Do not have an account?
Already have an account?

ಫಾರ್ಮ್ 52A

ಫಾರ್ಮ್ 52A ಕುರಿತು ಬಳಕೆದಾರರ ಕೈಪಿಡಿ

1. ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಫಾರ್ಮ್ 52A ಅನ್ನು ಯಾರು ಸಲ್ಲಿಸಬೇಕು?

ಸಿನಿಮಾಟೋಗ್ರಾಫ್ ಚಲನಚಿತ್ರದ ನಿರ್ಮಾಣವನ್ನು ನಿರ್ವಹಿಸುವ ಅಥವಾ ಯಾವುದೇ ನಿರ್ದಿಷ್ಟ ಚಟುವಟಿಕೆಯಲ್ಲಿ ತೊಡಗಿರುವ, ಅಥವಾ ಎರಡರಲ್ಲೂ ತೊಡಗಿರುವ, ಯಾವುದೇ ವ್ಯಕ್ತಿ ಯಾವುದೇ ಹಣಕಾಸು ವರ್ಷದಲ್ಲಿ ಸಂಪೂರ್ಣ ಅಥವಾ ಯಾವುದೇ ಭಾಗದಲ್ಲಿ, ಅಂತಹ ಉತ್ಪಾದನೆ ಅಥವಾ ನಿರ್ದಿಷ್ಟ ಚಟುವಟಿಕೆಯಲ್ಲಿ ಅವರು ತೊಡಗಿಸಿಕೊಂಡಿರುವ ಪ್ರತಿಯೊಬ್ಬ ವ್ಯಕ್ತಿಗೆ ಅವರು ಮಾಡಿದ ಅಥವಾ ಅವರಿಂದ ಮಾಡಬೇಕಾದ ಒಟ್ಟು ಮೊತ್ತದಲ್ಲಿ ಐವತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಎಲ್ಲಾ ಪಾವತಿಗಳ ವಿವರಗಳನ್ನು ಸಲ್ಲಿಸಬೇಕು.

2. ನಿರ್ದಿಷ್ಟಪಡಿಸಿದ ಚಟುವಟಿಕೆಗಳು ಯಾವುವು?

ನಿರ್ದಿಷ್ಟಪಡಿಸಿದ ಚಟುವಟಿಕೆ ಎಂದರೆ ಯಾವುದೇ ಈವೆಂಟ್ ನಿರ್ವಹಣೆ, ಸಾಕ್ಷ್ಯಚಿತ್ರ ಉತ್ಪಾದನೆ, ದೂರದರ್ಶನದಲ್ಲಿ ಅಥವಾ ವೇದಿಕೆ ಮೇಲಿನ ಕಾರ್ಯಕ್ರಮ ಅಥವಾ ಯಾವುದೇ ಅಂಥ ವೇದಿಕೆಗಳಲ್ಲಿ ಪ್ರಸಾರ ಮಾಡುವ ಕಾರ್ಯಕ್ರಮಗಳ ಉತ್ಪಾದನೆ, ಕ್ರೀಡಾಕೂಟ ನಿರ್ವಹಣೆ, ಇತರ ಪ್ರದರ್ಶನ ಕಲೆಗಳು ಅಥವಾ ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್ ಅಧಿಸೂಚನೆಯ ಮೂಲಕ ಈ ಬಗ್ಗೆ ನಿರ್ದಿಷ್ಟಪಡಿಸಬಹುದಾದ ಯಾವುದೇ ಇತರ ಚಟುವಟಿಕೆ.

3. ಫಾರ್ಮ್ 52A ಅನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಹಿಂದಿನ ವರ್ಷದ ಅಂತ್ಯದಿಂದ 60 ದಿನಗಳ ಒಳಗೆ ಫಾರ್ಮ್ 52A ಅನ್ನು ಸಲ್ಲಿಸಬೇಕಾಗುತ್ತದೆ.

4. ಫಾರ್ಮ್ 52A ಸಲ್ಲಿಸಲು ಪೂರ್ವಾಪೇಕ್ಷಿತಗಳು ಯಾವುವು?

ಫಾರ್ಮ್ 52A ಸಲ್ಲಿಸಲು ಪೂರ್ವಾಪೇಕ್ಷಿತಗಳು ಹೀಗಿವೆ:

  • ತೆರಿಗೆದಾರರು PAN ಹೊಂದಿರಬೇಕು
  • ತೆರಿಗೆದಾರರ PAN ಸಕ್ರಿಯವಾಗಿರಬೇಕು ಮತ್ತು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟಿರಬೇಕು.

5. ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಫಾರ್ಮ್ 52A ಅನ್ನು ಸಲ್ಲಿಸುವ ಪ್ರಕ್ರಿಯೆ ಏನು?

ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಫಾರ್ಮ್ 52A ಅನ್ನು ಸಲ್ಲಿಸಲು ಈ ಕೆಳಗಿನ ಹಂತಗಳು:

ಹಂತ 1: ತೆರಿಗೆದಾರರು ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು ಅಂದರೆ www.incometax.gov.in ಉದಾಹರಣೆಗಳು PAN  ಅನ್ನು ಬಳಕೆದಾರ ಐಡಿ ಆಗಿ ಬಳಸಿ

ಹಂತ 2: ಇ-ಸಲ್ಲಿಕೆಗೆ ನ್ಯಾವಿಗೇಟ್ ಮಾಡಿ - ಆದಾಯ ತೆರಿಗೆ ಫಾರ್ಮ್‌ಗಳು - ಆದಾಯ ತೆರಿಗೆ ಫಾರ್ಮ್‌ಗಳನ್ನು ಸಲ್ಲಿಸಿ - 1961 ರ ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಫಾರ್ಮ್ 52A

ಹಂತ 3: 4 ಪ್ಯಾನೆಲ್‌ಗಳಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ, “ಮೂಲ ಮಾಹಿತಿ”, “ಭಾಗ - A”, “ಭಾಗ - B”, “ಪರಿಶೀಲನೆ” ಮತ್ತು ಅನ್ವಯವಾಗುವಲ್ಲೆಲ್ಲಾ CSV ಫೈಲ್‌ಗಳನ್ನು ಸೇರಿಸಿ.

ಹಂತ 4: ಪೂರ್ವವೀಕ್ಷಣೆ ಪರದೆಯಲ್ಲಿ ವಿವರಗಳನ್ನು ಪರಿಶೀಲಿಸಿ ಮತ್ತು ಎಲ್ಲಾ ವಿವರಗಳನ್ನು ಸರಿಯಾಗಿ ಒದಗಿಸಿದ್ದರೆ ಫಾರ್ಮ್ ಅನ್ನು ಇ-ಪರಿಶೀಲಿಸುವತ್ತ ಮುಂದುವರಿಯಿರಿ.

6. ಫಾರ್ಮ್ 52A ಅನ್ನು ಹೇಗೆ ಪರಿಶೀಲಿಸಬಹುದು?

ನೀವು EVC ಅಥವಾ DSC ಬಳಸಿಕೊಂಡು ಫಾರ್ಮ್ 52A ಅನ್ನು ಇ-ಪರಿಶೀಲಿಸಬಹುದು.

ಇನ್ನಷ್ಟು ತಿಳಿದುಕೊಳ್ಳಲು ನೀವು ಇ-ದೃಢೀಕರಿಸಿ ಮಾಡುವುದು ಹೇಗೆ (https://www.incometax.gov.in/iec/foportal//help/how-to-e-verify- your-e-filing-return) ಬಳಕೆದಾರ ಕೈಪಿಡಿಯನ್ನು ನೋಡಬಹುದು.

7. ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಫಾರ್ಮ್ 52A ಅನ್ನು ಸಲ್ಲಿಸಲು ಯಾವ ಮಾಹಿತಿ/ವಿವರಗಳು ಬೇಕಾಗುತ್ತವೆ?

ಫಾರ್ಮ್ 52A ಅನ್ನು ಸಲ್ಲಿಸಲು ಈ ಕೆಳಗಿನ ಮಾಹಿತಿ/ ವಿವರಗಳು ಅಗತ್ಯವಿದೆ:

  • ಹಿಂದಿನ ವರ್ಷದಲ್ಲಿ ನಿರ್ಮಿಸಲಾದ ಎಲ್ಲಾ ಸಿನಿಮಾಟೋಗ್ರಾಫ್ ಚಲನಚಿತ್ರಗಳ ವಿವರಗಳು ಅಥವಾ ಕೈಗೊಂಡ ನಿರ್ದಿಷ್ಟ ಚಟುವಟಿಕೆಗಳು ಅಥವಾ ಎರಡರ ವಿವರಗಳು, ಅಂದರೆ ಸಿನಿಮಾಟೋಗ್ರಾಫ್ ಚಲನಚಿತ್ರಗಳ ಅಥವಾ ಕೈಗೊಂಡ ನಿರ್ದಿಷ್ಟ ಚಟುವಟಿಕೆಯ ಹೆಸರು ಅಥವಾ ಎರಡೂ, ಪ್ರಾರಂಭದ ದಿನಾಂಕ ಮತ್ತು ಪೂರ್ಣಗೊಂಡಿದ್ದಲ್ಲಿ, ಪೂರ್ಣಗೊಂಡ ದಿನಾಂಕ
  • ಸಿನೆಮಾಟೋಗ್ರಾಫ್ ಚಲನಚಿತ್ರಗಳ ನಿರ್ಮಾಣದಲ್ಲಿ ಅಥವಾ ಕೈಗೊಂಡ ನಿರ್ದಿಷ್ಟ ಚಟುವಟಿಕೆಗಳು ಅಥವಾ ಎರಡರಲ್ಲಿ ಯಾವ ವ್ಯಕ್ತಿಗಳನ್ನು ತೊಡಗಿಸಿಕೊಳ್ಳುವದಕ್ಕಾಗಿ ರೂ. 50,000 ಗಿಂತ ಹೆಚ್ಚು ಪಾವತಿ ಮಾಡಲಾಗಿದೆಯೋ/ ಮಾಡಬೇಕಾಗಿದೆಯೋ ಅಂಥ ವ್ಯಕ್ತಿಗಳ ಹೆಸರು, PAN, ಆಧಾರ್ (ಲಭ್ಯವಿದ್ದರೆ), ವಿಳಾಸ.
  • ನಗದು ರೂಪದಲ್ಲಿ ಪಾವತಿಸಿದ ಮೊತ್ತ/ ನಗದು ಹೊರತುಪಡಿಸಿ/ ಅಂತಹ ವ್ಯಕ್ತಿಗಳಿಗೆ ಬಾಕಿ ಇರುವ ಮೊತ್ತ
  • ಅಂತಹ ವ್ಯಕ್ತಿಗಳಿಗೆ ಪಾವತಿಸಲಾದ/ಪಾವತಿಸಬೇಕಾದ ಮೊತ್ತಗಳ ಮೇಲೆ ಮೂಲದಲ್ಲೇ ಕಡಿತಗೊಳಿಸಲಾದ ತೆರಿಗೆಗಳ ವಿವರಗಳು/ ಅಂದರೆ ಕಡಿತಗೊಳಿಸಲಾದ ತೆರಿಗೆಯ ಮೊತ್ತ ಮತ್ತು ಯಾವ ಸೆಕ್ಷನ್ ಅಡಿಯಲ್ಲಿ ತೆರಿಗೆ ಕಡಿತಗೊಳಿಸಲಾಗಿದೆ ಎಂಬ ವಿವರಗಳು.

8. ಫಾರ್ಮ್ 52A ನ ಭಾಗ - A ನಲ್ಲಿ ವಿವರಗಳನ್ನು ನಾನು ಹೇಗೆ ಭರ್ತಿ ಮಾಡಬಹುದು?

ಸದರಿ ವರ್ಷದಲ್ಲಿ ನಿರ್ಮಿಸಲಾದ ಸಿನಿಮಾಟೋಗ್ರಾಫ್ ಚಲನಚಿತ್ರಗಳ ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ವಿವರಗಳನ್ನು ಒದಗಿಸಲು ತೆರಿಗೆದಾರರು 2 ಆಯ್ಕೆಗಳನ್ನು ಹೊಂದಿದ್ದಾರೆ:

