ್ತದೆ.
  2. 50 ಕ್ಕಿಂತ ಹೆಚ್ಚಿನ ದಾಖಲೆಗಳ ಸಂಖ್ಯೆಗೆ: ಕೇವಲ CSV ಆಯ್ಕೆಯನ್ನು ಮಾತ್ರ ಬಳಸಬಹುದು. ದತ್ತಾಂಶಗಳನ್ನು CSV ಅಡಕದ ರೂಪದಲ್ಲೇ ಪ್ರದರ್ಶಿಸಲಾಗುತ್ತದೆ.
  3. CSV ಅಪ್‌ಲೋಡ್ ಮಾಡಿ ಆಯ್ಕೆಯನ್ನು ಬಳಸುವಾಗ, ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:-

“ಎಕ್ಸೆಲ್ ಮಾದರಿಯನ್ನು ಡೌನ್‌ಲೋಡ್ ಮಾಡಿ → ದಾಖಲೆಗಳನ್ನು ಸೇರಿಸಿ → ಎಕ್ಸೆಲ್ ಮಾದರಿಯನ್ನು .csv ಫೈಲ್‌ಗೆ ಪರಿವರ್ತಿಸಿ → .csv ಫೈಲ್ ಅನ್ನು ಅಪ್‌ಲೋಡ್ ಮಾಡಿ”

  1. CSV ಫೈಲ್ ಅನ್ನು ಅಪ್‌ಲೋಡ್ ಮಾಡಿದಾಗಲೆಲ್ಲಾ, ಅಸ್ತಿತ್ವದಲ್ಲಿರುವ ದಾಖಲೆಗಳು/ದತ್ತಾಂಶ ಯಾವುದಾದರೂ ಇದ್ದರೆ ಇದು ಅದನ್ನೆಲ್ಲಾ ಅತಿಕ್ರಮಿಸುತ್ತದೆ. ಹಾಗೂ ಹಳೆಯ ದಾಖಲೆಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಇತ್ತೀಚಿನ CSV ಮೂಲಕ ಅಪ್‌ಲೋಡ್ ಮಾಡಿದ ದಾಖಲೆಗಳನ್ನು ಪರಿಗಣಿಸಲಾಗುತ್ತದೆ.

12. ಸಲ್ಲಿಕೆಯಾದ ಫಾರ್ಮ್ 10BB ಯನ್ನು (ಮೌಲ್ಯಮಾಪನ ವರ್ಷ 2023-24 ರ ನಂತರದ) ಪರಿಷ್ಕರಿಸಬಹುದೇ?

ಹೌದು, ಸಲ್ಲಿಸಿದ ಫಾರ್ಮ್ 10BB ಗಾಗಿ ಪರಿಷ್ಕರಣೆ ಆಯ್ಕೆ ಲಭ್ಯವಿದೆ.

13. ಫಾರ್ಮ್ ಭರ್ತಿ ಮಾಡಲು ಯಾವುದೇ ಸೂಚನೆ ಅಥವಾ ಮಾರ್ಗದರ್ಶನ ಲಭ್ಯವಿದೆಯೇ?

ಹೌದು, CA ನಿಯೋಜನೆಯನ್ನು ಸ್ವೀಕರಿಸಿ ತನ್ನ ARCA ಲಾಗಿನ್ ಮೂಲಕ ಫಾರ್ಮ್ ಭರ್ತಿ ಮಾಡಲು ಮುಂದುವರಿದ ನಂತರ, ಅವರು ಫಾರ್ಮ್ 10BB (ಮೌಲ್ಯಮಾಪನ ವರ್ಷ 2023-24 ರಿಂದ ಮುಂದಕ್ಕೆ) ಪ್ಯಾನಲ್ ಪರದೆಯ ಮೇಲ್ಭಾಗದಲ್ಲಿ ಲಭ್ಯವಿರುವ ಸೂಚನಾ ಫೈಲ್ ಅನ್ನು ಡೌನ್‌ಲೋಡ್ ಮಾಡಬಹುದು.

ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ, ಸೂಚನಾ ಫೈಲ್ ಅನ್ನು ಡೌನ್‌ಲೋಡ್ ಮಾಡಬಹುದು.

14. ಫಾರ್ಮ್ ಅನ್ನು ಸಲ್ಲಿಸುವಾಗ ಯಾವುದೇ ಅಡಕಗಳನ್ನು ಅಡಕಗೊಳಿಸುವ ಅಗತ್ಯವಿದೆಯೇ?

ಹೌದು, ಕೆಳಗಿನ ಅಡಕಗಳನ್ನು "ಅಡಕಗಳು" ಫಾರ್ಮ್‌ನ ಪ್ಯಾನೆಲ್ ಅಡಿಯಲ್ಲಿ ಅಡಕಗೊಳಿಸುವುದು ಕಡ್ಡಾಯವಾಗಿದೆ-

  1. ಆದಾಯ ಮತ್ತು ವೆಚ್ಚದ ಖಾತೆ/ಲಾಭ ಮತ್ತು ನಷ್ಟದ ಖಾತೆ
  2. ಬ್ಯಾಲೆನ್ಸ್ ಶೀಟ್

"ವಿವಿಧ ಅಡಕಗಳು" ಎಂಬ ಹೆಸರಿನಲ್ಲಿ ಐಚ್ಛಿಕವಾದುದನ್ನು ಅಡಕಗೊಳಿಸುವ ಆಯ್ಕೆ ಇದೆ. ಅಲ್ಲಿ ಯಾವುದೇ ಇತರ ಸಂಬಂಧಿತ ದಾಖಲೆಯನ್ನು ಅಡಕಗೊಳಿಸಬಹುದು.

ಪ್ರತಿ ಅಡಕದ ಗಾತ್ರವು 5MB ಮೀರಬಾರದು ಎಂಬುದನ್ನು ದಯವಿಟ್ಟು ಗಮನಿಸಿ. ಎಲ್ಲಾ ಅಡಕಗಳು PDF/ZIP ಸ್ವರೂಪದಲ್ಲಿರಬೇಕು ಮತ್ತು ZIP ಫೈಲ್‌ನಲ್ಲಿರುವ ಎಲ್ಲಾ ಫೈಲ್‌ಗಳು PDF ಸ್ವರೂಪದಲ್ಲಿರುವ ಫೈಲ್‌ಗಳನ್ನು ಮಾತ್ರ ಹೊಂದಿರಬೇಕು.

15. ಫಾರ್ಮ್ 10BB (ಮೌಲ್ಯಮಾಪನ ವರ್ಷ 2023-24 ರ ನಂತರ) ಸಲ್ಲಿಸಿದ ನಂತರ ಸಲ್ಲಿಸಿದ ಫಾರ್ಮ್ ವಿವರಗಳನ್ನು ಎಲ್ಲಿ ವೀಕ್ಷಿಸಬೇಕು?

ಸಲ್ಲಿಸಲಾದ ಫಾರ್ಮ್ ಗಳ ವಿವರಗಳನ್ನು ಇ-ಸಲ್ಲಿಕೆ ಟ್ಯಾಬ್ → ಆದಾಯ ತೆರಿಗೆ ಫಾರ್ಮ್‌ಗಳು → ಸಲ್ಲಿಸಲಾದ ಫಾರ್ಮ್‌ಗಳನ್ನುವೀಕ್ಷಿಸಿ → ಆದಾಯ ತೆರಿಗೆ ಕಾಯ್ದೆ 1961 ಪ್ರಕಾರದ ಫಾರ್ಮ್‌ಗಳು ಅಡಿಯಲ್ಲಿ CA ಮತ್ತು ತೆರಿಗೆದಾರರ ಲಾಗಿನ್ ಮೂಲಕ ವೀಕ್ಷಿಸಬಹುದು.

16. ಫಾರ್ಮ್ 10BB (A.Y. 2023-24 ರಿಂದ) ಆಫ್‌ಲೈನ್ ಯುಟಿಲಿಟಿಯನ್ನು ನಾನು ಹೇಗೆ ಡೌನ್‌ಲೋಡ್ ಮಾಡಬಹುದು?

ಹೋಮ್‌ ಪೇಜ್‌ಗೆ ಹೋಗಿ | ಆದಾಯ ತೆರಿಗೆ ಇಲಾಖೆ → ಡೌನ್‌ಲೋಡ್ಸ್‌ → ಆದಾಯ ತೆರಿಗೆ ಫ಼ಾರ್ಮಗಳು → ಫಾರ್ಮ್ 10BB (ಮೌಲ್ಯಮಾಪನ ವರ್ಷ 2023-24 ರಿಂದ ಮುಂದಕ್ಕೆ) → ಯುಟಿಲಿಟಿ ಫಾರ್ಮ್.‌

ಪರ್ಯಾಯವಾಗಿ, ಫಾರ್ಮ್ ಅನ್ನು ಅಪ್‌ಲೋಡ್ ಮಾಡುವ ಸಮಯದಲ್ಲಿ ಆಫ್‌ಲೈನ್ ಸಲ್ಲಿಕೆ ಆಯ್ಕೆಯ ಅಡಿಯಲ್ಲಿ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ CA ಈ ಮಾರ್ಗವನ್ನು ಪ್ರವೇಶಿಸಬಹುದು.

ಗಮನಿಸಿ: ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಲಭ್ಯವಿರುವ ಯುಟಿಲಿಟಿಯ ಇತ್ತೀಚಿನ ಆವೃತ್ತಿಯನ್ನೇ ನೀವು ಯಾವಾಗಲೂ ಬಳಸುತ್ತೀರೆಂದು ಖಚಿತಪಡಿಸಿಕೊಳ್ಳಿ.

17. ಫಾರ್ಮ್ 10BB ಯನ್ನು (ಮೌಲ್ಯಮಾಪನ ವರ್ಷ 2023-24 ರ ನಂತರ) ERI ಗಳ ಮೂಲಕ ಅಂದರೆ ಥರ್ಡ್ ಪಾರ್ಟಿ ಸಾಫ್ಟ್‌ವೇರ್ ಮೂಲಕ ಸಲ್ಲಿಸಬಹುದೇ?

ಹೌದು, "ಆಫ್‌ಲೈನ್" ಸಲ್ಲಿಕೆ ವಿಧಾನವನ್ನು ಬಳಸಿಕೊಂಡು ERI ಗಳ ಮೂಲಕವೂ ಈ ಫಾರ್ಮ್ ಅನ್ನು ಸಲ್ಲಿಸಬಹುದು.

18. ನನ್ನ ಆದಾಯವು ಮೂಲಭೂತ ವಿನಾಯಿತಿ ಮಿತಿಗಿಂತ ಕಡಿಮೆಯಿದ್ದರೆ ಫಾರ್ಮ್ 10BB ಅನ್ನು ಸಲ್ಲಿಸುವ ಅಗತ್ಯವಿದೆಯೇ?

ದಯವಿಟ್ಟು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 10 ರ ಅಧಿನಿಯಮ (23C) ಗೆ ಸೇರಿದ ಹತ್ತನೇ ಉಪಬಂಧದ ಅಧಿನಿಯಮ (b) ಮತ್ತು ಸೆಕ್ಷನ್ 12A (1) ರ ಅಧಿನಿಯಮ (b) ಯ ಉಪ-ಅಧಿನಿಯಮ (ii) ರ ಸಂಬಂಧಿತ ನಿಬಂಧನೆಗಳನ್ನು ನೋಡಿ ಜೊತೆಗೆ ಫಾರ್ಮ್ 10BB ಯ ಅನ್ವಯಕ್ಕಾಗಿ ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 16CC ಮತ್ತು ನಿಯಮ 17B ಯನ್ನು ಜೊತೆಗೆ ಓದಿಕೊಳ್ಳಿ.