  1. ವಿವರಗಳನ್ನು ಸೇರಿಸಿ:
    • ತೆರಿಗೆದಾರರು ತಯಾರಿಸಿದ ಪ್ರತಿಯೊಂದು ಸಿನಿಮಾಟೋಗ್ರಾಫ್ ಚಿತ್ರ ಅಥವಾ ಸ್ವತಃ ಕೈಗೊಂಡ ಪ್ರತಿಯೊಂದು ನಿರ್ದಿಷ್ಟ ಚಟುವಟಿಕೆಗೆ ಪ್ರತ್ಯೇಕ ಸಾಲನ್ನು ಸೇರಿಸುವ ಮೂಲಕ, ಅವುಗಳ ಹೆಸರುಗಳನ್ನು ಕೋಷ್ಟಕದಲ್ಲಿ ನಮೂದಿಸಬೇಕೆಂದು ನಿರೀಕ್ಷಿಸಲಾಗಿದೆ.
    • ಮೂಲ ಮಾಹಿತಿ ಪ್ಯಾನೆಲ್‌ನಲ್ಲಿ ಉಲ್ಲೇಖಿಸಿದಂತೆ ಎಲ್ಲಾ ಸಿನಿಮಾಟೋಗ್ರಾಫ್ ಚಲನಚಿತ್ರಗಳು ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ವಿವರಗಳನ್ನು ಒದಗಿಸಿದ ನಂತರವೇ ಭಾಗ - A ಅನ್ನು ಉಳಿಸಲು "ಉಳಿಸು" ಗುಂಡಿಯನ್ನು ಸಕ್ರಿಯಗೊಳಿಸಲಾಗುತ್ತದೆ.
    • ಭಾಗ - A ನಲ್ಲಿ ಒದಗಿಸಲಾದ ಸಿನಿಮಾಟೋಗ್ರಾಫ್ ಫಿಲ್ಮ್‌ಗಳು ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ವಿವರಗಳನ್ನು, ಮೂಲ ಮಾಹಿತಿ ಪ್ಯಾನೆಲ್‌ನಲ್ಲಿ ಉಲ್ಲೇಖಿಸಿದಂತೆ ನಿರ್ಮಿಸಲಾದ ಸಿನಿಮಾಟೋಗ್ರಾಫ್ ಫಿಲ್ಮ್‌ಗಳು ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ಎಣಿಕೆಯೊಂದಿಗೆ ಮೌಲ್ಯೀಕರಿಸಲಾಗುತ್ತದೆ. ಎಲ್ಲಾ ಸಿನಿಮಾಟೋಗ್ರಾಫ್ ಫಿಲ್ಮ್‌ಗಳು ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳಿಗೆ ವಿವರಗಳನ್ನು ಒದಗಿಸಿದ ನಂತರ, "ವಿವರವನ್ನು ಸೇರಿಸಿ" ಬಟನ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನೀವು ಹೆಚ್ಚಿನ ಸಿನಿಮಾಟೋಗ್ರಾಫ್ ಫಿಲ್ಮ್‌ಗಳು ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳನ್ನು ಸೇರಿಸಲು ಬಯಸಿದರೆ, ಹೊಸ ವಿವರಗಳನ್ನು ಸೇರಿಸಲು ಸಾಧ್ಯವಾಗುವಂತೆ ದಯವಿಟ್ಟು ಮೊದಲು ಮೂಲ ಮಾಹಿತಿ ಪ್ಯಾನೆಲ್‌ನಲ್ಲಿ ಎಣಿಕೆಯನ್ನು ಸರಿಪಡಿಸಿ.
  1. CSV ಸೇರಿಸಿ:
    • ತೆರಿಗೆದಾರರು ನಿರ್ಮಿಸಿದ ಸಿನಿಮಾಟೋಗ್ರಾಫ್ ಚಲನಚಿತ್ರಗಳ ಹೆಸರುಗಳನ್ನು ಅಥವಾ ಕೈಗೊಂಡ ನಿರ್ದಿಷ್ಟ ಚಟುವಟಿಕೆಗಳ ವಿವರಗಳನ್ನು ಎಕ್ಸೆಲ್ ಟೆಂಪ್ಲೇಟ್‌ನಲ್ಲಿ ನಮೂದಿಸಬೇಕೆಂದು ನಿರೀಕ್ಷಿಸಲಾಗಿದೆ.
    • ಎಕ್ಸೆಲ್ ಟೆಂಪ್ಲೇಟ್‌ನಲ್ಲಿ ಎಲ್ಲಾ ವಿವರಗಳನ್ನು ಪೂರ್ಣಗೊಳಿಸಿದ ನಂತರ, ಅದನ್ನು CSVಗೆ ಪರಿವರ್ತನೆಗೊಳಿಸಿ ಮತ್ತು ನಂತರ CSV ಅನ್ನು ಅಪ್ಲೋಡ್ ಮಾಡಿ.
    • ಯಾವುದೇ ದೋಷಗಳಿಲ್ಲದೆ ಅಪ್‌ಲೋಡ್ ಮಾಡಿದ CSV ಅನ್ನು ಮೌಲ್ಯೀಕರಿಸಿದ ನಂತರ, "ಉಳಿಸು" ಬಟನ್ ಸಕ್ರಿಯಗೊಳ್ಳುತ್ತದೆ.

ದಯವಿಟ್ಟು ಗಮನಿಸಿ: ತೆರಿಗೆದಾರರು ಕೆಲವು ಸಿನಿಮಾಟೋಗ್ರಾಫ್ ಫಿಲ್ಮ್‌ಗಳು ಅಥವಾ ನಿರ್ದಿಷ್ಟ ಚಟುವಟಿಕೆಗಳಿಗೆ ವಿವರಗಳನ್ನು ಸೇರಿಸಿ ಮತ್ತು ವಿವರಗಳನ್ನು "ಉಳಿಸಿ" ಆಯ್ಕೆಮಾಡಿದ ನಂತರ CSV ಅನ್ನು ಸೇರಿಸಿದರೆ ಅಥವಾ ಪ್ರತಿಯಾಗಿ ಮಾಡಿದಲ್ಲಿ, ಮೊದಲು ಆಯ್ಕೆ ಮಾಡಿದ ಆಯ್ಕೆಗಾಗಿ ಉಳಿಸಲಾದ ದ‌ತ್ತಾಂಶವನ್ನು ಅಳಿಸಲಾಗುತ್ತದೆ. ತೆರಿಗೆದಾರರು ವಿವರಗಳನ್ನು ಮತ್ತೆ ಭರ್ತಿ ಮಾಡಿ ಭಾಗ - A ಅನ್ನು ಉಳಿಸಬೇಕಾಗುತ್ತದೆ.