19. ಫಾರ್ಮ್ 10BB ನಲ್ಲಿ, ಅಕೌಂಟೆಂಟ್ ಪ್ಯಾನಲ್ ವರದಿಯ ಅಡಿಯಲ್ಲಿ, "ಸಹಕಾರ ಸಂಘ/ ಕಂಪನಿ/ಲಾಭರಹಿತ ಸಂಸ್ಥೆ/ಇತ್ಯಾದಿ" ಅಯ್ದುಕೊಳ್ಳಲು ಸಾಧ್ಯವಿಲ್ಲ. ನಾನು ಯಾವ ಆಯ್ಕೆಯನ್ನು ಆರಿಸಬೇಕು?

ಫಾರ್ಮ್ 10BB "ಅಕೌಂಟೆಂಟ್‌ನಿಂದ ವರದಿ" ಪ್ಯಾನೆಲ್ ಅಡಿಯಲ್ಲಿ ಲೆಕ್ಕಪರಿಶೋಧಿತ ಘಟಕದ (auditee) ವಿವರಗಳ ಆಯ್ಕೆಗಾಗಿ ಈ ಕೆಳಗಿನ ಆಯ್ಕೆಗಳನ್ನು ನೀಡುತ್ತದೆ-ನಿಧಿ, ಟ್ರಸ್ಟ್, ಸಂಸ್ಥೆ, ವಿಶ್ವವಿದ್ಯಾಲಯ, ಇತರ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಅಥವಾ ಇತರ ವೈದ್ಯಕೀಯ ಸಂಸ್ಥೆ.

ನೀವು ಲೆಕ್ಕಪರಿಶೀಲನೆಗೆ ಒಳಪಡುವ ಸಂಸ್ಥೆಗೆ (Auditee) ತಾತ್ಕಾಲಿಕ ಅಥವಾ ಅಂತಿಮ ನೋಂದಣಿ ನೀಡಲಾದ ಸಂಸ್ಥೆಯ ಪ್ರಕಾರಕ್ಕೆ ಅನುಗುಣವಾಗಿ, ಅಥವಾ ಸಂಸ್ಥೆಯು ನಡೆಸುತ್ತಿರುವ ಚಟುವಟಿಕೆಗಳ ಸ್ವಭಾವವನ್ನು ಆಧರಿಸಿ, ಅಥವಾ ಆಧಾರವಾಗಿ ಪರಿಗಣಿಸಬಹುದಾದ ಯಾವುದೇ ಇತರ ಸಂಬಂಧಿತ ಅಂಶವನ್ನು ಪರಿಗಣಿಸಿ ಸೂಕ್ತವಾದ ಆಯ್ಕೆಯನ್ನು ಆರಿಸಬಹುದು.

20. ನನಗೆ ಸಲ್ಲಿಕೆ ವಿಫಲವಾಗುತ್ತಿದೆ. ಫಾರ್ಮ್ ಸಲ್ಲಿಸುವಾಗ, ‌ಸಿಸ್ಟಮ್‌ ನಲ್ಲಿ “ಅಮಾನ್ಯ ಪೂರ್ಣ ಹೆಸರು”, “ಫ಼್ಲಾಗ್”, “ಇನ್‌ಪುಟ್”, “ಶೇಕಡಾವಾರು”, “ಫ್ಲ್ಯಾಟ್”, “ವಿಳಾಸದ ಸಾಲು”, ಮತ್ತು “ಪಿನ್ ಕೋಡ್”ಮುಂತಾದ ದೋಷಗಳು ತೋರಿಸುತ್ತಿವೆ. ಈ ಸಮಸ್ಯೆಯನ್ನು ಪರಿಹರಿಸಲು ನಾನು ಏನು ಮಾಡಬೇಕು?