9. ಭಾಗ - ಎ ಗಾಗಿ csv ಅನ್ನು ಅಪ್‌ಲೋಡ್ ಮಾಡಲು ಪ್ರಯತ್ನಿಸಿದಾಗ ನನಗೆ ಈ ಕೆಳಗಿನ ದೋಷಗಳು ಬರುತ್ತಿವೆ. ಇದರ ಅರ್ಥವೇನು ಮತ್ತು ನಾನು ಅದನ್ನು ಹೇಗೆ ಸರಿಪಡಿಸಬೇಕು?

ಕ್ರ. ಸಂ.

ದೋಷ ಸಂದೇಶ

ಪರಿಹಾರ/ ಕ್ರಿಯೆ ಅಗತ್ಯವಿದೆ

1.

CSVಯಲ್ಲಿ ನಮೂದಿಸಲಾದ ಸಿನಿಮಾಟೋಗ್ರಾಫ್ ಫಿಲ್ಮ್‌ಗಳ ಸಂಖ್ಯೆಯು ಮೂಲ ಮಾಹಿತಿ ಪ್ಯಾನೆಲ್ನಲ್ಲಿ ಉಲ್ಲೇಖಿಸಲಾದ ಸಿನಿಮಾಟೋಗ್ರಾಫ್ ಫಿಲ್ಮ್‌ಗಳ ಸಂಖ್ಯೆಗೆ ಸಮನಾಗಿರುವುದಿಲ್ಲ.

ಸಿನಿಮಾಟೋಗ್ರಾಫ್ ಫಿಲ್ಮ್‌ಗಳ ವಿವರಗಳು ಮೂಲ ಮಾಹಿತಿ ಫಲಕದಲ್ಲಿ ಒದಗಿಸಲಾದ ಸಿನಿಮಾಟೋಗ್ರಾಫ್ ಫಿಲ್ಮ್‌ಗಳ ಎಣಿಕೆಗೆ ಸಮನಾಗಿಲ್ಲದಿದ್ದಾಗ ಈ ದೋಷ ಸಂದೇಶ ಬರುತ್ತದೆ. ದಯವಿಟ್ಟು ಫಾರ್ಮ್‌ನ ಮೂಲ ಮಾಹಿತಿ ಫಲಕದಲ್ಲಿ ನೀವು ವರದಿ ಮಾಡಿದ ಸಿನಿಮಾಟೋಗ್ರಾಫ್ ಫಿಲ್ಮ್‌ಗಳ ಎಣಿಕೆಗೆ ಸರಿಯಾಗಿ ಎಲ್ಲಾ ಸಿನಿಮಾಟೋಗ್ರಾಫ್ ಫಿಲ್ಮ್‌ಗಳ ವಿವರಗಳನ್ನು ಒದಗಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

2.

CSV ಯಲ್ಲಿ ನಮೂದಿಸಿದಂತೆ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ಸಂಖ್ಯೆಯು ಮೂಲ ಮಾಹಿತಿ ಪ್ಯಾನೆಲ್‌ನಲ್ಲಿ ಉಲ್ಲೇಖಿಸಿದಂತೆ ಕೈಗೊಳ್ಳಲಾದ ನಿರ್ದಿಷ್ಟ ಚಟುವಟಿಕೆಗಳ ಸಂಖ್ಯೆಗೆ ಸಮನಾಗಿಲ್ಲ.

ಸಿನಿಮಾಟೋಗ್ರಾಫ್ ಫಿಲ್ಮ್‌ಗಳ ವಿವರಗಳು ಮೂಲ ಮಾಹಿತಿ ಫಲಕದಲ್ಲಿ ಒದಗಿಸಲಾದ ಸಿನಿಮಾಟೋಗ್ರಾಫ್ ಫಿಲ್ಮ್‌ಗಳ ಎಣಿಕೆಗೆ ಸಮನಾಗಿಲ್ಲದಿದ್ದಾಗ ಈ ದೋಷ ಸಂದೇಶ ಬರುತ್ತದೆ. ಫಾರ್ಮ್‌ನ ಮೂಲ ಮಾಹಿತಿ ಫಲಕದಲ್ಲಿ ನೀವು ವರದಿ ಮಾಡಿದ ನಿರ್ದಿಷ್ಟ ಚಟುವಟಿಕೆಗಳ ಎಣಿಕೆಗೆ ಸರಿಯಾಗಿ ಎಲ್ಲಾ ನಿರ್ದಿಷ್ಟ ಚಟುವಟಿಕೆಗಳ ವಿವರಗಳನ್ನು ನೀವು ಒದಗಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

CSV ನಲ್ಲಿ ಅಗತ್ಯವಿರುವ ಎಲ್ಲಾ ತಿದ್ದುಪಡಿಗಳನ್ನು ಮಾಡಿದ ನಂತರ, ನೀವು ಅದನ್ನು ಮರು ಅಪ್‌ಲೋಡ್ ಮಾಡಲು ಪ್ರಯತ್ನಿಸಬಹುದು.