ದಯವಿಟ್ಟು ತೆರಿಗೆದಾರ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಪ್ರೊಫೈಲ್‌ನಲ್ಲಿ ಪ್ರಮುಖ ವ್ಯಕ್ತಿವಿವರಗಳು ಸೇರಿದಂತೆ ಎಲ್ಲಾ ಕಡ್ಡಾಯ ಕ್ಷೇತ್ರಗಳು ಪೂರ್ಣವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ನಂತರ, ಹಳೆಯ ಕರಡನ್ನು ಅಳಿಸಿ ಮತ್ತು ಹೊಸ ಫಾರ್ಮ್‌ ಅನ್ನು ಪುನಃ ಸಲ್ಲಿಸಲು ಪ್ರಯತ್ನಿಸಿ.

21. ಸೆಕ್ಷನ್ 13(3)ರಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ವ್ಯಕ್ತಿಯ ವಿವರಗಳನ್ನು, ಫಾರ್ಮ್ 10BB ನ ಕ್ರಮ ಸಂಖ್ಯೆ 28ರಲ್ಲಿ ಒದಗಿಸುವುದು ಕಡ್ಡಾಯವೇ, ಅದು ಸೆಕ್ಷನ್ 13ರ ಉಪವಿಭಾಗ (1)ರ ಕ್ಲಾಸ್ (c) ಅಥವಾ ಉಪವಿಭಾಗ (2)ರಲ್ಲಿ ಉಲ್ಲೇಖಿಸಲಾದ ಷರತ್ತುಗಳು/ಮಾಪನಗಳು ಅನ್ವಯಿಸದಿದ್ದರೂ ಒಪ್ಪಿಗೆಯೇ?

ಕ್ರಮ ಸಂಖ್ಯೆ 28ರಲ್ಲಿ ಅಗತ್ಯವಿರುವ ನಿರ್ದಿಷ್ಟ ವ್ಯಕ್ತಿಗಳ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ನೀವು, 09 ಅಕ್ಟೋಬರ್ 2023ರ ಸುತ್ತೋಲೆ ಸಂಖ್ಯೆ 17/2023 ಅನ್ನು ನೋಡಬಹುದು ಹಾಗೂ ಲಭ್ಯವಿರುವ ವ್ಯಕ್ತಿಗಳ ವಿವರಗಳನ್ನು ಒದಗಿಸಬಹುದು.

22. AY 2023-24ಕ್ಕಾಗಿ ಫಾರ್ಮ್ 10BB ಗಾಗಿ UDIN ಅನ್ನು ರಚಿಸುವುದು ಹೇಗೆ?

ದಯವಿಟ್ಟು ಗಮನಿಸಿ, ಮೌಲ್ಯಮಾಪನ ವರ್ಷ 2023-24 ರಿಂದ ಮುಂದಕ್ಕೆ ಅನ್ವಯವಾಗುವ ಮರು-ಅಧಿಸೂಚಿತ ಫಾರ್ಮ್ 10BB ಗಾಗಿ, “UDIN ವಿವರಗಳನ್ನು ವೀಕ್ಷಿಸಿ/ನವೀಕರಿಸಿ” ನಲ್ಲಿ " ಫಾರ್ಮ್ 10BB - ಹತ್ತನೇ ಪ್ರಾವಿಸೋದಿಂದ ಸೆಕ್ಷನ್ 10(23C)(b)(iv)/(v)/(vi)/(via) ಮತ್ತು ಸೆಕ್ಷನ್ 12A(1)(b)(ii)" ಎಂಬ ಫಾರ್ಮ್‌ನ ಹೆಸರನ್ನು ಆಯ್ಕೆ ಮಾಡಿ UDIN ಅನ್ನು ರಚಿಸಬೇಕು.