 

10. ನಾನು Part B ಗಾಗಿ CSV ಅಪ್‌ಲೋಡ್ ಮಾಡಲು ಪ್ರಯತ್ನಿಸಿದಾಗ "Part B CSV ಯಲ್ಲಿ ಪ್ರತಿ ಸಿನಿಮಾಟೋಗ್ರಾಫ್ ಫಿಲ್ಮ್/ನಿರ್ದಿಷ್ಟ ಚಟುವಟಿಕೆಯ ಎದುರಿಗೆ ಕನಿಷ್ಠ ಒಂದು ನಮೂದು ಇರಬೇಕು" ಎಂಬ ದೋಷವನ್ನು ನಾನು ಪಡೆಯುತ್ತಿದ್ದೇನೆ. ಇದರ ಅರ್ಥವೇನು ಮತ್ತು ನಾನು ಅದನ್ನು ಹೇಗೆ ಸರಿಪಡಿಸಬೇಕು?

ನೀವು ಈ ದೋಷವನ್ನು ಈ ಕೆಳಗಿನ 2 ಸನ್ನಿವೇಶಗಳಲ್ಲಿ ಸ್ವೀಕರಿಸುತ್ತಿರಬಹುದು:

ಕ್ರ. ಸಂ.

ಸನ್ನಿವೇಶ

ಪರಿಹಾರ/ ಕ್ರಮದ ಅಗತ್ಯವಿದೆ

1.

ಸಿನಿಮಾಟೋಗ್ರಾಫ್ ಚಲನಚಿತ್ರ/ ನಿರ್ದಿಷ್ಟ ಚಟುವಟಿಕೆಯ ಹೆಸರನ್ನು ಭಾಗ – A ನಲ್ಲಿ ಉಲ್ಲೇಖಿಸಲಾಗಿದೆ ಆದರೆ ಭಾಗ – B CSV ನಲ್ಲಿ ಅದಕ್ಕಾಗಿ ಯಾವುದೇ ವಿವರಗಳನ್ನು ಒದಗಿಸಲಾಗಿಲ್ಲ

ಸಿನಿಮಾಟೋಗ್ರಾಫ್ ಫಿಲ್ಮ್ ನಿರ್ಮಾಣದಲ್ಲಿ ತೊಡಗಿರುವ ಅಥವಾ ನಿರ್ದಿಷ್ಟ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ರೂ. 50,000 ಕ್ಕಿಂತ ಹೆಚ್ಚು ಪಾವತಿ ಮಾಡಿದ ವಿವರಗಳಿಗಾಗಿ ಕನಿಷ್ಠ ಒಂದು ನಮೂದು ಇರಬೇಕು ಎಂಬುದನ್ನು ದಯವಿಟ್ಟು ಗಮನಿಸಿ.

ಭಾಗ - A ನಲ್ಲಿ ಉಲ್ಲೇಖಿಸಿದಂತೆ ಭಾಗ- B CSV ನಲ್ಲಿ ಎಲ್ಲಾ ಸಿನಿಮಾಟೋಗ್ರಾಫ್ ಚಲನಚಿತ್ರಗಳು ಅಥವಾ ನಿರ್ದಿಷ್ಟ ಚಟುವಟಿಕೆಗಳಿಗೆ ವಿವರಗಳನ್ನು ಒದಗಿಸಿರುವುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

2.

ಸಿನಿಮಾಟೋಗ್ರಾಫ್ ಚಲನಚಿತ್ರ ನಿರ್ಮಾಣದಲ್ಲಿ ಅಥವಾ ಕೈಗೊಂಡ ನಿರ್ದಿಷ್ಟ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ರೂ. 50,000 ಗಿಂತ ಹೆಚ್ಚಿನ ಪಾವತಿ ಮಾಡಿದ ವಿವರಗಳನ್ನು ಭಾಗ - B CSV ನಲ್ಲಿ ಒದಗಿಸಲಾಗಿದೆ ಆದರೆ ಸಿನಿಮಾಟೋಗ್ರಾಫ್ ಚಲನಚಿತ್ರ ಅಥವಾ ನಿರ್ದಿಷ್ಟ ಚಟುವಟಿಕೆಯ ಹೆಸರನ್ನು ಭಾಗ - A ನಲ್ಲಿ ಉಲ್ಲೇಖಿಸಲಾಗಿಲ್ಲ

ಭಾಗ - A ನಲ್ಲಿ ಉಲ್ಲೇಖಿಸಲಾದ ಸಿನೆಮಾಟೋಗ್ರಾಫ್ ಚಲನಚಿತ್ರಗಳು ಅಥವಾ ನಿರ್ದಿಷ್ಟಪಡಿಸಿದ ಚಟುವಟಿಕೆಗಳ ಹೆಸರುಗಳನ್ನು ಭಾಗ - B ನಲ್ಲಿ ಉಲ್ಲೇಖಿಸಲಾದ ಸಿನೆಮಾಟೋಗ್ರಾಫ್ ಚಲನಚಿತ್ರಗಳ ಅಥವಾ ನಿರ್ದಿಷ್ಟ ಚಟುವಟಿಕೆಗಳ ಹೆಸರುಗಳೊಂದಿಗೆ ಹೊಂದಾಣಿಕೆಯಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.

ಭಾಗ - A ಮತ್ತು ಭಾಗ - B ಎರಡರಲ್ಲೂ ಕೂಡ ಎಲ್ಲಾ ಸಿನಿಮಾಟೋಗ್ರಾಫ್ ಚಲನಚಿತ್ರಗಳು ಅಥವಾ ನಿರ್ದಿಷ್ಟ ಚಟುವಟಿಕೆಗಳ ಹೆಸರುಗಳನ್ನು ಒದಗಿಸಲಾಗಿದೆಯೇ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

11. ನಾನು ಮೂಲ ಮಾಹಿತಿ ಪ್ಯಾನಲನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿದರೆ ಭಾಗ - A ಅಥವಾ ಭಾಗ - B ನಲ್ಲಿ ಲಗತ್ತಿಸಲಾದ csv ಅನ್ನು ಏಕೆ ಅಳಿಸಲಾಗುತ್ತದೆ?

ದಯವಿಟ್ಟು ಗಮನಿಸಿ, ನಿರ್ಮಿಸಿದ ಸಿನಿಮಾಟೋಗ್ರಾಫ್ ಫಿಲ್ಮ್‌ಗಳ ಎಣಿಕೆ ಮತ್ತು ವಿವರಗಳನ್ನು ಅಥವಾ ಕೈಗೊಂಡ ನಿರ್ದಿಷ್ಟ ಚಟುವಟಿಕೆಗಳನ್ನು ಮೂರೂ ಪ್ಯಾನೆಲ್‌ಗಳಲ್ಲಿ ಅಂದರೆ "ಮೂಲ ಮಾಹಿತಿ", "ಭಾಗ- A" ಮತ್ತು "ಭಾಗ- B" ಗಳಲ್ಲಿ ಮೌಲ್ಯೀಕರಿಸಲಾಗುತ್ತಿದೆ. ತೆರಿಗೆದಾರರು ಸಿನಿಮಾಟೋಗ್ರಾಫ್ ಫಿಲ್ಮ್‌ಗಳ ವಿರುದ್ಧ ಒದಗಿಸಲಾದ ವಿವರಗಳಿಗೆ ಅಥವಾ ಮೂಲ ಮಾಹಿತಿ ಅಥವಾ ಭಾಗ - A ಪ್ಯಾನೆಲ್‌ನಲ್ಲಿ ನಿರ್ದಿಷ್ಟಪಡಿಸಿದ ಚಟುವಟಿಕೆಗಳಿಗೆ ಯಾವುದೇ ಬದಲಾವಣೆಗಳು/ ಮಾರ್ಪಾಡುಗಳನ್ನು ಮಾಡಿದರೆ, ತೆರಿಗೆದಾರರು ಭಾಗ - A ಮತ್ತು ಭಾಗ - B ಯಲ್ಲಿ ಒದಗಿಸಿದ ವಿವರಗಳನ್ನು ಅಳಿಸಲಾಗುತ್ತದೆ. ತೆರಿಗೆದಾರರು ವಿವರಗಳನ್ನು ಮತ್ತೆ ಭರ್ತಿ ಮಾಡಬೇಕು ಅಥವಾ ಭಾಗ- A ಮತ್ತು ಭಾಗ- B ಯಲ್ಲಿ ಮತ್ತೆ csv ಲಗತ್ತಿಸಬೇಕು.

12. ಹಿಂದಿನ ವರ್ಷದಲ್ಲಿ ನಿರ್ಮಿಸಲಾದ ಸಿನಿಮಾಟೋಗ್ರಾಫ್ ಚಿತ್ರಕ್ಕೆ ಅಥವಾ ಕೈಗೊಂಡ ನಿರ್ದಿಷ್ಟಪಡಿಸಿದ ಚಟುವಟಿಕೆಗೆ ಪ್ರತಿಯೊಂದಕ್ಕೂ ನಾನು ಪ್ರತ್ಯೇಕ ಫಾರ್ಮ್ 52A ಅನ್ನು ಸಲ್ಲಿಸಬೇಕೇ?

ಇಲ್ಲ, ನೀವು ಪ್ರತಿ ಸಿನಿಮಾಟೋಗ್ರಾಫ್ ಫಿಲ್ಮ್‌ಗೆ ಅಥವಾ ಹಿಂದಿನ ವರ್ಷದಲ್ಲಿ ಕೈಗೊಂಡ ನಿರ್ದಿಷ್ಟ ಚಟುವಟಿಕೆಗೆ ಪ್ರತ್ಯೇಕ ಫಾರ್ಮ್ 52A ಅನ್ನು ಸಲ್ಲಿಸುವ ಅಗತ್ಯವಿಲ್ಲ. ಪ್ರತಿ TAN ನಲ್ಲಿ ಹಿಂದಿನ ವರ್ಷದಲ್ಲಿ ನಿರ್ಮಿಸಿದ ಎಲ್ಲಾ ಸಿನಿಮಾಟೋಗ್ರಾಫ್ ಫಿಲ್ಮ್‌ಗಳು ಮತ್ತು/ಅಥವಾ ನಿರ್ದಿಷ್ಟ ಚಟುವಟಿಕೆಗಳನ್ನು ಕೈಗೊಂಡ ಎಲ್ಲಾ ವಿವರಗಳನ್ನು ಒಟ್ಟುಗೂಡಿಸಬೇಕು ಮತ್ತು ಪ್ರತಿ TAN ನೋಂದಣಿಗೆ ಪ್ರತ್ಯೇಕ ಫಾರ್ಮ್ 52A ಅನ್ನು ಸಲ್ಲಿಸಬೇಕು.

13. ಭಾಗ- A ಅಥವಾ ಭಾಗ- B ನಲ್ಲಿ CSV ಅನ್ನು ಅಪ್‌ಲೋಡ್ ಮಾಡಿದ ನಂತರ ನನಗೆ ಫೈಲ್ ದೋಷ ಬರುತ್ತಿದೆ?

ನೀವು CSV ಅನ್ನು ಭಾಗ- A ಅಥವಾ ಭಾಗ- B ಯಲ್ಲಿ ಅಪ್‌ಲೋಡ್ ಮಾಡಿದ ನಂತರ, ಒದಗಿಸಲಾದ ವಿವರಗಳನ್ನು ಮೌಲ್ಯೀಕರಿಸಲಾಗುತ್ತದೆ ಮತ್ತು ಯಾವುದೇ ದೋಷಗಳು ಕಂಡುಬಂದರೆ, ಅಂತಹ ದೋಷಗಳ ವಿವರಗಳನ್ನು ನಿಮಗೆ ಎಕ್ಸೆಲ್ ಫೈಲ್‌ನಲ್ಲಿ ಒದಗಿಸಲಾಗುತ್ತದೆ. ದಯವಿಟ್ಟು ಉಲ್ಲೇಖಿಸಲಾದ ಸಾಲುಗಳಲ್ಲಿ ಮಾಡಿದ ದೋಷಗಳಿಗಾಗಿ ಎಕ್ಸೆಲ್ ಫೈಲ್ ಅನ್ನು ನೋಡಿ ಮತ್ತು ಅದನ್ನು ಸರಿಪಡಿಸಿ. ಅಗತ್ಯವಿರುವ ಎಲ್ಲಾ ತಿದ್ದುಪಡಿಗಳನ್ನು ಮಾಡಿದ ನಂತರ, ನೀವು ಅದನ್ನು ಮರು ಅಪ್‌ಲೋಡ್ ಮಾಡಲು ಪ್ರಯತ್ನಿಸಬಹುದು.

ಪ್ರತಿ ಕ್ಷೇತ್ರಕ್ಕೆ ಕಡ್ಡಾಯವಾಗಿ ಅಗತ್ಯವಿರುವ ಮತ್ತು ಸ್ವೀಕಾರಾರ್ಹ ಸ್ವರೂಪಗಳ ಮಾಹಿತಿಯ ವಿವರಗಳಿಗಾಗಿ ನೀವು ಭಾಗ - A ಮತ್ತು ಭಾಗ - B ನಲ್ಲಿ ಒದಗಿಸಲಾದ CSV ಸೂಚನಾ ಫೈಲ್‌ಗಳನ್ನು ಪರಿಶೀಲಿಸಬಹುದು.